Author: admin
ಹೌದು, ದೇಶದ ಪ್ರಮುಖ ನಗರಗಳಲ್ಲಿ ಒಂದಾದ,ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಲ, ನೆಲ, ರೈಲು ಮತ್ತು ವಾಯು ಸಾರಿಗೆಗಳನ್ನು ಹೊಂದಿರುವ ರಾಜ್ಯದ ಏಕೈಕ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಂಗಳೂರಿನ ದುರಂತ ಕಥೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನ ನಂತರ ವೇಗವಾಗಿ ಮಾರ್ಪಾಡಾಗುತ್ತಿರುವ ನಗರಗಳಲ್ಲಿ ಮಂಗಳೂರೂ ಒಂದು. ಗುಣಮಟ್ಟದ ಶಿಕ್ಷಣ , ದೇಶದಲ್ಲೇ ಉತ್ತಮ ಸುಸ್ಸಜಿತ ಆಸ್ಪತ್ರೆ ಮತ್ತು ಆರೈಕೆ, ರಫ್ತು ಆಮದಿಗೆ ಪ್ರಮುಖ ಬಂದರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೀಗೆ ನಾನಾ ರೀತಿಯಲ್ಲಿ ಮಿಂಚುತ್ತಿರುವ ಮಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ NH 75 ದುಸ್ಥಿತಿ ಶಾಪವಾಗಿ ತಿರುಗಿದೆ. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ , ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಿಂದ ಶಿರಾಡಿ ಘಾಟಿಯ ಮೂಲಕ ಹಾದು ಹೋಗುವ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅತ್ಯಂತ ಆಮೆ ಗತಿಯಲ್ಲಿ ಸಾಗುತ್ತಿರುವುದು ಬೇಸರದ ಸಂಗತಿ. ಈ ಸಮಸ್ಯೆ ಆರಂಭವಾಗಿ ದಶಕಗಳೇ ಉರುಳಿ ಹೋಗಿವೆ,ಒಬ್ಬರ ಹಿಂದೆ ಒಬ್ಬರಂತೆ ಬಂದು ಹೋದ ಜನಪ್ರತಿನಿದಿಗಳೆಷ್ಟೋ ದೇವರೇ ಬಲ್ಲ.ಅದರೂ ಇನ್ನೂ ಸರಿಯಾದ ಪರಿಹಾರ…
ಯು.ಎ.ಇ.ಯ ರಾಜಧಾನಿ ಅಬುಧಾಬಿಯಲ್ಲಿ ಕಳೆದ 43 ವರ್ಷಗಳಿಂದ ಕನ್ನಡ ಭಾಷೆ, ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಅಬುಧಾಬಿ ಕರ್ನಾಟಕ ಸಂಘ 44 ನೇ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ನವಂಬರ್ ಐದರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಆಚರಿಸಿತು. ಅಬುಧಾಬಿಯ ಭಾರತೀಯ ರಾಯಭಾರಿಯ ಉಪ ಮುಖ್ಯಸ್ಥ ಗೌರವಯುತ ಎ. ಅಮರನಾಥ ಮತ್ತು ಇಂಡಿಯನ್ ಸೋಶಿಯಲ್ ಸೆಂಟರ್ ನ ಮುಖ್ಯ ಕಾರ್ಯದರ್ಶಿ ಪ್ರದೀಪ್ ಕುಮಾರ್, ಬಾಲಜಿ ರಾಮಸ್ವಾಮಿ ಕೌನ್ಸಿಲರ್ ಇಂಡಿಯನ್ ಅಂಬಾಸಿ ಅಬುಧಾಬಿಯವರು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾವಗೀತೆ, ಹಾಸ್ಯ ಕವಿ ಪುಷ್ಕಲ್ ಕುಮಾರ್ ತೋನ್ಸೆ ದಂಪತಿಗಳು, ಕರ್ನಾಟಕ ಸಂಘ ದುಬೈಯ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿ, ಕನ್ನಡಿಗರು ದುಬೈಯ ಸಾಧನ್ ದಾಸ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಅನಂತ ರಾವ್, ಶ್ರೀಮತಿ ನಮಿತ ಅನಂತ ರಾವ್ ಸಂಘದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು…
ವಿದ್ಯಾಗಿರಿ( ಮೂಡುಬಿದಿರೆ): ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಆಹಾರ ವಿಜ್ಞಾನ ಮತ್ತು ಪೆÇೀಷಣಾ ವಿಭಾಗವು ಆಮ್‍ವೇ ಗ್ಲೋಬಲ್ ಸರ್ವೀಸ್ ಇಂಡಿಯಾದ ಜೊತೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿದೆ. ಆಮ್‍ವೇ ಕಂಪನಿಯ ವಿವಿಧ ಸಂಶೋಧನಾ ಕ್ರಮಗಳನ್ನು ಬೆಂಬಲಿಸಲು ಹಾಗೂ ಪೌಷ್ಟಿಕಾಂಶ, ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಯ ವೈಜ್ಞಾನಿಕ ಸಂಶೋಧನೆ ಕುರಿತು ವಿಶ್ವಾಸ ಹೆಚ್ಚಿಸುವ ಉದ್ದೇಶವಾಗಿದೆ. ಆಮ್‍ವೇ ಕಂಪನಿಯ ನಿರ್ದೇಶಕ ಡಾ. ಶ್ಯಾಮ ರಾಮಕೃಷ್ಣನ್ ಹಾಗೂ ಹಿರಿಯ ವ್ಯವಸ್ಥಾಪಕ ಡಾ. ಪಳನಿಯಮ್ಮನ್ ದೊರೈರಾಜ್ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ವಿಭಾಗದ ಮುಖ್ಯಸ್ಥೆ ಡಾ.ಅರ್ಚನ ಪ್ರಭಾತ್ ಇದ್ದರು.
ಪ್ರಕೃತಿಯ ಮಡಿಲಲ್ಲಿ ಒಂದಾಗಿ ಬದುಕುತ್ತಿದ್ದ ಮಾನವ ತನ್ನ ದಿನಚರಿಗಳನ್ನು ಅನೇಕ ಆಚರಣೆಗಳ ಮೂಲಕ ಪ್ರಾರಂಭಿಸುತ್ತಿದ್ದ. ನಾಗರಿಕ ಪ್ರಪಂಚದಲ್ಲಿ ಆಧುನಿಕತೆಯ ಪ್ರಭಾವ ಹೆಚ್ಚುತ್ತಾ ಹಿರಿಯರು ಅನುಸರಿಸಿಕೊಂಡು ಬಂದ ರೀತಿ ನೀತಿಯ ಕೆಲವು ಮೌಲ್ಯ ಮಾಯವಾಗಿ ಕೆಲವು ಸಂಪ್ರದಾಯ ಕಣ್ಮರೆಯಾಗುತ್ತಿರುವ ಈ ಕಾಲ ಘಟ್ಟದಲ್ಲಿ ಕುಂದಾಪುರದ ಆಸು ಪಾಸಿನ ಊರುಗಳ ಮನೆ ಮನೆಯಲ್ಲಿ ಜಕಣಿ ಅಂದರೆ ಕುಟುಂಬದ ಸದಸ್ಯರು ತೀರಿಕೊಂಡವರ ಆತ್ಮಗಳಿಗೆ ಊಣ ಬಡಿಸುವ ಕೌಟುಂಬಿಕ ಬಾಂಧವ್ಯದ ಸಂಕೇತ ಜಕಣಿ ಆಚರಣೆ. ಇಂದಿಗೂ ಈ ಆಚರಣೆ ಜೀವಂತವಾಗಿದ್ದು, ಜನಮಾನಸದಲ್ಲಿ ಉಳಿದಕೊಂಡಿದೆ. ವೃಷಭ ಸಂಕ್ರಮಣದಿಂದ ಮಿಥುನ ಸಂಕ್ರಮಣದವರೆಗೆ ಭಯ – ಭಕ್ತಿಯಿಂದ ನಂಬಿಕೆಯೊಂದಿಗೆ ಪ್ರತಿವರ್ಷ ಬ್ಯಾಸಿ ತಿಂಗಳಲ್ಲಿ ಆಚರಿಸುವ ಜಕಣಿ, ಅಳಿಯ ಸಂತಾನ ವ್ಯವಸ್ಥೆಯ ಮಾತೃಪ್ರಧಾನ ಸಮಾಜದಲ್ಲಿ ಮುಖ್ಯವಾಗಿ ಆಚರಣೆಯಲ್ಲಿದೆ. ಆಚರಣೆಯ ಕ್ರಮ- ಜಕಣಿಯ ದಿನ ಸಂಜೆ ಮನೆಯ ಗಂಡಸರು, ಹಾಗೂ ಗಂಡು ಮಕ್ಕಳು ಮನೆಯಿಂದ ಸ್ವಲ್ಪ ದೂರ ನಿರ್ದಿಷ್ಟ ಕಾಡು ಪ್ರದೇಶದಲ್ಲಿ ಇರುವ ಅವರವರ ಕುಟುಂಬದ ಜಕಣಿಕಲ್ಲು, ಭೂತದ ಕಲ್ಲು ಅಥವಾ ಗಡಿಕಲ್ಲುಗಳಿಗೆ ಮನೆಯಿಂದ…
ಖ್ಯಾತ ನೃತ್ಯ ಗುರು ವಿದ್ವಾನ್ ದಿ. ಕುದ್ಕಾಡಿ ವಿಶ್ವನಾಥ ರೈ ಅವರ ಕಿರಿಯ ಪುತ್ರಿ ಪಡುವನ್ನೂರು ಗ್ರಾಮದ ಕುದ್ಕಾಡಿ ನಿವಾಸಿ, ಬಹರೈನ್ ನಲ್ಲಿ ನೆಲೆಸಿದ್ದ ನೃತ್ಯ ವಿದುಷಿ ಆಸ್ತಿಕಾ ಸುನಿಲ್ ಶೆಟ್ಟಿ (46) ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತಿ, ಪುತ್ರನನ್ನು ಅಗಲಿದ್ದಾರೆ. ಕಲಾವಿದರ ಕುಟುಂಬದಲ್ಲಿ ಜನಿಸಿದ ಆಸ್ತಿಕಾ ರೈ ಪದಡ್ಕ ವಿಶ್ವಕಲಾನಿಕೇತನದಲ್ಲಿ ಕಲಿತು ನೃತ್ಯ, ಯಕ್ಷಗಾನದಲ್ಲಿ ಪಳಗಿದ್ದರು. ಭರತನಾಟ್ಯ ಕಲಾವಿದೆಯಾಗಿ, ಯಕ್ಷಗಾನ ಕಲಾವಿದೆಯಾಗಿ ಬಹರೈನ್ ದೇಶದಲ್ಲಿ ಸುದೀರ್ಘ ಕಾಲ ಕಲಾಸರಸ್ವತಿಯನ್ನು ಆರಾಧಿಸುತ್ತಾ ಬಂದಿದ್ದರು. ಬಹರೈನ್ ಯಕ್ಷಗಾನ ರಂಗದಲ್ಲಿ ಅವರು ಸುಧನ್ವ ಮೋಕ್ಷದ ಕೃಷ್ಣನಾಗಿ, ಕೋಟಿ ಚೆನ್ನಯದ ಕಿನ್ನಿದಾರುವಾಗಿ, ಶಾಂಭವಿ ವಿಲಾಸದ ಶಾಂಭವಿಯಾಗಿ ಮೊದಲಾದಿ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದರು. ಪುತ್ತೂರಿನಲ್ಲಿ ಇರುವಾಗ ತಂದೆ ವಿದ್ವಾನ್ ವಿಶ್ವನಾಥ ರೈ ಹಾಗೂ ತಾಯಿ ವಿದುಷಿ ನಯನಾ ವಿ. ರೈ ಅವರೊಂದಿಗೆ ನೃತ್ಯ ರಂಗದಲ್ಲಿ ಗುರುತಿಸಿಕೊಂಡಿದ್ದರು.
ವಸಂತ ಋತುವಿನ ಆಗಮನವನ್ನು ಸಂಭ್ರಮೋಲ್ಲಾಸದ ಸಂಕೇತವಾಗಿ ಸ್ವಾಗತಿಸುತ್ತಾ ವಿಶಿಷ್ಟ ರೀತಿಯಲ್ಲಿ ಕುಡುಬಿ ಜನಾಂಗ ಆಚರಿಸುವ ವಾರ್ಷಿಕ ವೈಶಿಷ್ಟ್ಯ ಪೂರ್ಣವಾದ ಹೋಳಿ ಉತ್ಸವ, ಹೋಳಿ ಹಬ್ಬ ಅಥವಾ ಹೋಳಿ ಕುಣಿತ. ಇಂದಿಗೂ ಸಂಪ್ರದಾಯ ಬದ್ದವಾಗಿ ಮೇಳೈಸುತ್ತಾ ತಮ್ಮ ಮೂಲ ಸಂಸ್ಕೃತಿ ಹಾಗೂ ಏಕತೆಯನ್ನು ಗಟ್ಟಿಗೊಳಿಸುವ ಭಾವೈಕ್ಯದ ಹೋಳಿ ಆಚರಣೆಯನ್ನು ಚಾಚು ತಪ್ಪದೆ ಭಯ ಭಕ್ತಿಯಿಂದ ಕುಡುಬಿ ಸಮಾಜದ ಜನರು ಆಚರಿಸಿಕೊಂಡು ಬರುತ್ತಿದ್ದಾರೆ. ಗೋವಾದಿಂದ ವಲಸೆ ಬಂದು ಕರಾವಳಿ ಕರ್ನಾಟಕದ ಉಡುಪಿ, ಕುಂದಾಪುರ, ಕಾರ್ಕಳ, ಮಂದಾರ್ತಿ, ಶಿರಿಯಾರ, ಹಿಲಿಯಾಣ, ಗೋಳಿಅಂಗಡಿ, ಹಾಲಾಡಿ, ಹೆಬ್ರಿ, ಮುದ್ರಾಡಿ ಹಾಗೂ ಆಸುಪಾಸಿನ ಊರುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಡುಬಿಯವರು ನೆಲೆಸಿದ್ದಾರೆ. ಐದು ದಿನ ಸಂಭ್ರಮದಿಂದ ಹೋಳಿ ಹಬ್ಬದ ಆಚರಣೆ ನಡೆಯಲಿದ್ದು ಕುಡುಬಿ ಸಮುದಾಯದವರು ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಂದ ಬಿಡುವು ಮಾಡಿಕೊಂಡು ಹೋಳಿ ಕುಣಿತದಲ್ಲಿ ಪಾಲ್ಗೋಳ್ಳಲು ಸಿದ್ದತೆ ನಡೆಸುತ್ತಾರೆ. ಈ ಹಬ್ಬ ಪಾಲ್ಗುಣ ಮಾಸದ ಏಕಾದಶಿಯಿಂದ ಹುಣ್ಣುಮೆಯವರೆಗೆ ಇರುತ್ತದೆ. ಕುಡುಬಿಯವರಲ್ಲಿ ಕೂಡುಕಟ್ಟು ಅಥವಾ ಕೂಡಳಿಕೆ ಎಂಬ ಸಂಘಟನೆಯಿದ್ದು. ಕೂಡುಕಟ್ಟಿಗೆ…
ಪರೋಪಕಾರ ಬಂಟ ಸಮುದಾಯದ ದೊಡ್ಡ ಗುಣ, ಗುರುಪೀಠವಿಲ್ಲದೇ ಬಂಟ ಸಮುದಾಯವು ಎಲ್ಲಾ ಕ್ಷೇತ್ರಗಳಲ್ಲೂ ಇಂದು ಪ್ರಗತಿ ಸಾಧಿಸಿದೆ, ಸಮುದಾಯದ ಹಿರಿಯರು ಗುರುಪೀಠಕ್ಕೆ ಹೋರಾಡದೆ ಬಂಟರ ಸಂಘ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿರುವುದರಿಂದಲೇ ಇಂದು ಸಮುದಾಯದ ಅಭಿವೃದ್ಧಿ ಸಾಧ್ಯವಾಗಿರುವುದು, ಹಾಗಾಗಿ ಈ ಸಮುದಾಯವು ಗುರುಪೀಠದ ಗೋಜಿಗೆ ಹೋಗದೆ ಹಿರಿಯರು ತೋರಿದ ಹಾದಿಯಲ್ಲೇ ಮುಂದೆ ಸಾಗಬೇಕು, ದೇವರನ್ನೇ ಗುರುವನ್ನಾಗಿ ಕಾಣಬೇಕು, ಈ ನಿಟ್ಟಿನಲ್ಲಿ ಸಮಾಜಕ್ಕೆ ಅರಿವು ಮೂಡಿಸುವ ಕೆಲಸಗಳಾಗಬೇಕೆಂದು ಕೇಮಾರು ಸಾಂದೀಪನೀ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿಯವರು ಹೇಳಿದರು. ಮೂಡುಬಿದಿರೆ ಯುವ ಬಂಟರ ಸಂಘದ ವತಿಯಿಂದ ನಡೆದ ಬಂಟರ ಸಮ್ಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಯವರು ಸಂಸ್ಕøತಿ, ಶಿಕ್ಷಣ, ಉದ್ಯಮ, ಧಾರ್ಮಿಕ, ಸಾಮಾಜಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಬಂಟ ಸಮುದಾಯದ ಕೊಡುಗೆ ದೊಡ್ಡದು, ಇದು ಬಂಟ ಸಮುದಾಯದ ಹೆಮ್ಮೆ ಎಂದರು. ಆಧ್ಯಾತ್ಮವೆಂದರೆ ಕೇವಲ ಗುಡಿ ಗೋಪುರಗಳನ್ನು ಕಟ್ಟುವುದಲ್ಲ, ಯಾರು ಹಸಿದವರಿರುತ್ತಾರೋ, ಯಾರು ಕಷ್ಟದಲ್ಲಿರುತ್ತಾರೋ ಅಂತವರಿಗೆ ನೆರವಾಗುವುದೇ ಶ್ರೇಷ್ಠವಾದ ಆಧ್ಯಾತ್ಮವೆಂದು ಹೇಳಿದ…
ದೈಹಿಕವಾಗಿ ಆರೋಗ್ಯವಾಗಿದ್ದರೆ ಮಾನಸಿಕ ನೆಮ್ಮದಿಯೂ ಲಭಿಸುತ್ತದೆ. ಪ್ರತೀನಿತ್ಯ ವ್ಯಾಯಾಮಗಳು, ಯೋಗ ಪ್ರಾಣಾಯಾಮ, ದೈಹಿಕ ಚಟುವಟಿಕೆಗಳಿಂದ ಮಾತ್ರ ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಉಳ್ಳಾಲ ತಾಲೂಕು ಘಟಕದ ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ ಅಭಿಪ್ರಾಯಪಟ್ಟರು.ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಮತ್ತು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪಾವೂರು ಹರೇಕಳ ಇವುಗಳ ಜಂಟಿ ಆಶಯದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟ “ಕ್ರೀಡಾ ಸಂಭ್ರಮ’ವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಕಡೆಂಜ ಸೋಮಶೇಖರ್ ಚೌಟ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಬಹುಮಾನಗಳನ್ನು ಪಡೆದ ಕ್ರೀಡಾಪಟುಗಳನ್ನು, ರಾಜ್ಯ ಮಟ್ಟದ ರಾಜ್ಯ ಪುರಸ್ಕಾರ ಪ್ರಶಸ್ತಿ ಪಡೆದ ಸ್ಕೌಟ್ಸ್ ಮತ್ತು ಗೈಡ್ಸ್ ಗಳನ್ನು, ಜಿಲ್ಲಾ ಮಟ್ಟದ ಆಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು, ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರನ್ನು, ಜಿಲ್ಲಾ ಮಟ್ಟದ ತೃತೀಯ ಸೋಪಾನ ಪರೀಕ್ಷೆಯಲ್ಲಿ ಪಾಸಾಗಿರುವ ಗೈಡ್ಸ್ ವಿದ್ಯಾರ್ಥಿಗಳನ್ನು, ವಿಶ್ವ…
ರಾಷ್ಟ್ರೀಯ ಹಿರಿಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ರಾಜ್ಯದ ಕುಸ್ತಿಪಟುಗಳ ಮೈಲಿಗಲ್ಲು : ಬಿ ಗುಣರಂಜನ್ ಶೆಟ್ಟಿ
ಡಿಸೆಂಬರ್ 23 ರಂದು ಭಾರತೀಯ ಕುಸ್ತಿ ಸಂಘದ ವತಿಯಿಂದ ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್ ಶಿಫ್ ನ ಎರಡನೇ ದಿನದಲ್ಲೇ ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ರಾಜ್ಯ ಕುಸ್ತಿಪಟುಗಳು ಪಡೆದುಕೊಳ್ಳುವ ಮೂಲಕ ನಮ್ಮ ಅಸೋಸಿಯೇಷನ್ ಇತಿಹಾಸದಲ್ಲೇ ಹೊಸದೊಂದು ಮೈಲಿಗಲ್ಲು ನೆಟ್ಟಿದ್ದಾರೆ ಎಂದು ಕರ್ನಾಟಕ ಕುಸ್ತಿಸಂಘದ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಎರಡನೇ ದಿನದಂದು ನಡೆದ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯದ ಕುಸ್ತಿಪಟು ಹಳಿಯಾಳದ ಸಂದೀಪ್ ಹಳಲ್ದೆಕರ್‌ರವರು ರಾಷ್ಟ್ರೀಯ ನ್ಯಾಷನಲ್ ಫೈನಲ್ ಪಂದ್ಯಾವಳಿಯಲ್ಲಿ ಪಂಜಾಬಿನ ಕುಸ್ತಿಪಟುವಿನೊಂದಿಗೆ ಪರಾಭವ ಹೊಂದಿ ಎರಡನೇ ಸ್ಥಾನ ಪಡೆದುಕೊಂಡರೆ, ಮತ್ತೊರ್ವ ಕರ್ನಾಕದ ಕುಸ್ತಿಪಟು ದರಿಯಪ್ಪ 87 ಕೆಜಿ ತೂಕ ವಿಭಾಗದಲ್ಲಿ ಗ್ರೀಕೋರೋಮನ್ ಸ್ಪರ್ಧೆಯಲ್ಲಿ ಹಣಾಹಣಿ ನಡೆಸಿ ಸೆಮಿಫೈನಲ್ಸ್ ಗೆದ್ದು ಕಂಚಿನ ಪದಕ ಗಳಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ವಿಜೇತ ಸ್ಪರ್ಧಿಗಳಿಗೆ ಪದಕ ತೊಡಿಸಿ ಪ್ರಮಾಣ ಪತ್ರ ವಿತರಿಸಿದ ಕರ್ನಾಟಕ ಕುಸ್ತಿಸಂಘದ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ಅವರು ಮಾತನಾಡಿ, ಇದು ಹಲವು ವರ್ಷಗಳ ನಂತರ ರಾಷ್ಟ್ರೀಯ ಚಾಂಪಿಯನ್…
ಪುತ್ತೂರು ತಾಲೂಕು ವಿದ್ಯಾರ್ಥಿ ಬಂಟರ ಸಂಘ ನೇತೃತ್ವದಲ್ಲಿ ಉಚಿತವಾಗಿ ‘ಭವಿಷ್ಯ’ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮ ಉದ್ಘಾಟನೆ.
ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಸವಣೂರು ಸೀತಾರಾಮ ರೈ ಯವರು ವಿದ್ಯಾರ್ಥಿ ಬಂಟರ ಸಂಘದ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮ ಎಲ್ಲರಿಗೂ ಆದರ್ಶ. ಪದವಿ ಪಡೆದ ಕೂಡಲೇ ನಾವು ಎಲ್ಲವನ್ನೂ ತಿಳಿದುಕೊಂಡಿದ್ದೇವೆ ಮಾಡುವೆವು ಎಂದು ಬೀಗುವುದು ಸರಿಯಲ್ಲ. ಭಾಷೆ ಯಾವುದೇ ಇರಲಿ ನಿರರ್ಗಳವಾಗಿ, ನಿರ್ಭಯವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಸ್ಪರ್ಧಾತ್ಮಕವಾಗಿ ಪರೀಕ್ಷೆಗಳಲ್ಲಿ ಭಾಗವಹಿಸಿ ಯಶಸ್ವಿಯಾಗಬೇಕಾದರೆ ನಾವು ತರಬೇತಿ ಪಡೆಯಬೇಕು. ಅದಕ್ಕೆ ಈ ಕಾರ್ಯಕ್ರಮ ಪೂರಕ ಎಂದು ನಮ್ಮಿಂದ ಏನು ಸಹಾಯಬೇಕು ಅದನ್ನು ಮಾಡುವೆ ಎಂದು ಶುಭಹಾರೈಸಿದರು. ಬಂಟರ ಯಾನೆ ನಾಡವರ ಮಾತೃ ಸಂಃಘದ ಉಪಾಧ್ಯಕ್ಷರು ಎ ಹೇಮನಾಥ್ ಶೆಟ್ಟಿ ಯವರು ಮಾತನಾಡಿ ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷರು ಪವನ್ ಶೆಟ್ಟಿ ಕಂಬಲತ್ತಡ್ಡ ಮತ್ತು ತಂಡ ತನ್ನ ವಿದ್ಯಾರ್ಥಿ ಜೀವನದಲ್ಕಿಯೇ ಸಮಾಜದ ಇತರೇ ಯುವಕ ಯುವತಿಯರಿಗೆ ಉದ್ಯೋಗ ಭರವಸೆ ನೀಡುವ ನಿಟ್ಟಿನಲ್ಲಿ ‘ಭವಿಷ್ಯ’ ಕಾರ್ಯಕ್ರಮದ ಮೂಲಕ ಆರು ತಿಂಗಳ ಕಾಲದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಎಲ್ಲರೂ ಪ್ರಶಂಸೆ ಮಾಡ ಬೇಕಾದ…















