ಮುಂಬೈ ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್ಗಳ ವೇದಿಕೆಯು ಫೆಬ್ರವರಿ 4 ರಂದು ಸಂಜೆ ಬಂಟ್ಸ್ ಸಂಘ ಮುಂಬೈ, ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸಹಯೋಗದಲ್ಲಿ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಕೇಂದ್ರ ಬಜೆಟ್ – 2023 ರ ವಿಶ್ಲೇಷಣೆಯನ್ನು ನಡೆಸಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಫ್ಎಂಬಿಸಿಎ ಕಾರ್ಯಾಧ್ಯಕ್ಷ ಸಿಎ ಹರೀಶ್ ಹೆಗ್ಡೆ ವಹಿಸಿದ್ದರು. ವೇದಿಕೆಯಲ್ಲಿ ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಲಿಮಿಟೆಡ್ ಅಧ್ಯಕ್ಷ ಕೆ.ಸಿ.ಶೆಟ್ಟಿ, ಇಂಡಿಯನ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಶನ್ ಅಧ್ಯಕ್ಷ ಸುಕೇಶ್ ಶೆಟ್ಟಿ, ಎಫ್ಎಂಬಿಸಿಎ ಉಪಾಧ್ಯಕ್ಷ ಸಿಎ ವಿಶ್ವನಾಥ ಶೆಟ್ಟಿ, ಗೌರವ ಕಾರ್ಯದರ್ಶಿ ಸಿಎ ಜಗದೀಶ್ ಬಿ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು.
ಸಿಎ ರಾಜೇಶ್ ಸಾಗ್ವಿ ಮತ್ತು ವಕೀಲ ಪ್ರಭಾಕರ ಶೆಟ್ಟಿ ಕ್ರಮವಾಗಿ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಗಳನ್ನು ವಿಶ್ಲೇಷಿಸಿದರು. ಈ ಸಂದರ್ಭದಲ್ಲಿ ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಸಿಎ ಎನ್ಬಿ ಶೆಟ್ಟಿ, ಸಿಎ ಪ್ರಭಾಕರ್ ಬಿ ಶೆಟ್ಟಿ, ಸಿಎ ದಯಾಕರ್ ಎ ಶೆಟ್ಟಿ, ಸಿಎ ಸದಾಶಿವ ಬಿ ಶೆಟ್ಟಿ ಕಡಂದಲೆ ಮತ್ತು ಸಿಎ ಸುಧೀರ್ ಆರ್ ಎಲ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಬಂಟ್ಸ್ ಸಂಘ ಮುಂಬಯಿ ಉಪಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಗೌರವ ಪ್ರಧಾನ ಕಾರ್ಯದರ್ಶಿ ಡಾ ಆರ್ ಕೆ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಹರೀಶ್ ಡಿ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿ ಅಧ್ಯಕ್ಷ ಸಿಎ ಐ ಆರ್ ಶೆಟ್ಟಿ, ಸಿಎ ಶಂಕರ್ ಬಿ ಶೆಟ್ಟಿ, ಸಿಎ ಸಂಜೀವ್ ಶೆಟ್ಟಿ, ಮಹೇಶ್ ಎಸ್ ಶೆಟ್ಟಿ, ಪ್ರವೀಣ್ ಬಿ ಶೆಟ್ಟಿ, ಆದರ್ಶ ಶೆಟ್ಟಿ , ಐಬಿಸಿಸಿಐ ಎಸ್ಬಿ ಶೆಟ್ಟಿ, ಜಯ ಸೂಡ, ಶ್ರೀನಾಥ್ ಶೆಟ್ಟಿ, ಕಿಶನ್ ಜೆ ಶೆಟ್ಟಿ, ಎಫ್ಎಂಬಿಸಿಎ ಸಮಿತಿ ಸದಸ್ಯ ಸಿಎ ಶ್ರೀನಿವಾಸ್ ಶೆಟ್ಟಿ, ಮಾಜಿ ಅಧ್ಯಕ್ಷ ಸಿಎ ರಮೇಶ್ ಎ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಿಎ ಹರೀಶ್ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಎ ರಮೇಶ್ ಬಿ ಶೆಟ್ಟಿ, ಸಿಎ ಅಶೋಕ್ ಶೆಟ್ಟಿ ಮತ್ತು ಸಿಎ ಸುದೇಶ್ ಶೆಟ್ಟಿ ಸನ್ಮಾನಿಸಿದರು. ಸಿಎ ಜಗದೀಶ್ ಬಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಿಎ ವಿಶ್ವನಾಥ ಶೆಟ್ಟಿ ವಂದಿಸಿದರು.