ಮುಂಬಾಯಿ, ಜು.13: ಕರ್ನಾಟಕ ಜಾನಪದ ಕಲೆಯನ್ನು ಉಳಿಸಿ ಬೆಳೆಸಿ , ಅದನ್ನು ಇಂದಿನಿಂದ ಮತ್ತು ಮುಂದಿನ ಜನಾಂಗಕ್ಕೆ ತಿಳಿಯ ಪಡಿಸಿ ಬಾವೀ ಜನಾಂಗಕ್ಕೆ ಹಸ್ತಾಂತರಿಸುವ ̧ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ಕರ್ನಾಟಕ ಜಾನಪದ ಪರಿಷತ್ತು (ರಿ.) ಬೆಂಗಳೂರು ಇದರ ಮಹಾರಾಷ್ಟ್ರ ಘಟಕವು ಇದೇ ಜು.೨೩ನೇ ಶನಿವಾರ ̧ಸಂಜೆ ೩.೦೦ ಗಂಟೆಯಿಂದ ಬಂಟರ ಸಂಘ ಮುಂಬಾಯಿ ಇದರ ಅನೇಕ್ಸ್ ಕಟ್ಟಡದ ಎರಡನೇ ಮಹಡಿಯಲ್ಲಿನ ಶ್ರೀಮತಿ ರಂಜನಿ ಸುಧಾಕರ ಹೆಗ್ಡೆ ಸಮಾಜ ಕಲ್ಯಾಣ ಸಭಾ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ತು(ರಿ.) ಬೆಂಗಳೂರು ಮಹಾರಾಷ್ಟ್ರ ಘಟಕ ಇದರ ಅಧ್ಯಕ್ಷ ಡಾ| ಆರ್.ಕೆ ಶೆಟ್ಟಿಇವರ ಅಧ್ಯಕ್ಷತೆಯಲ್ಲಿ ಮುಂಬಾಯಿ ಮಹಾನಗರದಲ್ಲಿನ ಜನತೆಗೆ ‘ಜಾನಪದ ಕಲೆಯ ಬೆಳವಣಿಗೆ, ಉತ್ತರದಲ್ಲಿ-ದಕ್ಷಿಣದಲ್ಲಿ’ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ಆಯೋಜಿಸಿದೆ.
ಘಟಕದ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಶ್ರೀನಿವಾಸ ಸಪಲ್ಯ ಇವರು ‘ಜಾನಪದ ಕಲೆಯ ದಕ್ಷಿಣ ಕನ್ನಡದ ನಡಿಗೆ’ ಬಗ್ಗೆ ಮತ್ತು ಹಿರಿಯ ಲೇಖಕಿ ಲಲಿತ ಅಂಗಡಿ ಇವರು ‘ಉತ್ತರ ಕನ್ನಡದಲ್ಲಿ ಬೆಳೆಯುತ್ತಿರುವ ಜಾನಪದ ಕಲೆ’ ಬಗ್ಗೆ ಚಿಂತನ-ಮಂಥನದೊಂದಿಗೆ ಉಪನ್ಯಾಸ ನೀಡಲಿದ್ದಾರೆ. ̧ಸಂವಾದ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಪ್ರಶ್ನೆಗಳಿಗೂ ಅವಕಾಶವಿದ್ದು , ಆಯೋಜಕರು ಸೂಕ್ತ ಉತ್ತರವನ್ನು ನೀಡಲಿರುವರು. ಈ ಕಾರ್ಯಕ್ರಮದ ಸಮನ್ವಯತೆಯನ್ನು ಪರಿಷತ್ತ್ನ ಗೌ| ಪ್ರ| ಕಾರ್ಯದರ್ಶಿ ಅಶೋಕ ಪಕ್ಕಳ ಅವರು ನಡೆಸಿ ಕೊಡಲಿದ್ದಾರೆ.
ಸಂವಾದ ಕಾರ್ಯಕ್ರಮದ ಮಧ್ಯೆ ಸಾಂಸ್ಕೃತಿಕ ‘ಜಾನಪದ ಗೀತಾ ಗಾಯನ ಕಾರ್ಯಕ್ರಮ’ ಹಮ್ಮಿಕೊಳ್ಳಲಾಗಿದ್ದು ಸ್ಪರ್ಧಾರೂಪಕವಾಗಿರದೆ ಮನೋರಂಜನಾರ್ಥವಾಗಿ ಸಮೂಹ ಗೀತೆ ಮತ್ತು ಏಕವ್ಯಕ್ತಿ ಗೀತೆಯನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಭಾಗವಹಿಸಿದ ಕಲಾವಿದರಿಗೆ ಸೂಕ್ತ ಪ್ರೋತ್ಸಾಹಕ ಗೌರವ ಬಹುಮಾನಗಳನ್ನು ನೀಡಿ ಅಭಿನಂದಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವವರು ಶುದ್ಧ ಜಾನಪದ ಗೀತೆಯೆನ್ನೇ ಹಾಡುವಂತೆ ಮತ್ತು ತಂಡದಲ್ಲಿ ಕನಿಷ್ಠ ನಾಲ್ಕು ಗರಿಷ್ಠ ಎಂಟು ಸದಸ್ಯರಿರುವಂತೆ , ಉಡುಗೆ ಸಾಂಪ್ರದಾಯಕವಾಗಿರುವಂತೆ ಗೀತೆಯನ್ನು ಹಾಡಲಿಚ್ಛಿಸುವವರು ತಮ್ಮ ಹೆಸರನ್ನು ಕಾರ್ಯಕ್ರಮಕ್ಕಿಂತ ಬಹಳಷ್ಟು ಮುಂಚಿತವಾಗಿಯೇ ತಿಳಿಸುವಂತೆ ಕಾರ್ಯಕ್ರಮಕ್ಕೆ ಸರಿಯಾಗಿ ಹಾಜರಿರುವಂತೆ ನಿನಿಯಮವನ್ನು ಹಾಕಲಾಗಿದ್ದು ಈ ನಿಯಮಗಳನ್ನು ಪಾಲಿಸುವಂತೆ ಭಾಗವಹಿಸಲಿಚ್ಛಿಸುವ ಸಂಘ ಸಂಸ್ಥೆಗಳ ಸದಸ್ಯರಿಗೆ ಈ ಮೂಲಕ ವಿನಂತಿಸಿಕೊಳ್ಳಲಾಗಿದೆ. ಜಾನಪದ ಗೀತೆಯನ್ನು ಹಾಡಲು ಗರಿಷ್ಠ ೬ ನಿಮಿಷದ ಕಾಲಮಿತಿಯನ್ನು ನಿರ್ಧರಿಸಲಾಗಿದೆ.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಕಲಾಭಿಮಾನಿಗಳು, ಕಲಾವಿದರು , ತುಳು ಕನ್ನಡಿಗರು, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಹಾಗೂ ಹೆಚ್ಚಿನ ಮಾಹಿತಿ ಗಾಗಿ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ವತಿಯಿಂದ ಉಪಾದ್ಯಕ್ಷ ಡಾ| ̧ಸುರೇಂದ್ರ ಕುಮಾರ್ ಹೆಗ್ಡೆ, ಗೌ| ಪ್ರ| ಕಾರ್ಯದರ್ಶಿ ಅಶೋಕ್ ಪಕ್ಕಳ (9323822352), ಗೌ ಕೋಶಾಧಿಕಾರಿ ಗಣೇಶ್ ನಾಯ್ಕ್, ಜತೆ ಕಾರ್ಯದರ್ಶಿ ಪದ್ಮನಾಭ ಸಸಿಹಿತ್ಲು (9987959750), ಜತೆ ಕೋಶಾಧಿಕಾರಿ ಕುಸುಮ ಪೂಜಾರಿ, ಮಹಿಳಾಧ್ಯಕ್ಷೆ ಅನಿತಾ ಶೆಟ್ಟಿ ಮತ್ತು ಕಾರ್ಯಕ್ರಮದ ಸಂಪೂರ್ಣ ಪ್ರಾಯೋಜಕರಾದ ಶ್ರೀನಿವಾಸ ಸಪಲ್ಯ (9820370090) ಇವರು ವಿನಂತಿಸಿದ್ದಾರೆ. ಕಾರ್ಯಕ್ರಮದ ನಂತರ ಲಘ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.