ಹಿರಿಯ ಕೃಷಿಕ ನಕ್ರೆ ವರ್ಣಬೆಟ್ಟು ರಘುರಾಮ್ ನಾಯ್ಕ್ ಅವರ ಪತ್ನಿ ಶಿರ್ವ ನಡಿಬೆಟ್ಟು ಮನೆತನದ ಪುಷ್ಪಾ ಆರ್. ಹೆಗ್ಡೆ (70) ಅವರು ಸೆ.13ರಂದು ನಡಿಬೆಟ್ಟುವಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ನ್ಯಾರ್ಮ ಶ್ರೀ ಧರ್ಮ ಜಾರಂದಾಯ ದೈವಸ್ಥಾನ ಹಾಗೂ ನಡಿಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನಗಳ ಜೀರ್ಣೋದ್ದಾರ ಕಾರ್ಯಗಳಲ್ಲಿ ಭಾಗವಹಿಸಿ ಸೇವೆ ಸಲ್ಲಿಸಿದ್ದ ಅವರು ಶಿರ್ವ ನಡಿಬೆಟ್ಟು ಸೂರ್ಯಚಂದ್ರ ಜೋಡುಕೆರೆ ಕಂಬಳದ ಪೋಷಕರಾಗಿದ್ದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮತ್ತಿತರ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದ್ದಾರೆ.