ಸೆಪ್ಟೆಂಬರ್ ತಿಂಗಳ 16ನೇ ತಾರೀಕು ಶನಿವಾರ ರಾತ್ರಿ 8:00 ಗಂಟೆಗೆ ಐಲೇಸಾ ದಿ ವಾಯ್ಸ್ ಆಫ್ ಒಷನ್ (ರಿ)ಡಿಜಿಟಲ್ ವೇದಿಕೆಯಲ್ಲಿ ‘ಗಂಟ್ ಕಲ್ವೆರ್’ ತುಳು ಚಲನಚಿತ್ರದ ಹಾಡು ಬಿಡುಗಡೆಯಾಗಲಿದೆ. ಜಾಗತಿಕ ತುಳು ಸಾಂಸ್ಕೃತಿಕ ರಾಯಭಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅಬುಧಾಬಿಯ ಸರ್ವೋತ್ತಮ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಹಾಡನ್ನು ಬಿಡುಗಡೆಗೊಳಿಸಲಿದ್ದಾರೆ.
ಚಿತ್ರದ ಪಾತ್ರವರ್ಗದ ನಾಯಕ ನಾಯಕಿ ಮತ್ತು ಹಾಸ್ಯ ನಟರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಅವರು ಸಂಗೀತ ನೀಡಿರುವ ಹಾಡನ್ನು ಐಲೇಸಾ ಸಂಸ್ಥೆಯ ಹೆಮ್ಮೆಯ ಹಾಡುಗಾರ ಸುಧಾಕರ್ ಶೆಟ್ಟಿಯವರು ಹಾಡಿದ್ದು ಚಿತ್ರವನ್ನು ಸುಧಾಕರ್ ಬನ್ನಂಜೆಯವರು ನಿರ್ದೇಶಿಸಿದ್ದಾರೆ. ಮಂಗಳೂರು, ಮೂಡಬಿದ್ರಿ ಮತ್ತು ಉಡುಪಿ ಪರಿಸರದಲ್ಲಿ ಚಿತ್ರೀಕರಣ ಮುಗಿಸಿರುವ ಹಾಸ್ಯಮಯ ಚಿತ್ರದಲ್ಲಿ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಸುಂದರ್ ರೈ ಮಂದಾರ, ಉಮೇಶ್ ಮಿಜಾರ್, ಪ್ರದೀಪ್ ಆಳ್ವ ಕದ್ರಿ, ಪ್ರೇರಣಾ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ದಿಶಾ ಪುತ್ರನ್, ಸುಧೀರ್ ಕೊಟ್ಟಾರಿ ಇವರ ಭರ್ಜರಿ ತಾರಾಗಣವಿದ್ದು, ನಾಯಕ ನಾಯಕಿಯರಾಗಿ ವಿಜೇಶ್ ಶೆಟ್ಟಿ ಮತ್ತು ಸ್ಮಿತಾ ಸುವರ್ಣ ಅಭಿನಯಿಸಿದ್ದಾರೆ.
ಉಪ್ಪಳ ರಾಜಾರಾಮ್ ಶೆಟ್ಟಿ, ಕೃತಿ ಶೆಟ್ಟಿ, ನಾಗೇಶ್ ಶೆಟ್ಟಿ ಮತ್ತು ಅಮಿಶ್ ಚಂದ್ರನ್ ಸಹ ನಿರ್ಮಾಪಕರಾಗಿರುವ ಗಂಟ್ ಕಲ್ವೆರ್ ಚಿತ್ರಕ್ಕೆ ಶಂಕರ್ ಮತ್ತು ರಾಜ್ ಅವರ ಛಾಯಾಗ್ರಹಣ, ರಾಮದಾಸ್ ಸಸಿಹಿತ್ಲು ಇವರ ಸಹ ನಿರ್ದೇಶನವಿದೆ. ತುಳು ಭಾಷಾಭಿಮಾನಿಗಳು ಶನಿವಾರ ರಾತ್ರಿ ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ZOOM ID :5340283988 pass code : ilesa ಮೂಲಕ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ತುಳು ಭಾಷೆಯ ಬೆಳವಣಿಗೆಯಲ್ಲಿ ಸಹಕರಿಸಬೇಕಾಗಿ ಐಲೇಸಾ ದಿ ವಾಯ್ಸ್ ಆಫ್ ಒಷನ್ ಸಂಸ್ಥೆಯ ಮಾಧ್ಯಮ ಸಂಚಾಲಕ ಸುರೇಂದ್ರಕುಮಾರ್ ಶೆಟ್ಟಿ ಮಾರ್ನಾಡ್ ಭಿನ್ನವಿಸಿಕೊಂಡಿದ್ದಾರೆ.