(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.03: ತುಳು-ಕನ್ನಡಿಗರ ಅಭಿಮಾನದ ರಾಷ್ಟ್ರ ಕಂಡ ಲೋಕಪ್ರಿಯ ಎಂಪಿ, ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ಇದೀಗ ಹಲವಾರು ಮಂದಿಗೆ ಸಾಮಾಜಿಕ ನ್ಯಾಯ ಒದಗಿಸಿ ಮತ್ತೆಸುದ್ದಿಯಾಗಿದ್ದಾರೆ. ಈ ಬಗ್ಗೆ ಫಲಾನುಭವಿ ಸಂತ್ರಸ್ತರು ಪತ್ರಕರ್ತರಲ್ಲಿ ತಮ್ಮ ಅನುಭವಗಳನ್ನು ಬಿಚ್ಚಿಟ್ಟು ಸಂಸದ ಗೋಪಾಲ ಶೆಟ್ಟಿ ಮತ್ತು ಶ್ರೀ ಗೋಪಾಲ್ ಸಿ.ಶೆಟ್ಟಿ (ಸಂಸದ) ತುಳು ಕನ್ನಡಿಗರ ಅಭಿಮಾನಿ ಬಳಗ ಮುಂಬಯಿ ಇದರ ಸಂಚಾಲಕ, ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಇವರನ್ನು ನಿವೇದಿತಾ ನಿತ್ಯಾನಂದ ನಾಯಕ್ ದಂಪತಿ ಹಾಗೂ ವೇದಾವತಿ ಶೆಟ್ಟಿ, ಕು| ನಿಧಿ ಶೆಟ್ಟಿ, ಮಾ| ಸೂರಜ್ ಸದಾಶಿವ ಶೆಟ್ಟಿ ಮನಸಾರೆ ಅಭಿವಂದಿಸಿದರು.
ಸಂಸದ ಗೋಪಾಲ್ ಶೆಟ್ಟಿ ಪ್ರಸ್ತಾವನೆಯಂತೆ ವಿವಾಹ ಕಾನೂಬದ್ಧ ವಯಸ್ಸು ಅಂಗೀಕಾರಕ್ಕೆ ಮನ್ನಣೆ ದೊರೆತೆ
ಬೆನ್ನಲ್ಲೇ ಸಂಸದರ ಸಾಮಾಜಿಕ ಕಳಕಳಿಯ ಬಗ್ಗೆ ತಡವಾಗಿ ಸಾಮಾಜಿಕ ನ್ಯಾಯ ಒದಗಿಸುತ್ತಿರುವ ವಿಚಾರ
ಬೆಳಕಿಗೆ ಬಂದಿದ್ದು ಅಭಿಮಾನದಿಂದ ಶುಭೇಚ್ಛ ಸಲ್ಲಿಸಿದ್ದಾರೆ.
ಹೆಣ್ಣಿನ ಜೀವಮಾನಕ್ಕೆ ಜೀವನಾಂಶ ದೊರಕಿಸಿಕೊಟ್ಟ ಸಂಸದ ಗೋಪಾಲಣ್ಣ:
ಕಾಂದಿವಿಲಿ ಪಶ್ಚಿಮದ ನಿವಾಸಿ ನಿತ್ಯಾನಂದ ನಾಯಕ್ ಮತ್ತು ನಿವೇದಿತಾ ನಾಯಕ್ ದಂಪತಿ ಸುಪುತ್ರಿಗೆ ಕಳೆದ ನಾಲ್ಕು
ತಿಂಗಳ ಹಿಂದೆಯಷ್ಟೇ ಉಡುಪಿಯ ಪೆಟ್ರೋಲ್ ಬಂಕ್ ಯುವ ಉದ್ಯಮಿಗೆ ಮದುವೆ ಮಾಡಿ ಕೊಡಲಾಗಿದ್ದು ಆತ ಮಾದಕ ವ್ಯಸನಿ ಎಂದು ತಿಳಿಯುತ್ತಿದ್ದಂತೆಯೇ ವರನ ಮಾತಾಪಿತರ ಒಪ್ಪಿಗೆಯಂತೆ ಪಾಲಕರು ಮಗಳನ್ನು ವೈವಾಹಿಕ ವಿಚ್ಛೇದನ ಕೋರಿ ಮುಂಬಯಿ (ಮಾಟುಂಗಾ ಲೇಬರ್ ಕ್ಯಾಂಪ್)ಗೆ ಕರೆಸಿ ಕೊಂಡಿದ್ದರು. ಆ ಬಳಿಕ ವರನು ಕಳೆದ ಮಾರ್ಚ್.26ರ ವೇಳೆಗೆ ಸ್ವಂತ ಅಪಾರ್ಟ್ಮೆಂಟ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಕುಟುಂಬ ಬೇರ್ಪಡಿಕೆ ಕುರಿತು ಮಾತುಕತೆ ನಡೆಸಲಾಯಿತು. ಈ ಮಧ್ಯೆ ಕೊಡುಕೊಳ್ಳುವಿಕೆಯ ವಿಚಾರ ತಲೆದೋರಿ ವಿಷಯ ವಿಷಮರೂಪ ಪಡೆದಿದ್ದು ಸಮಸ್ಯೆಗೆ ಪರಿಹಾರ ಕೋರಿ ಸಂಸದ ಗೋಪಾಲ ಶೆಟ್ಟಿ ಮೊರೆಹೋದರು. ಈ ಬಗ್ಗೆ ಮಧ್ಯಸ್ಥಿಕೆ ವಹಿಸುವಲ್ಲಿ ಸಂಸದರು ಸಂಘಟಕ ಎರ್ಮಾಳ್ ಹರೀಶ್ ಶೆಟ್ಟಿ ಅವರಿಗೆ ಜವಾಬ್ದಾರಿ ವಹಿಸಿದ್ದು ಏರ್ಮಾಳ್ ಅವರು ಎರಡೂ ಕಡೆಗಳ ಸಂಕ್ಷಿಪ್ತ ಮಾಹಿತಿ ಪಡೆದು
ನ್ಯಾಯಯುತವಾಗಿ ಸಂಧಾನ ನಡೆಸಿ ಜೀವನಾಂಶವಾಗಿಸಿ ರೂಪಾಯಿ 25ಲಕ್ಷ ಕೊಡಿಸುವಲ್ಲಿ ಯಶಸ್ವಿಯಾದರು.
ಹೊಟೇಲು ಚರಾಸ್ಥಿಯನ್ನು ನಮ್ಮ ಪಾಲಿಗೆ ವರವಾಗಿಸಿದ ಸಂಸದರು:
ಬೆಳ್ಮಾಣ್ ಮಂಜಳ್ಕೆ ಮೂಲತಃ ನಮ್ಮ ತಂದೆ ಸದಾಶಿವ ಶೆಟ್ಟಿ ವಿಕ್ರೋಲಿ ಪಶ್ಚಿಮದಲ್ಲಿನ ಎಲ್.ಬಿ.ಎಸ್ ರಸ್ತೆಯಲ್ಲಿ
ಸ್ವಂತಿಕೆಯ ಹೊಟೇಲು ಹೊಂದಿದ್ದು ಪೂಜ್ಯನೀಯರು ಕಳೆದ ವರ್ಷ ಮರಣ ಹೊಂದಿದರು. ಆ ಮುನ್ನವೇ ಹೊಟೇಲನ್ನು ಶಂಕರ್ ಶೆಟ್ಟಿ ಎಂಬವರಿಗೆ ನಡೆಸಲು ಕೊಟ್ಟಿದ್ದರು. ಆದರೆ ಅವರು ನಮ್ಮಪ್ಪನ ನಿಧನ ವಿಚಾರ ತಿಳಿದು ಹೊಟೇಲು ಚರಾಸ್ಥಿಯನ್ನು ತನ್ನದಾಗಿಸುವ ಯತ್ನ ನಡೆಸಿದರು. ನಾವು ಕೇಳಲು ಮುಂದದಾಗ ನಮ್ಮನ್ನು ಸತಾಯಿಸಿ, ಹಿಂಸಿಸಿ, ಉಡಾಫೆಯಾಗಿ ವರ್ತಿಸಿ ಅವಮಾನಿಸಿ ಅಮಾನವೀಯತೆಯಿಂದ ವರ್ತಿಸಿದರು. ತಂದೆಯ ನಿಧನದ
ಬಳಿಕ ತಾಯಿ ವೇದಾವತಿ ಶೆಟ್ಟಿ ಅಸೌಖ್ಯರಾಗಿದ್ದು ನಾವು ನಿಧಿ, ನಿಶಾ, ನೀತಾ (3 ಸುಪುತ್ರಿಯರು) ಮತ್ತು ಸೂರಜ್ (ಸುಪುತ್ರ)
ಇದ್ದು ನ್ಯಾಯಕ್ಕಾಗಿ ವರ್ಷವಿಡೀ ಹಲವಾರು ಗಣ್ಯರ ಮೊರೆ ಹೋಗಿ ಅಲ್ಲಿಲ್ಲಿ ಸುತಾಡಿದೆವು. ಆದರೆ ಯಾರೂ ನಮ್ಮ
ಸಹಾಯಕ್ಕೆ ಬಾರದೆ ಹೋದರು. ಇತ್ತೀಚೆಗೆ ಸಮಸ್ಯೆಗೆ ಪರಿಹಾರ ಕೋರಿ ಸಂಸದ ಗೋಪಾಲ ಶೆಟ್ಟಿ ಮೊರೆಹೋದರು.
ಈ ಬಗ್ಗೆ ಮಧ್ಯಸ್ಥಿಕೆ ವಹಿಸುವಲ್ಲಿ ಸಂಸದರು ಎರ್ಮಾಳ್ ಹರೀಶ್ ಶೆಟ್ಟಿ ಅವರಿಗೆ ಜವಾಬ್ದಾರಿ ವಹಿಸಿದ್ದು ಏರ್ಮಾಳ್ ಅವರು ಎರಡೂ ಕಡೆಗಳ ಸಂಕ್ಷಿಪ್ತ ಮಾಹಿತಿ ಪಡೆದು ನ್ಯಾಯಯುತವಾಗಿ ಸಂಧಾನ ನಡೆಸಿ ನಮ್ಮ ಹೊಟೇಲು ನಮಗೆ ಸಿಗುವಲ್ಲಿ ಯಶಸ್ವಿಯಾದರು ಅಭಿಮಾನದಿಂದ ಶುಭೇಚ್ಛ ಸಲ್ಲಿಸಿದ್ದಾರೆ.