1) 83ನೇ ಅಖಿಲ ಭಾರತ ಅಂತರ್ ವಿವಿ ಮಹಿಳಾ
ಅಥ್ಲೆಟಿಕ್ಸ್ ಕ್ರೀಡಾಕೂಟ.
2) ಮಂಗಳೂರು ವಿವಿ ಗಳಿಸಿದ 7 ಪದಕಗಳು
ಆಳ್ವಾಸ್ ವಿದ್ಯಾರ್ಥಿಗಳ ಕೊಡುಗೆ.
3) 7ನೇ ಬಾರಿಗೆ ಮಂಗಳೂರು ವಿವಿ ಚಾಂಪಿಯನ್ಸ್.
4) ಮಹಿಳಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ
ಮಂಗಳೂರು ವಿವಿಯ 33 ಕ್ರೀಡಾಪಟುಗಳ
ತಂಡದಲ್ಲಿ 26 ಕ್ರೀಡಾಪಟುಗಳು ಆಳ್ವಾಸ್
ಸಂಸ್ಥೆಯ ವಿದ್ಯಾರ್ಥಿಗಳು.
ವಿದ್ಯಾಗಿರಿ: ಒಡಿಶಾದ ಭುವನೇಶ್ವರದಲ್ಲಿ ಶುಕ್ರವಾರ ಮುಕ್ತಾಯಗೊಂಡ 83ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಮಹಿಳಾ ಕ್ರೀಡಾಕೂಟದಲ್ಲಿ 56 ಅಂಕಗಳನ್ನು ಪಡೆದ ಮಂಗಳೂರು ವಿಶ್ವವಿದ್ಯಾಲಯವು ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಪದಕ ಪಡೆದ ಎಲ್ಲ ಕ್ರೀಡಾಪಟುಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು. 2 ಚಿನ್ನ, ಒಂದು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳೊಂದಿಗೆ ಒಟ್ಟು ಏಳು ಪದಕಗಳನ್ನು ಆಳ್ವಾಸ್ ಕಾಲೇಜಿನ ಆರು ವಿದ್ಯಾರ್ಥಿನಿಯರು ಪಡೆದಿದ್ದಾರೆ. ಈ ಪೈಕಿ ಅಂಜಲಿ ಸಿ. ಎರಡು ಪದಕಗಳನ್ನು ಪಡೆದುಕೊಂಡಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಭವಾನಿ ಯಾದವ್ ಉದ್ದ ಜಿಗಿತದಲ್ಲಿ ಚಿನ್ನ, ತನುಶ್ರೀ ಹೆಪ್ಟತ್ಲಾನ್ನಲ್ಲಿ ಚಿನ್ನ, ಅಂಜಲಿ ಸಿ. 100 ಮೀಟರ್ಸ್ ಹರ್ಡಲ್ಸ್ನಲ್ಲಿ ಬೆಳ್ಳಿ, ಟ್ರಿಪಲ್ ಜಂಪ್ನಲ್ಲಿ ಕಂಚು, ಅಂಜಲಿ ಶಾಟ್ಪಟ್ನಲ್ಲಿ ಕಂಚು, ಶ್ರೀದೇವಿಕಾ ಉದ್ದಜಿಗಿತದಲ್ಲಿ ಕಂಚು, ಶಿವಾನಿ ಗಾಯಕವಾಡ 400 ಮೀಟರ್ಸ್ ಓಟದಲ್ಲಿ ಕಂಚು, ಸಾಕ್ಷಿ ಶರ್ಮಾ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯವನ್ನು ಒಟ್ಟು 33 ಕ್ರೀಡಾಪಟುಗಳು ಪ್ರತಿನಿಧಿಸಿದ್ದು, ಈ ಪೈಕಿ 26 ಆಳ್ವಾಸ್ ವಿದ್ಯಾರ್ಥಿನಿಯರು. ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಆಳ್ವಾಸ್ನ ಎಲ್ಲಾ ಕ್ರೀಡಾಪಟುಗಳು ಆಳ್ವಾಸ್ ಕ್ರೀಡಾ ದತ್ತು ಯೋಜನೆಯಡಿ ಶಿಕ್ಷಣ ಪಡೆಯುತ್ತಿದ್ದು, ಇಲ್ಲಿ ಚಿನ್ನದ ಪದಕ ಪಡೆದ ಕ್ರೀಡಾಪಟುಗಳಿಗೆ ರೂ10000, ಬೆಳ್ಳಿಯ ಪದಕ ಪಡೆದವರಿಗೆ ರೂ7500 ಹಾಗೂ ಕಂಚಿನ ಪದಕ ಪಡೆದವರಿಗೆ ರೂ 5000ದ ನಗದು ಬಹುಮಾನವನ್ನು ಸಂಸ್ಥೆಯ ವತಿಯಿಂದ ನೀಡುವುದಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಘೋಷಿಸಿದರು.