ಬೈಲೂರು ಶ್ರೀ ಮಹಿಷಮರ್ದಿನಿ ದೇಗುಲಕ್ಕೆ ಸಂಬಂಧಪಟ್ಟ ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಆಲಯ ಪರಿಗ್ರಹ, ಶಿಲ್ಪಿ ಮಾರ್ಯದೆ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಸಪ್ತ ಶುದ್ಧಿ, ವಾಸ್ತು ಪೂಜೆ ನಡೆಯಿತು. ಬೆಳ್ಳಿಯಿಂದ ತಯಾರಿಸಲಾದ ಮೂಲ ಮಹಿಷಂತಾಯ, ಧೂಮಾವತಿ, ಬಂಟ, ಪಂಜುರ್ಲಿ ದೈವಗಳ ಮೂರ್ತಿ ಮತ್ತು ಆಯುಧಗಳನ್ನು ಮೆರವಣಿಗೆಯಲ್ಲಿ ತಂದು ದೈವಸ್ಥಾನಕ್ಕೆ ಸಮರ್ಪಿಸಲಾಯಿತು.
ತಂತ್ರಿಗಳಾದ ವೇ| ಮೂ| ವಿ| ಕೆ.ಎ. ರಮಣ ತಂತ್ರಿ ಕೊರಂಗ್ರಪಾಡಿ, ವೇ| ಮೂ| ವಿ| ಕೆ.ಎಸ್. ಕೃಷ್ಣಮೂರ್ತಿ ತಂತ್ರಿ ಕೊರಂಗ್ರಪಾಡಿ ಅವರ ನೇತೃತ್ವದಲ್ಲಿ ಮಾ. 17ರಂದು ನೂತನ ಶಿಲಾಮಯ ಆಲಯದಲ್ಲಿ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನಡೆಯಿತು. ಅನಂತರ ಅನ್ನಸಂತರ್ಪಣೆ, ನೇಮ ಜರಗಿತು.
ಮೆರವಣಿಗೆಯಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ತಂತ್ರಿಗಳಾದ ರಮಣ ತಂತ್ರಿ, ಪ್ರಧಾನ ಅರ್ಚಕ ವಾಸುದೇವ ಭಟ್, ರಮೇಶ ಶೆಟ್ಟಿ, ನವೀನ ಭಂಡಾರಿ, ಬೈಲೂರು ದೇವಳದ ಮೊಕ್ತೇಶ್ವರ ಮೋಹನ್ ಮುದ್ದಣ ಶೆಟ್ಟಿ, ಕಿರಣ ಕುಮಾರ್ ಬೈಲೂರು, ಅರುಣ ಶೆಟ್ಟಿಗಾರ್, ಸುದರ್ಶನ ಶೇರಿಗಾರ್, ಜಯಕರ ಶೆಟ್ಟಿ ಇಂದ್ರಾಳಿ, ಕೃಷ್ಣರಾಜ್ ಕೊಡಂಚ, ಶ್ರೀನಿವಾಸ ಆಚಾರ್ಯ, ದುರ್ಗಾ ದಾಸ್, ಗೋಪಾಲ್ ಕೃಷ್ಣ ಬಲ್ಲಾಳ, ಸದಾನಂದ ಶೆಟ್ಟಿ ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು, ಮಹಿಳೆಯರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.