ಬಂಟರ ಸಂಘ ಮುಂಬಯಿಯ ವಾರ್ಷಿಕ ಸಮ್ಮಿಲನ 2022 ಪ್ರಯುಕ್ತ ನಡೆಯಲಿರುವ ಬಂಟ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಪೂರ್ವಭಾವಿಯಾಗಿ ಪಶ್ಚಿಮ ವಲಯ ಪ್ರಾದೇಶಿಕ ಸಮಿತಿ ಸಮನ್ವಯಕರಾದ ಶ್ರೀ ಶಶಿಧರ ಕೆ ಶೆಟ್ಟಿ ಇನ್ನಂಜೆಯವರ ಅಧ್ಯಕ್ಷತೆಯಲ್ಲಿ ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಗಳಾದ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿ, ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿ ಮತ್ತು ವಸಾಯಿ ಡಹಾಣು ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳ ಸಭೆಯು ವಸಾಯಿ ಪೂರ್ವದ ಗ್ಯಾಲಕ್ಸಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭ ಮೂರು ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ಶ್ರೀ ಹರೀಶ್ ಪಾಂಡು ಶೆಟ್ಟಿ, ಶ್ರಿ ಶಿವಪ್ರಸಾದ್ ಶೆಟ್ಟಿ ಮಾಣಿಬೆಟ್ಟು ಗುತ್ತು, ನಿಟ್ಟೆ ಶ್ರೀ ಎಮ್ ಜಿ ಶೆಟ್ಟಿಯವರು ಸಮನ್ವಯಕರಾದ ಶ್ರೀ ಶಶಿಧರ ಕೆ ಶೆಟ್ಟಿ, ಇನ್ನಂಜೆಯವರನ್ನು ಪ್ರಾದೇಶಿಕ ಸಮಿತಿಗಳ ವಿವಿಧ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಪುಷ್ಪಗುಚ್ಚ ನೀಡಿ ಗೌರವಿಸಿದರು. ಈ ಸಭೆಯಲ್ಲಿ ಪೆಬ್ರವರಿ 27, ರವಿವಾರದಂದು ನಡೆಯುವ ಬಂಟ ಪ್ರತಿಭಾನ್ವೇಷಣೆ 2022 ಕಾರ್ಯಕ್ರಮದಲ್ಲಿ ಆಯಾಯ ಪ್ರಾದೇಶಿಕ ಸಮಿತಿಗಳ ಪರವಾಗಿ ಹಾಗೂ ಮೂರು ಪ್ರಾದೇಶಿಕ ಸಮಿತಿಗಳ ಸಮನ್ವಯಕರ ಪರವಾಗಿ ಸ್ಪರ್ಧೆಯಲ್ಲಿ ಸಂಘಟಿತವಾಗಿ ಭಾಗವಹಿಸುವ ಬಗ್ಗೆ ಚರ್ಚಿಸಲಾಯಿತು. ಈ ಕಾರ್ಯಕ್ರಮದ ಕೊನೆಯಲ್ಲಿ ಉಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.