Author: admin
ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟವು ದೇವರು ಮೆಚ್ಚುವ ಕೆಲಸವನ್ನು ಮಾಡುತ್ತಿದೆ. ಕಳೆದ 3ವರ್ಷಗಳಿಂದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ ಐಕಳ ಹರೀಶ್ ಶೆಟ್ಟಿ ಅವರು ಸಮಾಜ ಸೇವೆಯನ್ನು ಕರ್ತವ್ಯದಂತೆ ಮಾಡುತ್ತಿದ್ದಾರೆ ಎಂದು ನಿಟ್ಟೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಎನ್. ವಿನಯ್ ಹೆಗ್ಡೆ ಹೇಳಿದರು. ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಅ.22ರಂದು ಬಂಟ್ಸ್ ಹಾಸ್ಟೇಲ್ ಬಳಿಯ ಸಿ.ವಿ. ನಾಯಕ್ ಹಾಲ್ ಸಭಾಂಗಣದಲ್ಲಿ ನಡೆದ ‘ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮತ್ತು ಗೌರವ ಸನ್ಮಾನ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಸಮಾಜದ ಎಲ್ಲಾ ವರ್ಗಕ್ಕೂ ಸಹಾಯ ಮಾಡುವುದು ನಮ್ಮ ಕರ್ತವ್ಯ ನಮ್ಮ ಸಂಸ್ಥೆಯು ಪ್ರತಿ ವರ್ಷ ಐದಾರು ಕೋಟಿಯಷ್ಟು ಹಣ ಸಹಾಯ ಧನ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ತನ್ನಿಂದಾಗುವ ಸಹಕಾರ ನೀಡುವುದಾಗಿ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿ ವಹಿಸಿ ಮಾತನಾಡಿ,…
ಹಣಕ್ಕಿಂತ ಮನುಷ್ಯತ್ವ ದೊಡ್ಡದಾಗಿದ್ದು ಮನುಷ್ಯತ್ವ ಇಲ್ಲದವರು ವೈದ್ಯಕೀಯ ವೃತ್ತಿಗೆ ಬರಬಾರದು ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ ಸಿ ರಾಮಚಂದ್ರ ತಿಳಿಸಿದರು. ಬಂಟರ ಸಂಘ ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಎರಡನೇ ವರ್ಷದ ಸೇವಾ ಚೇತನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬಂಟರ ಸಂಘ ಬೆಂಗಳೂರು ಸಮಾಜಸೇವಾ ಸಮಿತಿ ಮತ್ತು ಸೇವಾದಳ ಜಂಟಿಯಾಗಿ ಆಯೋಜಿಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಅಬಕಾರಿ ಸಚಿವ ಕೆ ಗೋಪಾಲಯ್ಯ ಉದ್ಘಾಟನೆ ಮಾಡಿದರು. ಇದೇ ವೇಳೆ ಸುವರ್ಣ ವಾಹಿನಿಯ ಕರೆಂಟ್ ಅಫೇರ್ ವಿಭಾಗದ ಸಂಪಾದಕರು ಜಯಪ್ರಕಾಶ್ ಶೆಟ್ಟಿ ಅವರನ್ನು ಸನ್ಮಾನಿಸಿದರು. ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಆರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಧುಕರ್ ಎಂ ಶೆಟ್ಟಿ, ಸಮಾಜಸೇವಾ ಸಮಿತಿ ಮತ್ತು ಸೇವಾದಳದ ಅಧ್ಯಕ್ಷ ಮಂದಾರ್ತಿ ಉಮೇಶ್ ಶೆಟ್ಟಿ, ಸಂಚಾಲಕ ಅಜಿತ್ ಶೆಟ್ಟಿ, ಭಾಸ್ಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಮಗ್ರ ಕಾರ್ಯ ಯೋಜನೆಗಳಿಗಾಗಿ ಕೊಡಗು ಜಿಲ್ಲೆಯ ಭಾರತೀಯ ರೆಡ್ ಕ್ರಾಸ್ ಘಟಕಕ್ಕೆ ರಾಜ್ಯದಲ್ಲಿಯೇ ಅತ್ಯುತ್ತಮ ರೆಡ್ ಕ್ರಾಸ್ ಎಂಬ ಪ್ರಶಸ್ತಿ ದೊರಕಿದೆ. ಬೆಂಗಳೂರಿನ ರಾಜಭವನದಲ್ಲಿ ಮಂಗಳವಾರ ನಡೆದ ಭಾರತೀಯ ರೆಡ್ ಕ್ರಾಸ್ ನ ಕರ್ನಾಟಕ ರಾಜ್ಯ ಘಟಕದ ವಾರ್ಷಿಕ ಮಹಾಸಭೆಯಲ್ಲಿ ಕರ್ನಾಟಕ ರೆಡ್ ಕ್ರಾಸ್ ನ ಸಭಾಧ್ಯಕ್ಷರಾಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಈ ಪ್ರಶಸ್ತಿಯನ್ನು ಕೊಡಗು ಘಟಕದ ಸಭಾಪತಿ ಬಿ.ಕೆ. ರವೀಂದ್ರ ರೈ ಅವರಿಗೆ ವಿತರಿಸಿದರು. ಈ ಸಂದರ್ಭ ಕರ್ನಾಟಕ ರೆಡ್ ಕ್ರಾಸ್ ಸಭಾಪತಿ ವಿಜಯ್ ಕುಮಾರ್ ಪಾಟೀಲ್, ಉಪಾಧ್ಯಕ್ಷ ಆನಂದ್ ಎಸ್ ಜಿಗಜಿಣಗಿ, ಕೊಡಗು ಯೂತ್ ರೆಡ್ ಕ್ರಾಸ್ ನಿರ್ದೇಶಕ ಎಂ.ಧನಂಜಯ್ ಹಾಜರಿದ್ದರು. ಕೋವಿಡ್ ಸಂದರ್ಭದಲ್ಲಿ ಸಂತ್ರಸ್ಥರಿಗೆ ಪರಿಹಾರ ವಿತರಣೆ, ರಕ್ತದಾನದ 10 ಶಿಬಿರಗಳು, ರೆಡ್ ಕ್ರಾಸ್ ಸಭಾಭವನ ನಿರ್ಮಾಣ, ಮಳೆಹಾನಿ ಸಂತ್ರಸ್ಥರಿಗೆ ಪರಿಹಾರದ ಕಿಟ್ ವಿತರಣೆ, ವಿಕಲಾಂಗರಿಗೆ ನೆರವು, ದಿವ್ಯಾಂಗರಿಗೆ ತರಬೇತಿ ಶಿಬಿರ, 15 ಜೀವಾವಧಿ ಸದಸ್ಯರ ನೋಂದಣಿ, ಆರೋಗ್ಯ ಸಂಬಂಧಿತ 5 ಶಿಬಿರಗಳ ಆಯೋಜನೆ, ಪ್ರಥಮ…
ಪ್ರವಾಸ ಎನ್ನುವುದು ವ್ಯಕ್ತಿಯ ಜೀವನದಲ್ಲಿ ಮತ್ತೊಂದು ಹೊಸ ಸಂಸ್ಕೃತಿಯನ್ನು ಪರಿಚಯಿಸಿಕೊಡುವಂಥದ್ದು. ಪ್ರವಾಸದಿಂದ ಪ್ರತ್ಯಕ್ಷ ಜ್ಞಾನ ದೊರೆಯುವುದು. ನಮ್ಮಲ್ಲಿದ್ದ ಅಹಂಕಾರ ಹೋಗಲಾಡಿಸಲು, ನಮ್ಮ ಮನಸ್ಸು ಅರಳುವಂತಾಗಲು ವರ್ಷಕ್ಕೊಂದು ಸಲವಾದರೂ ಪ್ರವಾಸ ಕೈಗೊಳ್ಳಬೇಕು. ಪ್ರವಾಸದಿಂದ ಸಿಗುವ ಉಲ್ಲಾಸ ಮತ್ತ್ಯಾವುದರಲ್ಲೂ ದೊರೆಯದು. ನಮ್ಮ ಪರಿಸರದಲ್ಲೂ ಉತ್ತಮ ಪ್ರವಾಸ ತಾಣಗಳು ಇರಬಹುದು. ಹಾಗಾಗಿ ಸಮಯದ ಅನುಕೂಲ ಸಿಕ್ಕಾಗ ಖಂಡಿತಾ ನಿಮಗೆ ಇಷ್ಟವಾದ ಸ್ಥಳಕ್ಕೆ ಪ್ರವಾಸವನ್ನು ಕೈಗೊಳ್ಳಬೇಕು. ಆ ಮೂಲಕ ನಮ್ಮ ಬದುಕಿನ ಜ್ಞಾನ, ಅರಿವನ್ನು ವಿಸ್ತರಿಸಿಕೊಳ್ಳಬೇಕು ಎಂದು ಕರ್ನಾಟಕ ಮಲ್ಲ ದಿನ ಪತ್ರಿಕೆಯ ಉಪಸಂಪಾದಕರು, ಖ್ಯಾತ ಸಾಹಿತಿ, ಕವಿ ಶ್ರೀನಿವಾಸ ಜೋಕಟ್ಟೆ ಅವರು ಸೃಜನಾ ಬಳಗದ ಲೇಖಕಿಯರ ‘ಪ್ರವಾಸಿಗರ ಅಂತರಂಗ’ ಕೃತಿ ಲೋಕಾರ್ಪಣೆ ಗೊಳಿಸಿ ಮಾತನಾಡಿದರು. ‘ಸೃಜನಾ’ ಮುಂಬಯಿ ಕನ್ನಡ ಲೇಖಕಿಯರ ಬಳಗದ ಹತ್ತನೇ ಕೃತಿ ‘ಪ್ರವಾಸಿಗರ ಅಂತರಂಗ’ ಲೋಕಾರ್ಪಣೆ ಕಾರ್ಯಕ್ರಮವು ಮಾಟುಂಗಾ ಪೂರ್ವದ ಮೈಸೂರು ಅಸೋಸಿಯೇಷನ್ ನ ಮೊದಲ ಮಹಡಿಯ ಕಿರು ಸಭಾಗೃಹದಲ್ಲಿ ಅಕ್ಟೋಬರ್ 14 ರ ಶನಿವಾರದಂದು ಸಂಜೆ 4.30 ಕ್ಕೆ ಜರಗಿದ ಸಂಧರ್ಭದಲ್ಲಿ ಅವರು ಮುಖ್ಯ ಅತಿಥಿಯಾಗಿ…
ದಟ್ಟ ಹಸಿರಿನ ಗಿರಿ ಕಂದರಗಳ ನಡುವೆ ನಿಸರ್ಗ ದೇವತೆ ಧರೆಗಿಳಿದಂತೆ ಕಂಗೊಳಿಸುವ ಪ್ರಾಕೃತಿಕ ನೈಸರ್ಗಿಕ ತಾಣ ಕರ್ನಾಟಕದ ಒಂದು ಸುಂದರ ಜಿಲ್ಲೆ ಕೊಡಗು. ನಿತ್ಯ ಹರಿದ್ವರ್ಣದ ದಟ್ಟ ಕಾಡುಗಳ ಹಸಿರಿನ ಮಡಿಲು, ಬೆಟ್ಟಗುಡ್ಡಗಳ ಸೊಬಗು, ತುಂಬಿ ತುಳುಕುವ ಸಸ್ಯ ಸಂಪತ್ತು, ವನ್ಯರಾಶಿ ಕಾಫಿ ತೋಟದ ಕಂಪು, ಕಿತ್ತಳೆ ಏಲಕ್ಕಿ ತೋಟಗಳ ನಡುವೆ ಹರಿವ ಹಳ್ಳ ಕೊಳ್ಳ ಧುಮುಕಿ ಹರಿವ ಜಲಪಾತಗಳು, ಝಳು ಝಳು ಹರಿವ ನದಿ ತೊರೆಗಳು ಹಾಗೂ ಪಚ್ಚೆ ಪೈರಿನಿಂದ ಆವೃತ್ತವಾದ ಕೊಡಗಿನ ಮೂಲೆ ಮೂಲೆಗಳಲ್ಲಿಯೂ ನೈಸರ್ಗಿಕ ಸೊಬಗಿದೆ. ಪ್ರಕೃತಿಯ ಲಾಲಿತ್ಯದ ಅಚ್ಚರಿಯ ತಾಣವಿದು. ಹಸಿರುಡಿಗೆ ಪಸೆದುಟ್ಟ ಕೊಡಗಿನ ಚೆಲುವಿನ ನಡುವೆ ಹರಿವ ಕನ್ನಡ ನಾಡಿನ ಜೀವ ನದಿಯೇ ಕಾವೇರಿ. ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದಾದ ಕೊಡವರ ಕುಲದೇವತೆ, ಕನ್ನಡ ಕುಲನಾರಿ ದಕ್ಷಿಣ ಗಂಗೆ, ಕನ್ನಡ ನಾಡಿನ ಜೀವನದಿ ಕಾವೇರಿ. ಈ ಹೆಸರು ಕೇಳುತ್ತಲೇ ಕೊಡವರು ಪುಳಕಗೊಳ್ಳುತ್ತಾರೆ. ಕಾವೇರಿ ಕೊಡವರ ಆರಾಧ್ಯ ದೇವತೆ. ಪ್ರತಿ ವರ್ಷ ಅಕ್ಟೋಬರ್ 17…
ಯಶಸ್ ಪ್ರಕಾಶನ ಕಟಪಾಡಿ, ತುಳುಕೂಟ ಉಡುಪಿ (ರಿ.), ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಕಾಪು ವತಿಯಿಂದ ಪತ್ರಕರ್ತ ಪ್ರಕಾಶ ಕಟಪಾಡಿ ಅವರು ಬರೆದ ‘ಅಪ್ಪೆಮ್ಮೆ’ ತುಳು ನಾಟಕದ ಕೃತಿ ಬಿಡುಗಡೆ ಮತ್ತು ಮಕ್ಕಳ ತುಳು ‘ಕವಿಗೋಷ್ಠಿ’ ಕಾರ್ಯಕ್ರಮವು ದಿನಾಂಕ 24-09-2023ರಂದು ಉಡುಪಿ ಕಿದಿಯೂರು ಹೊಟೇಲಿನ ಪವನ್ ರೂಫ್‌ಟಾಪ್ ಹಾಲ್‌ನಲ್ಲಿ ನಡೆಯಿತು. ಬ್ರಹ್ಮಾವರ ನ್ಯೂ ಕರ್ನಾಟಕ ಬಿಲ್ಡರ್ಸ್ ಸಂಸ್ಥೆಯ ಮಾಲಕರಾದ ಚೇತನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ತುಳುನಾಡಿನಲ್ಲಿ ಅವಿಭಕ್ತ ಕುಟುಂಬ ಪದ್ಧತಿ ಮರೆಯಾಗುತ್ತಿದೆ. ಮಕ್ಕಳ ಮತ್ತು ಹೆತ್ತವರ ನಡುವಿನ ಸಂಬಂಧಗಳು ದೂರವಾಗುತ್ತಿದ್ದು, ಕುಟುಂಬವನ್ನು ಜೋಡಿಸುವ ವ್ಯವಸ್ಥೆಯನ್ನು ವಿದ್ಯಾವಂತರಾದ ನಾವು ಮಾಡಬೇಕಾದುದು ಅನಿವಾರ್ಯ” ಎಂದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅಧ್ಯಕ್ಷತೆ ವಹಿಸಿ ಮಾತನಾಡಿ, “ಆಧುನಿಕ ಯುವಜನಾಂಗ ಕೂಡು ಕುಟುಂಬ ಬಿಟ್ಟು ಏಕ ಕುಟುಂಬ ಪದ್ಧತಿಯತ್ತ ಮನಸ್ಸು ಮಾಡುತ್ತಿರುವುದರಿಂದ ವೃದ್ಧಾಶ್ರಮಗಳ ಸಂಖ್ಯೆ ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ‘ಅಪ್ಪೆಮ್ಮೆ’ ನಾಟಕ ಹೆತ್ತವರನ್ನು ಬೀದಿಗೆ ಅಟ್ಟಬೇಡಿ ಎಂಬ ಸಂದೇಶ ಸಾರುತ್ತದೆ”…
ಕನ್ನಡ ಸಂಘ ಬಹ್ರೈನ್ ವತಿಯಿಂದ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಆ.18ರಂದು ಅದ್ದೂರಿಯಾಗಿ ಆಚರಿಸಲಾಯಿತು. ಇಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕನ್ನಡ ಭವನದಲ್ಲಿ ದೇಶಭಕ್ತಿಯ ಅಭಿಮಾನದೊಂದಿಗೆ, ಜನ ಸಮೂಹದಲ್ಲಿ ಉತ್ಸಾಹ ತುಂಬುವಂತೆ “ಉತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕನ್ನಡ ಭವನದ ಆಶಾ ಪ್ರಕಾಶ್ ಶೆಟ್ಟಿ ಸಭಾಂಗಣದಲ್ಲಿ ದೇಶಭಕ್ತಿಯು ತುಂಬಿತುಳುಕುತ್ತಿತ್ತು. ಸಂಘದ ಸದಸ್ಯರು ಮತ್ತು ಮಕ್ಕಳು, ಒಟ್ಟಾಗಿ ದೇಶಭಕ್ತಿಯ ಹಾಡುಗಳಿಗೆ ಆಕರ್ಷಕ ನೃತ್ಯ -ಗಾಯನ ಪ್ರದರ್ಶನಗಳನ್ನು ನೀಡಿದರು. ಈ ಕಾರ್ಯಕ್ರಮವು ಮಾತೃಭೂಮಿಯ ಬಗ್ಗೆ ಭಾರತೀಯರಲ್ಲಿ ಆಳವಾಗಿ ಬೇರೂರಿರುವ ಪ್ರೀತಿಯನ್ನು ಪ್ರದರ್ಶಿಸುವುದರೊಂದಿಗೆ, ನೆರೆದಿದ್ದ ಮುನ್ನೂರಕ್ಕೂ ಮಿಕ್ಕಿದ ಪ್ರೇಕ್ಷಕರಿಗೆ ಸಾಂಸ್ಕೃತಿಕ ರಸದೌತಣವನ್ನೂ ನೀಡಿತು. ವಿಶೇಷವಾಗಿ ಅಮೆರಿಕದ ಫಿಲಡೆಲ್ಫಿಯಾದಿಂದ ಅದರ ಕಲಾ ನಿರ್ದೇಶಕಿ ವಿಜಿ ರಾವ್ ನೇತೃತ್ವದ ಹೆಸರಾಂತ “ತ್ರಿ ಅಕ್ಷ ‘ ನಾಟ್ಯ ತಂಡದ 8 ಮಂದಿ ಪ್ರತಿಭಾನ್ವಿತ ಕಲಾವಿದರಿಂದ ಅಮೋಘವಾದ ಶಾಸ್ತ್ರೀಯ ನೃತ್ಯದ ಪ್ರದರ್ಶನವು ಪ್ರೇಕ್ಷಕರನ್ನು ಆಕರ್ಷಿಸಿತು. ಗಾಯಕಿ ಪ್ರತಿಮಾ ಅರುಣ್ ಶೆಟ್ಟಿ ಅವರ ನಿರ್ದೇಶನದಲ್ಲಿ ದೇಶಭಕ್ತಿಗಾಯನ ಸುಂದರವಾಗಿ ಮೂಡಿಬಂತು. ಸಂಘದ ಅಧ್ಯಕ್ಷರಾದ ಅಮರನಾಥ ರೈ ಹಾಗೂ ಪದಾಧಿಕಾರಿಗಳು…
ಬಂಟರ ಸಂಘ ಇಂದು ಬಲಿಷ್ಠಗೊಳ್ಳಲು ಪ್ರಾದೇಶಿಕ ಸಮಿತಿಗಳು ಮುಖ್ಯ ಕಾರಣವಾಗಿದೆ. ಪ್ರತಿ ಸಮಿತಿಗಳು ಅರ್ಥ ಪೂರ್ಣ ಕಾರ್ಯಕ್ರಮಗಳನ್ನು ಮಾಡಿ ಸ್ಥಳೀಯ ಬಂಟ ಬಂಧುಗಳಿಗೆ ವಿವಿಧ ರೀತಿಯಲ್ಲಿ ಸಹಕಾರವಾಗಿದೆ. ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಅಪಾರವಾದ ಶ್ರಮವಹಿಸಿ ಸಮಿತಿಯನ್ನು ಮುನ್ನಡೆಸುತ್ತಿದ್ದಾರೆ. ನಮ್ಮ ಎಲ್ಲಾ ಕಾರ್ಯಕ್ರಮಗಳೆಲ್ಲವೂ ಸಮಯದ ಒಳಗಡೆ ನಡೆಯುವಂತೆ ಮಹತ್ವವಾದ ಜವಾಬ್ದಾರಿಯನ್ನು ಪದಾಧಿಕಾರಿಗಳು ವಹಿಸಬೇಕು ಎಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಕೆ ಶೆಟ್ಟಿ ನುಡಿದರು. ಅವರು ಜು. 16 ರಂದು ಆದಿತ್ಯವಾರ ಬಂಟರ ಸಂಘದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದ ಲೀಲಾವತಿ ಶ್ಯಾಮ ಶೆಟ್ಟಿ (ಬಾಬಾಸ್ ಗ್ರೂಪ್) ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಒಂಭತ್ತು ಪ್ರಾದೇಶಿಕ ಸಮಿತಿಗಳಲ್ಲಿ ಒಂದಾದ ಅಂಧೇರಿ-ಬಾಂದ್ರ ಪ್ರಾದೇಶಿಕ ಸಮಿತಿಯ 18 ನೇಯ ವಾರ್ಷಿಕ ಸ್ನೇಹ ಸಮ್ಮಿಲನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಈ ಪ್ರಾದೇಶಿಕ ಸಮಿತಿ ಸಮಿತಿಯು ಮಹೇಶ್ ಶೆಟ್ಟಿ ಅವರ ಕಾರ್ಯಧ್ಯಕ್ಷತೆಯಲ್ಲಿ ಪ್ರಾರಂಭಗೊಂಡವು. ಆ ಸಂದರ್ಭದಲ್ಲಿ ನಾನು ಸಂಚಾಲಕನಾಗಿ ಕಾರ್ಯ ನಿರ್ವಹಿಸಿದ್ದೆ. ಅಂದು ಸುಮಾರು 5000ಕ್ಕೂ ಮಿಕ್ಕಿ…
ಬಂಟ್ವಾಳದಲ್ಲಿರುವ ಈ ಭವ್ಯ ಮಂದಿರ ನಿರ್ಮಾಣದ ಹಿಂದಿರುವ ಪ್ರೇರಕ ಶಕ್ತಿ ಶ್ರೀ ಗೋವಿಂದ ಮಹಾಸ್ವಾಮಿಗಳು. ಕೇರಳದ ಮಡಿವಂತ ಬ್ರಾಹ್ಮಣ ಕುಲಕ್ಕೆ ಸೇರಿದ್ದ ಗೋವಿಂದ ಸ್ವಾಮಿಗಳು ಗಣೇಶಪುರಿಗೆ ಹೋಗಿ ನಿತ್ಯಾನಂದ ಸ್ವಾಮಿಗಳನ್ನು ಕಂಡು, ನಾನು ಸ್ವಾಮಿ ಆಗುತ್ತೇನೆ, ದೀಕ್ಷೆ ಕೊಡಿ ಎಂದಾಗ ನಿತ್ಯಾನಂದರು ಗೋವಿಂದ ಸ್ವಾಮಿಗಳನ್ನು ಅಡಿಯಿಂದ ಮುಡಿಯವರಿಗೆ ನೋಡಿದರಂತೆ. ನಿನ್ನಲ್ಲಿ ಬ್ರಾಹ್ಮಣ್ಯದ ಮೇಲರಿಮೆಯಿದೆ. ಜೀವರಲ್ಲಿ ಭೇದವೆಣಿಸುವ ಮಡಿ ಮೈಲಿಗೆ ಇದೆ. ಅದನ್ನು ತ್ಯಜಿಸದೆ ಸಾಧನೆ ಸಾಧ್ಯವಿಲ್ಲ. ಸ್ವಲ್ಪ ಕಾಲ ಮೀನಿನ ಹೋಟೆಲ್ ನಲ್ಲಿ ಕೆಲಸ ಮಾಡಿ ಬಾ ಎಂದು ಕಳುಹಿಸಿದರಂತೆ! ಕೊಂಚವೂ ಸಂಕೋಚ ಪಡದೆ ಗುರುಗಳ ಆದೇಶವನ್ನು ಶಿರಸಾ ವಹಿಸಿ ಗೋವಿಂದ ಭಟ್ರು ಗಣೇಶ ಪುರಿಯಲ್ಲಿರುವ ಮಾಂಸದಡುಗೆಯ ಹೊಟೇಲೊಂದರಲ್ಲಿ ಕೆಲಸ ಮಾಡಿದರು. ಎಂಜಲು ಎತ್ತಿದರು. ಮುಸುರೆ ತೊಳೆದರು ಮಾಂಸದಡುಗೆ ಬೇಯಿಸಿದರು. ಅಜ್ಜನ ಪರೀಕ್ಷೆಯಲ್ಲಿ ಸೈ ಎನಿಸಿಕೊಂಡರು. ದೀಕ್ಷೆ ಕೊಟ್ಟ ನಂತರ ಬಂಟ್ವಾಳಕ್ಕೆ ಹೊರಡು ಎಂದು ನಿತ್ಯಾನಂದರ ಆದೇಶವಾಯಿತು. ಗೋವಿಂದ ಸ್ವಾಮಿಗಳು ಬಂಟ್ವಾಳಕ್ಕೆ ಬಂದರು ಭಕ್ತರ ಪಾಲಿಗೆ ಭಾಗ್ಯ ದೇವತೆಯಾಗಿ. ಎಲ್ಲಿಯ ಕೇರಳ?…
ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿ ಅವರ ಬೇಬಿ ಫ್ರೆಂಡ್ ಕ್ಲಿನಿಕ್ ಮತ್ತು ಬಂಟ್ಸ್ ಅಸೋಸಿಯೇಷನ್ ಪುಣೆ ಸಂಯುಕ್ತ ಆಯೋಜನೆಯಲ್ಲಿ ಉಚಿತ ಕಟೀಲ್ ಬೇಬಿ ಫ್ರೆಂಡ್ ಚೈಲ್ಡ್ ಹೆಲ್ತ್ ಕಾರ್ಡ್ ಬಿಡುಗಡೆ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರವು ಏಪ್ರಿಲ್ 2 ರಂದು ಬೆಳಿಗ್ಗೆ 10 ರಿಂದ ಅಪರಾಹ್ನ 1ರ ವರೆಗೆ ಪುಣೆಯ ಕ್ಯಾಂಪ್ ಎಂ. ಜಿ. ರೋಡ್ ನಲ್ಲಿರುವ ಡಾ. ಸುಧಾಕರ್ ಶೆಟ್ಟಿಯವರ ಬೇಬಿ ಫ್ರೆಂಡ್ ಕ್ಲಿನಿಕ್ ನ ಆವರಣದಲ್ಲಿ ನಡಯಲಿದೆ. ಬಂಟ್ಸ್ ಅಸೋಸಿಯೇಷನ್ ಪುಣೆ ಅಧ್ಯಕ್ಷ ಗಣೇಶ್ ಹೆಗ್ಡೆ ಪುಂಚೂರು ಮತ್ತು ಸಂಘದ ವೈದ್ಯಕೀಯ ವಿಭಾಗದ ಕಾರ್ಯಧ್ಯಕ್ಷರು ಬೇಬಿ ಫ್ರೆಂಡ್ ಕ್ಲಿನಿಕ್ ನ ಮೂಲಕ ಡಾ. ಸುಧಾಕರ್ ಶೆಟ್ಟಿಯವರ ಮುಂದಾಳತ್ವದಲ್ಲಿ ಪುಣೆಯ ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್, ಕಾರ್ಖಾನೆ, ಕಚೇರಿಗಳು ಮತ್ತು ಗೃಹ ಸೇವಕಿಯರು, ಚಾಲಕರು ಇತ್ಯಾದಿ ವಿಭಾಗಗಳಲ್ಲಿ ಕೆಲಸ ಮಾಡುವ ಸಿಬಂದಿಯ ಮಕ್ಕಳ ಅನುಕೂಲಕ್ಕಾಗಿ…