Author: admin
ಬಂಟ ಸಮಾಜದ ಧೀಮಂತ ರಾಜಕಾರಣಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಕರ್ನಾಟಕ ಸರ್ಕಾರದ ಮಾಜಿ ಸಚಿವರು ಆದಂತಹ ಬೆಳ್ಳಿಪಾಡಿ ಮನೆತನದ ರಮಾನಾಥ್ ರೈ
ಬಂಟ ಸಮಾಜದ ಧೀಮಂತ ರಾಜಕಾರಣಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಕರ್ನಾಟಕ ಸರ್ಕಾರದ ಮಾಜಿ ಸಚಿವರು ಆದಂತಹ ಬೆಳ್ಳಿಪಾಡಿ ಮನೆತನದ ರಮಾನಾಥ್ ರೈ ಕೂಡಾ ಒಬ್ಬರು. ಭಗವಂತ ರಮಾನಾಥ್ ರೈ ಅವರಿಗೆ ಜನರ ಸೇವೆ ಮಾಡಲು ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಬೇಡಿಕೊಳ್ಳುತ್ತಿದ್ದೇವೆ.
ಅಂದು ನಾವು ಶಾಲೆಗೆ ಹೋಗುವ ಸಂದರ್ಭದಲ್ಲಿ ಅಧ್ಯಾಪಕರು ಕೊಡುತ್ತಿದ್ದ ಶಿಕ್ಷೆಗಳನ್ನು ಒಮ್ಮೆ ನೆನಪಿಗೆ ತಂದುಕೊಳ್ಳೊಣವೇ? ನಮ್ಮಲ್ಲಿ ನಾಗರ ಬೆತ್ತದ ರುಚಿಯನ್ನು ಕಾಣದವರು ಇರಲಿಕ್ಕಿಲ್ಲ. ಇನ್ನು ಕುರ್ಚಿ ಕೂರುವುದು, ಬಸ್ಕಿ ಹೊಡೆಯುವುದು, ಕಿವಿ ಹಿಂಡುವುದು, ಕೈ ಗಂಟಿಗೆ ಬೀಳುವ ಪೆಟ್ಟು… ಹೀಗೆ ಪಟ್ಟಿ ಮಾಡುತ್ತಾ ಹೋದರೆ ಶಿಕ್ಷೆಗಳ ಸಂಖ್ಯೆ ಬೆಟ್ಟದಂತೆ ಬೆಳೆಯುತ್ತ ಹೋಗುತ್ತದೆ. ಆಗ ನೀಡುತ್ತಿದ್ದ ಶಿಕ್ಷೆಯಲ್ಲಿಯೂ ಒಂದು ನೀತಿ ಇರುತ್ತಿತ್ತು. ಜೊತೆಗೆ ಮುಂದೆಂದೂ ಅಂತಹ ತಪ್ಪನ್ನು ಮಾಡಿದೆ ಇರುವಂತೆ ಶಿಕ್ಷೆಗಳು ಸದಾ ನಮಗೆ ಎಚ್ಚರಿಕೆ ನೀಡುತ್ತಿದ್ದವು. ಹಾಗಾಗಿಯೇ ನಮ್ಮಲ್ಲಿ ಒಂದಿಷ್ಟು ಶಿಸ್ತು, ಗೌರವ, ವಿಧೇಯತೆ, ಸಮಯಪಾಲನೆ, ಮನೆಗೆಲಸ ಮತ್ತು ತರಗತಿಗಳಲ್ಲಿ ಕೊಟ್ಟ ಕೆಲಸಗಳನ್ನು ಕಾಲಕಾಲಕ್ಕೆ ಪೂರ್ಣಗೊಳಿಸುವುದು ಇಂತಹ ಉತ್ತಮ ಮೌಲ್ಯಗಳು ತನ್ನಿಂದ ತಾನೇ ಬೆಳೆಯುತ್ತಿದ್ದವು (ಶಿಕ್ಷೆಗೆ ಹೆದರಿ ರೂಢಿಸಿಕೊಳ್ಳುತ್ತಿದ್ದೆವು ಎನ್ನಿ!) ಇದರ ಜೊತೆಗೆ ಇನ್ನೊಂದಿಷ್ಟು ಅಗತ್ಯ ವಿಷಯಗಳಾದ… ಪುಸ್ತಕಗಳನ್ನು ಸುಂದರವಾಗಿ ಇಟ್ಟುಕೊಳ್ಳುವುದು; ನಮ್ಮ ತರಗತಿಯನ್ನು ಸ್ವಚ್ಛಗೊಳಿಸುವುದು; ಕುಡಿಯುವ ನೀರು ತುಂಬಿಸಿಡುವುದು; ಆಟದ ಮೈದಾನ ಹಾಗೂ ಶಾಲೆಯ ಆವರಣದ ಸ್ವಚ್ಛತೆ (ಈಗ ಇವೆರಡೂ…
‘ಹೆಣ್ಣು, ಮಣ್ಣಿಗೆ ಗೌರವ ನೀಡುವ ತುಳು ಸಂಸ್ಕೃತಿ’ ವಿದ್ಯಾಗಿರಿ: ‘ತುಳುನಾಡು ಮಾತೃ ಪ್ರಧಾನವಾಗಿದ್ದು, ಇಲ್ಲಿ ಹೆಣ್ಣು ಮತ್ತು ಮಣ್ಣಿಗೆ ಹೆಚ್ಚಿನ ಗೌರವ ಇದೆ’ ಎಂದು ಸಾಹಿತಿ ಹಾಗೂ ಸಂಶೋಧಕರಾದ ಡಾ.ಇಂದಿರಾ ಹೆಗ್ಗಡೆ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಹಮ್ಮಿಕೊಂಡ ‘ಸಂಸ್ಕೃತಿ ಚಿಂತನ ಕಾರ್ಯಕ್ರಮ’ದಲ್ಲಿ ಅವರು ‘ಆದಿ ಆಲಡೆಗಳು’ ಕುರಿತು ಮಾತನಾಡಿದರು. ತುಳುನಾಡು ಹೊರತು ಪಡಿಸಿದರೆ, ಅಸ್ಸಾಂ ಹಾಗೂ ಕೇರಳ ರಾಜ್ಯದಲ್ಲಿ ನಾವು ಮಾತೃಪ್ರಧಾನ ಸಂಸ್ಕೃತಿಯನ್ನು ಕಾಣಬಹುದಾಗಿದೆ. ಯಾವುದೇ ಆಚರಣೆ ಮಾಡುವ ಮೊದಲು, ಅದರ ಆಶಯ ಹಾಗೂ ಅಂತಸತ್ವ ಅರಿತುಕೊಳ್ಳಬೇಕು. ಕುರುಡಾಗಿ ಪಾಲಿಸಬಾರದು ಎಂದರು. ‘ತುಳುನಾಡಿನ ಸಂಸ್ಕೃತಿಯಲ್ಲಿ ‘ಪುನರ್ಜನ್ಮ’ದ ಪರಿಕಲ್ಪನೆ ಇಲ್ಲ. ನಮ್ಮ ಕೆಲಸವನ್ನು ಪರಿಪೂರ್ಣವಾಗಿ ಮಾಡಿದಾಗ ಸಂತೃಪ್ತಿ ಸಿಗುತ್ತದೆ. ಆಗ ಅತೃಪ್ತಿಗೆ ಅವಕಾಶವೇ ಇಲ್ಲ’ ಎಂದರು. ನಿಮ್ಮ ಸುತ್ತಲೂ ಸೃಷ್ಟಿಯಾಗುವ ಭ್ರಮಾ ಲೋಕದಿಂದ ಹೊರಬನ್ನಿ. ಮಾತು, ಬರಹಕ್ಕಿಂತ ಹೆಚ್ಚಾಗಿ ಓದಿನ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು. ಯಾವುದೇ ಹೇರಿಕೆಯ…
ನಾವು ಎಲ್ಲಾ ಧರ್ಮದ, ಎಲ್ಲಾ ಮತದ ಬಗ್ಗೆ ಅದೆಷ್ಟೋ ವಿಷಯಗಳನ್ನು ತಿಳಿದವರು. ಆದರೂ ತುಳು ಧರ್ಮ ಇವೆಲ್ಲಕ್ಕಿಂತ ಮೀರಿದ್ದು. ಹಿರಿಯರು ಹಾಕಿದ ಬುನಾದಿಯು ಒಂದಿಂಚು ಮಿಸುಕಾಡದಿದ್ದರೂ ಅಲ್ಲಲ್ಲಿ ಪಾಚಿ ಮಾತ್ರ ಕಟ್ಟಿರುವುದು ಕಾಣುತ್ತದೆ. ಆದರೂ ಕೂಡ ಬಂಡೆಯಷ್ಟೆ ಗಟ್ಟಿಯಾಗಿರುವುದು ನಮ್ಮ ಭಾಗ್ಯ. ತುಳುನಾಡ ಧರ್ಮಕ್ಕೆ ಯಾವುದೇ ಕರ್ತನಿಲ್ಲ, ಯಾವುದೇ ಬರವಣಿಗೆಗಳು ಇಲ್ಲ, ಆದರೂ ತುಳುನಾಡ ಮಣ್ಣಿನ ಜನರ ಕಣ ಕಣದಲ್ಲೂ ಹರಡಿಕೊಂಡಿದೆ. ತುಳುನಾಡ ಧರ್ಮದಲ್ಲಿ ಎಲ್ಲಕ್ಕೂ ಅದರದೇ ಆದ ವೈಜ್ಞಾನಿಕ ಆಧಾರ ಇದೆ. ಈ ಧರ್ಮದಲ್ಲಿ ಎಲ್ಲೂ ಕೂಡ ದುಂದುವೆಚ್ಚದ ಆರಾಧನೆಗಳಿಲ್ಲ. ಮುಖ್ಯವಾಗಿ ತುಳುನಾಡ ಜನರು ಪ್ರಕೃತಿ ಆರಾಧಕರು. ತಮ್ಮೊಂದಿಗೆ ಇರುವ ಪ್ರಾಣಿ ಪಕ್ಷಿಗಳಿಗೆ ದೈವ ದೇವರುಗಳ ಸ್ಥಾನವನ್ನು ಕಲ್ಪಿಸಿ ಜೀವನ ಚಕ್ರದಲ್ಲಿ ಮತ್ತು ನಿಸರ್ಗದ ಉಳಿವಿನಲ್ಲಿ ಪ್ರಾಣಿ ಪಕ್ಷಿಗಳ ಉಳಿವು ಅತೀ ಹೆಚ್ಚಿನದ್ದು ಎಂದು ಸಾರಿದ್ದಾರೆ. ತಮ್ಮಂತೆ ಅವುಗಳು ಜೀವವಿರುವುದನ್ನು ಮನಗಂಡು ಅವುಗಳಿಗೆ ಪೂಜ್ಯ ಸ್ಥಾನವನ್ನು ನೀಡಿದ್ದಾರೆ. ಉದಾ: ಪಂಜುರ್ಲಿ, ಮೈಸಂದಾಯ, ನಾಗ, ಪಿಲ್ಚಂಡಿ, ನಂದಿ ಇವೆಲ್ಲ ಪ್ರಾಣಿ ಮೂಲದ…
ಪ್ರತಿಯೊಬ್ಬರ ಆರೋಗ್ಯ ಅವಲಂಬಿತವಾಗಿರುವುದು ಅವರವರು ತೆಗೆದುಕೊಳ್ಳುವ ಆಹಾರದ ಮೇಲೆ. ಸುರಕ್ಷೆಯ ಆಹಾರ ಸೇವನೆಯಿಂದ ನಾವು ಆರೋಗ್ಯವಾಗಿರಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಆಹಾರ ಕಲಬೆರಕೆ, ಅಸುರಕ್ಷಿತ , ಗುಣಮಟ್ಟ ರಹಿತ ಆಹಾರ ಅನಾರೋಗ್ಯಕ್ಕೆ ಕಾರಣವಾಗುತ್ತಿವೆ. ಈ ನಿಟ್ಟಿನಲ್ಲಿ ಆಹಾರ ಸುರಕ್ಷೆಯ ಕುರಿತು ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಕಳೆದ ಐದು ವರ್ಷಗಳಿಂದ ಪ್ರತೀ ವರ್ಷ ಜೂ.7ರಂದು ವಿಶ್ವ ಆಹಾರ ಸುರಕ್ಷ ದಿನವನ್ನು ಆಚರಿಸಲಾಗುತ್ತಿದೆ. ಅಸುರಕ್ಷಿತ ಆಹಾರದಿಂದ ಅನಾರೋಗ್ಯ : ವಿಶ್ವ ಆರೋಗ್ಯ ಸಂಸ್ಥೆಯು ಬಿಡುಗಡೆ ಮಾಡಿರುವ ಜಾಗತಿಕ ಅಂಕಿಅಂಶಗಳ ಪ್ರಕಾರ ಮಾನವನ ಆರೋಗ್ಯದ ಮೇಲೆ ಅಸುರಕ್ಷಿತ ಮತ್ತು ಕಲುಷಿತ ಆಹಾರ ಸೇವನೆ ಭಾರೀ ಪರಿಣಾಮವನ್ನುಂಟು ಮಾಡುತ್ತಿದೆ. ಈ ಬಗ್ಗೆ ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸ ಲಾಗುತ್ತಿದ್ದರೂ ವಿವಿಧ ಕಾರಣಗಳಿಗಾಗಿ ಗುಣಮಟ್ಟದ ಮತ್ತು ಸುರಕ್ಷಿತ ಆಹಾರ ಪದಾರ್ಥಗಳಿಂದ ಭಾರೀ ಸಂಖ್ಯೆಯ ಜನರು ವಂಚಿತರಾಗಿದ್ದಾರೆ. ಭಾರತದ ಮುಂದಿದೆ ಬಲುದೊಡ್ಡ ಸವಾಲು : ವಿಶ್ವಸಂಸ್ಥೆಯ ಪ್ರಕಾರ ಅಂದಾಜು 195 ಮಿಲಿಯನ್ ಜನರು ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಜತೆಗೆಶೇ. 43ರಷ್ಟು…
ಜಪಾನ್ನಲ್ಲಿ ಮೇಳೈಸಿದ 37ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವುದು ಸೃಜನಶೀಲತೆ : ಡಾ| ಕೆ.ಬಿ.ನಾಗೂರ್
ಮುಂಬಯಿ (ಜಪಾನ್ ನರಿಟಾ), ಆರ್ಬಿಐ, ಎ.10: ಸಾಂಸ್ಕೃತಿಕ ಹಿನ್ನೆಲೆಯುಳ್ಳ ಸಮುದಾಯವು ಉತ್ತಮ ಸಂಸ್ಕೃತಿಯನ್ನು ರೂಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರು ಸಾಂಸ್ಕೃತಿಕವಾಗಿ ತೊಡಿಸಿಕೊಳ್ಳುವುದು ಸಮಾಜಕ್ಕೆ ನೀಡುವ ಸೃಜನಶೀಲ ಕೊಡುಗೆ ಆಗಿರುತ್ತದೆ ಎಂದು ವಿಜಾಪುರದ ಡಾ| ನಾಗೂರ್ ಎಜುಕೇಶನ್ ಟ್ರಸ್ಟ್ ನ ಮ್ಯಾನೇಂಗ್ ಟ್ರಸ್ಟೀ ಹಾಗೂ ಇಂಢಿಯಾ ಮಾಸ್ಟರ್ ಅಥ್ಲೆಟಿಕ್ಸ್ ಫೆಡೆರೇಷನ್ ಅಧ್ಯಕ್ಷ ಡಾ| ಕೆ.ಬಿ ನಾಗೂರ್ ಅಭಿಪ್ರಾಯಪಟ್ಟರು. ಕಳೆದ ಶುಕ್ರವಾರ (ಎ.7) ಜಪಾನಿನ ಟೋಕಿಯೋ ಸಮೀಪದ ನರಿಟಾ ನಗರದ ಕ್ರೇನ್ ಬಾಂಕ್ವೆಟ್ ಸಭಾಂಗಣದಲ್ಲಿ ನಡೆಸಲ್ಪಟ್ಟ 37ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಡಾ| ಕೆ.ಬಿ ನಾಗೂರ್ ಮಾತನಾಡಿದರು. ಶಿವಗಂಗಾ ಕ್ಷೇತ್ರ ಮೇಲಣ ಗವಿಮಠದ ಡಾ| ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾಚನ ನೀಡಿ ನಮ್ಮ ಕಲೆ ಮತ್ತು ಸಂಸ್ಕೃತಿಗಳು ಸಮಾಜಕ್ಕೆ ಬೆಳಕು ಚೆಲ್ಲುವ ದೀವಿಗೆಗಳಿದ್ದಂತೆ ಅವುಗಳನ್ನು ಸಾಗರದ ಆಚೆಯೂ ಪಸರಿಸುವುದು ಸಾಹಸದ ಕೆಲಸ. ಅಂತಹ ಕೆಲಸ ಮಾಡುವವರಿಗೆ ದೇವರು ಇನ್ನಷ್ಟು ಶಕ್ತಿಯನ್ನು ನೀಡಲಿ ಎಂದರು. ಐಸಿಎಫ್ಸಿ (ಇಂಡಿಯಾ) ಅಧ್ಯಕ್ಷ…
ಯಾರಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸುವುದು ಇಷ್ಟವಿಲ್ಲ ಹೇಳಿ? ಈ ದಿನ, ಪುಟ್ಟ ಮಕ್ಕಳಿಗಂತೂ ಸಂಭ್ರಮ ಹೇಳತೀರದು! ಹುಟ್ಟಿದ ದಿನವನ್ನು ಹಬ್ಬವನ್ನಾಗಿ ಆಚರಿಸುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಹಿಂದೂ ಸಂಸ್ಕೃತಿಯಲ್ಲಿ ಈ ಆಚರಣೆಯು ಧಾರ್ಮಿಕ ಪದ್ಧತಿಯಲ್ಲಿ ಆಚರಿಸಲ್ಪಡುತ್ತಿತ್ತು. ಆದರೆ ಇತ್ತೀಚೆಗೆ ಎಲ್ಲದರಂತೆ ಅದರ ಮೇಲೂ ಆಂಗ್ಲ ಸಂಸ್ಕೃತಿಯ ಹಾವಳಿ ತೀವ್ರವಾಗಿ ಆಗಿರುವುದನ್ನು ಕಾಣಬಹುದು. “ಹೆಪ್ಪಿ ಬರ್ತ್ ಡೇ..” ಎಂದು ಶುಭಾಶಯ ಹೇಳುವುದು ಸಾರ್ವತ್ರಿಕವಾಗಿ ನಡೆಯುತ್ತಿದೆ. ಕೇಕ್ ಕತ್ತರಿಸಿ, ಉರಿಯುವ ಮೇಣದ ಬತ್ತಿಯನ್ನು ಆರಿಸಿ ಸಂಭ್ರಮಿಸುವುದೇ ಹುಟ್ಟುಹಬ್ಬದ ನಿಜವಾದ ಆಚರಣೆ ಎನ್ನುವಷ್ಟು ಎಲ್ಲರ ಜೀವನದಲ್ಲಿ ಇದು ಹಾಸುಹೊಕ್ಕಾಗಿದೆ. ಹಿಂದೂ ಪದ್ಧತಿಯಲ್ಲಿ ಹಿರಿಯರ ಜನ್ಮದಿನದ ಆಚರಣೆಯು ಬಹಳ ಅರ್ಥವತ್ತಾಗಿ ನಡೆಯುತ್ತದೆ. ಆ ದಿನ ಕಿರಿಯರೆಲ್ಲರೂ ಅವರ ಆಶೀರ್ವಾದ ಪಡೆದು, ಮನೆಯವರೆಲ್ಲರೂ ಸಿಹಿಯೂಟ ಉಂಡು ಸಂಭ್ರಮಿಸುವರು. ಕಿರಿಯರಾದರೆ, ಹೊಸಬಟ್ಟೆ ಧರಿಸಿ, ದೀಪ ಬೆಳಗಿದ ದೇವರೆದುರು ಕುಳಿತಾಗ ಆ ಮಗುವಿನ ಹೆತ್ತವರು ಆರತಿ ಬೆಳಗುವರು. ಆ ಬಳಿಕ ಹಿರಿಯರ ಆಶೀರ್ವಾದದೊಂದಿಗೆ ತಮ್ಮಿಷ್ಟದ ಉಡುಗೊರೆಗಳನ್ನು ಪಡೆದು ಸಿಹಿಯುಂಡು ನಲಿಯುವರು. ಇಂದು ಸಮಾಜ…
ನಾವು ಅಪರೂಪದಲ್ಲಿ ಅಪರೂಪವಾಗಿರುವ ಎರಡು ರೂಪಾಯಿ ವೈದ್ಯರು, ಐದು ರೂಪಾಯಿ ವೈದ್ಯರ ಬಗ್ಗೆಯೆಲ್ಲಾ ಕೇಳಿದ್ದೇವೆ. ಸುಮಾರು ಹತ್ತು ವರ್ಷಗಳ ಹಿಂದೆ ನಮ್ಮ ಮಂಗಳೂರು ತಾಲೂಕಿನ ಉಚ್ಚಿಲ- ಕೆ.ಸಿ.ರೋಡ್ ಎಂಬಲ್ಲಿ ಎರಡು ರೂಪಾಯಿ ವೈದ್ಯರೆಂದೇ ಖ್ಯಾತರಾಗಿದ್ದ ಶೆಟ್ಟಿ ಡಾಕ್ಟರ್ರ ಬಗ್ಗೆಯೂ ಕೇಳಿದ್ದೆವು. ಇಂತವರಿಗಿಂತಲೂ ವಿಶಿಷ್ಟ ಉಚಿತ ಡಾಕ್ಟರ್ ಒಬ್ಬರು ಮಂಗಳೂರು ನಗರದಲ್ಲೇ ಇದ್ದಾರೆ. ಅವರೇ ಮಂಗಳೂರಿನ ಖ್ಯಾತ ಮಕ್ಕಳ ತಜ್ಞ ಡಾ.ಬಿ.ಸಂಜೀವ ರೈ. ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜಿನ ಡೀನ್ ಆಗಿದ್ದು, ಅಕಾಡೆಮಿಕ್ ವಲಯದಲ್ಲಿ ಇವರ ಅತ್ಯುನ್ನತ ಸಾಧನೆಗಳಿಂದ ಮತ್ತು ಒಳ್ಳೆಯ ಮಕ್ಕಳ ತಜ್ಞರೆಂದು ಇವರು ಪ್ರಸಿದ್ಧರಾಗಿದ್ದರೂ ಇವರ ಮಾನವೀಯ ಸೇವೆಗಳು ಎಲ್ಲೂ ಪ್ರಚಾರಕ್ಕೆ ಬಂದಿಲ್ಲ. ಅವರು ತಾನು ನೀಡುತ್ತಿರುವ ಮಾನವೀಯ ಸೇವೆಯನ್ನು ಈವರೆಗೆ ಪ್ರಚಾರ ಮಾಡಿದ್ದೂ ಇಲ್ಲ. ಅವರದಕ್ಕೆ ಪ್ರಚಾರವನ್ನು ಬಯಸಿಯೂ ಇಲ್ಲ. ಮಂಗಳೂರು ನಗರದ ಕರಂಗಲ್ಪಾಡಿಯಲ್ಲಿರುವ ಮೆಡಿಕೇರ್ ಎಂಬ ಕಟ್ಟಡದ ಮಾಲಕರೂ ಆಗಿರುವ ಡಾ.ಬಿ.ಸಂಜೀವ ರೈ ಅದೇ ಕಟ್ಟಡದಲ್ಲಿ ತನ್ನದೊಂದು ಮಕ್ಕಳ ಚಿಕಿತ್ಸಾಲಯವನ್ನಿಟ್ಟು ವೃತ್ತಿ ನಿರತರಾಗಿದ್ದಾರೆ. ಅವರು ವೃತ್ತಿ ನಿರತರಾಗಿದ್ದಾರೆ…
ಹೈಕೋರ್ಟು ನ್ಯಾಯಮೂರ್ತಿಯಾಗಿ ರಾಜೇಶ್ ರೈ ಕಲ್ಲಂಗಳ ಅವರು ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯ ಪಾಲರಿಂದ ಮುಖ್ಯಮಂತ್ರಿಗಳ ಮತ್ತು ಮುಖ್ಯ ನ್ಯಾಯಮೂರ್ತಿಗಳ ಉಪಸ್ಥಿತಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಹೈಕೋರ್ಟು ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ ಅವರಿಗೆ ಜಯಕರ್ನಾಟಕ ಸಂಘಟನೆಯ ಕೃಷ್ಣಾನಂದ ಶೆಟ್ಟಿ ಅವರು ಅವರ ಕಚೇರಿಗೆ ತೆರಳಿ ಶುಭ ಹಾರೈಸಿದರು. ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕಲ್ಲಂಗಳ ನಿವಾಸಿಯಾಗಿರುವ ರಾಜೇಶ್ ರೈ ಕಲ್ಲಂಗಳ (48) ಅವರು ಹೈಕೋರ್ಟು ನ್ಯಾಯಮೂರ್ತಿಯಾಗಿ ಅತೀ ಸಣ್ಣ ವಯಸ್ಸಿನಲ್ಲಿ ಆಯ್ಕೆಗೊಂಡು, ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಪ್ರಥಮ ಹಾಗೂ ಅತೀ ಚಿಕ್ಕ ವಯಸ್ಸಿನ ಹೈಕೋರ್ಟು ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ನೇರವಾಗಿ ಅತೀ ಕಿರಿಯ ವಯಸ್ಸಿನಲ್ಲಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಮೊದಲಿಗರಾಗಿದ್ದಾರೆ. ರಾಜೇಶ್ ರೈ ಕಲ್ಲಂಗಳ ಅವರು ಬಾಲ್ಯದಿಂದಲೇ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಸಮಾಜಪರ ಕೆಲಸ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡವರು. ಕಲಾಪೋಷಕರಾಗಿರುವ ಇವರು ಯಕ್ಷಗಾನ ಮತ್ತು…
ಇಂದು ಎಲ್ಲರ ಮನೆಯಲ್ಲೂ ಸಕ್ಕರೆ ಕಾಯಿಲೆ ತಳ ಊರಿದೆ. ಹೊತ್ತು ಹೊತ್ತಿಗೆ ಮಾತ್ರೆ, ವ್ಯಾಯಾಮ, ಪಥ್ಯ- ಇವು ಶುಗರ್ ಪೇಷೆಂಟ್ಗಳನ್ನು ಹೈರಾಣಗೊಳಿಸಿದೆ. ಒಮ್ಮೆ ಶುಗರ್ ಬಂದ್ರೆ ಜೀವ ಇರುವ ತನಕ ಹೋಗೋದೇ ಇಲ್ಲ ಎಂಂದು ಎಲ್ಲರೂ ನಂಬಿದ್ದಾರೆ. ಆದರೆ, ಖ್ಯಾತ ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿ ಅವರು ಮಧುಮೇಹವನ್ನು ಸಂಪೂರ್ಣವಾಗಿ ಗೆದ್ದಿದ್ದಾರೆ. ತಮ್ಮ ದೇಹವನ್ನೇ ಪ್ರಯೋಗಕ್ಕೆ ಗುರಿಪಡಿಸಿ, ‘ರಿವರ್ಸ್ ಡಯಾಬಿಟಿಸ್’ ಅಳವಡಿಸಿಕೊಂಡು ಈ ಸಾಧನೆ ಮಾಡಿದ್ದಾರೆ. ಶೆಟ್ಟರು ಆ ರಹಸ್ಯವನ್ನು ಇಲ್ಲಿ ತೆರೆದಿಟ್ಟಿದ್ದಾರೆ… ಇಂದು ಎಲ್ಲರ ಮನೆಯಲ್ಲೂ ಸಕ್ಕರೆ ಕಾಯಿಲೆ ತಳ ಊರಿದೆ. ಹೊತ್ತು ಹೊತ್ತಿಗೆ ಮಾತ್ರೆ, ವ್ಯಾಯಾಮ, ಪಥ್ಯ- ಇವು ಶುಗರ್ ಪೇಷೆಂಟ್ಗಳನ್ನು ಹೈರಾಣಗೊಳಿಸಿದೆ. ಒಮ್ಮೆ ಶುಗರ್ ಬಂದ್ರೆ ಮತ್ತೆ ಹೋಗೋದೇ ಇಲ್ಲ ಎಂದು ಎಲ್ಲರೂ ನಂಬಿದ್ದಾರೆ. ಆದರೆ, ಖ್ಯಾತ ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿ ಅವರು ಮಧುಮೇಹವನ್ನು ಸಂಪೂರ್ಣವಾಗಿ ಗೆದ್ದಿದ್ದಾರೆ. ತಮ್ಮ ದೇಹವನ್ನೇ ಪ್ರಯೋಗಕ್ಕೆ ಗುರಿಪಡಿಸಿ, ‘ರಿವರ್ಸ್ ಡಯಾಬಿಟಿಸ್’ ಅಳವಡಿಸಿಕೊಂಡು ಈ ಸಾಧನೆ ಮಾಡಿದ್ದಾರೆ. ಶೆಟ್ಟರು…














