Author: admin
ಬಂಟರ ಸಂಘ ಬೆಂಗಳೂರು ಇದರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ ರಮಾನಾಥ್ ರೈ ಅವರಿಗೆ ದಿ. ಡಾ ಜೀವರಾಜ್ ಆಳ್ವ ಸದ್ಧಾವನ ಪ್ರಶಸ್ತಿ ನೀಡಿ ಗೌರವಿಸಿದರು. ಈ ಶುಭ ಸಮಾರಂಭದಲ್ಲಿ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಆರ್ ಶೆಟ್ಟಿ, ಉಪಾಧ್ಯಕ್ಷ ಭೋಜರಾಜ್ ಶೆಟ್ಟಿ, ಕಾರ್ಯದರ್ಶಿ ಮಧುಕರ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ ಅಬುಧಾಭಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಹಲವಾರು ಮಹತ್ಕಾರ್ಯಗಳಿಂದ ಕಲಾರಸಿಕರ ಕಲಾವಿದರ ಅಂತರಂಗದಲ್ಲಿ ಸ್ಥಿರಸ್ಥಾನ ಗಳಿಸಿದ ಮಹಾಸಾಧಕ, ಸಜ್ಜನ, ಉದ್ಯಮಿ ಶ್ರೀ ಅಜೆಕಾರು ಬಾಲಕೃಷ್ಣ ಶೆಟ್ಟಿ
ಮುಂಬಯಿಯಲ್ಲಿ ನೆಲೆಸಿ ಯಕ್ಷಗಾನ ಕಲೆಯ ಏಳಿಗೆ ಮತ್ತು ಉಳಿವಿಗೆ ಅವಿರತ ಶ್ರಮ ವಹಿಸುತ್ತಿರುವುದರ ಜೊತೆಗೆ ಅಶಕ್ತ ಕಲಾವಿದರಿಗೆ ನೆರವು, ಪ್ರತಿಭಾವಂತರಿಗೆ ಪುರಸ್ಕಾರ, ಸಾಧಕರಿಗೆ ಸನ್ಮಾನ, ತಾಳಮದ್ದಳೆ ಹಾಗೂ ಯಕ್ಷಗಾನ ಸಂಯೋಜನೆ ಇನ್ನೂ ಹಲವಾರು ಮಹತ್ಕಾರ್ಯಗಳಿಂದ ಕಲಾರಸಿಕರ ಕಲಾವಿದರ ಅಂತರಂಗದಲ್ಲಿ ಸ್ಥಿರಸ್ಥಾನ ಗಳಿಸಿದ ಮಹಾಸಾಧಕ, ಸಜ್ಜನ, ಉದ್ಯಮಿ ಶ್ರೀ ಅಜೆಕಾರು ಬಾಲಕೃಷ್ಣ ಶೆಟ್ಟಿಯವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇವೆ.
ಕೊರೊನಾದ ಅತ್ಯಂತ ಕ್ಷಿಪ್ರವಾಗಿ ಹರಡಬಲ್ಲ ಹೊಸ ತಳಿ ಜೆಎನ್.1 ಸೋಂಕು ಕೇರಳದಲ್ಲಿ ಪತ್ತೆಯಾಗಿರುವುದು ಗಾಬರಿ ಪಡಬೇಕಾದ ವಿಷಯ ಅಲ್ಲ; ಆದರೆ ಮುನ್ನೆಚ್ಚರಿಕೆಯಿಂದ ಇರಬೇಕಾದ, ಸಂಭಾವ್ಯ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ. 2019-20ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ಹಾಹಾಕಾರ ಸೃಷ್ಟಿಸಿದ ಕೊರೊನಾ ಮರುವರ್ಷ ಬೇರೆಯದೇ ರೀತಿಯಲ್ಲಿ ಅಪಾರ ತೊಂದರೆಗೆ ಕಾರಣವಾಗಿತ್ತು. ಮೊದಲ ವರ್ಷ ಕಾಯಿಲೆ ಸಂಪೂರ್ಣವಾಗಿ ಅಪರಿಚಿತವಾಗಿದ್ದುದರಿಂದ ಸಾವು ನೋವುಗಳು ಸಂಭವಿಸಿದವು. ಆಗ ಜಗತ್ತಿನಾದ್ಯಂತ ಸೃಷ್ಟಿಯಾದದ್ದು ಮನುಕುಲ ಇತ್ತೀಚೆಗಿನ ದಶಕಗಳಲ್ಲಿ ಅನುಭವಿಸಿರದಂತಹ ಆರೋಗ್ಯ ತುರ್ತುಸ್ಥಿತಿ. ಅದರಿಂದ ಹೇಗೋ ಪಾರಾಗಿ ನಿಟ್ಟುಸಿರು ಬಿಡುವ ವೇಳೆಗೆ ಮರು ವರ್ಷ ಅದೇ ಕೊರೊನಾ ತುಸು ಹೊಸ ರೂಪ ತಳೆದು ಕಂಗೆಡಿಸಿತು. ಆಗ ಆಮ್ಲಜನಕ ಕೊರತೆ ಉಂಟಾದುದು, ಬ್ಲ್ಯಾಕ್ ಫಂಗಸ್ ಕಾಟ ಮರೆಯಲಾಗದ್ದು. ಮೊದಲ ವರ್ಷದ ಅನುಭವವನ್ನು ಪಾಠವಾಗಿ ಇರಿಸಿಕೊಂಡು ಮರುವರ್ಷದ ಅಲೆಯನ್ನು ಎದುರಿಸಲು ಮುಂದಾದಾಗ ಅದು ಬೇರೆಯದೇ ರೂಪದಲ್ಲಿ ಕಾಡಿತ್ತು ಎಂಬುದು ಗಮನದಲ್ಲಿ ಇರಿಸಿಕೊಳ್ಳಬೇಕಾದ ಅಂಶ. ನಮ್ಮ ದೇಶದಲ್ಲಿ ದೃಢಪಟ್ಟಿರುವ ಕೊರೊನಾ ಉಪತಳಿ…
ವಿಶ್ವ ಬಂಟರ ಕ್ರೀಡಾಕೂಟದಲ್ಲಿ ಮುಂಬಯಿ ಬಂಟರ ಸಂಘದ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಗೆ ಸಮಗ್ರ ಚಾಂಪಿಯನ್ ಪ್ರಶಸ್ತಿ
ವಿಶ್ವ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ವಿಶ್ವ ಬಂಟ ಸಮ್ಮೇಳನ ಹಿನ್ನಲೆಯಲ್ಲಿ ಅಜ್ಜರಕಾಡು ಮೈದಾನದಲ್ಲಿನ ನಳಿನ ಬೋಜ ಶೆಟ್ಟಿ ವೇದಿಕೆಯನ್ನು ಒಳಗೊಂಡ ಮೈದಾನದಲ್ಲಿ ಬಂಟರ ಸಂಘಗಳು ವಿವಿಧ ಕ್ರೀಡೆಯಲ್ಲಿ ಪಾಲು ಪಡೆಯುವ ಮೂಲಕ ಅದ್ದೂರಿಯಾಗಿ ನಡೆಯಿತು. ಬೆಳಗ್ಗಿನಿಂದ ತಡ ರಾತ್ರಿಯವರೆಗೆ ನಡೆದ ವಿವಿಧ ಕ್ರೀಡಾಕೂಟದಲ್ಲಿ ಮುಂಬಯಿ ಬಂಟರ ಸಂಘದ ಮೀರಾ ಭಾಯಿಂದರ್ ಪ್ರಾದೇಶಿಕ ಸಮಿತಿ ಕಾರ್ಯಧ್ಯಕ್ಷ ಮಾಣಿ ಗುತ್ತು ಶಿವಪ್ರಸಾದ್ ಶೆಟ್ಟಿ ಅವರ ನೇತೃತ್ವದ ತಂಡ ಎಲ್ಲಾ ಕ್ರೀಡೆಯಲ್ಲಿ ಪಾಲು ಪಡೆದು ಅತೀ ಹೆಚ್ಚು ಅಂಕಗಳನ್ನು ಪಡೆದು ಕ್ರೀಡಾಕೂಟದ ಸಮಗ್ರ ಪ್ರಶಸ್ತಿ ಪಡೆದಿದೆ. ಅಕ್ಟೋಬರ್ 29 ರಂದು ನಡೆದ ವಿಶ್ವ ಬಂಟರ ಸಾಂಸ್ಕೃತಿಕ ಉತ್ಸವದಲ್ಲಿ ಕ್ರೀಡಾಕೂಟದ ಬಹುಮಾನವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್.ಕೆ.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಬೋರಿವಲಿ ಶಿಕ್ಷಣ ಸಮಿತಿಯ ಉಪಕಾರ್ಯಧ್ಯಕ್ಷ ಮಹೇಶ್…
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ, ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಎನ್.ವಿನಯ ಹೆಗ್ಡೆ ಅವರಿಗೆ ಶಿರ್ವ ವಿದ್ಯಾವರ್ಧಕ ಸಂಘದ ವತಿಯಿಂದ ಸಮ್ಮಾನ ವಿನಯಾಭಿವಂದನೆ ಕಾರ್ಯಕ್ರಮವು ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಕಾಪು ಶಾಸಕ ಸುರೇಶ್.ಪಿ ಶೆಟ್ಟಿ ಗುರ್ಮೆ ಅವರ ಅಧ್ಯಕ್ಷತೆಯಲ್ಲಿ ಅ. 20 ರಂದು ವಿದ್ಯಾವರ್ಧಕ ಕ್ಯಾಂಪಸ್‌ನಲ್ಲಿ ನಡೆಯಿತು. ವಿದ್ಯಾವರ್ಧಕ ಸಂಘದ ವತಿಯಿಂದ ಎನ್.ವಿನಯ ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು. ಆಡಳಿತ ಮಂಡಳಿಯ ಸದಸ್ಯ ಶ್ರೀನಾಥ್ ಹೆಗ್ಡೆ ಸಮ್ಮಾನ ಪತ್ರ ವಾಚಿಸಿದರು. ಶಿರ್ವ ಗ್ರಾ.ಪಂ.ಶಿರ್ವ ಆರೋಗ್ಯ ಮಾತಾ ದೇವಾಲಯ ಮತ್ತು ಎಂಎಸ್‌ಆರ್‌ಎಸ್ ಕಾಲೇಜು ಅಲುಮ್ನಿ ಎಸೋಸಿಯೇಶನ್ ಮುಂಬಯಿ ವತಿಯಿಂದ ಗೌರವಿಸಲಾಯಿತು. ಅಭಿನಂದನಾ ಭಾಷಣ ಮಾಡಿದ ಸುರೇಶ್ ಪಿ ಶೆಟ್ಟಿ ಗುರ್ಮೆ ಮಾತನಾಡಿ, ಮನುಷ್ಯ ಸಂಸಾರಮುಖಿಯಾಗಿ ಬದುಕದೆ ಸಮಾಜಮುಖಿಯಾಗಿ ಬದುಕಿದಾಗ ಮಾನ ಸಮ್ಮಾನಗಳು ಒಲಿದು ಬರುತ್ತವೆ. ಕಾಯಕದಲ್ಲಿ ಕೈಲಾಸವನ್ನು ಕಂಡ ಕರ್ಮಯೋಗಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧಕನಾಗಿ, ವಿದ್ಯಾ ಸಂಸ್ಥೆಗಳ ಏಳಿಗೆಯಲ್ಲಿ ಸುಖ ಕಂಡ, ದುಡಿಯುವ ಸಾವಿರಾರು ಕೈಗಳಿಗೆ ಬದುಕಿನ ಪಥ ತೋರಿಸಿದ ವಿನಯ ಹೆಗ್ಡೆಯವರ…
ಶ್ರೀ ಕೃಷ್ಣ, ಗೋವಿಂದ, ಮುರಾರಿ ಎಂದಾಕ್ಷಣ ನಮ್ಮ ಕಣ್ಮುಂದೆ ಸುಳಿದಾಡುವುದು ಬಾಲ ಕೃಷ್ಣನ ಮುದ್ದು ಮುಖ, ತುಂಟ ಕೃಷ್ಣ, ಬೆಣ್ಣೆ ಕಳ್ಳ,ಕಪ್ಪು ಬಣ್ಣದ ಶ್ಯಾಮ, ಗೋವುಗಳ ಕಾಯುವ ಗೋಪಾಲ, ಪರ್ವತ ಎತ್ತಿ ಹಿಡಿದ ಗಿರಿಧರ, ಕೊಳಲು ಊದುವ ಮುರಲಿ, ರಾಧೆಯ ಸಕ, ಜಗದ ಮಾಲಿಕ ಜಗದೀಶ, ಸುಂದರ ವದನ ಮಥನ, ದುಷ್ಟರ ಸಂಹಾರ, ಶಿಷ್ಟರ ರಕ್ಷಕ ಹೀಗೆ ನೆನಪಿಸಿಕೊಳ್ಳುತ್ತಾ ಭಕ್ತಿಯಿಂದ ಪೂಜಿಪ ಶ್ರೀ ಕೃಷ್ಣ ಹೆಚ್ಚಾಗಿ ಸಿಲ್ಕ್ ನ ಹಳದಿ ಬಣ್ಣದ ದೋತರ ಮತ್ತು ತಲೆಯನ್ನು ನವಿಲು ಗರಿಗಳಲ್ಲಿ ಅಲಂಕರಿಸಿದ್ದು ಕೊಳಲು ಊದುವ ಕೃಷ್ಣನನ್ನೇ ಹೆಚ್ಚಾಗಿ ಬಿಂಬಿಸಲಾಗುತ್ತದೆ. ಭಕ್ತರು ಭಕ್ತಿಯಿಂದ ಆಚರಿಸುವ ಶ್ರೀ ಕೃಷ್ಣಾಷ್ಟಮಿಯ ಸಂಭ್ರಮವು ಬಗೆ ಬಗೆ. ಶ್ರಾವಣ ಮಾಸದ ಕೃಷ್ಣಾಷ್ಟಮಿಯ ರೋಹಿಣಿ ನಕ್ಷತ್ರದಲ್ಲಿ ದೇವಕಿಯ ಎಂಟನೇ ಗರ್ಭದಲ್ಲಿ ಹುಟ್ಟಿದ ದಿನವನ್ನು ಇಂದಿಗೂ ಮನೆ ಮನೆಯಲ್ಲಿ ಆಚರಿಸುವುದು ಕಾಣ ಸಿಗುತ್ತವೆ. ಈ ದಿನ ಮನೆಯ ಯಜಮಾನ ಅಷ್ಟಮಿ ಉಪವಾಸ ಮಾಡುವ ಕ್ರಮ ಇದ್ದು ಮದ್ಯಾಹ್ಹ ಊಟ ಮಾಡದೆ ಉಪವಾಸದಲ್ಲಿದ್ದು (ಫಲಹಾರ…
ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನರವಿಜ್ಞಾನ ವಿಭಾಗ ಜುಲೈ 22 ರಂದು ಮೆದುಳಿನ ಆರೋಗ್ಯ ಜಾಗೃತಿ ಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವಿಶ್ವ ಮೆದುಳಿನ ದಿನವನ್ನು ಆಚರಿಸಿತು. ಪ್ರತಿ ವರ್ಷ ಜುಲೈ 22 ರಂದು ವಿಶ್ವ ಮೆದುಳಿನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷದ ಘೋಷ ವಾಕ್ಯ “ಮೆದುಳಿನ ಆರೋಗ್ಯ ಮತ್ತು ಅಂಗವೈಕಲ್ಯ”. ಈ ಅಂತರಾಷ್ಟ್ರೀಯ ಆಂದೋಲನವು ಮಾಹಿತಿಯ ಅಂತರವನ್ನು ಮುಚ್ಚಲು ಮತ್ತು ಮೆದುಳಿನ ಆರೋಗ್ಯದ ದುರ್ಬಲತೆಗಳ ಬಗ್ಗೆ ಸಾರ್ವಜನಿಕ ಅರಿವನ್ನು ಹೆಚ್ಚಿಸಲು ಶ್ರಮಿಸುತ್ತದೆ. ಇದು ವಿಕಲಾಂಗ ವ್ಯಕ್ತಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯವನ್ನು ಒದಗಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಮೆದುಳು ಮಾನವ ದೇಹದ ಬಹು ಮುಖ್ಯ ಅಂಗವಾಗಿದೆ. ನಮ್ಮ ಭಾವನೆಗಳು ಆಲೋಚನೆಗಳು ಮತ್ತು ಎಲ್ಲಾ ಕ್ರೀಯೆಗಳಿಗೆ ಕಾರಣವಾಗಿದೆ. ಮೆದುಳಿನ ಆರೋಗ್ಯವನ್ನು ಕಾಪಾಡಿಕೊಂಡರೆ, ಇದರಿಂದ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಂಡಂತೆ. ಆದ್ದರಿಂದ ಉತ್ತಮ ಸಮತೋಲಿತ ಆಹಾರ ಮತ್ತು ವ್ಯಾಯಾಮದ ಮೂಲಕ ಮೆದುಳಿನ ಆರೋಗ್ಯವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇದನ್ನು ಗಮನಿಸಿ ವಿಶ್ವ ಆರೋಗ್ಯ ಸಂಸ್ಥೆಯು…
ಮಕ್ಕಳು ಮತ್ತು ಹದಿಹರಯದವರ ಮನಶಾಸ್ತ್ರವು ಮನಶಾಸ್ತ್ರ ವಿಭಾಗದ ಒಂದು ಶಾಖೆಯಾಗಿದ್ದು, 18 ವರ್ಷಕ್ಕಿಂತ ಕೆಳಗಿನ ವಯೋಮಾನದವರ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತದೆ. ಮಕ್ಕಳು ಮತ್ತು ಹದಿಹರಯದವರು ಅನೇಕ ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸುತ್ತಾರೆ. ಅವರ ವಿಭಿನ್ನ ಸಮಸ್ಯೆಗಳು, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಳ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತವೆ. ಮಕ್ಕಳ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣ ಏನು ಎಂಬುದನ್ನು ತಿಳಿಯಲು ಮಕ್ಕಳ ಮತ್ತು ಹದಿಹರಯದವರ ಮಾನಸಿಕ ಆರೋಗ್ಯ ವಿಶ್ಲೇಷಣೆ ನೆರವಾಗಬಲ್ಲುದು. ಇವುಗಳನ್ನು ಸ್ಥೂಲವಾಗಿ ಜೀವಶಾಸ್ತ್ರೀಯ (ಅಂದರೆ, ಮಿದುಳಿನಲ್ಲಿ ಆಗುವ ಬದಲಾವಣೆಗಳು), ಮನಶಾಸ್ತ್ರೀಯ (ಅಂದರೆ ಮಗುವಿನ ಸ್ವಭಾವ, ಹೊಂದಿಕೊಳ್ಳುವ ವ್ಯವಸ್ಥೆ, ಹೆತ್ತವರ ಜತೆಗಿನ ಸಂಬಂಧ) ಮತ್ತು ಸಾಮಾಜಿಕ (ಅಂದರೆ, ಮಕ್ಕಳು ಆಡುವ ಮತ್ತು ಬೆಳೆಯುವ ಶಾಲೆ/ಮನೆ/ನೆರೆಹೊರೆಯಲ್ಲಿ) ಎಂದು ವರ್ಗೀಕರಿಸಬಹುದು. ಮಕ್ಕಳು ಸಾಮಾಜಿಕವಾಗಿ ಬಹು ಆಯಾಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಬೆಳವಣಿಗೆಗೆ ಸಾಮಾಜಿಕ ಅನುಭವ ಬಹಳ ಮುಖ್ಯವಾದುದು. ಆದರೆ ಮಕ್ಕಳು ಸಮಾಜದಲ್ಲಿ ಹಲವು ಬಗೆಯ ಒತ್ತಡ ಸನ್ನಿವೇಶಗಳನ್ನು ಎದುರಿಸಬಹುದಾಗಿದ್ದು, ಇದು ಅವರ ಮಾನಸಿಕ ಆರೋಗ್ಯಕ್ಕೆ…
ಜಾಹೀರಾತು ಇಂದು ಮಾನವನ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿ ತನ್ನ ಮಹಿಮೆಯನ್ನು ಎಲ್ಲೆಡೆಗೂ ಬಿತ್ತಿ ಬೃಹತ್ ರೂಪ ತಾಳಿದೆ. ಅದೆಷ್ಟು ಅನಿವಾರ್ಯವೆಂದರೆ ಜಾಹೀರಾತು ಇಲ್ಲದೆ ಯಾವ ವಸ್ತು ಮಾರಾಟವಾಗಲೂ ಸಾದ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ನಮ್ಮ ಮನಸ್ಥಿತಿ ಬಂದು ಮುಟ್ಟಿದೆ. ಜಾಹೀರಾತು ಜಗತ್ತು ತನ್ನ ಉಳಿವು ಬೆಳವಣಿಗೆಗೆ ಮಹಿಳೆಯರನ್ನು ಆಶ್ರಯಿಸಿಕೊಂಡಿದ್ದು, ಜಾಹೀರಾತು ಜಗತ್ತಿನಲ್ಲಿ ಮಹಿಳೆಯೋ ಮಹಿಳಾ ಜಗತ್ತಿನಲ್ಲಿ ಜಾಹೀರಾತೊ ಎನ್ನುವಷ್ಟರ ಮಟ್ಟಿಗೆ ಜಾಹೀರಾತು ವಿಜ್ರಂಭಿಸುತ್ತಿದೆ, ವೈಭವಿಸುತ್ತಿದೆ. ಕೆಲವೊಮ್ಮೆ ಜಾಹೀರಾತು ಪ್ರಸ್ತುತಪಡಿಸುವ ರೀತಿ ಆ ರೂಪದರ್ಶಿಗಳನ್ನು ನೋಡಿ ಆನಂದಿಸುವುದರಲ್ಲಿ ಅದು ಯಾವ ವಸ್ತುವಿನ ಬಗ್ಗೆ ಎಂಬುದು ಗಮನಕ್ಕೆ ಬರುವುದಿಲ್ಲ. ಹೆಣ್ಣಿನ ಹೆಣ್ತನ, ಅವಳ ಉಡುಗೆ ತೊಡುಗೆ, ಭಾವುಕತೆಯ ಜಾಹೀರಾತೋ ಎಂಬಂತೆ ಬಿಂಬಿಸುವ ಜಾಹೀರಾತು ಎಲ್ಲೆಡೆ ಹೆಚ್ಚು ಗಮನ ಸೆಳೆಯುವುದು. ಆದರೆ ಮಹಿಳೆಯರನ್ನು ಆರ್ಥಿಕವಾಗಿ ಬಲಸಡ್ಯಾರನ್ನಾಗಿರಿಸಿದೆ ಜಾಹಿರಾತು ಎನ್ನುವ ಸತ್ಯವನ್ನು ದಾರಾಳವಾಗಿ ಒಪ್ಪಿಕೊಳ್ಳ ಬೇಕು. ಹಿಂದೆಲ್ಲ ಒಂದು ನಂಬಿಕೆ ಇತ್ತು. ಹೊರ ಪ್ರಪಂಚ ಪುರುಷನದ್ದು ಮನೆ ಒಳಗಿನ ಪ್ರಪಂಚ ಮಹಿಳೆಯರದ್ದು ಆಗಿತ್ತು. ತನ್ನ ಕುಟುಂಬದ ನಿರ್ವಹಣೆಯೊಂದಿಗೆ…
ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ವಾರ್ಷಿಕ ಶ್ರೀಮನ್ಮಹಾರಥೋತ್ಸವವು ಬುಧವಾರ ಸಂಪನ್ನಗೊಂಡಿತು. ಬೆಳಗ್ಗೆ ರಥಾರೋಹಣ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಐದು ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ಸ್ಯಾಕ್ಸಫೋನ್ ಕಛೇರಿ, ರಾತ್ರಿ ಶ್ರೀಮನ್ಮಹಾರಥೋತ್ಸವ, ಉತ್ಸವ ಬಲಿ, ಮಹಾರಂಗಪೂಜೆ, ಶ್ರೀ ಭೂತ ಬಲಿ, ಶಯನೋತ್ಸವ ನಡೆಯಿತು. ಪರ್ಯಾಯ ತಂತ್ರಿ ವೇ| ಮೂ| ಪಾದೂರು ಲಕ್ಷ್ಮೀನಾರಾಯಣ ತಂತ್ರಿಗಳ ಮಾರ್ಗದರ್ಶನದಲ್ಲಿ ಸರದಿ ಅರ್ಚಕರಾದ ವೇ| ಮೂ| ಶ್ರೀನಿವಾಸ ಭಟ್, ವೇ| ಮೂ| ವೆಂಕಟೇಶ ಭಟ್, ವೇ| ಮೂ| ಗುರುರಾಜ ಭಟ್ ಅರ್ಚಕತ್ವದಲ್ಲಿ, ಪವಿತ್ರಪಾಣಿ ಕೆ.ಎಲ್. ಕುಂಡಂತಾಯ ಅವರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರುಣಾಕರ ಶೆಟ್ಟಿ ಕಳತ್ತೂರು, ವ್ಯವಸ್ಥಾಪನ ಸಮಿತಿ ಸದಸ್ಯರಾದ ವೆಂಕಟೇಶ್ ಭಟ್, ಜೆನ್ನಿ ನರಸಿಂಹ ಭಟ್, ಕುತ್ಯಾರು ಪ್ರಸಾದ್ ಶೆಟ್ಟಿ, ಕೆ. ಕೊರಗ, ಸುಜಾತಾ ಆರ್. ಶೆಟ್ಟಿ, ಕುಶಲ ದೇವಾಡಿಗ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ಜಗದೀಶ ಅರಸ ಕುತ್ಯಾರು, ಕಳತ್ತೂರು…