Author: admin

ಬಂಟರ ಸಂಘ ಪಿಂಪ್ರಿ – ಚಿಂಚ್ವಾಡ್ ಇದರ ಮಹಿಳಾ ವಿಭಾಗದ ವತಿಯಿಂದ ಅರಶಿನ ಕುಂಕುಮ ಕಾರ್ಯಕ್ರಮವು ಚಿಂಚ್ವಾಡದ ರಂಗೋಲಿ ಸಭಾಗೃಹದಲ್ಲಿ ಜ.20 ರಂದು ನಡೆಯಿತು. ಸೌಮ್ಯಾ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ವಿ ಶೆಟ್ಟಿ ಹಾಗೂ ಮಾಜಿ ಕಾರ್ಯಾಧ್ಯಕ್ಷೆಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜ್ಯೋತಿ ಶೆಟ್ಟಿಯವರು ಕಾರ್ಯಕ್ರಮಕ್ಕೆ ಆಗಮಿಸಿದ ಸದಸ್ಯರನ್ನು ಸ್ವಾಗತಿಸಿದರು. ಸೌಮ್ಯಾ ಶೆಟ್ಟಿಯವರು ಅರಶಿನ ಕುಂಕುಮದ ಮಹತ್ವದ ಬಗ್ಗೆ ಮಾತನಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಸ್ಥಳೀಯ ನಗರಸೇವಕಿ ಸುಜಾತಾ ಪಾಲಂದೆಯವರನ್ನು ಮಹಿಳಾ ವಿಭಾಗದಿಂದ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಬಂಟರ ಸಂಘ ಪುಣೆ ಹಾಗೂ ಬಂಟ್ಸ್ ಅಸೋಸಿಯೇಶನ್ ಪುಣೆ ಇದರ ಮಹಿಳಾ ವಿಭಾಗದ ಸದಸ್ಯೆಯರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದರು. ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಧ್ಯಕ್ಷೆಯರಾದ ಪ್ರೇಮಾ ಶೆಟ್ಟಿ, ಜಯಲಕ್ಷ್ಮಿ ಶೆಟ್ಟಿ, ಸುಪ್ರಿಯಾ ಶೆಟ್ಟಿ, ತನುಜಾ ಶೆಟ್ಟಿ, ಸಮಿತಿಯ ಕಾರ್ಯದರ್ಶಿ ತಾರಾ ಶೆಟ್ಟಿ, ಕೋಶಾಧಿಕಾರಿ ಸ್ಮಿತಾ ಹೆಗ್ಡೆ, ಉಪಾಧ್ಯಕ್ಷೆಯರಾದ ಸುನಿತಾ ಶೆಟ್ಟಿ,…

Read More

ಮುಂಬಯಿ (ಆರ್‍ಬಿಐ), ಜ.25: ಐಲೇಸಾ-ದಿ ವಾಯ್ಸ್ ಆಫ್ ಓಷನ್ (ರಿ). ಡಿಜಿಟಲ್ ಸಂಸ್ಥೆಯು ಇದೇ ಶನಿವಾರ (ಜ.28) ಝೂಮ್ ಡಿಜಿಟಲ್ ವೇದಿಕೆಯಲ್ಲಿ `ಬಾನ ಚಂದ್ರೆ ತೆಲಿಪುನಾನಿ’ ತುಳು ಹಾಡು ಬಿಡುಗಡೆ ಮಾಡಲಿದೆ. ಕಳೆದ ವರ್ಷ ಹನ್ನೊಂದು ತುಳು ಹಾಡುಗಳನ್ನು ಬಿಡುಗಡೆ ಗೊಳಿಸಿದ ಐಲೇಸಾ ಸಂಸ್ಥೆ ಈ ವರ್ಷದ ಮೊದಲ ಕಾಣಿಕೆಯಾಗಿ ಯುವ ಸಾಹಿತಿ ನರೇಂದ್ರ ಕಬ್ಬಿನಾಲೆ ಅವರ ಬಾನ ಚಂದ್ರೆ ತೆಲಿಪುನಾನಿ ಎನ್ನುವ ತಾಯಿ ಮಕ್ಕಳ ಬಾಂಧವ್ಯದ ಮಧುರ ಗೀತೆಯನ್ನು ಹೆಣ್ಣು ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ತನ್ನ ಸಾಂಸಾರಿಕ ಜೀವನದ ಒತ್ತೆಯಿಡುತ್ತಾ ಗಂಡ ಮಕ್ಕಳ ನಗುವಲ್ಲಿ ಬೆಳದಿಂಗಳಂತೆ ಲೀನಳಾಗುವ ಚಿತ್ರಣದ ಹಾಡನ್ನು ಬಿಡುಗಡೆ ಗೊಳಿಸಲಿದೆ. ಪ್ರೇಮಲತಾ ದಿವಾಕರ್ ಈ ಹಾಡನ್ನು ಮಧುರವಾಗಿ ಸಂಯೋಜಿಸಿದ್ದು ಪ್ರಖ್ಯಾತ ಗಾಯಕಿ ಮಾಲಿನಿ ಕೇಶವ ಪ್ರಸಾದ್ ಅವರ ಧ್ವನಿಯಲ್ಲಿ ಮುದ್ರಿಸಲಾಗಿದೆ. ಪ್ರಮೋದ್ ಸಹಕಾರದಲ್ಲಿ ನಿಶಾಂತ್ ಕ್ಯಾಲಿಕಟ್ ಅವರ ವಾದ್ಯ ಸಂಗೀತವಿದ್ದು ಹಾಡನ್ನು ಮಹಿಷಮರ್ದಿನಿ ದೇವಸ್ಥಾನ ಅಜ್ಜಾವರ ಸುಳ್ಯ ಇದರ ಧರ್ಮದರ್ಶಿ ಶ್ರೀ ಶಿವರಾಯ ಇವರು ಬಿಡುಗಡೆ ಗೊಳಿಸಲಿದ್ದಾರೆ.…

Read More

ಮುಂಬಯಿಯ ಖ್ಯಾತ ಇಂಡಸ್ಟ್ರೀಯಲಿಸ್ಟ್ ಅಲ್ಲದೇ ಮುಂಬೈ ನ ಬಂಟರ ಸಂಘದಲ್ಲಿ ವಿವಿಧ ಹುದ್ದೆಗಳನ್ನು ಕಾರ್ಯ ನಿರ್ವಹಿಸಿ ಯಶಸ್ವಿಯಾದ ಸಮಾಜಸೇವಕ ಶ್ರೀ ಮಹೇಶ್ ಎಸ್.ಶೆಟ್ಟಿ ( ಬಾಬಾ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕರು ) ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿ ಮತ್ತು ಒಕ್ಕೂಟದಲ್ಲಿ ನಡೆಯುವ ಜನಪರ ಕಾಳಜಿಯ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡುವ ಸಲುವಾಗಿ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದಾರೆ. ಇವರು ಈ ಹಿಂದೆ ಒಕ್ಕೂಟದ ಪೋಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

Read More

ಬಂಟ್ವಾಳ ತಾಲೂಕಿನ ಅನಂತಾಡಿ ಒಂದು ಪುಟ್ಟ ಗ್ರಾಮ.ಅಲ್ಲೊಂದು ಶಿಕ್ಷಕ ಪರಂಪರೆಯ ಕುಟುಂಬ.ಆ ಕುಟುಂಬದ ಓರ್ವ ಪ್ರತಿಭಾನ್ವಿತ ವ್ಯಕ್ತಿ ಕೆ.ಎನ್.ಗಂಗಾಧರ ಆಳ್ವರು.ಇವರ ತಂದೆ ನಾರಾಯಣ ಆಳ್ವರು ಶಿಕ್ಷಕರು.ಅಜ್ಜ ಸುಬ್ಬಣ್ಣ ಆಳ್ವರೂ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. ಗಂಗಾಧರ ಆಳ್ವರು ತನ್ನ ಶಾಲಾ ದಿನಗಳಿಂದಲೇ ಪಾಠ- ಪಾಠೇತರ ಚಟುವಟಿಕೆಗಳಲ್ಲಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದುಕೊಂಡು ಮಿಂಚಿದವರು. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ಪೂರೈಸಿದ ತರುವಾಯ, ಪದವಿ ಶಿಕ್ಷಣ ಓದುತ್ತಿದ್ದಾಗ ಅಂತಿಮ ವರ್ಷದ ಬಿ.ಎ.ಯಲ್ಲಿ ಪುತ್ತೂರು ತಾಲೂಕಿಗೇ ಪ್ರಥಮ ಸ್ಥಾನ,ವಿಶ್ವ ವಿದ್ಯಾಲಯದಲ್ಲಿ ಎಂ.ಎ ಅರ್ಥಶಾಸ್ತ್ರದಲ್ಲಿ ಮೂರನೇ ರಾಂಕ್ ನೊಂದಿಗೆ ಯಶಸ್ವಿಯಾಗಿ ಪೂರೈಸಿದ ತರುವಾಯ ಬೇರೆ ಬೇರೆ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೧೯೯೨ ರಿಂದ ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ನಿಯುಕ್ತರಾದರು. ೧೯೯೫ ರಲ್ಲಿ ಇದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಪದೋನ್ನತಿ ಪಡೆದರು. ಬಹುಶಃ ಇಡೀ ರಾಜ್ಯದಲ್ಲಿ ಆಗ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅತ್ಯಂತ ಹಿರಿಯ ಜವಾಬ್ದಾರಿಯನ್ನು ವಹಿಸಿಕೊಂಡು ಮುನ್ನಡೆಸಿದವರಲ್ಲಿ…

Read More

ಬಂಟರ ಸಂಘ (ರಿ.) ಸುರತ್ಕಲ್, ಲಯನ್ಸ್ ಕ್ಲಬ್ ಹಳೆಯಂಗಡಿ, ಜೆಸಿಐ ಸುರತ್ಕಲ್ ಹಾಗೂ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಆಶ್ರಯದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮವು ಆದಿತ್ಯವಾರ ಸುರತ್ಕಲ್ ಬಂಟರ ಭವನದಲ್ಲಿ ನೆರವೇರಿತು. ಉದ್ಘಾಟನೆಯನ್ನು ಸುರತ್ಕಲ್ ನ ಹಿರಿಯ ವೈದ್ಯರಾದ ಡಾ.ಟಿ. ಆರ್. ಶೆಟ್ಟಿ ನೆರವೇರಿಸಿದರು. ಬಳಿಕ ಮಾತಾಡಿದ ಅವರು, “ಉದಕ ದಾನ, ಅನ್ನದಾನ, ಗೋ ದಾನ, ಭೂದಾನ ದಂತೆಯೇ ರಕ್ತದಾನ ಕೂಡಾ ಮಹಾದಾನವಾಗಿದ್ದು ಜನರಲ್ಲಿ ರಕ್ತದಾನದ ಕುರಿತು ಹೆಚ್ಚಿನ ತಿಳುವಳಿಕೆ ಮೂಡಿಸಬೇಕಿದೆ. ರಕ್ತದಾನ ಇನ್ನೊಬ್ಬರ ಜೀವ ಉಳಿಸುತ್ತದೆ. 18 ವರ್ಷದಿಂದ 60 ವರ್ಷದೊಳಗಿನ ಪ್ರತಿಯೊಬ್ಬ ವ್ಯಕ್ತಿಯೂ 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನದಿಂದ ಆತ್ಮತೃಪ್ತಿ ಸಿಗುತ್ತದೆ. ರಕ್ತದಾನದಿಂದ ಅರೋಗ್ಯ ವೃದ್ಧಿಸುತ್ತದೆ. ಮಾನಸಿಕ, ಭಾವನಾತ್ಮಕ ಆರೋಗ್ಯಕ್ಕೆ ಪೂರಕವಾಗಿರುತ್ತದೆ. ಆದ್ದರಿಂದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು” ಎಂದು ಕರೆ ನೀಡಿದರು. ಲಯನ್ ನಾಗೇಶ್ ಕುಮಾರ್ ಎನ್. ಜೆ., ಜೆ ಎಫ್ ಎಂ ರಾಜೇಶ್ವರಿ ಡಿ. ಶೆಟ್ಟಿ, ಕೆಎಂಸಿ ಆಸ್ಪತ್ರೆಯ ಡಾ. ಕೇಸಿಯಾ, ಹಳೆಯಂಗಡಿ…

Read More

ಕಾಯಕವೇ ಕೈಲಾಸ ಎಂದು ನಂಬಿರುವ ರಾಜೇಂದ್ರ ವಿ ಶೆಟ್ಟಿಯವರು ಹುಬ್ಬಳ್ಳಿಯಲ್ಲಿ ನೆಲೆಸಿ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ನ ಸಂಸ್ಥಾಪಕರಾಗಿ ಸಮಾಜಸೇವೆ ಮಾಡುತ್ತಾ ಬರುತ್ತಿದ್ದಾರೆ. ಸಾವಿರಾರು ನೌಕರ ವೃಂದಕ್ಕೆ ಅನ್ನದಾತರಾಗಿ, ಓರ್ವ ಅಪ್ಪಟ ದೇಶಪ್ರೇಮಿಯಾಗಿ, ನಮ್ಮ ಸಂಸ್ಕೃತಿ ಆಚಾರ ವಿಚಾರ ಬೆಳೆಸುವಲ್ಲಿ ಕಿರಿಯರಿಗೆ ಮಾರ್ಗದರ್ಶಕರಾಗಿ, ಹಿರಿಯರಿಗೆ ಸದಾ ಗೌರವ ಕೊಡುವ ರಾಜೇಂದ್ರ ಶೆಟ್ಟರಿಗೆ ಭಗವಂತ ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ, ಆರೋಗ್ಯ, ಸಕಲ ಸಂಪತ್ತನ್ನು ನೀಡಿ ಹರಸಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಕೋರುತ್ತಿದ್ದೇವೆ.

Read More

“ಡೋಜಿ’ ಸುಧಾರಿತ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಂಪರ್ಕ ರಹಿತ ಮತ್ತು ರೋಗಿಗಳ ಮೇಲ್ವಿಚಾರಣೆ, ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆ ಹೊಂದಿದ ಅತ್ಯಾಧುನಿಕ ವ್ಯವಸ್ಥೆಯನ್ನು ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಳವಡಿಸಲಾಗಿದೆ. ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ| ಪ್ರಶಾಂತ್‌ ಮಾರ್ಲ ಮಾಹಿತಿ ನೀಡಿ, ಎ.ಜೆ. ಆಸ್ಪತ್ರೆಯಲ್ಲಿ ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸುತ್ತಿದ್ದೇವೆ. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಇದು ನೆರವಾಗಲಿದೆ. ಕೋವಿಡ್‌ ಸಮಯದಲ್ಲೇ ಪರೀಕ್ಷಾರ್ಥವಾಗಿ ಈ ಉಪಕರಣವನ್ನು ಅಳವಡಿಸಿದ್ದೆವು. ಅನೇಕ ತಿಂಗಳ ಪ್ರಯೋಗದ ಬಳಿಕ ಸುಸಜ್ಜಿತವಾಗಿ ಸ್ಥಾಪನೆಯಾಗುತ್ತಿದೆ. ಸದ್ಯ 50 ಖಾಸಗಿ ಬೆಡ್‌ಗಳಿಗೆ ಅಳವಡಿಸುತ್ತೇವೆ. ರೋಗಿಗಳಲ್ಲಿ ಹೃದಯ ಸಂಬಂಧಿ, ಮಧುಮೇಹ, ರಕ್ತದೊತ್ತಡ, ದೇಹದ ಉಷ್ಣತೆ, ಇಸಿಜಿ ಸಹಿತ ವಿವಿಧ ಮಾಹಿತಿಗಳ ಮೇಲೆ ದೂರದಿಂದಲೇ ನಿಗಾ ಇರಿಸಲು ಆರೋಗ್ಯ ಕಾರ್ಯಕರ್ತರಿಗೆ ಈ ಯಂತ್ರ ನೆರವಾಗುತ್ತದೆ. ಮುಂಚಿತವಾಗಿ ಎಚ್ಚರಿಕೆ ನೀಡುವ ಸೌಲಭ್ಯ ಇದರಲ್ಲಿದ್ದು, ರೋಗಿಯ ಆರೋಗ್ಯದಲ್ಲಾಗುವ ಬದಲಾವಣೆಯನ್ನು ಮೊದಲೇ ತಿಳಿಸುತ್ತದೆ ಎಂದರು. ಡೋಜಿಯ ಪರಿಹಾರವು ಕ್ಲೌಡ್ ಆಧಾರಿತ…

Read More

ಬ್ರಹ್ಮಾವರ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ನವೆಂಬರ್ 2 ರಂದು ಚಿಣ್ಣರ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಜಿ ಎಮ್ ಛತ್ರಛಾಯದಲ್ಲಿ ಪ್ರಿ ನರ್ಸರಿಯಿಂದ ಎರಡನೇ ತರಗತಿಯವರೆಗಿನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಅತ್ಯಂತ ಆಸಕ್ತಿಯಿಂದ ಪಾಲ್ಗೊಂಡು ಕ್ರೀಡಾಸ್ಫೂರ್ತಿಯನ್ನು ಮೆರೆದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬೆಂಗಳೂರಿನಲ್ಲಿ ಕಾರ್ಯಕ್ರಮ ಅರಿವಿನ ವಿಶ್ಲೇಷಕ ವೃತ್ತಿಯನ್ನು ನಿರ್ವಹಿಸುತ್ತಿರುವ ಜಿ ಎಮ್ ನ ಹಳೆ ವಿಧ್ಯಾರ್ಥಿ ಮನೋಜ್ ಯು ಆಗಮಿಸಿದ್ದರು. ಅವರು ಜ್ಯೋತಿಯನ್ನು ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿ ಮಾತನಾಡಿ, ಮಕ್ಕಳು ಬಾಲ್ಯದಲ್ಲಿ ಕೋಣೆಯ ಒಳಗೆ ಕುಳಿತು ಮೊಬೈಲ್ ನೋಡುವುದನ್ನು ಬಿಟ್ಟು ಹೊರಗಡೆ ಆಟ ಆಡುವುದಕ್ಕೆ ಸಮಯವನ್ನು ಮೀಸಲಿಡಬೇಕು. ಪೋಷಕರು ಮಕ್ಕಳು ಬಾಲ್ಯವನ್ನು ಸವಿಯಲು ಕಲಿಕೆಯ ಜೊತೆಗೆ ಕ್ರೀಡೆಗಳಲ್ಲಿ ತೊಡಗಿಸಲು ಉತ್ತೇಜಿಸಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಶಾಲಾ ಧ್ವಜವನ್ನು ಅರಳಿಸಿ ಮಾತನಾಡಿ ಮಕ್ಕಳು ಜೀವನದ ಪಾಠಗಳನ್ನು ತರಗತಿಯ ಹೊರಗೆ ಕಲಿಯುತ್ತಾರೆ. ಕ್ರೀಡೆಗಳಿಂದ ಸಾಮಾಜಿಕ, ನೈತಿಕ ಮೌಲ್ಯಗಳ ಕಲಿಕೆಯಾಗುತ್ತದೆ ಜೊತೆಗೆ ಶಾರೀರಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಶಾಲಾ ಆಡಳಿತ…

Read More

ಶ್ರೀ ಮಾತಾ ವೈಷ್ಞೋದೇವಿ ಶ್ರೈನ್ ಬೋರ್ಡ್ ಕಟ್ರಾ ಜಮ್ಮು ಕಾಶ್ಮೀರ ಪ್ರತಿ ವರ್ಷ ನವರಾತ್ರಿಯಲ್ಲಿ ಆಯೋಜಿಸುವ ಒಂಭತ್ತು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮದ ರಾಷ್ಟ್ರೀಯ ಭಕ್ತಿ ಗೀತೆಗಳ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಯಕ್ಷ ಧ್ರುವ ಪಟ್ಲ ಪೌಂಡೇಷನ್ ಅವರ ಶ್ರೀ ದೇವಿಮಹಾತ್ಮೆ ಯಕ್ಷಗಾನ ಮತ್ತು ಕಳಂಜದ ನಿನಾದ ಸಾಂಸ್ಕೃತಿಕ ಕೇಂದ್ರದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ತಾಯಿ ವೈಷ್ಞೋದೇವಿಯ ಪದತಳ ಜಮ್ಮುವಿನ ಕಟ್ರಾದಲ್ಲಿ ಮೊದಲ ಬಾರಿಗೆ ನವರಾತ್ರಿ ಉತ್ಸವದ ಪ್ರಥಮ ದಿನ ಜಮ್ಮುವಿನ ಸಾಂಸ್ಕೃತಿಕ ಸಚಿವಾಲಯದ ಸಹಯೋಗದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮಂಗಳೂರಿನ ವತಿಯಿಂದ ಪಾವಂಜೆ ಮೇಳದ ಕಲಾವಿದರಿಂದ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು. ಜಮ್ಮುವಿನ ವಿದ್ಯುತ್ ಸಚಿವಾಲಯದ ಪ್ರಿನ್ಸಿಪಲ್ ಸೆಕ್ರೆಟರಿ ರಾಜೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಅಕ್ಟೋಬರ್ 2ರಂದು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಯಕ್ಷಗಾನ ಪ್ರದರ್ಶನ ಕಂಡು ಪುಲಕಿತರಾದ ಮಾನ್ಯ ಗವರ್ನರ್ ಮನೋಜ್ ಸಿನ್ಹಾ ಅವರು ವೈಷ್ಞೋದೇವಿ ಸನ್ನಿಧಾನದಲ್ಲಿ ಯಕ್ಷಗಾನ ಪ್ರದರ್ಶನ ನಡೆಸಿಕೊಡುವಂತೆ ಆಗ್ರಹಿಸಿದರು. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ…

Read More

ದೈವಾರಾಧನೆಯನ್ನು ಉಸಿರಾಗಿಸಿಕೊಂಡಿರುವ ತುಳುನಾಡಿನಲ್ಲಿ ಅನೇಕ ಕಾರ್ಣಿಕ ಕ್ಷೇತ್ರಗಳು ಕಾಣ ಸಿಗುತ್ತವೆ. ಅಂತಹ ಕಾರ್ಣಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕ್ಷೇತ್ರ ತಾರಾಬರಿ (ಸಾರಬಳಿ) ಜುಮಾದಿ ಬಂಟ ಕ್ಷೇತ್ರ, ಕೆಂಜಾರು. ತಾರಾಬರಿ ತುಳುನಾಡಿನಲ್ಲಿ ಆರಾಧಿಸಲ್ಪಡುವ ಜುಮಾದಿ ಬಂಟ ದೈವಗಳ ಬಂಡಿ ಉತ್ಸವಗಳಲ್ಲಿ ವಿಶೇಷವಾಗಿ ಕಾಣಿಸಲ್ಪಡುತ್ತದೆ. ಪಶ್ಚಿಮ ಘಟ್ಟದಿಂದ ಕಡಲ ತಟಿಯವರಗಿನ ಸಾವಿರಾರು ಭಕ್ತರು ಇಲ್ಲಿಯ ಬಂಡಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ತಾರಾಬರಿ ಕ್ಷೇತ್ರದ ಕಾರಣಿಕದ ಇತಿಹಾಸವನ್ನು ನೋಡಿದಾಗ ಸೂಮಾರು ೯೦೦ ವರ್ಷಗಳ ಹಿಂದೆ “ಭೂತ ಮಂಜು” ಎಂಬವರನ್ನು ಬೆನ್ನು ಹಿಡಿದು ಬಂದ ದೈವಗಳು ತಾರಾ ಬರಿಯಲ್ಲಿ ನೆಲೆಯೂರಿ ಪೇಜಾವರ ಮಾಗಣೆಯವರಿಂದ ಆರಾಧಿಸಲ್ಪಡುತ್ತಾ ಕಾರಣಿಕ ಮೆರೆಯುತ್ತಿದ್ದಾರೆ. ದೈವದ ನುಡಿಕಟ್ಟಿನನುಸಾರ “ಭೂತ ಮಂಜುವಿನ” ಬೆನ್ನು ಹಿಡಿದು ಬಂದ ದೈವವು ಮಾಗಣೆ ಸಮಸ್ತರ ಕೂಡುವಿಕೆಯೊಂದಿಗೆ ಚಿಕ್ಕಪರಾರಿ “ಮಂಜೊಟ್ಟಿ ಮಾರ್ಲ” ಕೈಯಿಂದ ಕೆಸರುಕಲ್ಲು ಹಾಕಿಸಿಕೊಂಡು ದೈವಸ್ಥಾನ ನಿರ್ಮಿಸಲ್ಪಟ್ಟು ಶ್ರೀ ಕ್ಷೇತ್ರದಲ್ಲಿ ನೆಲೆಯೂರಿರುತ್ತಾರೆ. ಮುಂದೆ ಮಂಜೊಟ್ಟಿ ಮಾರ್ಲರಿಂದ ಪಾಪೆ ಬಂಡಿಯನ್ನು ಅರ್ಪಿಸಿಕೊಂಡು ಕೀರ್ತಿ ಪಡೆದರು ಎಂದು ಪ್ರತೀತಿ. ಶ್ರೀ ಕ್ಷೇತ್ರ ಜುಮಾದಿಯ ಕಂಗಿನ ಹಾಳೆಯ…

Read More