ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಆ. ೧೩ ರಂದು ಪುತ್ತೂರು ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಲಿರುವ ಆಟಿಡೊಂಜಿ ದಿನ, ಸಾಧಕರಿಗೆ ಚಿನ್ನದ ಪದಕ ಪ್ರದಾನ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆಯು ಜು. ೨೭ರಂದು ಪುತ್ತೂರು ಬಂಟರ ಭವನದಲ್ಲಿ ಜರಗಿತು. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಬುಧಾಬಿಯ ಉದ್ಯಮಿ ಜಯರಾಮ ರೈ ಮಿತ್ರಂಪಾಡಿರವರುಗಳು ಅಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ಬಂಟರ ಸಂಘದ ನಿಕಟಪೂರ್ವಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಉಪಾಧ್ಯಕ್ಷರುಗಳಾದ ಚಿಲ್ಮೆತ್ತಾರು ಜಗಜೀವನ್ದಾಸ್ ರೈ, ರೋಶನ್ ರೈ ಬನ್ನೂರು, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಸಹ ಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ ನೆಲ್ಲಿಕಟ್ಟೆ, ಬಂಟರ ಸಂಘದ ಪುತ್ತೂರು ನಗರ ಅಧ್ಯಕ್ಷ ಶಿವರಾಮ ಆಳ್ವ ಬಳ್ಳಮಜಲುಗುತ್ತು, ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಮುಂಡಾಳಗುತ್ತು ಶಶಿರಾಜ್ ರೈ, ಬಂಟ ಸಮಾಜದ ಪ್ರಮುಖರಾದ ಸಂತೋಷ್ ಶೆಟ್ಟಿ ಸಾಜ, ನಿತ್ಯಾನಂದ ಶೆಟ್ಟಿ ಮನವಳಿಕೆ, ಸೀತಾರಾಮ ರೈ ಕೆದಂಬಾಡಿಗುತ್ತು, ಎಚ್. ಶ್ರೀಧರ್ ರೈ ಹೊಸಮನೆ, ದಯಾನಂದ ರೈ ಕೋರ್ಮಂಡ, ದಿವ್ಯನಾಥ ಶೆಟ್ಟಿ ಕಾವು, ಸುಭಾಷ್ ಶೆಟ್ಟಿ ಅರುವಾರ, ಸುರೇಶ್ ರೈ ಸೂಡಿಮುಳ್ಳು, ಜಗನ್ಮೋಹನ್ ರೈ ಸೂರಂಬೈಲು, ಭರತ್ ರೈ ಪಾಲ್ತಾಡಿ, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಸಂಕಪ್ಪ ರೈ, ಅರವಿಂದ ಭಗವಾನ್ ರೈ, ಅಶ್ವಿನ್ ಎಲ್.ಶೆಟ್ಟಿ ಸವಣೂರು, ಸುಧೀರ್ ಕುಮಾರ್ ಶೆಟ್ಟಿ ತೆಂಕಿಲ, ಸ್ವರ್ಣಲತಾ ಜೆ.ರೈ ಮಿತ್ರಂಪಾಡಿ, ಮಲ್ಲಿಕಾ ಜೆ.ರೈ, ಭಾಸ್ಕರ್ ರೈ ಎಂ, ರವಿಚಂದ್ರ ರೈ ಕುಂಬ್ರ ಉಪಸ್ಥಿತರಿದ್ದರು.