ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಪ್ರತಿಷ್ಠಿತ ಆಳ್ವಾಸ್ ವಿರಾಸತ್ – 2023 ಇದೇ ಡಿ. 14ರಿಂದ 17ರ ವರೆಗೆ ನಡೆಯಲಿದೆ. ಈ ಸಾಂಸ್ಕøತಿಕ ಕಾರ್ಯಕ್ರಮದ ಭಾಗವಾಗಿ ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಹಣ ಸ್ಪರ್ಧೆ ಹಾಗೂ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯಲ್ಲಿ ದೇಶ ವಿದೇಶದ ಛಾಯಾಗ್ರಾಹಕರು ಉಚಿತ ಹಾಗೂ ಮುಕ್ತವಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಕಾರ್ಯಕ್ರಮದ ಮುಖ್ಯ ಆಯೋಜಕರು ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಟ್ಟು 1 ಲಕ್ಷ 25 ಸಾವಿರ ಮೊತ್ತದ ನಗದು ಪ್ರಶಸ್ತಿ ವನ್ಯಜೀವಿ ಛಾಯಾಗ್ರಹಣದಲ್ಲಿ ಪ್ರಥಮ ಸ್ಥಾನ ಪಡೆದ ಛಾಯಾಗ್ರಹಣಕ್ಕೆ 25,000ರೂ, ಚಿನ್ನದ ಪದಕ ಹಾಗೂ ಪ್ರಮಾಣ ಪತ್ರ, ದ್ವಿತೀಯ 15,000ರೂ, ಬೆಳ್ಳಿಯ ಪದಕ ಹಾಗೂ ಪ್ರಮಾಣ ಪತ್ರ, ತೃತೀಯ ಸ್ಥಾನ ಪಡೆದ ಛಾಯಾಗ್ರಹಣಕ್ಕೆ 10,000ರೂ. ಕಂಚಿನ ಪದಕ ಹಾಗೂ ಪ್ರಮಾಣ ಪತ್ರದ ಪುರಸ್ಕಾರ ನೀಡಲಾಗುವುದು. ಇದಲ್ಲದೇ ತೀರ್ಪುಗಾರರ ಆಯ್ಕೆಗೆ ಪಾತ್ರವಾಗುವ ಮೂರು ಛಾಯಚಿತ್ರಕ್ಕೆ ತಲಾ 5000ರೂ ನಗದು ಹಾಗೂ ಸಂಸ್ಥೆಯ ಅಧ್ಯಕ್ಷರ ಆಯ್ಕೆಯ ವಿಭಾಗದಲ್ಲಿ ತಲಾ 5000ರೂ ಯ ನಗದು ಹಾಗೂ ಪ್ರಮಾಣ ಪತ್ರ ನೀಡಲಾಗುವುದು. 15 ಮೆರಿಟ್ ಸರ್ಟಿಫಿಕೇಟ್ ಪಡೆಯುವ ಛಾಯಾಚಿತ್ರಕ್ಕೆ ತಲಾ 2000ರೂ ನೀಡಲಾಗುವುದು.
5 ವಿಭಾಗಗಳಲ್ಲಿ ಪ್ರಶಸ್ತಿ ಉತ್ತಮ ಆಕ್ಷನ್ ಫೋಟೋ, ಉತ್ತಮ ಪಕ್ಷಿ ಫೋಟೋ, ಉತ್ತಮ ಸಸ್ತನಿ ಫೋಟೋ, ಉತ್ತಮ ಮ್ಯಾಕ್ರೋ ಫೋಟೋ ಹಾಗೂ ಉತ್ತಮ ಪರಿಸರ ಫೋಟೋ ಎಂಬ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು. ಈ ಪ್ರಶಸ್ತಿಗಳು ತಲಾ 5,000ರೂ ನಗದು ಪುರಸ್ಕಾರ ಹೊಂದಿದೆ. ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕರಾದ ಎಂ. ಎನ್. ಜಯಕುಮಾರ್, ಅನಂತ ಮೂರ್ತಿ ಹಾಗೂ ದಿನೇಶ್ ಕುಂಬ್ಳೆ ನಿರ್ವಹಿಸಲಿದ್ದಾರೆ. ಛಾಯಾಚಿತ್ರಗಳನ್ನು ಕಳುಹಿಸಿಕೊಡಲು ನವೆಂಬರ್ 20 ಕೊನೆಯ ದಿನಾಂಕವಾಗಿದ್ದು, alvasvirasat2023photoexhibition.com ವೆಬ್ಸೈಟ್ ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಈಗಾಗಲೇ 25ಕ್ಕೂ ಅಧಿಕ ದೇಶಗಳಿಂದ ಸ್ಪರ್ಧೆಗೆ ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕರು ಛಾಯಾಚಿತ್ರಗಳನ್ನು ಸಲ್ಲಿಸಿರುತ್ತಾರೆ. ಕಾರ್ಯಕ್ರಮದ ಸಂಯೋಜನ ಸಮಿತಿಯ ಸದಸ್ಯರಾಗಿ ಖ್ಯಾತ ಛಾಯಾಗ್ರಾಹಕರಾದ ಆಸ್ಟ್ರೋ ಮೋಹನ್ ಹಾಗೂ ಜಿನೇಶ್ ಪ್ರಸಾದ ಕಾರ್ಯ ನಿರ್ವಹಿಸಲಿದ್ದಾರೆ.











































































































