ಐತಿಹಾಸಿಕ ಹಿನ್ನೆಲೆಯಿದ್ದು,ಸುಮಾರು 2200 ವರ್ಷದ ಇತಿಹಾಸವಿರುವ ಶಿರ್ವ ಮಟ್ಟಾರು ಶ್ರೀ ಬಬ್ಬರ್ಯ ದೈವಸ್ಥಾನದಲ್ಲಿ ಎಲ್ಲೂರು ಸೀಮೆಯ ಆಗಮ ಪಂಡಿತ ವೇ|ಮೂ|ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ,ವೇ|ಮೂ| ಕುತ್ಯಾರು ಕೇಂಜ ಭಾರ್ಗವ ತಂತ್ರಿ ಮತ್ತು ವೇ|ಮೂ| ರಘುಪತಿ ಗುಂಡು ಭಟ್ ಅವರ ಪೌರೋಹಿತ್ಯದಲ್ಲಿ ಬ್ರಹ್ಮಕಲಶಾಭಿಷೇಕವು ಸೋಮವಾರ ನಡೆಯಿತು.
ಸೋಮವಾರ ಪುಣ್ಯಾಹ,ಗಣಯಾಗ,ಬ್ರಹ್ಮಕಲಶ ಪ್ರತಿಷ್ಠೆ,ಪ್ರಧಾನ ಯಾಗ, 8-45ರ ಮೀನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಾಶಾಭಿಷೇಕ,ಮಹಾಪೂಜೆ ನಡೆದು ಸಾನಿಧ್ಯಕ್ಕೆ ಸಂಬಂಧಪಟ್ಟ ನಾಗಬನದಲ್ಲಿ ತನುತಂಬಿಲ ಸೇವೆ ನಡೆಯಿತು. ಸಂಪ್ರದಾಯದಂತೆ ಮಧ್ಯಾಹ್ನ ಧ್ವಜಾರೋಹಣ ನಡೆದು ದೈವ ಸಂದರ್ಶನ,ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದರು. ರಾತ್ರಿ ನಂದಿಗೋಣ ಮತ್ತು ದೈವ ಬಬ್ಬರ್ಯನ ನೇಮ ನಡೆದು ಮಂಗಳವಾರ ಬೆಳಿಗ್ಗೆ ನೀಚ ದೈವದ ನೇಮ ನಡೆಯಿತು.
ದೈವಸ್ಥಾನದ ಮೊಕ್ತೇಸರ ಮಟ್ಟಾರು ಅರಂತಡೆ ಎಂ. ಗಿರೀಶ್ ಹೆಗ್ಡೆ, ಆಡಳಿತ ಮಂಡಳಿಯ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಶಿರ್ವ ನಡಿಬೆಟ್ಟು ಮನೆತನದ ಚಂದ್ರಶೇಖರ ಹೆಗ್ಡೆ, ಬರೊಡಾದ ಉದ್ಯಮಿ ಶಶಿಧರ ಶೆಟ್ಟಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪುಣೆಯ ಉದ್ಯಮಿ ಕರುಣಾಕರ ಶೆಟ್ಟಿ, ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ, ಜಗದೀಶ ಅರಸ, ಸುಬ್ಬಯ್ಯ ಹೆಗ್ಡೆ, ಮಟ್ಟಾರು ಪರಾಡಿ ದಿನರಾಜ್ ಹೆಗ್ಡೆ, ಪರಾಡಿ ಶೇಖರ ಹೆಗ್ಡೆ, ಪರಾಡಿ ಪ್ರೇಮನಾಥ ಹೆಗ್ಡೆ, ಶೈಲೇಶ್ ಹೆಗ್ಡೆ, ಸೀತಾರಾಮ ನಾಯಕ್, ಧರ್ಮೆಟ್ಟು ಶಂಕರ ಶೆಟ್ಟಿ, ಕಡಂಬುಗುತ್ತು ಭಾಸ್ಕರ ಶೆಟ್ಟಿ, ಸುರೇಶ್ ನಾಯಕ್, ಗೋಪಾಲ್ ನಾಯ್ಕ,ಹಿರಿಯರಾದ ದಿವಾಕರ ಹೆಗ್ಡೆ ಪರಾಡಿ, ಅರಂತಡೆ ಪ್ರವೀಣ್ ಹೆಗ್ಡೆ, ರಕ್ಷಿತ್ ಶೆಟ್ಟಿ, ಕಾನಬೆಟ್ಟು ಶಿವರಾಯ ಪೂಜಾರಿ, ನಂಗೆಟ್ಟು ಸತೀಶ ಪೂಜಾರಿ, ಮುಕ್ಕಾಲಿ ರಮೇಶ್ ಶೆಟ್ಟಿ, ನಿತೇಶ್ ಪೂಜಾರಿ, ರಂಜಿತ್ ಶೆಟ್ಟಿ, ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಮತ್ತು ಭಕ್ತರು ಉಪಸ್ಥಿತರಿದ್ದರು.