Author: admin
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜೊತೆ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ ಅವರಿಂದ ತೆರವಾದ ಸ್ಥಾನಕ್ಕೆ ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಮೂಲ್ಕಿಯ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಡಳಿತ ಕಛೇರಿಯಲ್ಲಿ ನಡೆದ ಒಕ್ಕೂಟದ ಆಡಳಿತ ಮಂಡಳಿಯ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಚಂದ್ರಹಾಸ ಶೆಟ್ಟಿ ಅವರು ಬಂಟ್ವಾಳ ಬಂಟರ ಸಂಘದ ಅಧ್ಯಕ್ಷರಾಗಿರುತ್ತಾರೆ. ಸಭೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ, ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು.
ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿ ಪೋಷಕ-ಶಿಕ್ಷಕರ ಸಭೆ ವೃತ್ತಿ ಬದುಕಿನಲ್ಲಿ ಸ್ವಚ್ಛ ಮನಸ್ಸು ಮುಖ್ಯ:ಕುರಿಯನ್
ವಿದ್ಯಾಗಿರಿ: ‘ಮಾಧ್ಯಮದಲ್ಲಿ ವೃತಿ ಬದುಕು ಕಂಡುಕೊಳ್ಳುವವರಿಗೆ ಸ್ವಚ್ಛ ಮನಸ್ಸು ಮುಖ್ಯ’ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಶಿಕ್ಷಕ- ರಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಪತ್ರಿಕೋದ್ಯಮದ ಪಾತ್ರ ಬಹುಮುಖ್ಯ. ನಿರ್ಮಲ ಮನಸ್ಸಿನಿಂದ ಸಮಾಜದ ಸ್ವಾಸ್ಥ್ಯತೆ ಕಾಪಾಡುವ ಜವಾಬ್ದಾರಿಯನ್ನು ಪತ್ರಕರ್ತ ಹೊಂದಿರಬೇಕು. ಪತ್ರಕರ್ತನ ಕರ್ತವ್ಯದಲ್ಲಿ ಒಳಿತು- ಕೆಡುಕುಗಳೆರಡೂ ಅಡಕವಾಗಿದೆ ಎಂದರು. ವಿದ್ಯಾರ್ಥಿ ಮೇಲೆ ಶಿಕ್ಷಕರು ತೋರಿಸುವ ವಿಶ್ವಾಸವು, ಆ ವಿದ್ಯಾರ್ಥಿ ಮೇಲಿನ ನಂಬಿಕೆಯನ್ನು ಸೂಚಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ವಿಶ್ವಾಸಾರ್ಹತೆ ಗಳಿಸುವುದು ಮುಖ್ಯ ಎಂದರು. ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಆಳ್ವಾಸ್ ಎಂದರೆ ವಿದ್ಯಾಸಾಗರ. ಇಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶವೂ ಅಧಿಕ. ತಮ್ಮ ಮನೆಯ ಮಕ್ಕಳು ಆಳ್ವಾಸ್‍ನಲ್ಲಿ ಕಲಿಯಬೇಕು ಎಂಬ ಹಂಬಲ ಹಲವರದ್ದು ಎಂದರು. ಪತ್ರಿಕೋದ್ಯಮ ವಿಭಾಗ ಹಾಗೂ ವಿದ್ಯಾರ್ಥಿಗಳ ಕಾರ್ಯನಿರ್ವಹಿಸುವ ರೀತಿ ನಿಜಕ್ಕೂ ಪ್ರಶಂಸಾರ್ಹ. ಮಕ್ಕಳನ್ನು ಉತ್ತಮ ವಿದ್ಯಾಸಂಸ್ಥೆಗೆ ಕಳುಹಿಸಿದ ಪೋಷಕರಾದ ನೀವೆಲ್ಲರೂ ಧನ್ಯರು…
ಹಿರಿಯರು ಹೇಳಿದ್ದನ್ನು ಕಿರಿಯರು ಕೇಳಬೇಕು, ಅದನ್ನು ಪರಿಪಾಲಿಸಬೇಕು ಎನ್ನುವ ಪಾಠ ನಮ್ಮಲ್ಲಿದೆ. ಆದರೆ ಅವರೂ ಕೆಲವೊಮ್ಮೆ ತಪ್ಪು ಹೇಳಬಹುದು ಅಥವಾ ನಮ್ಮ ಬದುಕಿಗೆ, ಜೀವನಶೈಲಿಗೆ ಅನ್ವಯವಾಗದೇ ಇರಬಹುದು. ಆಗ ನಾವು ಅದನ್ನು ಸುಮ್ಮನೆ ಪಾಲಿಸಬೇಕೇ ಅಥವಾ ಪರಾಮರ್ಶಿಸಬೇಕೇ ಎನ್ನುವ ಪ್ರಶ್ನೆ ಮನದೊಳಗೆ ಉದ್ಭವವಾಗುವುದು ಸಹಜ. ಕೆಲವರು ಹಿರಿಯರು ಹೇಳಿದ್ದಾರೆ ಎಂದು ತಮಗಿಷ್ಟವಿಲ್ಲದಿದ್ದರೂ ಪಾಲಿಸುತ್ತಾರೆ. ಇನ್ನು ಕೆಲವರು ತಮ್ಮಿಂದ ಸಾಧ್ಯವಿಲ್ಲ ಎಂದುಕೊಂಡು ಇನ್ನೊಬ್ಬರಿಗೆ ದಾಟಿಸಿ ಬಿಡುತ್ತಾರೆ. ಮತ್ತೆ ಕೆಲವರು ಅದ್ಯಾಕೆ ಪಾಲಿಸಬೇಕು ಎಂದು ಚರ್ಚೆ, ವಾಗ್ವಾದಕ್ಕೇ ಇಳಿದು ಬಿಡುತ್ತಾರೆ. ಇದರ ಪರಿಣಾಮಗಳು ಏನಾಗಬಹುದು ಎನ್ನುವ ಕುತೂಹಲ ತಣಿಸುವ ಬಯಕೆಯಷ್ಟೇ ನನ್ನದು. ಪ್ರತಿಯೊಂದೂ ವಿಷಯಕ್ಕೂ ಹೇಳುವವರು ಯಾರೋ ಇರ್ತಾರೆ. ಆದರೆ ಹೇಳುವವರು ಹೇಳುತ್ತಾರೆ ಎಂದರಷ್ಟೇ ಸಾಲದು, ಅದನ್ನು ಕೇಳುವವರೂ ಇರಬೇಕು. ಹೇಳಿದ್ದನ್ನು ಕೇಳುವುದು ಪಾಲಿಸಿದಂತೆ ಅಷ್ಟೇ, ಆದರೆ ಅದನ್ನು ಪರಾಮರ್ಶಿಸಿ ಪಾಲಿಸುವುದು ಉತ್ತಮ. ಕೆಲವೊಮ್ಮೆ ಸುಮ್ಮನೆ ಪಾಲಿಸಬೇಕು, ಪರಾಮರ್ಶೆ ಹೆಸರಿನಲ್ಲಿ ಇತ್ತಂಡವಾದ ಸಲ್ಲದು. ಈ ಮಾತುಗಳು ಎಂದೆಂದಿಗೂ ಸಲ್ಲುತ್ತದೆ ಎಂಬುದೇ ಸತ್ಯ. ಕಾಲ ಒಂದಿತ್ತು,…
ಆಗ ನಾನು ಒಂದನೇ ತರಗತಿಯಲ್ಲಿದ್ದರಬಹುದು. ಪ್ರಾರ್ಥನೆ ವೇಳೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಏನಾದರೊಂದು ವಿಷಯ ಹೇಳುವ ಪರಿಪಾಠವಿತ್ತು. ಆಗ ಮುಖ್ಯಶಿಕ್ಷಕರು ಮುಂದೆ ಬಂದು ವಿದ್ಯಾರ್ಥಿಗಳೆಲ್ಲ ಶಾಲೆಯಲ್ಲಿ ವಾರದ ಪ್ರತಿದಿನ ಸಮವಸ್ತ್ರ ಧರಿಸಬೇಕು ಎಂಬ ನಿಯಮ ಏಕೆ ಇದೆ ಎಂದು ಪ್ರಶ್ನಿಸಿದರು. ಯಾವ ವಿದ್ಯಾರ್ಥಿಯು ಉತ್ತರ ಕೊಡಲಿಲ್ಲ. ಅವರು ತಮ್ಮ ಮಾತು ಮುಂದುವರಿಸುತ್ತಾ, ನಾವೆಲ್ಲರೂ ಒಂದೇ ಎಂಬ ಭಾವನೆ ಸಣ್ಣ ವಯಸ್ಸಿನಲ್ಲೇ ನಮ್ಮ ಮನದಲ್ಲಿ ಬಿತ್ತಬೇಕು. ಜಾತಿ, ಮತ, ಬಡವ, ಶ್ರೀಮಂತ, ಜಾಣ, ದಡ್ಡ, ಹೆಣ್ಣು, ಗಂಡು ಎಂಬ ಬೇಧಭಾವ ತೋರದೆ ನಾವೆಲ್ಲರೂ ಒಂದೇ ತಾಯಿ ಭಾರತಾಂಬೆಯ ಮಕ್ಕಳು ಎನ್ನುವುದನ್ನು ಅರಿಯಬೇಕು. ಈ ಉದ್ದೇಶದಿಂದಲೇ ಶಾಲೆಯಲ್ಲಿ ಕಡ್ಡಾಯವಾಗಿ ಎಲ್ಲರೂ ಸಮವಸ್ತ್ರ ಧರಿಸಬೇಕು ಎಂದರು. ಸಮಾನತೆಯ ಪಾಠವನ್ನು ನಾವು ಸಣ್ಣ ವಯಸ್ಸಿನಲ್ಲೇ ಕಲಿತಿದ್ದರೂ ಬೆಳೆದು ದೊಡ್ಡವರಾದಂತೆ ಅದನ್ನು ಮರೆತುಬಿಡುತ್ತೇವೆ. ಅದು ಯಾವಾಗ ನಮ್ಮ ಮನದೊಳಗೆ ಬೇರು ಬಿಟ್ಟು ವೃಕ್ಷವಾಗಿರುತ್ತದೋ ಎಂಬುದು ಅರಿವೇ ಆಗಿರುವುದಿಲ್ಲ. ಆದರೆ ಮೇಲು, ಕೀಳು , ಹೆಣ್ಣು, ಗಂಡು , ಜಾತಿ, ಧರ್ಮ,…
ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ಉನ್ನತ ಮತ್ತು ಪೂಜ್ಯ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ ಅವರ ಪ್ರೇರಣೆಯಂತೆ ಗೋವುಗಳ ರಕ್ಷಣೆಗೆ ವಿಶೇಷ ಆಸಕ್ತಿ ವಹಿಸಿದ್ದು ಜನರು ಆಶೀರ್ವಾದ ನೀಡಿ ಶಾಸಕನನ್ನಾಗಿ ಚುನಾಯಿಸಿದರೆ ಕಾಪು ಕ್ಷೇತ್ರದಲ್ಲಿ ಕರ್ನಾಟಕದ ಮೊದಲ ಸುಸಜ್ಜಿತ ಗೋ ರುದ್ರಭೂಮಿ ಸ್ಥಾಪಿಸುವುದಾಗಿ ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮತದಾರರಿಗೆ ಭರವಸೆ ನೀಡಿದ್ದಾರೆ. ಕಳತ್ತೂರು, ಮುದರಂಗಡಿ, ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧೆಢೆ ಮನೆ ಮನೆ ಭೇಟಿ, ಕಾರ್ಯಕರ್ತರ ಜತೆಗೆ ಸಮಾಲೋಚನೆ ಮತ್ತು ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಮ್ಮ ಸಮಾಜ ಸೇವಾ ಕಾರ್ಯಗಳಿಗೆ ತಾಯಿಯ ಪ್ರೇರಣೆಯೇ ಪೂರಕವಾಗಿದೆ. ಅವರ ಇಚ್ಛೆಯಂತೆ ನಾವು ಮನೆಯಲ್ಲೇ ಗೋವುಗಳನ್ನು ಸಾಕುತ್ತಿದ್ದು ಗುರ್ಮೆ ಗೋ ವಿಹಾರಧಾಮ ಸ್ಥಾಪಿಸಿ ಅನಾಥ ಗೋವುಗಳೂ ಸೇರಿದಂತೆ ನೂರಾರು ಗೋವುಗಳಿಗೆ ರಕ್ಷಣೆ ನೀಡುತ್ತಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿಯೂ ಗೋವುಗಳಿಗೆ ಗೌರವಯುತ ಅಂತ್ಯಸಂಸ್ಕಾರ ಮಾಡುವುಕ್ಕಾಗಿ ಸುಸಜ್ಜಿತ ಗೋ ರುದ್ರಭೂಮಿ ನಿರ್ಮಾಣ ಮಾಡುವುದಾಗಿ ವಚನ…
ಮುಂಬೈ ವಿವಿ ಕನ್ನಡ ವಿಭಾಗ ಹಾಗೂ ಡಾ ವಿಶ್ವನಾಥ್ ಕಾರ್ನಾಡ್ ಪ್ರತಿಷ್ಠಾನ ಮುಂಬೈ: ವಿದ್ಯಾರ್ಥಿ ಸಮ್ಮೇಳನ ಮುಂಬೈ ವಿವಿ ಕನ್ನಡ ವಿಭಾಗಕ್ಕೆ ಒಂದೂವರೆ ದಶಕಗಳಿಂದ ಸುವರ್ಣ ಯುಗ : ಡಾ. ದಿನೇಶ್ ಶೆಟ್ಟಿ ರೆಂಜಾಳ
ಮುಂಬಯಿ, ಮಾ. 18 : ಕಳೆದ ಒಂದೂವರೆ ದಶಕಗಳಿಂದ ಮುಂಬೈ ವಿಶ್ಕವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ಸುವರ್ಣ ಯುಗ ಎಂದೇ ಹೇಳಬಹುದು . ಮಹತ್ತರ ಬೃಹತ್ ಪಿಎಚ್ ಡಿ ಗ್ರಂಥಗಳು ಹೊರಬಂದಿರುವುದು ನಮ್ಮ ಕನ್ನಡ ವಿಭಾಗದಲ್ಲಿ ಎನ್ನುವುದು ಹೆಮ್ಮೆಯ ವಿಷಯ. ಇದಕ್ಕೆಲ್ಲ ಮುಖ್ಯ ಕಾರಣ ಕನ್ನಡವನ್ನೇ ಉಸಿರಾಗಿಸಿಕೊಂಡ ಮುಖ್ಯಸ್ಥರ ಸಾರಥ್ಯ. ತನ್ನ ಜೀವನವನ್ನೇ ವರ್ಷದ 365 ದಿನಗಳ ಕಾಲ ತನ್ನ ಉಸಿರಿನಲ್ಲಿ ಬೆರೆತು ಹೋಗಿರುವ ಕನ್ನಡ ವಿಭಾಗಕ್ಕಾಗಿ, ಕನ್ನಡಕ್ಕಾಗಿ ,ಕನ್ನಡದ ವಿದ್ಯಾರ್ಥಿಗಳ ಸೇವೆಗಾಗಿ ಮುಡಿಪಾಗಿಟ್ಟಿದ್ದು ಇದಕ್ಕೆ ಪ್ರಸಿದ್ಧ ಸಾಹಿತಿಗಳಾದ ಡಾ ಎಸ್ ಎಲ್ ಭೈರಪ್ಪನವರು , ಡಾ.ಕಂಬಾರರು, ಪ್ರೊ.ಹಂಪನಾ, ಡಾ.ಕಮಲಾ ಹಂಪನಾ, ಡಾ.ವಿವೇಕ್ ರೈ ಮೊದಲಾದ ಸಾಹಿತ್ಯ ದಿಗ್ಗಜರು ವಿಭಾಗದ ಬಗ್ಗೆ ವ್ಯಕ್ತಪಡಿಸಿದ ಅಭಿನಂದನೀಯ ನುಡಿಗಳೇ ಸಾಕ್ಷಿಯಾಗಿವೆ. ತಾನು ಬೆಳೆದು ತನ್ನ ವಿದ್ಯಾರ್ಥಿಗಳನ್ನು ಬೆಳೆಸುವವರು ನಿಜವಾದ ಗುರುಗಳು. ಈ ಸಾಲಿನಲ್ಲಿ ಡಾ. ಜಿ .ಎನ್. ಉಪಾಧ್ಯ ಅವರು ನಿಲ್ಲುತ್ತಾರೆ. ಮುಂಬೈ ವಿವಿ ಕನ್ನಡ ವಿಭಾಗದಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ …
ಬಂಟರಿಗೆ ನಿಗಮ ಒದಗಿಸುವ ಕುರಿತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಮಹಾ ನಿರ್ದೇಶಕರು ಹಾಗೂ ಜೊತೆ ಕಾರ್ಯದರ್ಶಿ ಶ್ರೀ ಪ್ರವೀಣ್ ಭೋಜ ಶೆಟ್ಟಿ, ನಿರ್ದೇಶಕರಾದ ಶ್ರೀ ಅರವಿಂದ್ ಎ ಶೆಟ್ಟಿ, ಮಹಾ ಪೋಷಕರಾದ ಶ್ರೀ ಶಶಿಧರ್ ಶೆಟ್ಟಿ ಇನ್ನಂಜೆ ಮತ್ತು ಕೋಶಾಧಿಕಾರಿ ಶ್ರೀ ಮೋಹನದಾಸ್ ಶೆಟ್ಟಿಯವರನ್ನು ಒಳಗೊಂಡ ಒಕ್ಕೂಟದ ತಂಡವು ಮಹಾರಾಷ್ಟ್ರದ ಸಂಸದ ಶ್ರೀ ಗೋಪಾಲ್ ಶೆಟ್ಟಿಯವರನ್ನು ಭೇಟಿಯಾಗಿ ಬಂಟರಿಗೆ ನಿಗಮ ಒದಗಿಸುವ ಬಗ್ಗೆ ಮನವಿ ಮಾಡಿದರು. ಈ ಸಂದರ್ಭ ಸಂಸದರು ಕರ್ನಾಟಕ ಸರಕಾರದ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ, ಕರ್ನಾಟಕ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲ್ ಹಾಗೂ ಕರ್ನಾಟಕ ಸರಕಾರದ ಇಂಧನ ಸಚಿವರಾದ ಶ್ರೀ ಸುನೀಲ್ ಕುಮಾರ್ ರವರಲ್ಲಿ ಈ ಕುರಿತು ಮಾತನಾಡುವುದಾಗಿ ಭರವಸೆ ನೀಡಿದರು.
ಬೆಳಗ್ಗಿನ ತಿಂಡಿ ಮಾಡುವುದು ಎಲ್ಲರಿಗೂ ಒಂದು ಟಾಸ್ಕ್. ಪ್ರತಿ ಬಾರಿ ನೀವು ಡಿಫರೆಂಟ್ ಆಗಿ ಏನಾದರೂ ಟ್ರೈ ಮಾಡಬೇಕು ಎಂದುಕೊಂಡರೆ ಇಲ್ಲಿದೆ ಒಂದು ಹೊಸ ರುಚಿ. ನೀವು ಸಾಮಾನ್ಯವಾಗಿ ಇಡ್ಲಿ ಮಾಡುವಾಗ ಒಂದು ಹೆಚ್ಚಿನ ಸಾಮಾಗ್ರಿಯನ್ನು ಹಾಕಿದರೆ ಇಡ್ಲಿಯ ಸ್ವಾದವನ್ನೇ ಬದಲಿಸಬಹುದು. ಹೌದು ನೀವೊಮ್ಮೆ ಸಬ್ಬಕ್ಕಿ ಇಡ್ಲಿ (Sago Idli) ಮಾಡಿ ಡಿಫರೆಂಟ್ ರುಚಿಯನ್ನು ಆನಂದಿಸಿ. ಬೇಕಾಗುವ ಪದಾರ್ಥಗಳು: ಇಡ್ಲಿ ರವೆ/ ಅಕ್ಕಿ ರವೆ – 1 ಕಪ್ ಸಬ್ಬಕ್ಕಿ – ಮುಕ್ಕಾಲು ಕಪ್ ಹುಳಿ ಮೊಸರು – ಒಂದೂವರೆ ಕಪ್ ನೀರು – 1 ಕಪ್ ತುರಿದ ತೆಂಗಿನಕಾಯಿ – ಕಾಲು ಕಪ್ ಅಡುಗೆ ಸೋಡಾ – ಕಾಲು ಟೀಸ್ಪೂನ್ ಉಪ್ಪು – ರುಚಿಗೆ ತಕ್ಕಷ್ಟು ಒಗ್ಗರಣೆಗೆ: ಸಾಸಿವೆ – ಅರ್ಧ ಟೀಸ್ಪೂನ್ ಮುರಿದ ಗೋಡಂಬಿ – 10 ಹಸಿರು ಮೆಣಸಿನಕಾಯಿ – 2 ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ…
ಆರೋಗ್ಯ ಚೆನ್ನಾಗಿದ್ದರೆ ಎಲ್ಲವೂ ಇದ್ದಂತೆ. ಹಣ ಆಸ್ತಿ ಸಂಪಾದನೆಕ್ಕಿಂತ ಆರೋಗ್ಯವಂತರಾಗಿ ಬದುಕುವುದೇ ದೊಡ್ಡ ಸಂಪತ್ತು. ಅದಕ್ಕಿಂತ ಮಿಗಿಲಾದದು ಇನ್ನೊಂದಿಲ್ಲ ಎಂದು ಶತಾಯುಶಿ ಹುತ್ರುರ್ಕೆ ಪುಟ್ಟಣ್ಣ ಶೆಟ್ಟಿ ಹೇಳಿದರು. ಅವರು ನವೆಂಬರ್ 5 ರಂದು ಹೆಬ್ರಿ ಅಜೆಕಾರು ವಲಯ ಬಂಟರ ಸಂಘದ ನೇತೃತ್ವದಲ್ಲಿ ಹಿರಿಯ ಬಂಟರ ಬಾಂಧವ್ಯ ಕಾರ್ಯಕ್ರಮದ ಅಡಿಯಲ್ಲಿ ಹೆಬ್ರಿ ಹುತ್ತುರ್ಕೆ ಅವರ ನಿವಾಸದಲ್ಲಿ ಬಂಟರ ಸಂಘದ ವತಿಯಿಂದ ಸಮ್ಮಾನ ಸ್ವೀಕರಿಸಿ ಮಾತನಾಡಿದರು. ಹಿರಿಯರನ್ನು ಪ್ರೀತಿಯಿಂದ ಗೌರವಿಸಿ : ನಮ್ಮಮನೆಯಲ್ಲಿರುವ ತಂದೆ, ತಾಯಿ, ಅಜ್ಜ, ಅಜ್ಜಿಯಂದಿರನ್ನು ಪ್ರೀತಿಯಿಂದ ಮಾತನಾಡಿಸುವುದರ ಜತೆ ಗೌರವಿಸಿ. ಅದಕ್ಕಿಂತ ದೊಡ್ಡ ಕೊಡುಗೆ ಇನ್ನೊಂದಿಲ್ಲ. ತಮ್ಮಮಕ್ಕಳು ಮೊಮ್ಮಕ್ಕಳಿಂದ ಹಿರಿಯರು ಅಪೇಕ್ಷೆ ಪಡುವುದು ಇಷ್ಟೇ. ಈ ನಿಟ್ಟಿನಲ್ಲಿ ಹೆಬ್ರಿ ಬಂಟರ ಸಂಘದಿಂದ ಪ್ರತಿ ತಿಂಗಳ ಮೊದಲ ಭಾನುವಾರ ಸಂಘದ ವ್ಯಾಪ್ತಿಯ ಹಿರಿಯ ಬಂಟರ ಮನೆಗೆ ತೆರಳಿ ಅವರೊಂದಿಗೆ ಪ್ರೀತಿಯಿಂದ ಮಾತನಾಡಿಸಿ ಗೌರವಿಸುವ ಹಿರಿಯ ಬಂಟರ ಬಾಂದವ್ಯ ಕಾರ್ಯಕ್ರಮ ಇದಾಗಿದೆ ಎಂದು ಹೆಬ್ರಿ ಅಜೆಕಾರು ವಲಯ ಬಂಟರ ಸಂಘದ ಅಧ್ಯಕ್ಷ ಸೀತಾನದಿ…
ಬಂಟರ ಸಂಘ ಮುಂಬಯಿ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯಿಂದ ಆಗಸ್ಟ್ 15 ರಂದು ಕಾಂದಿವಲಿ ಪಶ್ಚಿಮದ ಪೊಯಿಸರ್ ಜಿಮ್ಖಾನದಲ್ಲಿ ಸಂಜೆ ಅಜೆಕಾರು ಕಲಾಭಿಮಾನ ಬಳಗ ಮುಂಬಯಿ ಇವರ ತವರೂರ ನಾಮಾಂಕಿತ ಕಲಾವಿದರ ಕೂಡುವಿಕೆಯಲ್ಲಿ “ನಳ ದಮಯಂತಿ” (ತುಳು) – “ಶ್ರೀರಾಮ ದರ್ಶನ” (ಕನ್ನಡ) ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ನಿಟ್ಟೆ ಎಂಜಿ ಶೆಟ್ಟಿ ದೀಪ ಬೆಳಗಿಸಿ ಚಾಲನೆ ನೀಡಿದರು. ವೇದಿಕೆಯಲ್ಲಿ ಮುಂಬಯಿ ಬಂಟರ ಸಂಘದ ಜೊತೆ ಕೋಶಾಧಿಕಾರಿ ಮುಂಡಪ್ಪ ಎಸ್ ಪಯ್ಯಡೆ, ಹಿರಿಯ ಹೋಟೆಲ್ ಉದ್ಯಮಿ ಕೃಷ್ಣ ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಂಚಾಲಕ ರವೀಂದ್ರ ಎಸ್. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಕೆ ಪ್ರೇಮನಾಥ್ ಶೆಟ್ಟಿ, ಕಾರ್ಯದರ್ಶಿ ಅಶೋಕ್ ವಿ. ಶೆಟ್ಟಿ, ಕೋಶಾಧಿಕಾರಿ ಗಂಗಾಧರ ಎ. ಶೆಟ್ಟಿ, ಜೊತೆ ಕಾರ್ಯದರ್ಶಿ ರಘುನಾಥ ಎನ್. ಶೆಟ್ಟಿ, ಜೊತೆ ಕೋಶಾಧಿಕಾರಿ ಅವಿನಾಶ್ ಎಂ ಶೆಟ್ಟಿ, ಹಿರಿಯ ಸಲಹೆಗಾರ ಮನೋಹರ ಎನ್. ಶೆಟ್ಟಿ, ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೈಲಜ ಎ ಶೆಟ್ಟಿ,…














