ಚಿಣ್ಣರ ಬಿಂಬದ ಕನ್ನಡ ತರಗತಿಗಳು ಮಕ್ಕಳಿಗೆ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಯಶಸ್ಸಾಗಿದೆ- ಪ್ರಕಾಶ್ ಭಂಡಾರಿ
ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಚಿಣ್ಣರ ಬಿಂಬ ಸಂಸ್ಥೆಗೆ ಸದಾ ಪ್ರೋತ್ಸಹವನ್ನು ನೀಡುತ್ತಿದೆ. ಚಿಣ್ಣರ ಬಿಂಬದ ಕನ್ನಡ ಕಲಿಕಾ ತರಗತಿಗಳನ್ನು ನಾವು ಪ್ರೋ. ಸೀತಾರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಆರಂಭಿಸಿದ್ದೆವು. ಈಗ ಆದಕ್ಕೊಂದು ಸ್ವರೂಪವನ್ನು ನೀಡಿ ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗುವಲ್ಲಿ ಕನ್ನಡ ವಿಭಾಗದ ಸಹಕಾರವೂ ಇದೆ. ಡಾ.ಜಿ.ಎನ್.ಉಪಾಧ್ಯ ಅವರು ಚಿಣ್ಣರ ಬಿಂಬದ ಆರಂಭದಿಂದಲೂ ನಮಗೆ ಮಾರ್ಗದರ್ಶನವನ್ನು ನೀಡುತ್ತಾ ಬಂದಿದ್ದಾರೆ. ನಮ್ಮಎಲ್ಲ ಶಿಕ್ಷಕರು ಬಹಳ ಮುತುವರ್ಜಿಯಿಂದ ಈ ಕನ್ನಡ ಕಲಿಕಾ ತರಗತಿಗಳ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ ಎಂದು ಹೇಳಲು ನನಗೆ ಅಭಿಮಾನವಾಗುತ್ತದೆ.
ಈ ಕನ್ನಡ ತರಗತಿಗಳು ಭಾಷೆಯಲ್ಲಿ ಮಕ್ಕಳು ಪಳಗುವಂತೆ, ಪ್ರೌಢರಾಗುವಂತೆ ಮಾಡುತ್ತಿದೆ. ಅದೇ ರೀತಿ ನಮ್ಮ ಚಿಣ್ಣರ ಬಿಂಬದಲ್ಲಿ ಭಜನೆಯನ್ನು ಸಾವಿರಾರು ಮಕ್ಕಳು ಕಲಿಯುತ್ತಿದ್ದಾರೆ. ಭಜನೆಗಳನ್ನು ಕೂಡಾ ಬಹಳ ಉತ್ತಮವಾಗಿ ಚಿಣ್ಣರ ಬಿಂಬದಲ್ಲಿ ಕಲಿಸಲಾಗುತ್ತದೆ. ಇವರೆಲ್ಲರನ್ನು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಮೂಲಕ ಗೌರವಿಸುತ್ತಿರುವುದು ಅರ್ಥಪೂರ್ಣವಾಗಿದೆ. ಇದಕ್ಕೆ ಅವಕಾಶ ನೀಡಿದ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗಕ್ಕೂ ಹಾಗೂ ಈ ಸಂಸ್ಥೆಯ ಬೆಳವಣಿಗೆಯಲ್ಲಿ ಎಲ್ಲರೂ ಕೈಜೋಡಿಸುತ್ತಿರುವ ಎಲ್ಲರಿಗೂ ಕೃತಜ್ಞತೆಗಳು. ಚಿಣ್ಣರ ಬಿಂಬದ ಸದಸ್ಯರಿಂದ, ಪಾಲಕರ ಸಹಕಾರದಿಂದ ಇಂದು ಈ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ಚಿಣ್ಣರ ಬಿಂಬದ ರೂವಾರಿಗಳಾದ ಪ್ರಕಾಶ್ ಭಂಡಾರಿ ಅವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿರುವ ಡಾ.ಜಿ.ಎನ್.ಉಪಾಧ್ಯ ಅವರು ಮಾತನಾಡುತ್ತಾ ಚಿಣ್ಣರ ಬಿಂಬ ಸಂಸ್ಥೆಯ ಆರಂಭದ ದಿನಗಳಿಂದ ಅದರ ಒಂದು ಭಾಗವಾಗಿಯೇ ನಾನು ಇದ್ದೇನೆ. ಇಂತಹ ಸಂಸ್ಥೆಯೊಂದು ಮುಂಬಯಿ ಮಹಾನಗರದಲ್ಲಿ ಮಕ್ಕಳ ಭವ್ಯ ಭವಿಷ್ಯಕ್ಕೆ ನಾಂದಿ ಹಾಡುತ್ತಿರುವುದು ಶ್ಲಾಘನೀಯ ಸಂಗತಿ. ಇಲ್ಲಿನ ಆಂಗ್ಲ ಭಾಷೆಯಲ್ಲಿ ಕಲಿಯುತ್ತಿರುವ ಮಕ್ಕಳು ಕನ್ನಡವನ್ನು ಕಲಿತು ಆ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವಾಗ ರೋಮಾಂಚನವಾಗುತ್ತದೆ.
ಮುಂಬಯಿಯಲ್ಲಿ ಇನ್ನು ಐವತ್ತು ವರ್ಷಗಳಾದರೂ ಕನ್ನಡಕ್ಕೆ ಬರವಿಲ್ಲ. ಆ ರೀತಿ ಇಲ್ಲಿ ಮಕ್ಕಳಿಗೆ ತರಬೇತಿ ದೊರೆಯುತ್ತಿದೆ. ಇಂತಹ ಮಹತ್ವದ ಕೆಲಸವನ್ನುಮಾಡುತ್ತಿರುವ ಪ್ರಕಾಶ್ ಭಂಡಾರಿ ಅವರಿಗೆ ನಾವು ಕೃತಜ್ಞತೆಗಳನ್ನು ಸಲ್ಲಿಸಬೇಕು. ಈ ಸಂಸ್ಥೆಗೆ ಕರ್ನಾಟಕ ಸರಕಾರದ ಸಹಕಾರ ಹಾಗೂ ಮುಂಬಯಿಯ ಎಲ್ಲ ಸಂಘ ಸಂಸ್ಥೆಗಳ ಪ್ರೋತ್ಸಹ ದೊರೆಯಬೇಕು.ಇದು ಒಂದು ಅಕಾಡೆಮಿ, ಸರಕಾರ ಮಾಡಬೇಕಾದ ಕೆಲಸ. ಅಂತಹ ಅಭೂತಪೂರ್ವ ಕೆಲಸ ಚಿಣ್ಣರ ಬಿಂಬದಂತಹ ಸಂಸ್ಥೆ ಮಾಡುತ್ತಿರುವುದು ಒಂದು ಕ್ರಾಂತಿಯೇ ಸರಿ ಎಂದು ನುಡಿದರು. ಇಂದು ಮುಂಬಯಿ ವಿಶ್ವವಿದ್ಯಾಲಯದಲ್ಲಿ ವಚನಗಳ ಕುರಿತು ಕಾರ್ಯಕ್ರಮವನ್ನು ಏರ್ಪಡಿಸಿದ್ದು ಅದರ ಜೊತೆಯಲ್ಲಿ ಚಿಣ್ಣರ ಬಿಂಬದ ಶಿಕ್ಷಕರನ್ನು ಗೌರವಿಸುವ ಕಾರ್ಯವೂ ನಡೆಯುತ್ತಿರುವುದು ನಮಗೆ ಸಂತೋಷವನ್ನು ತಂದಿದೆ. ಇಲ್ಲಿನ ಮಕ್ಕಳು ನಮ್ಮ ನಾಡು ನುಡಿಯನ್ನು ಉಳಿಸಿ ಬೆಳೆಸುವ ಭರವಸೆಯ ಬೆಳಕಾಗಿದ್ದಾರೆ. ಚಿಣ್ಣರ ಬಿಂಬದಲ್ಲಿ ಮಕ್ಕಳು ಕನ್ನಡ ಭಾಷೆಯೊಂದಿಗೆ ಸಂಸ್ಕೃತಿಯನ್ನು ಕಲಿಯುತ್ತಿದ್ದಾರೆ ಎಂದು ಚಿಣ್ಣರ ಬಿಂಬದ ರೂವಾರಿಗಳಲ್ಲಿ ಓರ್ವರಾದ ಸುರೇಂದ್ರಕುಮಾರ್ ಹೆಗ್ಡೆ ಅವರು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ರೇಣುಕಾ ಪ್ರಕಾಶ್ ಭಂಡಾರಿ, ರಂಗತಜ್ಞ ಡಾ.ಭರತ್ಕುಮಾರ್ ಪೊಲಿಪು, ನಾಟಕಕಾರ ಡಾ.ಮಂಜುನಾಥ್, ಚಿಣ್ಣರ ಬಿಂಬದ ಮುಖ್ಯ ಸಂಚಾಲಕರಾದ ಗೀತಾ ಹೇರಳ, ಕೇಂದ್ರ ಸಮಿತಿಯ ಭಾಸ್ಕರ ಶೆಟ್ಟಿ, ತಾಳಿಪಾಡಿಗುತ್ತು ಉಪಸ್ಥಿತರಿದ್ದರು.
ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಕಲಿಕಾ ತರಗತಿಯ ಶಿಕ್ಷಕರಾದ ಗೀತಾ ಹೇರಳ, ಮಲ್ಲಿಕಾ ಶೆಟ್ಟಿ, ಸುಲೋಚನಾ ಶೆಟ್ಟಿ, (ಮೀರಾರೋಡ್ ಶಿಬಿರ) ಅನಿತಾ ಎಸ್ ಶೆಟ್ಟಿ(ಎಸ್.ಎಂ.ಶೆಟ್ಟಿ) ಕುಮುದಾ ಆಳ್ವ(ಘೋಡ್ಬಂದರ್ರೋಡ್), ಜ್ಯೋತಿ.ಎನ್.ಶೆಟ್ಟಿ(ಥಾಣೆ ನವೋದಯ), ಶೋಭಾ ಶೆಟ್ಟಿ(ಥಾಣೆ ನವೋದಯ), ಸರೋಜಾ ಪ್ರಕಾಶ್ ಶೆಟ್ಟಿ(ಡೊಂಬಿವಲಿ ಪೂರ್ವ), ಶಾಂತಿಲಕ್ಷ್ಮೀ ಉಡುಪ(ಜರಿಮರಿ), ಹರಿಣಿ ಸತೀಶ್ ಶೆಟ್ಟಿ(ಸಾಕಿನಾಕ), ರೇಖಾ ಶ್ರೀನಿವಾಸ ಬಂಜನ್(ಭಾಯಿಂದರ್), ಪದ್ಮಪ್ರಿಯ ಬಲ್ಲಾಳ್( ಡೊಂಬಿವಲಿ ಪೂರ್ವ), ಪವಿತ್ರಾ ದೇವಾಡಿಗ(ಪೇಜಾವರ), ದಿವ್ಯ ಪೂಜಾರಿ(ಡೊಂಬಿವಲಿ ಪಶ್ಚಿಮ), ಯೆಶೋಧಾ ಕಾಂಚನ್(ಐರೋಲಿ), ತನುಜಾ ಭಟ್(ಕಾಂದಿವಲಿ), ಮೋಹಿನಿ ಜಯರಾಮ ಪೂಜಾರಿ(ನೆರೂಲ್), ಸುರೇಖಾ ಕೆ ಮೊಯಿಲಿ(ಭಾಯಿಂದರ್), ಶಶಿಕಲಾ ಕೋಟ್ಯಾನ್(ಗೋರೆಗಂವ್), ಸರಸ್ವತಿ ಲಕ್ಷ್ಮಣ್ಗೌಡ(ಸಯನ್, ಕೋಲಿವಾಡ), ಜಯಾ ಶೇಖರ ಸುವರ್ಣ(ಭಾಂಡುಪ್), ಸಂಗೀತ ಶೆಟ್ಟಿಗಾರ್(ಕಲ್ವಾ), ಲಕ್ಷ್ಮೀದೇವಾಡಿಗ(ಐರೋಲಿ), ಸತ್ಯವತಿ.ಯು.ನಾಯಕ್(ಘನ್ಸೋಲಿ), ಸುಪ್ರೀತಾಗೌಡ(ಘನ್ಸೋಲಿ), ಗೀತಾ ಶೆಟ್ಟಿ(ಆದಿಶಕ್ತಿ, ಮಾಜಿವಾಡ),ಮಹಾದೇವಯ್ಯ ವೀರಯ್ಯ ಬನ್ನಿಮಠ(ಪಲಾವ), ಮಲ್ಲಿಕಾ ಸಾಲಿಯಾನ್(ವಿಕ್ರೋಲಿ), ಸುಮಿತ್ರಾ ದೇವಾಡಿಗ(ಸೌತ್ ವೆಸ್ಟ್) ಹಾಗೂ ಪದ್ಮಾವತಿ.ಯು.ಪೂಜಾರಿ ಇವರನ್ನು ಗೌರವಿಸಲಾಯಿತು.
ಅದೇ ರೀತಿ ಭಜನೆ ಶಿಕ್ಷಕರಾದ ಶೋಭಾ. ಜೆ. ಶೆಟ್ಟಿ(ಥಾಣೆ, ನವೋದಯ), ವಿಮಲಾ ದೇವಾಡಿಗ (ಎಸ್.ಎಂ.ಶೆಟ್ಟಿ) , ಸುಜಾತ ಗಂಗಾಧರ್ ಶೆಟ್ಟಿ(ಮೀರಾರೋಡ್), ಶಾಂತಾ.ಎಂ.ಅಚಾರ್ಯ(ಮೀರಾರೋಡ್), ಜಯಶ್ರೀ ಚಂದ್ರಹಾಸ ಶೆಟ್ಟಿ(ಪಲಾವ ಶಿಬಿರ), ಚಂದ್ರಕಲ ಶೆಟ್ಟಿ(ಎಸ್.ಎಂ.ಶೆಟ್ಟಿ), ಶುಭಮಂಗಳಾ ಸುವರ್ಣ(ಕಾಂದಿವಲಿ), ಸರೋಜಿನಿ ವಿ.ಪೂಜಾರಿ(ಭಾಯಿಂದರ್), ಜಯಲಕ್ಷ್ಮೀ ಪೂಜಾರಿ( ವಿಕ್ರೋಲಿ), ವಿದ್ಯಾ ಶೆಟ್ಟಿ(ಸಾಕಿನಾಕ), ಹೇಮಲತಾ.ಬಿ.ಶೆಟ್ಟಿ( ಕಲ್ವಾ), ಉಮಾಗುರುಪ್ರಸಾದ್ ಭಟ್( ಘನ್ಸೋಲಿ), ಕ್ಷಮಾತಮನ್ಕರ್( ನೆರೂಲ್), ಸುನೀತಾ. ಎಸ್ .ಶೆಟ್ಟಿ( ಡೊಂಬಿವಲಿ), ಶೋಭಾ.ಎಲ್ಕೋಟ್ಯಾನ್(ಥಾಣೆ ಮಾಜಿವಾಡ), ವನಿತಾತಿಲಕೇಶ್ಕೋಟ್ಯಾನ್( ಸಯನ್), ಅನಿತಾ.ವಿ.ರಾವ್ (ಉಮಾಮಹೇಶ್ವರಿ), ಉಷಾ ಸಫಲಿಗ(ಮಲಾಡ್), ಆಶಾ ನಾಗೇಶ್ ಪೂಜಾರಿ(ಐರೋಲಿ), ಪ್ರೇಮಲತಾಆರ್ ಮೂಲ್ಯ( ಗೋರೆಗಾಂವ್), ಸುಚಿತ್ರಾ.ಜಿ.ಶೆಟ್ಟಿ(ಪೇಜಾವರ), ತ್ರಿಶಾ ಆಳ್ವ(ಡೊಂಬಿವಲಿ), ರೂಪಾ ಪ್ರಭು(ಘೋಡ್ಬಂದರ್) ಸುಧಾ.ಆರ್.ಪೂಜಾರಿ(ಭಾಂಡುಪ್) ಇವರನ್ನುಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಚಿಣ್ಣರ ಬಿಂಬದಲ್ಲಿ ಸುಮಾರು 18-20ವರ್ಷದಿಂದ ಸಕ್ರಿಯರಾಗಿರುವ ಸುಮಾರು 120 ಜನ ಸ್ವಯಂ ಸೇವಕರಿಗೆ ಗ್ರಂಥ ಗೌರವವನ್ನು ನೀಡಲಾಯಿತು.
ವೇದಿಕೆಯಲ್ಲಿ ರೇಣುಕಾ ಭಂಡಾರಿ, ರಂಗತಜ್ಞಡಾ.ಭರತ್ಕುಮಾರ್ ಪೊಲಿಪು, ನಾಟಕಕಾರಡಾ.ಮಂಜುನಾಥ್, ಚಿಣ್ಣರ ಬಿಂಬದ ಮುಖ್ಯ ಸಂಚಾಲಕರಾದ ಗೀತಾ ಹೇರಳ, ಕೇಂದ್ರ ಸಮಿತಿಯ ಭಾಸ್ಕರ ಶೆಟ್ಟಿ, ತಾಳಿಪಾಡಿಗುತ್ತು ಉಪಸ್ಥಿತರಿದ್ದರು. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದರು.