ಬಂಟರ ಸಂಘ ಪಿಂಪ್ರಿ- ಚಿಂಚ್ವಾಡ್ ರಜತ ಮಹೋತ್ಸವದ ಸಂಭ್ರಮಾಚರಣೆಯಲ್ಲಿದ್ದು ಮುಂದಿನ ಏಪ್ರಿಲ್ 16 ರಂದು ಸಂಘದ ರಜತ ಮಹೋತ್ಸವದ ಭವ್ಯ ಸಮಾರಂಭವು ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ ಇವರ ನೇತೃತ್ವದಲ್ಲಿ ದಿನಪೂರ್ತಿ ನಡೆಯಲಿದ್ದು ಮಾರ್ಚ್ 23 ರಂದು ಚಿಂಚ್ವಾಡ್ ನಲ್ಲಿರುವ ಸಂಘದ ಮಿನಿ ಸಭಾಗೃಹದಲ್ಲಿ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ, ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ ಶೆಟ್ಟಿ, ಕೆ. ಪದ್ಮನಾಭ ಶೆಟ್ಟಿ, ವಿಜಯ್ ಶೆಟ್ಟಿ ಕಟ್ಟಣಿಗೆ ಮನೆ ಬೋರ್ಕಟ್ಟೆ, ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಬೆಳ್ಳಂಪಳ್ಳಿ, ಗೌರವ ಕೋಶಾಧಿಕಾರಿ ಸುಧಾಕರ ಶೆಟ್ಟಿ ಪೆಲತ್ತೂರು ,ಶಿಕ್ಷಣ ಮತ್ತು ಸಮಾಜಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಕೆ ಶೆಟ್ಟಿ ಮುಂಡ್ಕೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ವಿಜಯ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಜೆ ಶೆಟ್ಟಿ ಸಂಘದ ಸದಸ್ಯರಾದ ಅವಿನಾಶ್ ಶೆಟ್ಟಿ ಮಂದಾಡಿಗುತ್ತು, ಸಂತೋಷ್ ಕಡಂಬ, ನಿಧೀಶ್ ಶೆಟ್ಟಿ ನಿಟ್ಟೆ, ಕಿರಣ್ ಶೆಟ್ಟಿ, ಚೇತನ್ ಶೆಟ್ಟಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.