ತುಳು ಕನ್ನಡ ವೆಲ್ಫೇರ್ ಅಸೋಸಿಯೇಶನ್ ಮೀರಾ ಭಯಂದರ್ ಆಯೋಜನೆಯಲ್ಲಿ ಅಗೋಸ್ಟ್ 6 ರವಿವಾರದಂದು ಆಟಿದ ನೆಂಪು – 2023 ಹಾಸ್ಯಗೋಷ್ಠಿ ಶ್ರೀ ನಾರಾಯಣ ಗುರು ಹಾಲ್, ಒಂದನೇ ಮಹಡಿ, ಜಹಾಂಗೀರ್ ಸರ್ಕಲ್, ಎಂ. ಟಿ. ಎನ್. ಎಲ್ ರೋಡ್, ಮೀರಾರೋಡ್ (ಪೂ). ಇಲ್ಲಿ ಅರ್ಥಗರ್ಭಿತವಾಗಿ ನೆರೆದ ಜನ ಸಮೂಹದ ಎದುರು ನೆರವೇರಿತು.
ಮೀರಾ ಭಯಂದರ್ ತುಳು ಕನ್ನಡ ವೆಲ್ಫೇರ್ ಅಸೋಸಿಯೇಶನ್ ಸಂಸ್ಥೆಯು ಕಳೆದ ಒಂದು ದಶಕಗಳಿಂದ ನಮ್ಮ ನಾಡಿನ ಜನಪದ ಕಲೆ ಮತ್ತು ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವರ್ಷವಿಡೀ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ. ಅದರಂತೆ ಆಟಿಯ ಆಚರಣೆಯ ಜೊತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
ಇಲ್ಲಿ ನಡೆದ ಹಾಸ್ಯಗೋಷ್ಠಿಯಲ್ಲಿ ಮುಂಬಯಿಯ ಸಾಹಿತಿಗಳಿಂದ ವಿಶೇಷ ಕಾರ್ಯಕ್ರಮ ನಡೆದಿದ್ದು ಸಭಾಧ್ಯಕ್ಷತೆಯನ್ನು ಹಾಸ್ಯ ಕವಿ ಖ್ಯಾತಿಯ ಸೋಮನಾಥ್ ಕರ್ಕೇರರು ವಹಿಸಿದ್ದು ನಗು ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಉತ್ತಮ ಎಂದು ಕವಿಗಳು ಪ್ರಸ್ತುತಪಡಿಸಿದ ಗೋಷ್ಠಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೂ ಕೆಲವು ಹಾಸ್ಯ ಪ್ರಸಂಗ ಮತ್ತು ಚುಟುಕುಗಳನ್ನು ಸಭಿಕರ ಮುಂದೆ ಹಾರಿಸಿದರು.
ಕವಿ ಲೇಖಕ, ಚಿತ್ರಕಾರ ಗಣೇಶ್ ಕುಮಾರ್ ತಮ್ಮ ಅನುಭವದ ಮೇರೆಗೆ ಕೆಲ ಸಾಂಧರ್ಭಿಕ ಸಂದರ್ಭದ ಹಾಸ್ಯ ಚುಟುಕುಗಳನ್ನು ನುಡಿದು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು.
ಸಾಹಿತಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಇವರು ಚುಟುಕುಗಳನ್ನು ಸಭಿಕರ ಮುಂದಿಟ್ಟರು. ಲೇಖಕಿ, ಶಿಕ್ಷಕಿ, ಸುಜಾತ ಉಮೇಶ್ ಶೆಟ್ಟಿಯವರು ಹಾಸ್ಯ ಕವನ ಓದಿ ಸಭಿಕರನ್ನು ರಂಜಿಸಿದರು. ಸುಗುಣ ಬಂಗೇರ ನಗು ಬರುವ ಅನೇಕ ಸಂದರ್ಭಗಳ ಪಟ್ಟಿಯನ್ನು ಪ್ರೇಕ್ಷಕರ ಮುಂದಿಟ್ಟರು ಮತ್ತು ಅಶೋಕ್ ವಳದೂರು ಸ್ವರಚಿತ ಚುಟುಕು ಹಾಗೂ ನಿರೂಪಣೆಯೊಂದಿಗೆ ಹಾಸ್ಯಗೋಷ್ಠಿಗೆ ಒಂದು ರೂಪರೇಖೆ ಕೊಟ್ಟರು. ಸಾಹಿತ್ಯ ಮತ್ತು ಕಲೆ ವಿಭಾಗದ ಮುಖ್ಯಸ್ಥೆ ಲೀಲಾ ಗಣೇಶ್ ಕಾರ್ಕಳ ಸಾಹಿತ್ಯ ವಿಭಾಗದ ಚಟುವಟಿಕೆಯನ್ನು ಸಭಾಸದರ ಮುಂದೆ ತೆರೆದಿಟ್ಟರು. ಭಾಗವಹಿಸಿದ ಎಲ್ಲಾ ಕವಿಗಳಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ, ಪುಷ್ಪ ಗೌರವ ಹಾಗೂ ಗೌರವ ಧನವಿತ್ತು ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿವಿಧ ವಿಭಾಗದ ಸದಸ್ಯರಿಂದ ಹಾಗೂ ಕಿರು ನಾಟಕ, ಇತರ ಸಂಘ ಸಂಸ್ಥೆಯ ತಂಡಗಳಿಂದ ನೃತ್ಯ ರೂಪಕ ಮತ್ತು ಆಟಿದ ನೆಂಪು ಕಾರ್ಯಕ್ರಮದ ಅಂಗವಾಗಿ ಆಟಿ ಕಳಂಜೆ ಕಾರ್ಯಕ್ರಮದಲ್ಲಿ ವಿಭಿನ್ನ ಶೈಲಿಯ ಪ್ರಾತ್ಯಕ್ಷಿತೆ, ಮಾತ್ರವಲ್ಲದೆ ಮಹಿಳಾ ವಿಭಾಗದವರಿಂದ ಜಾನಪದ ನೃತ್ಯ ಜರುಗಿತು. ತದನಂತರ ಗಣ್ಯರ ಸಮ್ಮುಖದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ತುಳು ಕನ್ನಡ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸಂಸ್ಥೆಯ
ಕಾರ್ಯಾಕಾರಿ ಸಮಿತಿಯ ಪರವಾಗಿ ಗೌ. ಅಧ್ಯಕ್ಷರಾದ ರಾಜೇಶ್ ಎಸ್. ಕುಂದರ್, ಅಧ್ಯಕ್ಷರಾದ ಎ.ಕೆ. ಹರೀಶ್, ಉಪಾಧ್ಯಕ್ಷರುಗಳಾದ ಸತೀಶ್ ಜೆ. ಪೂಜಾರಿ ಮತ್ತು ಹರೀಶ್ ವಿ. ಸುವರ್ಣ, ಗೌ. ಪ್ರ. ಕಾರ್ಯದರ್ಶಿ ಆಶಾಲತಾ ಪಿ. ಶೆಟ್ಟಿ, ಗೌ. ಪ್ರ. ಕೋಶಾಧಿಕಾರಿಗಳಾದ ಉಮೇಶ್ ಬಾರ್ಕೂರು ಮತ್ತು ಗೀತಾ ಸಿ. ಶೆಟ್ಟಿ, ಮಹಿಳಾ ವಿಭಾಗದ ಪರವಾಗಿ ವಸಂತಿ ಎಸ್. ಶೆಟ್ಟಿ ಮತ್ತು ಗಾಯತ್ರಿ ಎಚ್ ರಾವ್, ಸಾಹಿತ್ಯ ಮತ್ತು ಕಲೆ ವಿಭಾಗದ ಪರವಾಗಿ ಲೀಲಾ ಗಣೇಶ್ ಕಾರ್ಕಳ ಮತ್ತು ಅಶೋಕ್ ವಳದೂರು ಮತ್ತು ರಮಾದೇವಿ ರಾವ್, ಸಾಂಸ್ಕೃತಿಕ ವಿಭಾಗದ ಪರವಾಗಿ ವಿಜಯಲಕ್ಷೀ ಡಿ. ಶೆಟ್ಟಿ ಮತ್ತು ಭಾರತಿ ಅಂಚನ್, ಧಾರ್ಮಿಕ ವಿಭಾಗದ ಪರವಾಗಿ ಉಮೇಶ್ ಜೆ. ಸುವರ್ಣ ಮತ್ತು ಸುಜಾತ ಜೆ ಕೋಟ್ಯಾನ್ ಹಾಗೂ ವಿವಿಧ ಸಮಿತಿಯ ಕಾರ್ಯಾಧ್ಯಕ್ಷರುಗಳು ಮತ್ತು ಸದಸ್ಯರು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ಕಾರ್ಯಕ್ರಮದ ಕೊನೆಗೆ ಪ್ರೀತಿ ಭೋಜನದ ವ್ಯವಸ್ಥೆಯಿತ್ತು.