ಆಟಿ ತಿಂಗಳ ಮಹತ್ವವನ್ನು ಕೇವಲ ಸಂಪ್ರದಾಯಿಕವಾಗಿ ಆಚರಿಸುವುದಕ್ಕಿಂತ ವರ್ಷವಿಡೀ ಅನುಸರಿಸಿದರೆ ಜೀವನದಲ್ಲಿ ಸಂತೋಷ ಕಾಣಬಹುದು. ಇಂದು ನಾವು ಪ್ರಾಕೃತಿಕ ತಿಂಡಿ ತಿನಿಸುಗಳನ್ನು ಬದಿಗಿಟ್ಟು ರಾಸಾಯನಿಕ ಬೆರಕೆಯ ತಿನಿಸುಗಳನ್ನು ಬಯಸುತ್ತಿದ್ದೇವೆ. ಆದರಿಂದ ವಿವಿಧ ತರದ ರೋಗ ರುಜಿನಗಳನ್ನು ಆಹ್ವಾನಿಸುತ್ತಿದ್ದೇವೆ. ಮಕ್ಕಳಿಗೆ ಬಾಲ್ಯದಿಂದಲೇ ನಮ್ಮ ಪ್ರಾಕೃತಿಕ ತಿಂಡಿ ತಿನಿಸುಗಳನ್ನು ಪರಿಚಯಿಸುವ ಕಾರ್ಯವನ್ನು ಪಾಲಕರು ಮಾಡಬೇಕು ಎಂದು ಬಂಟ್ಸ್ ಫೋರಮ್ ಮೀರಾ – ಭಯಂದರಿನ ಅಧ್ಯಕ್ಷ ಇನ್ನ ಚಂದ್ರಹಾಸ ಕೆ. ಶೆಟ್ಟಿ ನುಡಿದರು. ಅವರು ಬಂಟ್ಸ್ ಫೋರಮ್ ಮೀರಾ – ಭಾಯಂದರಿನ ಮಹಿಳಾ ವಿಭಾಗದ ಮುಂದಾಳತ್ವದಲ್ಲಿ ಆ.2 ರಂದು ಮೀರಾರೋಡ್ ಪೂರ್ವದ ಸುರಭಿ ಹೋಟೆಲಿನ ಸಭಾಗ್ರಹದಲ್ಲಿ ನಡೆದ ಆಟಿದ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಸಂಸ್ಥೆಯ ಗೌರವಾಧ್ಯಕ್ಷ ಸಂತೋಷ್ ರೈ ಬೆಳ್ಳಿಪಾಡಿ ಮಹಿಳಾ ವಿಭಾಗದ ಸದಸ್ಯೆಯರ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಂತೋಷ ವ್ಯಕ್ತಪಡಿಸಿ, ಮುಂದಿಗೂ ಇದೇ ರೀತಿಯಲ್ಲಿ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಸಹಕರಿಸಬೇಕು. ಇಂತಹ ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸುವಂತಾಗಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಶ್ರಮಿಸಬೇಕು ಎಂದರು.
ಆಟಿ ತಿಂಗಳ ಮಹತ್ವದ ಬಗ್ಗೆ ವಸಂತಿ ಶೆಟ್ಟಿ ಹಾಗೂ ನಾರಾಯಣ ಶೆಟ್ಟಿ ಮಾತನಾಡಿದರು. ಸದಸ್ಯರು ಭಾವಗೀತೆ, ಭಕ್ತಿಗೀತೆಗಳನ್ನು ಹಾಡಿ ರಂಜಿಸಿದರು. ಆಟಿ ಕಳಂಜೆ ನೃತ್ಯ, ತೆಂಗಿನಕಾಯಿ ಕಟ್ಟ, ಚೆನ್ನೆಮಣೆ ಆಟ, ಪೊಕ್ಕು ಆಟ ಮೊದಲಾದವುಗಳನ್ನು ಪ್ರದರ್ಶಿಸಲಾಯಿತು. ಆಟಿ ತಿಂಗಳನ್ನು ನೆನಪಿಸುವ ತಿಂಡಿ ತಿನಸುಗಳು ಹಾಗೂ ಖ್ಯಾದ ಪದಾರ್ಥಗಳ ಪ್ರದರ್ಶನದೊಂದಿಗೆ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸುಮತಿ ಆರ್. ಶೆಟ್ಟಿ, ವಿಜಯಲಕ್ಷ್ಮಿ ಡಿ. ಶೆಟ್ಟಿ, ಸುಜಾತಾ ಜಿ. ಶೆಟ್ಟಿ, ಯೋಗಿಣಿ ಶೆಟ್ಟಿ, ಶುಭಾ ಶೆಟ್ಟಿ, ಪ್ರತಿಭಾ ಶೆಟ್ಟಿ, ಉಷಾ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಸುಲೋಚನಾ ಶೆಟ್ಟಿ, ಸುಖವಾಣಿ ಶೆಟ್ಟಿ, ಶರ್ಮಿಳಾ ಶೆಟ್ಟಿ, ಸುನೀತಾ ಶೆಟ್ಟಿ, ವೀಣಾ ಶೆಟ್ಟಿ, ನಿರ್ಮಲಾ ಕಡಂಬ, ಹರಿಣಿ ಶೆಟ್ಟಿ, ಶೈಲಾ ಶೆಟ್ಟಿ, ಪ್ರೇಮಾ ಹೆಗ್ಡೆ, ಶಶಿಕಲಾ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
ಆರಂಭದಲ್ಲಿ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಲ್ಲಿಕಾ ಕೆ. ಶೆಟ್ಟಿ ಮತ್ತು ಶರ್ಮಿಳಾ ಕೆ. ಶೆಟ್ಟಿ ಪ್ರಾರ್ಥನೆಗೈದರು. ಮಹಿಳಾ ವಿಭಾಗದ ಕಾರ್ಯಧ್ಯಕ್ಕೆ ಸುಮತಿ ಆರ್. ಶೆಟ್ಟಿ ಸ್ವಾಗತಿಸಿ ಆಮಂತ್ರಿತ ಪರಿಸರದ ಸಂಘ – ಸಂಸ್ಥೆಗಳ ಪದಾಧಿಕಾರಿಗಳನ್ನು, ಕಾರ್ಯಕ್ರಮ ನೀಡಿದ ಸದಸ್ಯರನ್ನು ಸತ್ಕರಿಸಿದರು. ಸುಲೋಚನಾ ಜಯರಾಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕೋಶಧಿಕಾರಿ ರಮೇಶ್ ಎ. ಶೆಟ್ಟಿ, ಜತೆ ಕಾರ್ಯದರ್ಶಿ ಅನಿಲ್ ಶೆಟ್ಟಿ, ಜತೆ ಕೋಶಾಧಿಕಾರಿ ಸತೀಶ್ ಶೆಟ್ಟಿ, ಸಂಚಾಲಕ ದಿವಾಕರ್ ಶೆಟ್ಟಿ, ಯುವ ವಿಭಾಗದ ಕಾರ್ಯಧ್ಯಕ್ಷ ಉದಯ ಶೆಟ್ಟಿ ಮಲಾರ್ ಬೀಡು, ಆನಂದ್ ಶೆಟ್ಟಿ ಕುಕ್ಕುಂದೂರು, ಜಯಪ್ರಕಾಶ್ ಆರ್ ಭಂಡಾರಿ, ಹರೀಶ್ ಶೆಟ್ಟಿ ಕಾಪು ಅಲ್ಲದೆ ಉಪ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.