ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಾರ್ಯ ವ್ಯಾಪ್ತಿಯಲ್ಲಿ ತನ್ನ ಸದಸ್ಯರ ಸೇವೆಯಲ್ಲಿ ಯಶಸ್ವಿ 29 ವರ್ಷಗಳನ್ನು ಪೂರೈಸಿ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿರುವ ರಾಜ್ಯದ ಅಗ್ರ ಗಣ್ಯ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲಿ ಒಂದಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿ 31.3.2023 ಕ್ಕೆ ರೂ.145 ಕೋಟಿ ವ್ಯವಹಾರದಲ್ಲಿ ವೃದ್ಧಿ ರೂ. 9.84 ಕೋಟಿ ನಿವ್ವಳ ಲಾಭ ಹಾಗೂ 0% ನೆಟ್ ಎನ್ ಪಿಎ ಮತ್ತು ರೂ. 3089 ಕೋಟಿ ಒಟ್ಟು ವಹಿವಾಟನ್ನು ಸಾಧಿಸಿರುವುದಕ್ಕೆ ಎಸ್ ಸಿಡಿಸಿಸಿ ಬ್ಯಾಂಕ್ ನವರು ಈ ಸಾಧನೆಯನ್ನು ಗುರುತಿಸಿ, 2022-23 ನೇ ಸಾಲಿನಲ್ಲಿ ಸರ್ವತೋಮುಖ ವ್ಯವಹಾರಾಭಿವೃದ್ದಿ ಹೊಂದಿದ ಅತ್ಯುತ್ತಮ ಕ್ರೆಡಿಟ್ ಸಹಕಾರಿ ಸಂಘ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಎಸ್ ಸಿಡಿಸಿಸಿ ಬ್ಯಾಂಕಿನ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ರವರು, ಎಸ್ ಸಿಡಿಸಿಸಿ ಬ್ಯಾಂಕಿನ ಸರ್ವ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಂಘಗಳ ಉಪಬಂಧಕರು ಹಾಗೂ ದ.ಕ. ಮತ್ತು ಉಡುಪಿ ಜಿಲ್ಲೆಯ ಸಹಕಾರ ಯೂನಿಯನ್ ನ ಅಧ್ಯಕ್ಷರ ಸಮಕ್ಷಮದಲ್ಲಿ ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈಯವರಿಗೆ ಹಾಗೂ ಮಹಾಪ್ರಬಂಧಕ ಗಣೇಶ್ ಜಿ.ಕೆ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿ ಸಂಘಕ್ಕೆ 12 ನೇ ಬಾರಿ ಹಾಗೂ 7 ವರ್ಷಗಳಿಂದ ನಿರಂತರವಾಗಿ ಲಭಿಸಿಕೊಂಡು ಬರುತ್ತಿದೆ.