Author: admin
ತಾ 23.07.2023 ರಂದು ಸಾಂತಕ್ರೂಸ್ ಪೇಜಾವರ ಮಠದಲ್ಲಿ ಜರುಗಿದ ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಅವರ ಕಲಾಜಗತ್ತು ಬಳಗದ ವತಿಯಿಂದ ನಡೆದ ಆಟಿಯ ಗೌಜಿ, ಗಮ್ಮತ್ತು ಕಾರ್ಯಕ್ರಮವು ನೆರೆದವರ ಮನಸೂರೆಗೊಂಡಿತು ಎಂಬುದಕ್ಕೆ ನಿರಂತರ ಕರತಾಡನವೇ ಸಾಕ್ಷಿಯಾಗಿತ್ತು. ಕಾರ್ಯಕ್ರಮದ ಚಾಲನೆಯೇ ಒಂದು ವಿನೂತನ ಕಲ್ಪನೆಯಾಗಿತ್ತು. ನಮ್ಮ ತುಳುನಾಡಿನ ಎಲ್ಲಾ ಬಗೆಯ ತರಕಾರಿಗಳನ್ನು ವೇದಿಕೆ ಮೇಲೆ ತಂದು ಅವುಗಳನ್ನು, ಅದರಲ್ಲೂ ದೊಡ್ಡ ಹಲಸಿನ ಹಣ್ಣನ್ನು ಕೊಯ್ದು ಕಾರ್ಯಕ್ರಮ ಶುರು ಮಾಡಿದ್ದು ಒಂದು ವಿನೂತನ ಪ್ರಯೋಗವಾಗಿತ್ತು. ಬಹುಷಃ ಇಂತಹ ಆಲೋಚನೆಗಳು ವಿಜಯ್ ಕುಮಾರ್ ಶೆಟ್ಟಿಯಂತವರಿಗೆ ಮಾತ್ರ ಮಾಡಲು ಸಾಧ್ಯ. ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ, ಸುವಾಸನೆ ಭರಿತ, ದೇಹಕ್ಕೆ ಅಗತ್ಯವಾದ ಎಲ್ಲಾ ಬಗೆಯ ಶಕ್ತಿಗಳನ್ನು ನೀಡುವ ತರಕಾರಿಗಳನ್ನು ಒಟ್ಟು ಮಾಡಿ ಅದನ್ನು ಅಲ್ಲಿಯೇ ಶುಚಿ ಮಾಡಿ, ಅಡುಗೆ ತಯಾರಿಸಿ ಅದನ್ನು ಅಥಿತಿ, ಅಭ್ಯಗತರಿಗೆ ಉಣ ಬಡಿಸಿದ ಪರಿ ಸಾಮಾನ್ಯರ ಕಲ್ಪನೆಗೆ ಮೀರಿದ್ದಾಗಿತ್ತು. ಬಿಡದೆ ಸುರಿಯುತ್ತಿದ್ದ ಮಳೆಯ ನಡುವೆಯೂ ಈ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ ಕಲಾಜಗತ್ತು ಹಾಗೂ…
ಮಳೆಗಾಲ ಬಂದಾಗ ಮನಸ್ಸುಗಳು ಚೈತನ್ಯದಿಂದ ನಲಿಯುತ್ತವೆ. ಮಳೆಗಾಲ ಬಂದರೆ ಆರೋಗ್ಯ ಸಮಸ್ಯೆಗಳೂ ಅದರೊಂದಿಗೆ ಆಗಮನಿಸುತ್ತವೆ. ಸ್ವಲ್ಪ ಹೊತ್ತು ಮಳೆಯಲ್ಲಿದ್ದರೆ ಸಾಕು ಥಂಡಿ ಆವರಿಸಿ ಶೀತವಾಗಿ ಬಿಡುತ್ತದೆ. ಶೀತವನ್ನು ಕೆಮ್ಮು, ಜ್ವರ ಹಿಂಬಾಲಿಸುತ್ತವೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಈ ಸಮಸ್ಯೆಗಳು ಜನರ ಜೀವಹಿಂಡಿ ಬಿಡುತ್ತವೆ. ಇದರೊಂದಿಗೆ ವೈರಲ್ ಹಾಗೂ ಬ್ಯಾಕ್ಟೀರಿಯಾದ ಸೋಂಕುಗಳು ಹೆಚ್ಚಾಗುತ್ತವೆ. ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಬಹು ಬೇಗನೇ ಕಡಿಮೆಗೊಂಡು ಶೀತ, ಜ್ವರದಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ಮಳೆಗಾಲ ಬಂದಾಗ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮಾಡಿದರೆ ಶೀತದಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಬರದಂತೆ ತಡೆಗಟ್ಟಬಹುದು. ಅದರಲ್ಲೂ ನೈಸರ್ಗಿಕ ದೊರಕುವ ಮನೆ ಮದ್ದುಗಳನ್ನು ಸಿದ್ದಪಡಿಸಿಕೊಂಡ ಸೇವಿಸಿದ್ದೇ ಆದಲ್ಲಿ ಈ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಆದರೆ ಇಂದಿನ ಮನೆಗಳಲ್ಲಿ ಹಿರಿಯರಿಲ್ಲದ ಕಾರಣ ಶೀತದಂತಹ ಸಮಸ್ಯೆಗಳಿಗೆ ಯಾವ ಮನೆ ಮದ್ದುಗಳು ಒಳ್ಳೆಯದು ಎಂದು ತಿಳಿದುಕೊಳ್ಳುವುದು ಕಷ್ಟವಾಗಬಹುದು. ಹಿಂದೆ ಇಂತಹ ಸಾಮಾನ್ಯ ಕಾಯಿಲೆಗಳಿಗೆ ಯಾರೂ ಕೂಡ ವೈದ್ಯರ ಬಳಿ ಓಡುತ್ತಿರಲಿಲ್ಲ. ಬದಲಾಗಿ ಮನೆಯ ಅಡುಗೆ…
ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜೂನ್ 18 ರಂದು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಗೆ ಅಭಿನಂದನಾ ಸಮಾರಂಭ ಮತ್ತು ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದ್ದು ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ಜೂ. 8 ರಂದು ಜರಗಿತು. ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ‘ಸಹಕಾರ ರತ್ನ ‘ ಸವಣೂರು ಕೆ. ಸೀತಾರಾಮ ರೈ ಯವರು ಆಮಂತ್ರಣ ಪತ್ರವನ್ನು ಅನಾವರಣಗೊಳಿಸಿದ್ದು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆ ಗುತ್ತು, ಸಹಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಉಪಾಧ್ಯಕ್ಷ ರೋಶನ್ ರೈ ಬನ್ನೂರು, ಮಾತೃ ಸಂಘದ ನೀರ್ದೇಶಕರುಗಳಾದ…
“ನಂಬಿಕೆ ವಿಶ್ವಾಸ ಬಲ ನಮ್ಮಲ್ಲಿದ್ದರೆ ಬದುಕು ಚೆನ್ನಾಗಿ ಸಾಗುತ್ತದೆ. ನಂಬಿಕೆ ಬೇಕು ಆದರೆ ಮೂಢನಂಬಿಕೆ ಬೇಡ. ತುಳುನಾಡಿನ ಮಣ್ಣಿನಲ್ಲಿ ನಾಗದೇವರ ಇರುವಿಕೆ ಬಗ್ಗೆ ನಂಬಿಕೆ ಮಣ್ಣಲ್ಲಿ ಬೆರೆತುಹೋಗಿದ್ದು ಬಾಳ ತೊತ್ತಾಡಿಯಂತಹ ಧಾರ್ಮಿಕ ಕೇಂದ್ರಗಳು ಪುನರುಜ್ಜೀವನಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ” ಎಂದು ಒಡಿಯೂರು ಶ್ರೀ ದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಬಾಳ ತೊತ್ತಾಡಿ ನಾಗಬ್ರಹ್ಮ ಸ್ಥಾನದಲ್ಲಿ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದರು. “ಕಡಲಿಗೆ ಕಸ ತ್ಯಾಜ್ಯ ಎಸೆದರೆ ವಾಪಾಸ್ ಬರುತ್ತದೆ, ಅದೇ ಚಿನ್ನ ಎಸೆದರೆ ಬರುವುದಿಲ್ಲ ಯಾಕೆಂದರೆ ಒಳ್ಳೆಯದನ್ನು ಕಡಲು ಸ್ವೀಕರಿಸುತ್ತದೆ. ನಮ್ಮ ಜೀವನ ಕೂಡ ಹಾಗೆ ನಮಗೆ ಬೇಕಾದ್ದನ್ನು ಮಾತ್ರ ಸ್ವೀಕರಿಸಿ ಬೇಡವಾದ್ದನ್ನು ತಿರಸ್ಕರಿಸಬೇಕು” ಎಂದರು. ವೇದಿಕೆಯಲ್ಲಿ ಮುಂಬೈ ಸಮಿತಿ ಅಧ್ಯಕ್ಷರು ಕುಶಾಲ್ ಭಂಡಾರಿ ಐಕಳ ಬಾವ, ಬ್ರಹ್ಮಶ್ರೀ ಪಾಂಗಾಳ ಅನಂತ ಪದ್ಮನಾಭ ತಂತ್ರಿಗಳು, ಉದ್ಯಮಿ ಜೆ.ಡಿ ವೀರಪ್ಪ, ಡಾ| ರೋಹಿತ್, ರವೀಂದ್ರನಾಥ ಜಿ. ಶೆಟ್ಟಿ, ಕಳತ್ತೂರು, ಮುಂಬೈ ಸಮಿತಿ ಗೌರವಾಧ್ಯಕ್ಷ ಸುಬ್ರಹ್ಮಣ್ಯ ರಾವ್…
ಘಮಘಮ ಪರಿಮಳ ಬೀರುವ ಗುಲ್ವಾಡಿ ಸಣ್ಣಕ್ಕಿಯ ಅನ್ನವನ್ನು ಯಾರೆಲ್ಲಾ ಉಂಡಿದ್ದೀರಿ? ಊಟ ಮಾಡಿದವರಿಗಷ್ಟೇ ಗೊತ್ತು ಅದರ ರುಚಿ ಹಾಗೂ ಸುವಾಸನೆ. ಕರಾವಳಿಯ ನೆಲದಲ್ಲಿ ಅತ್ಯಂತ ವಿಶಿಷ್ಟವಾಗಿ ಬೆಳೆಯುತ್ತಿದ್ದ ಸುವಾಸನೆಯೇ ಪ್ರಧಾನವಾದ ಗುಲ್ವಾಡಿ ಸಣ್ಣಕ್ಕಿ ಭತ್ತದ ಬೇಸಾಯ ಈಗ ಇತಿಹಾಸದ ಪುಟ ಸೇರಿದೆ. ಕಲೆ, ಸಾಹಿತ್ಯ, ಕೃಷಿ ಸಂಸ್ಕೃತಿಯ ತವರೂರೆಂದೇ ಖ್ಯಾತಿ ಪಡೆದ ಗುಲ್ವಾಡಿ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದೆ. ಕರ್ನಾಟಕಕ್ಕೆ ಪ್ರಸಿದ್ಧಿ ತಂದುಕೊಟ್ಟ ಮೊಟ್ಟಮೊದಲ ಪ್ರತಿಷ್ಠಿತ ಸಾಮಾಜಿಕ ಕಾದಂಬರಿ “ಇಂದಿರಾ ಬಾಯಿ”ಯ ಕಾದಂಬರಿಕರ್ತ ಗುಲ್ವಾಡಿ ವೆಂಕಟರಾಯರು, ತರಂಗ ಸಂಪಾದಕ ಹಾಗೂ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿಯವರ ಕೌಟುಂಬಿಕ ನೆಲೆಯೂ ಆಗಿದೆ. ಈ ಗುಲ್ವಾಡಿಯ ದಾಸರಬೆಟ್ಟು ಎಂಬ ಪ್ರದೇಶದ ಮಣ್ಣಿನಲ್ಲಿ ಮಾತ್ರ ಹಿಂದೆ ಅತ್ಯಂತ ಪರಿಮಳ ಭರಿತ ಈ ಸಣ್ಣಕ್ಕಿಯ ಭತ್ತ ಸೊಗಸಾಗಿ ಬೆಳೆಯುತ್ತಿತ್ತು. ಅವರ ಗದ್ದೆಬಯಲಿಗೆ ತಾಗಿಕೊಂಡಂತೆಯೇ ಇದ್ದಂಥ ನಮ್ಮ ಕರ್ಕಿ ಬೈಲಿನಲ್ಲೂ ಕೂಡಾ ನಮ್ಮ ತಂದೆ ಬಿ. ರಾಮಣ್ಣ ಹೆಗ್ಡೆಯವರು ಸುಮಾರು ವರ್ಷಗಳ ಕಾಲ ಗುಲ್ವಾಡಿ ಸಣ್ಣಕ್ಕಿ…
ದೈವ, ದೇವರ ಬಗ್ಗೆ ನಂಬಿಕೆ ಇದ್ದರೆ ಧರ್ಮ ಉಳಿಯುತ್ತದೆ. ಬದುಕು ಉತ್ತಮವಾಗಿ ನಡೆಯಲು ದೈವ, ದೇವರ ಬಗ್ಗೆ ನಂಬಿಕೆ ಮುಖ್ಯ ಎಂದು ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರಕ್ಕೆ 150 ವರ್ಷ ಪ್ರಯುಕ್ತ ಮಾ. 7ರ ವರೆಗೆ ನಡೆಯಲಿರುವ “ಕಂಕನಾಡಿ ಗರಡಿ 150-ನಮ್ಮೂರ ಸಂಭ್ರಮ’ ಸೋಮವಾರದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ತನ್ನ ಬದುಕಿನ ಉದ್ಧಾರದಂತೆಯೇ ಇನ್ನೊಬ್ಬರ ಬದುಕಿನ ಬಗ್ಗೆಯೂ ಕಾಳಜಿ ಹೊಂದುವುದು ಧರ್ಮ. ನಮ್ಮ ಬದುಕಿನ ನಿಯಂತ್ರಣಕ್ಕೆ ಧರ್ಮದ ಅಗತ್ಯವಿದೆ. ಧರ್ಮದ ಹಿಂದೆ ದೈವ, ದೇವರ ಬಗ್ಗೆ ನಂಬಿಕೆ ಇರಬೇಕು ಎಂದರು. ದೀಪ ಪ್ರಜ್ವಲನೆಗೈದ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ. ಶೆಟ್ಟಿ ಮಾತನಾಡಿ, ಕಂಕನಾಡ ಗರಡಿ ಕಾರಣಿಕ, ಪ್ರಸಿದ್ಧ ಕ್ಷೇತ್ರವಾಗಿದೆ. 150 ವರ್ಷಗಳ ಸಮಾರಂಭ ವಿಜೃಂಭಣೆಯಿಂದ ನಡೆಯುತ್ತಿದೆ ಎಂದರು. ಬಹುಭಾಷಾ ಚಲನಚಿತ್ರ ನಟ ಸುಮನ್ ತಲ್ವಾರ್ ಮಾತನಾಡಿ, ದೇವರು, ದೈವದ ಶಕ್ತಿ ಇಲ್ಲದೆ ಸಾಧನೆ ಸಾಧ್ಯವಿಲ್ಲ.…
ಸಶಸ್ತ್ರ ಸೀಮಾಬಲ್‌ನಲ್ಲಿ ಭೋಪಾಲ್‌ನಲ್ಲಿ ಸೇವಾ ನಿರತರಾಗಿದ್ದ ಮಂಗಳೂರು ಶಕ್ತಿನಗರದ ನಿವಾಸಿ ಹವಾಲ್ದಾರ್ ಮುರಳೀಧರ್ ರೈ (37) ಅವರು ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರವಿವಾರ ಭೋಪಾಲ್‌ನಲ್ಲಿ ಮಲಗಿದಲ್ಲೇ ಅವರಿಗೆ ಹೃದಯಾಘಾತವಾಗಿದ್ದು, ಸೋಮವಾರ ಬೆಳಗ್ಗೆ ಜತೆಗಿದ್ದವರು ಕರೆದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ವೈದ್ಯರು ಪರೀಕ್ಷಿಸಿದಾಗ ಹೃದಯಾಘಾತದಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಊರಿಗೆ ಬರುವವರಿದ್ದರು ಮುರಳೀಧರ್ ರೈ ಅವರು 2007ರಲ್ಲಿ ಕಾನ್‌ಸ್ಟೆಬಲ್ ಆಗಿ ಸಶಸ್ತ್ರ ಸೀಮಾ ಬಲ್‌ಗೆ ಸೇರಿದ್ದರು. ರವಿವಾರ ರಾತ್ರಿ ವೀಡಿಯೋ ಕಾಲ್ ಮೂಲಕ ಪತ್ನಿ ಜತೆ ಮಾತನಾಡಿದ್ದರು. ಫೆ. 5ರಂದು ನಡೆಯಲಿದ್ದ ತಾಯಿಯ ನಿಧನದ ಮೊದಲ ವರ್ಷದ ಕಾರ್ಯಕ್ರಮಕ್ಕಾಗಿ ಎರಡು ವಾರದ ರಜೆಯಲ್ಲಿ ಮಂಗಳವಾರ ಹೊರಟು ಬುಧವಾರ ಊರಿಗೆ ಬರುವವರಿದ್ದರು. ಅವರು ಪತ್ನಿ ಹಾಗೂ ಏಳು ತಿಂಗಳ ಮಗುವನ್ನು ಅಗಲಿದ್ದಾರೆ. ಅಂತ್ಯಸಂಸ್ಕಾರ ಭೋಪಾಲ್‌ನಿಂದ ವಿಮಾನದ ಮೂಲಕ ಮುರಳೀಧರ್ ಅವರ ಮೃತದೇಹವನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಯಿತು. ಡಿಸಿ ರವಿ ಕುಮಾರ್ ಎಂ.ಆರ್., ಜಿ.ಪಂ. ಸಿಇಒ ಡಾ| ಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್…
ಸುರತ್ಕಲ್ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಸಂಸ್ಥೆ ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ವಿಜಯ್ ಪಾಲಿಕ್ಲಿನಿಕ್ ಆ್ಯಂಡ್ ಡಯಾಗ್ನೋಸ್ಟಿಕ್ ಸೆಂಟರ್ ಮತ್ತು ವಿಜಯ್ ಮೆಡಿಕಲ್ಸ್ ಸುರತ್ಕಲ್ ಇವರ ಸಹಯೋಗದಲ್ಲಿ ಮೇ 1 ರಂದು ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರ ವರೆಗೆ ಸುರತ್ಕಲ್ ಬಂಟರ ಭವನದಲ್ಲಿ ಖ್ಯಾತ 17 ಮಂದಿ ವೈದ್ಯರುಗಳ ನೇತೃತ್ವದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ. ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ ವೈ ಭರತ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ ವಿಜಯ್ ಎಂ ಬುದ್ನಾರ್, ಡಾ ರಾಹುಲ್ ರಾವ್ ಭಾಗವಹಿಸಲಿದ್ದಾರೆ. ವಿಜಯ ಮೆಡಿಕಲ್ಸ್ ನ ಮಾಲಕರಾದ ದಯಾನಂದ ಡಿ ಶೆಟ್ಟಿ, ವೈದ್ಯಕೀಯ ಸಮಿತಿಯ ಸಂಚಾಲಕ ಪ್ರತಾಪ್ ಶೆಟ್ಟಿ ಉಪಸ್ಥಿತರಿರುವರು. ರಕ್ತದೊತ್ತಡ, ಮಧುಮೇಹ, ಸ್ತ್ರೀರೋಗ, ಚರ್ಮರೋಗ, ಎಲುಬು, ಜಠರ,…
ಮುಂಬಯಿಯಲ್ಲಿ ಕೇಟರಿಂಗ್ ಉದ್ಯಮಿಯಾಗಿದ್ದುಕೊಂಡು ಸಾಹಿತ್ಯದ ಕಂಪನ್ನು ಮೈಗೂಡಿಸಿ ಸಮಾಜಸೇವೆ ಮಾಡುತ್ತಿರುವ ಲೇಖಕ, ಸಂಘಟಕ ವಿಶ್ವನಾಥ್ ಶೆಟ್ಟಿ ಪೇತ್ರಿ ಹಾಗೂ ತಂದೆಯ ದಾರಿಯಲ್ಲೇ ಸಾಗುತ್ತಿದ್ದು, ಎಳವೆಯಲ್ಲಿಯೇ ಸಾಹಿತ್ಯದ ಕಂಪನ್ನು ಹೊರಸೂಸುತ್ತಿರುವ ಮಗಳು ಜೀವಿಕಾ ವಿಶ್ವನಾಥ್ ಶೆಟ್ಟಿ ಅವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಅಭಿನಂದನೆಗಳು.
ಸಮಾಜ ಬಾಂಧವ ಬಡವರ ಆಶಾಕಿರಣ ಆದರಣೀಯ ಶ್ರೀ ಕೆ.ಪ್ರಕಾಶ್ ಶೆಟ್ಟಿ ಅವರು ಡಿಸೆಂಬರ್ 25ರಂದು ಅಪರಾಹ್ನ 3 ಘಂಟೆಗೆ ಮಂಗಳೂರು ಗೋಲ್ಡ್ ಪಿಂಚ್ ಸಿಟಿ ಇಲ್ಲಿ ತನ್ನ ಧರ್ಮಪತ್ನಿಯ ಹೆಸರಿನಲ್ಲಿ ಆರಂಭಿಸಿದ ಬಡಕುಟುಂಬಗಳಿಗೆ ಆರ್ಥಿಕ ಸಹಾಯ ನೀಡುವ ಉದಾತ್ತ ಮಾನವೀಯ ಕಾರ್ಯಕ್ರಮವೊಂದನ್ನು ಆಯೋಜಿಸಲಿದ್ದು ಪ್ರತಿ ವರ್ಷದಂತೆ ಈ ಸಲವೂ ಸಾವಿರ ಕುಟುಂಬಗಳಿಗೂ ಹೆಚ್ಚು ಫಲಾನುಭವಿಗಳು ಈ ಅರ್ಥ ಪೂರ್ಣ ಕಾರ್ಯಕ್ರಮದ ಲಾಭ ಪಡೆಯಲಿದ್ದಾರೆ. ಈ ಸಮಾಜಮುಖಿ ಕಾರ್ಯಕ್ರಮ ಸಂಭ್ರಮದಲ್ಲಿ ಹೆಸರಾಂತ ಚಿತ್ರ ನಟ ನಿರ್ದೇಶಕ ಹಾಗೂ ಜನಪರ ಚಿಂತನೆಯ ಕಾರ್ಯಕ್ರಮ ಸಂಯೋಜಕ ಶ್ರೀ ರಮೇಶ್ ಅರವಿಂದ್ ಅಧ್ಯಕ್ಷತೆ ವಹಿಸಿ ಕೊಳ್ಳಲಿದ್ದು ಉಳಿದಂತೆ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಮೋಹನ್ ಎಂ ಆಳ್ವ ಕಾಪು ಕ್ಷೇತ್ರದ ಜನಾನುರಾಗಿ ಶಾಸಕ ಶ್ರೀ ಸುರೇಶ್ ಶೆಟ್ಟಿ ಗುರ್ಮೆ ಹಾಗೂ ಎಂ.ಆರ್.ಜಿ ಗ್ರೂಪಿನ ಆಡಳಿತ ನಿರ್ದೇಶಕ ಶ್ರೀ ಗೌರವ್ ಪಿ ಶೆಟ್ಟಿ ಇವರು ಆಹ್ವಾನಿತ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವರ್ಷಂಪ್ರತಿ ನಡೆಯುವ ಈ ಸೇವಾಯಜ್ಞದಲ್ಲಿ ಪ್ರಕಾಶ್ ಶೆಟ್ಟಿ…














