ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸೇವೆಗಳೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಗಳಿಂದ ಮನೆ ಮಾತಾಗಿರುವ, ಪರಿಸರದ ಸ್ವಜಾತೀಯ ಬಾಂಧÀವರನ್ನು ಒಟ್ಟು ಸೇರಿಸುವ, ಅವರ ಕಷ್ಟ ಕಾರ್ಪಣ್ಯಗಳಲ್ಲಿ ಸ್ಪಂದಿಸುವ ಹಾಗೂ ಇನ್ನಿತರ ಹಲವಾರು ಧ್ಯೇಯ ಉದ್ದೇಶಗಳನ್ನು ಮುಂದಿಟ್ಟುಕೊಂಡು ಆರಂಭಗೊಂಡ ಬಂಟ್ಸ್ ಫೋರಮ್ ಮೀರಾ-ಭಾಯಂದರ್ ಪ್ರಸ್ತುತ ವರ್ಷದಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮವೊಂದನ್ನು ಆಯೋಜಿಸುವ ಸಲುವಾಗಿ ಪೂರ್ವಭಾವಿ ಸಭೆಯು ಸಂಘದ ಕಾರ್ಯಾಲಯದಲ್ಲಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಇನ್ನಾರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಫೆಬ್ರವರಿ 25 ರಂದು ಸಾಯಂಕಾಲ 3.00 ಗಂಟೆಯಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಮೀರಾರೋಡ್ ಮೇಕ್ಡೊನಾಲ್ಡ್ ಎದುರಿನ ಕನಕಿಯಾ ರಸ್ತೆಯಲ್ಲಿರುವ ಮೆಹರ್ವಾಟಿಕಾ ಸಭಾಗೃಹದಲ್ಲಿ ಆಚರಿಸಲು ನಿರ್ಧರಿಸಲಾಯಿತು. ಈ ಕಾರ್ಯಕ್ರಮದ ಸಂಪೂರ್ಣ ಮುತುವರ್ಜಿಯನ್ನು ಸಂಘದ ಗೌರವಾಧ್ಯಕ್ಷ ಬೆಳ್ಳಿಪಾಡಿ ಸಂತೋಷ್ ರೈಯವರಿಗೆ ವಹಿಸಿಕೊಡಲಾಯಿತು.
ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಬಂಟ್ಸ್ ಫೆÉೂೀರಮ್ ಸದಸ್ಯರಿಂದ ಮತ್ತು ಸದಸ್ಯರ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ, ಕಲರ್ಸ್ ಕನ್ನಡ ವಾಹಿನಿಯ ಎದೆ ತುಂಬಿ ಹಾಡುವೆನು ಖ್ಯಾತಿಯ ಸಂದೇಶ್ ನೀರುಮಾರ್ಗ ಇವರ ಸಂಗೀತ ರಸಮಂಜರಿ, ಚೈತನ್ಯ ಕಲಾವಿದರು ಬೈಲೂರು ತಂಡದವರಿಂದ ಹಾಸ್ಯ ಚಿಗುರುಗಳು ಸಾದರಗೊಳ್ಳಲಿವೆ. ಕಾರ್ಯಕ್ರಮದ ನಡುವೆ ಗಣ್ಯ ಸಮಾಜ ಬಾಂಧವರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯುವ ಬಗ್ಗೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಸಂಘದ ಸಂಚಾಲಕ ದಿವಾಕರ ಶೆಟ್ಟಿ ಶಿರ್ಲಾಲು, ಮಾಜಿ ಅಧ್ಯಕ್ಷ ಜಯಪ್ರಕಾಶ್ ಆರ್. ಭಂಡಾರಿ, ಗೌರವ ಕಾರ್ಯದರ್ಶಿ ಹರ್ಷ ಕುಮಾರ್ ಡಿ. ಶೆಟ್ಟಿ, ಕೋಶಾಧಿಕಾರಿ ರಮೇಶ್ ಶೆಟ್ಟಿ, ಜತೆ ಕಾರ್ಯದರ್ಶಿ ಅನಿಲ್ ಶೆಟ್ಟಿ, ಜತೆ ಕೋಶಾಧಿಕಾರಿ ಸತೀಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಉದಯ್ ಶೆಟ್ಟಿ ಮಲ್ಲಾರಬೀಡು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಆರ್. ಶೆಟ್ಟಿ, ಆನಂದ ಶೆಟ್ಟಿ ಕುಕ್ಕುಂದೂರು, ಸೀತಾರಾಮ್ ಶೆಟ್ಟಿ ಅಮವಾಸ್ಯೆಬೈಲು, ಪುರುಷೋತ್ತಮ್ ಶೆಟ್ಟಿ, ಹರೀಶ್ ಶೆಟ್ಟಿ ಕಾಪು, ನಾರಾಯಣ ಶೆಟ್ಟಿ, ವಿಜಯಲಕ್ಷ್ಮೀ ಡಿ. ಶೆಟ್ಟಿ, ವೀಣಾ ಶೆಟ್ಟಿ, ಸುಜಾತಾ ಶೆಟ್ಟಿ, ಶುಭದೀಪ್ ಶೆಟ್ಟಿ ಮತ್ತಿತರ ಸದಸ್ಯರು, ಸದಸ್ಯೆಯರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಕಾರ್ಯಕ್ರಮದ ಯಶಸ್ಸಿಗೆ ಸರ್ವ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜ ಬಾಂಧವರು ಸಹಕರಿಸಬೇಕಾಗಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಇನ್ನಾ ವಿನಂತಿಸಿದರು.