ಅದು 20ನೇ ಶತಮಾನ!, ಚಿಗುರು ಮೀಸೆಯ ಯವ್ವನದ ದಿನ. ಕಾಲೇಜಿನ ಮೆಟ್ಟಿಲನ್ನು ಹತ್ತಿ ವಿದ್ಯಾಸರಸ್ವತಿಯನ್ನು ಒಲಿಸುವ ಸಂಧರ್ಭ, ಬಿಸಿ ರಕ್ತದ ಸಮಯ, ಎಲ್ಲದಕ್ಕೂ ಸಿದ್ದವಿದ್ದ ಹೊತ್ತು. ಹೀಗೆ ಕಾಲೇಜಿನ ದಿನಗಳಲ್ಲಿ ಪರಿಚಯವಾದ ಒಬ್ಬ ಅತೀ ಹತ್ತಿರದ ಗೆಳೆಯನ ಬಗ್ಗೆ ಇಂದಿನ ಲೇಖನ. ಸುದೃಡ ವ್ಯಕ್ತಿತ್ವ, ಮುಖದಲ್ಲಿ ಮಂದಹಾಸ, ಎಲ್ಲವನ್ನೂ ಗೆಲ್ಲುವ ಉತ್ಸಾಹ, ಹೀಗೆ ಮೊದಲ ಭೇಟಿಯಲ್ಲೇ ಡಿಫರೆಂಟ್ ಇಂಪ್ರೆಷನ್ ಮೂಡಿಸಿ ಪರಿಚಯವಾದ ಗೆಳೆಯನೇ ಮಿಥುನ್ ರೈ. ಹೌದು ! ನನ್ನ ಹಾಗೂ ಮಿಥುನ್ ರೈ ಗೆಳೆತನ ಇಂದು ನಿನ್ನೆಯದಲ್ಲ, ಕಾಲೇಜಿನ ದಿನಗಳಿಂದ ಮಿಥುನ್ ರೈಯ ಏಳು ಬೀಳುಗಳನ್ನು ಬಹಳ ಹತ್ತಿರದಿಂದ ನೋಡಿದವ ನಾನು.
ಬಹಳ ಸರಳ ವ್ಯಕ್ತಿ, ಶ್ರೀಮಂತ ಮನೆತನದಿಂದ ಹುಟ್ಟಿ ಬಂದರೂ ಗೆಳೆತನ ಎಂಬ ವಿಚಾರ ಬಂದಾಗ ಎಲ್ಲರೊಂದಿಗೂ ಮೇಲು ಕೀಳು ಎಂಬ ಭೇಧ ಭಾವವಿಲ್ಲದೆ ಬೆರೆಯುವ ಗುಣ. ತನ್ನವರಿಗೊಂದು ಸಮಸ್ಯೆ ಎಂದರೆ ಮೊದಲು ನಿಲ್ಲುವ ಮನಸ್ಸು ! ಮಿಥುನ್ ರೈ ಎಲ್ಲಿಯ ಮಟ್ಟಿಗೆ ಡೌನ್ ಟು ಅರ್ಥ್ ವ್ಯಕ್ತಿಯೆಂದರೆ ಮಂಗಳೂರು ವಿ.ವಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ನಡೆಸುತ್ತಿದ್ದ ಆಲ್ ಸ್ಟೂಡೆಂಟ್ ಅಸೋಸಿಯೇಷನ್ ಎಲೆಕ್ಷನಿಗೆ ಖರ್ಚಿಯಾದ ಸಾಲದ ಹಣವನ್ನು ಮರುಪಾವತಿಸಲು ದಸರಾ ಜಾತ್ರೆಗಳಲ್ಲಿ ತಿಂಡಿ ತಿನಿಸುಗಳ ಸ್ಟಾಲ್ ಹಾಕಿದ್ದೂ ಉಂಟು. ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಿದ್ದೂ ಉಂಟು. ಹುಟ್ಟುವಾಗಲೇ ಗೋಲ್ಡನ್ ಸ್ಪೂನ್ ಹಿಡಿದರೂ ಎಲ್ಲೂ ತನ್ನ ಸಂಪತ್ತಿನ ಬಗ್ಗೆ ಜಂಭ ಕೊಚ್ಚಿಕೊಂಡವನಲ್ಲ.
ಮಿಥುನ್ ರೈಗೆ ಕಾಲೇಜು ದಿವಸದಿಂದಲೂ ಹೋರಾಟದ ಮನೋಭಾವ ಇತ್ತು. ಅನೇಕ ವಿದ್ಯಾರ್ಥಿ ಪರ ಹೋರಾಟ ಮಾಡಿದ್ದುoಟು. ಇಂದಿಗೂ ಕೆಲವರು ಮಿಥುನ್ ರೈ ಬಡಿದಾಟ ಮಾಡಿದ್ದಾರೆ ಎಂದು ಕೊಂಕು ನುಡಿಯುವುದುಂಟು. ಆದರೆ ಮಿಥುನ್ ರೈ ಯಾವುದೂ ತನಗಾಗಿ ಮಾಡದೆ ತನ್ನವರಿಗೆ ನ್ಯಾಯ ದೊರಕಿಸಲು ಮಾಡಿದ ಎನ್ನುವ ಸತ್ಯ ಹಲವರಿಗೆ ಗೊತ್ತಿಲ್ಲ.
ಮಿಥುನ್ ರೈ ಒಬ್ಬ ಅದ್ಬುತ ಗೆಳೆಯ, ಒಂದೊಳ್ಳೆಯ ಭಾಷಣಗಾರ, ಉತ್ತಮ ಜನಸ್ನೇಹಿ ಯುವ ನಾಯಕ ! ಜನರ ಒಳಿತಿಗಾಗಿ ಏನಾದರೂ ಮಾಡಬೇಕೆಂದು ಅಂದಿನಿಂದಲೂ ಹೇಳಿಕೊಂಡು ಬಂದವ. ಮಿಥುನ್ ರೈಗೆ ತುಳುನಾಡಿನ ಆಚರಣೆ ಸಂಪ್ರದಾಯದ ಬಗ್ಗೆ ಇನ್ನಿಲ್ಲದ ಉತ್ಸಾಹ. ಇಂದು ಮಂಗಳೂರಿನಲ್ಲಿ ಮಿಥುನ್ ರೈ ವರ್ಷಾoಪ್ರತಿ ನಡೆಸುವ ಪಿಲಿನಲಿಕೆ ತಾನು ಎಸ್.ಡಿ.ಯಂ ಕಾಲೇಜಿನಲ್ಲಿರುವಾಗಿಂದಲೇ ಶುರು ಮಾಡಿದ್ದಾನೆಂದು ಹಲವರಿಗೆ ತಿಳಿದಿಲ್ಲ. ಧಾರ್ಮಿಕವಾಗಿ ಮಿಥುನ್ ರೈನಿಂದ ನಾನು ಹಲವನ್ನು ಕಲಿತುಕೊಂಡದುಂಟು. ದಿನಾ ಬೆಳೆಗ್ಗೆ ಎದ್ದು ಹನುಮಾನ್ ಚಾಲಿಸ ಪಠಿಸುವವ ನನ್ನ ಸ್ನೇಹಿತ ಈತ. ವರ್ಷಾoಪ್ರತಿ ನವರಾತ್ರಿ ಉತ್ಸವಕ್ಕೆ 10 ದಿನವೂ ಕೇವಲ ನೀರನ್ನು ಮಾತ್ರ ಸೇವಿಸಿ ಕಠಿಣ ಉಪವಾಸ ಕೈಗೊಳ್ಳುತ್ತಾನೆ. ಧಾರ್ಮಿಕತೆಯ ವಿಚಾರ ಬಂದಾಗ ಬಹಳ ಶ್ರದ್ಧೆಯಿಂದ ನಡೆಸುತ್ತಾನೆ.
ಎಲ್ಲಾ ಸಂಬಂಧಗಳಿಂದ ಒಂದು ಮೆಟ್ಟಿಲು ಮೇಲು ಈ ಗೆಳೆತನ. ನಾವು ನಾವಾಗಿರಲು ಗೆಳೆಯರ ಬಳಿ ಮಾತ್ರ ಸಾಧ್ಯ. ಎಲ್ಲವನ್ನೂ ಹಂಚಿಕೊಳ್ಳುವ ಮುಕ್ತ ವೇದಿಕೆ ಗೆಳೆತನ. ನಮ್ಮಿಬ್ಬರ ಗೆಳೆತನ ಹೊಗೋ ಬಾರೋ ಎಂಬ ಮಟ್ಟಿಗೆ. ತಾನೇನಾದರೂ ತಪ್ಪು ಮಾಡಿದರೆ ನಾನು ತಿದ್ದುವುದುಂಟು, ನಾನೇನಾದರೂ ತಪ್ಪು ಮಾಡಿದರೆ ಅವನೂ ತಿದ್ದುವುದುಂಟು.
ಮಿಥುನ್ ರೈ ಭವಿಷ್ಯದ ಬಗ್ಗೆ ಚಿಂತಿಸುವ ವ್ಯಕ್ತಿ ! ನನ್ನಲ್ಲಿ ಹೇಳುವುದುಂಟು ಎಂ.ಎಲ್.ಎ / ಎಂಪಿಯಾಗಿ ರೋಡ್ ಮಾಡುವುದು ಸಾಮಾನ್ಯ ಆದರೆ ನನಗೆ ಅಧಿಕಾರ ಸಿಕ್ಕರೆ ನನ್ನ ಕ್ಷೇತ್ರದಲ್ಲಿ ಹಲವು ದೇಶ ವಿದೇಶ ಕಂಪೆನಿಗಳ್ಳನ್ನು ಸ್ಥಾಪಿಸಿ ಇಲ್ಲಿನ ಯುವಕರಿಗೆ ಉದ್ಯೋಗ ದೊರಕಿಸಿಕೊಡಬೇಕು. ಶಾಶ್ವತ ಪರಿಹಾರ ನೀಡಬೇಕೆ ಹೊರತು ತಾತ್ಕಾಲಿಕ ಭರವಸೆಯಲ್ಲ ಎಂಬ ಧ್ಯೇಯ ಈತನದ್ದು.
ಅದೇನೆ ಇರಲಿ ಜನ ಸೇವೆಯೆ ಜನಾರ್ದನ ಸೇವೆ ಎಂಬ ಧ್ಯೇಯದೊಂದಿಗೆ ಇಂದಿನ ಬಾರಿ ಮೂಡಬಿದ್ರೆ ಕ್ಷೇತ್ರದಲ್ಲಿ ಎಂ.ಎಲ್.ಎ ಸ್ಪರ್ಧಿಯಾಗಿ ಕಣ್ಣಕ್ಕಿಳಿಯುತ್ತಿರುವ ನನ್ನ ಅತ್ಮೀಯ ಗೆಳೆಯನಿಗೆ ಹೃದಯ ಸ್ಪರ್ಶಿ ಅಭಿನಂದನೆಗಳು !
ದಿಲ್ ರಾಜ್ ಆಳ್ವ