
ಬಂಟರ ಸಮಾಜದ ಉದ್ಯಮಿಗಳ ಒಗ್ಗಟ್ಟಿಗಾಗಿ ಸ್ಥಾಪಿಸಿದಂತಹ ಮುಂಬೈಯ ಪ್ರತಿಷ್ಠಿತ ಸಂಸ್ಥೆ ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಮುಂಬೈಯ ಉದ್ಯಮಿ, ಕೆನರಾ ಟೂರ್ಸ್ ನ ಆಡಳಿತ ನಿರ್ದೇಶಕ ಸುರೇಶ್ ಬಿ ಶೆಟ್ಟಿಯವರ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಫೆಬ್ರವರಿ 1ರಂದು ಸಾಕಿನಾಕದ ಪೆನನ್ಸುಲಾ ಗ್ರಾಂಡ್ ನಲ್ಲಿ ಜರಗಿತು. ಅಧ್ಯಕ್ಷ ಎಸ್. ಬಿ ಶೆಟ್ಟಿಯವರು ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷರಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ವಸುಧಾ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಶ್ರೀನಾಥ್ ಶೆಟ್ಟಿ, ಗೌರವ ಕಾರ್ಯದರ್ಶಿಯಾಗಿ ಸಿಎ ಸದಾಶಿವ ಶೆಟ್ಟಿ, ಕೋಶಾಧಿಕಾರಿಯಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಸಿಎ ಶ್ರೀನಿವಾಸ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ನಿಶಿತ್ ಶೆಟ್ಟಿ, ಜತೆ ಕೋಶಾಧಿಕಾರಿಯಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಏಳಿಂಜೆ ಅನಿಲ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ತ್ರಿಶಿಕಾ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.


ಬಂಟ ಸಮಾಜದ ಉದ್ಯಮಿಗಳಾದ ಆಲ್ ಕಾರ್ಗೋ ಲಾಜೆಸ್ಟಿಕ್ಸ್ ನ ಸಿಎಂಡಿ ಶಶಿಕಿರಣ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಕೆ.ಸಿ. ಶೆಟ್ಟಿ, ಉದ್ಯಮಿಗಳಾದ ದೀಪಕ್ ಶೆಟ್ಟಿ, ಜಯರಾಮ್ ಶೆಟ್ಟಿ ರೀಜೆನ್ಸಿ, ದಿವಾಕರ್ ಶೆಟ್ಟಿ ಉದ್ಯಮಿ, ವಿಸ್ವಾತ್ ಕೆಮಿಕಲ್ಸ್ ಲಿಮಿಟೆಡ್ ನ ಸಿಎಂಡಿ ವಿವೇಕ್ ಬಿ ಶೆಟ್ಟಿ, ಹೇರಂಬಾ ಇಂಡಸ್ಟ್ರಿಸ್ ನ ಆಡಳಿತ ನಿರ್ದೇಶಕ ಆರ್.ಕೆ ಶೆಟ್ಟಿ ಮತ್ತಿತರರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.


























































































































