ಚಿಣ್ಣರ ಬಿಂಬ ಮುಂಬಯಿ ಇದರ ಭಾಯಂದರ್ ಶಿಬಿರದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ವರ್ಧೆಯು ಆ. 27 ರಂದು ಬೆಳಗ್ಗೆ 9.30 ರಿಂದ ಭಾಯಂದರ್ ಪೂರ್ವದ ಶಕ್ತಿನಗರ ಸೈಂಟ್ ಆಗ್ನೇಸ್ ಹೈಸ್ಕೂಲ್ ಸಭಾಗ್ರಹದಲ್ಲಿ ನಡೆಯಲಿದೆ. ಮಕ್ಕಳ ಪ್ರತಿಭಾ ಸ್ವರ್ಧೆ ಕಾರ್ಯಕ್ರಮವನ್ನು ಸೈಂಟ್ ಆಗ್ನೇಸ್ ಇಂಗ್ಲಿಷ್ ಹೈಸ್ಕೂಲ್ ನ ಕಾರ್ಯಧ್ಯಕ್ಷ ಅರುಣೋದಯ ಎಸ್.ರೈ ಬಿಳಿಯೂರುಗುತ್ತು ಉದ್ಘಾಟಿಸಲಿದ್ದಾರೆ.
ಮೀರಾ- ಭಾಯಂದರ್ ಮಾಜಿ ನಗರ ಸೇವಕ ಅರವಿಂದ್ ಆನಂದ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಪ್ರಾದೇಶಿಕ ಸಮಿತಿ ಮೀರಾ- ಭಾಯಂದರ್ ಜತೆ ಕೋಶಾಧಿಕಾರಿ ರಮೇಶ ಎಂ.ಶೆಟ್ಟಿ ಸಿದ್ದಕಟ್ಟೆ, ಎಂಬಿಆರ್ ಗ್ಲೋಬಲ್ ಸರ್ವಿಸಸ್ ಪೈ. ಲಿ. ಮೈಂಡ್ ಸ್ಪೇಸ್ ನ ಸ್ಥಾಪಕ ವಿಜಯ್ ಬಾಲಕೃಷ್ಣ ರಾವ್, ಕರ್ನಾಟಕ ಮಹಾಮಂಡಲ ಮೀರಾ – ಭಾಯಂದರ್ ಸ್ಥಾಪಕ ಚಂದ್ರಶೇಖರ ವಿ. ಶೆಟ್ಟಿ, ಅರುಣ್ ಕಾಮರ್ಸ್ ಕ್ಲಾಸಸ್ ಭಾಯಂದರ್ ಸ್ಥಾಪಕ ಅರುಣ್ ಟಿ. ಪಕ್ಕಳ, ಮಾಟುಂಗಾ ಲಯನ್ಸ್ ಪಯೋನಿಯರ್ ಇಂಗ್ಲಿಷ್ ಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಮಾಜಿ ಪ್ರಾಂಶುಪಾಲೆ ಸುಮತಿ ಎಸ್. ಶೆಟ್ಟಿ, ಅಯ್ಯಪ್ಪ ಭಕ್ತವೃಂದ ಶಿರಡಿ ನಗರ ಭಾಯಂದರ್ ಅಧ್ಯಕ್ಷ ಸತೀಶ್ ಜೆ. ಪೂಜಾರಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಶಿಬಿರ ಮಟ್ಟದಲ್ಲಿ ವಿವಿಧ ಸ್ವರ್ಧೆಗಳು ನಡೆಯಲಿವೆ. ಭಾವಗೀತೆ, ಜಾನಪದ ಗೀತೆ, ಚರ್ಚಾ ಸ್ವರ್ಧೆ, ಏಕಪಾತ್ರಭಿನಯ, ಛದ್ಮವೇಷ ಸ್ವರ್ಧೆ, ಪಾಲಕರ ದೇಶ ಭಕ್ತಿಗೀತೆ ಸ್ವರ್ಧೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುಳು – ಕನ್ನಡಿಗರು ಪಾಲ್ಗೊಂಡು ಚಿಣ್ಣರನ್ನು ಪ್ರೋತ್ಸಾಹಿಸುವಂತೆ ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.