ಬಿಲ್ಲು ಹಾಗೂ ಬಾಣ ಒಂದಕ್ಕೊಂದು ಸಂಬಂಧ ಇದ್ದಂತೆ, ಭಗವಂತ ಬಿಲ್ಲಾದರೆ, ಭಕ್ತರು ಬಾಣದಂತೆ. ಬಿಲ್ಲನ್ನು ಹೇಗೆ ಬೇಕಾದರೂ ಭಾಗಿಸಬಹುದು. ಆದರೆ ಬಾಣವನ್ನು ಗುರಿಯ ಕಡೆಗೆ ಇಡಬೇಕು. ಭಕ್ತರಾದ ನಾವು ಭಗವಂತನ ಪುಣ್ಯ ಕಾರ್ಯಕ್ಕಾಗಿ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಬಾಣದ ಗುರಿಯಂತೆ, ದಾನಿಗಳ ನೆರವಿನಿಂದ ಹಾಗೂ ಭಕ್ತರ ಸಹೃದಯದಿಂದ ಸಹಕಾರವನ್ನು ನೀಡಿದಲ್ಲಿ ಕ್ಷೇತ್ರದ ಜೀರ್ಣೋದ್ದಾರ ಸಾಧ್ಯವೆಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು. ಅವರು ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದಲ್ಲಿ ನಡೆದ ಶ್ರೀ ಪಾಡಾಂಗರೆ ಭಗವತೀ ಮಾತೆಯ ಹಾಗೂ ವೀರಪುತ್ರ ದೈವದ ಗರ್ಭಗುಡಿಗೆ ನಡೆದ ಶಿಲಾನ್ಯಾಸ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಗೋಪಾಲ ಬಂದ್ಯೋಡು ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರದ ತಂತ್ರಿವರ್ಯರಾದ ಮೂಡುಮನೆ ಅಶೋಕ ರಾಮಚಂದ್ರ ಪದಕಣ್ಣಾಯ, ಶ್ರೀ ಕೇಶವ ಕಾರ್ನವರು, ಶ್ರೀ ನಾರಾಯಣ ಭಗವತೀ ಪೂಜಾರಿ, ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷರಾದ, ಮುಂಬಯಿಯ ಹೇರಂಭ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷರಾದ ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಮುಂಬಯಿಯ ಉದ್ಯಮಿ ಕುಸುಮೋಧರ ಶೆಟ್ಟಿ, ರಷ್ಯಾ ಉದ್ಯಮಿ ಮಹಾಬಲೇಶ್ವರ ಭಟ್ ಎಡಕ್ಕಾನ, ವಿವಿಧ ಕ್ಷೇತ್ರಗಳ ಧಾರ್ಮಿಕ ಮುಂದಾಳುಗಳಾಗಿರುವ ದೇವಿ ಚರಣ್ ಶೆಟ್ಟಿ, ನಾರಾಯಣ ಹೆಗ್ಡೆ ಕೋಡಿಬೈಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರವೀಣ, ಡಾ. ಶ್ರೀಧರ್ ಭಟ್, ಹರಿನಾಥ ಭಂಡಾರಿ ಮುಳಿಂಜ, ಶ್ರೀಧರ ಶೆಟ್ಟಿ ಗುಬ್ಯ ಕನ್ಯಾನ, ರಾಮ ಪ್ರಕಾಶ್ ಆಳ್ವ ಪಟ್ಟತ್ತೂರು, ಜಯರಾಮ ಬಲ್ಲಂಗುಡೇಲು, ರವೀಂದ್ರ ಶೆಟ್ಟಿ ಕರಿಬೈಲು, ಸುಕುಮಾರ ಉಪ್ಪಳ, ಕರುಣಾಕರ ಕುಂಬಳೆ, ಸತೀಶ್ ವೈದ್ಯರು, ಶ್ರೀಮತಿ ಇಂದಿರಾ ಕೋರಿಕ್ಕಾರ್, ಮಾರಪ್ಪ ಶೆಟ್ಟಿ ಕೌಡೂರು ಬೀಡು, ರತನ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ದಡ್ಡoಗಡಿ, ಮೊದಲಾದವರು ಉಪಸ್ಥಿತರಿದ್ದು, ಶುಭಾಸಂಶನೆಗೈದರು.
ಈ ವೇಳೆ ಕ್ಷೇತ್ರದ ಜೀರ್ಣೋದ್ದಾರಕ್ಕೆ ಉದಾರವಾಗಿ ದಾನಗೈದ ದಾನಿಗಳಿಗೆ ಪರಮಪೂಜ್ಯ ಸ್ವಾಮೀಜಿಯವರ ದಿವ್ಯ ಹಸ್ತದಿಂದ ರಶೀದಿ ಹಾಗೂ ಫಲ ಮಂತ್ರಾಕ್ಷತೆಯನ್ನು ನೀಡಲಾಯಿತು. ಕು. ತೃಪ್ತಿ ಕೆ. ಜೆ ಪ್ರಾರ್ಥನೆ ಹಾಡಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಮೂಡಂಬೈಲು ಪ್ರಾಸ್ತಾವಿಕ ನುಡಿಗಳನ್ನಾಡಿ, ಸ್ವಾಗತಿಸಿ, ಧಾರ್ಮಿಕ ಮುಂದಾಳು ದಿನಕರ್ ಬಿ.ಎಂ, ನ್ಯಾ. ಗಂಗಾಧರ ಆಚಾರ್ಯ ಕೊಂಡೆವೂರು, ಅರವಿಂದಾಕ್ಷ ಭಂಡಾರಿ ದಡ್ದoಗಡಿ, ಹರೀಶ್ ಶೆಟ್ಟಿ ಮಾಡ ನಿರೂಪಿಸಿ, ಕ್ಷೇತ್ರದ ಶ್ರೀ ಭಗವತೀ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಆಶಾಲತಾ ಪೆಲಪ್ಪಾಡಿ ವಂದಿಸಿದರು.
ಬೆಳಗ್ಗೆ ಕ್ಷೇತ್ರದ ತಂತ್ರಿಗಳಾದ ಮೂಡುಮನೆ ಅಶೋಕ್ ರಾಮಂಚಂದ್ರ ಪದಕಣ್ಣಾಯರ ನೇತೃತ್ವದಲ್ಲಿ ಕ್ಷೇತ್ರದ ಗ್ರಾಮದ ಮುಖ್ಯಸ್ಥರ ಹಾಗೂ ಆಚಾರ ಪಟ್ಟವರು, ಗುರಿಕಾರರ ಉಪಸ್ಥಿತಿಯಲ್ಲಿ ಕ್ಷೇತ್ರದ ಶಿಲ್ಪಿಗಳಾದ ಕುಂಞಿರಾಮನ್ ಕಾಸರಗೋಡುರವರು ಶಿಲಾನ್ಯಾಸದ ವೈದಿಕ ಕಾರ್ಯವನ್ನು ನೆರವೇರಿಸಿದರು. ಶ್ರೀ ಪಾಡಾoಗರೆ ಭಗವತೀ ಮಾತೆಯ ಗರ್ಭಗುಡಿಗೆ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷರಾದ, ಮುಂಬಯಿಯ ಹೇರಂಭ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷರಾದ ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಹಾಲೆರೆದು ಶಿಲಾನ್ಯಾಸ ನೆರವೇರಿಸಿದರು. ಶ್ರೀ ವೀರಪುತ್ರ ದೈವದ ಗರ್ಭಗುಡಿಗೆ ಮುಂಬಯಿ ಉದ್ಯಮಿ ಕುಸುಮೋಧರ ಶೆಟ್ಟಿ ಹಾಲೆರೆದು ಶಿಲಾನ್ಯಾಸ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಮುಖ್ಯಸ್ಥರು, ಕ್ಷೇತ್ರದ ಜೀರ್ಣೋದ್ದಾರ ಸಮಿತಿ, ಸೇವಾ ಸಮಿತಿ, ಮಹಿಳಾ ಸಂಘ, ತೀಯಾ ಸೇವಾ ಸಮಿತಿ, ನಲುವತ್ತು ಬಿಲ್ಲಿ, ಊರ – ಪರವೂರ ಭಕ್ತರು ಭಾಗವಹಿಸಿದ್ದರು.