ವೆಂಕೀಸ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಿಲ್ವಾಸ ಇದರ ಆಡಳಿತ ನಿರ್ದೇಶಕ ಅಮಿತ್ ಶೆಟ್ಟಿ ರೆಂಜಾಳ ಹಾಗೂ ಮಾತಾಶ್ರೀ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಅಂಕ್ಲೇಶ್ವರ ಇದರ ಆಡಳಿತ ನಿರ್ದೇಶಕ ಅಜಿತ್ ಶೆಟ್ಟಿ ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿ ಮತ್ತು ಒಕ್ಕೂಟದಲ್ಲಿ ನಡೆಯುವ ಜನಪರ ಕಾಳಜಿಯ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡುವ ಸಲುವಾಗಿ ಒಕ್ಕೂಟಕ್ಕೆ ಪೋಷಕ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ.


ಇವರನ್ನು ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಹೂಗುಚ್ಚ ನೀಡಿ ಅಭಿನಂದಿಸಿದರು. ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಮತ್ತು ಕೋಶಾಧಿಕಾರಿ ಮೋಹನದಾಸ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಗಿರೀಶ್ ಶೆಟ್ಟಿ ಜೊತೆಗಿದ್ದರು.

















































































































