
ಅವಿಭಜಿತ ದಕ್ಷಿಣ ಕನ್ನಡ, ಕರ್ನಾಟಕದಲ್ಲೇ ಎಲ್ಲೂ ಇಲ್ಲದ ನಮ್ಮ ಕಾಪು ಮಾರಿಯಮ್ಮ ದೇವಾಲಯ ನಿರ್ಮಾಣ ಮಾಡುವ ಭಾಗ್ಯ ನಮಗೆ ಒದಗಿ ಬಂತು. ಸಿಕ್ಕಿದ ಭಾಗ್ಯ ಎಂದು ತಿಳಿದು ಕಾಪು ಅಮ್ಮನ ಪ್ರೇರಣೆಯಂತೆ ನಡೆದಿದ್ದೇವೆ. ಕಾಪು ಮಾರಿಯಮ್ಮನ ಸೇವೆಯಲ್ಲಿ ಪುಣೆಯ ಬಹಳಷ್ಟು ದಾನಿಗಳ ಪಾತ್ರವಿದೆ. ಪವಾಡ ಕ್ಷೇತ್ರ ಕಾಪು ಮಾರಿಯಮ್ಮನ ಅನುಗ್ರಹ ತಮಗೆಲ್ಲರಿಗೂ ಸದಾ ಇರಲಿ. ನಾವು ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆಯಲ್ಲಿ ಇದ್ದೇವೆ. ಆದರೆ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಮಾಡುವಾಗ ಧಾರ್ಮಿಕ ವಿಚಾರಗಳಿಗೆ ಮಾತ್ರ ಒತ್ತು ನೀಡುತ್ತೇವೆ. ಅದೇ ರೀತಿ ಸಮಾಜದ, ಸಂಘದ ಕಾರ್ಯದಲ್ಲಿ ಸಮಾಜಮುಖಿ ಕಾರ್ಯಗಳಿಗೆ ಒತ್ತು ನೀಡಿ ನಡೆಯುತ್ತೇವೆ. ಇದೇ ನಮ್ಮ ಧರ್ಮವಾಗಿದೆ. 51 ವರ್ಷಗಳ ಹಿಂದೆ ಸ್ಥಾಪನೆ ಮಾಡಿದ ಪುಣೆ ಬಂಟರ ಸಂಘದ ಸ್ಥಾಪಕರಲ್ಲಿ ಸಮಾಜದ ಮೇಲಿನ ಪ್ರೀತಿ, ಭಕ್ತಿ ಭಾವ, ಸಮಾಜ ಅಭಿವೃದ್ದಿ ಹೊಂದಬೇಕು ಎಂಬ ತುಡಿತ ಇತ್ತು. ಅದ್ದರಿಂದ ಸಂಘ ಸ್ಥಾಪನೆ ಆಗಿದೆ. ಅದೇ ರೀತಿ ಸ್ಥಾಪನೆಯಾದ ಸಂಘವನ್ನು ಉತ್ತರೋತ್ತರ ಅಭಿವೃದ್ದಿ ಪಥದಲ್ಲಿ ನಡೆಸಿಕೊಂಡು ಬಂದ ಮಾಜಿ ಅಧ್ಯಕ್ಷರುಗಳ ಪಾತ್ರ ಕೂಡಾ ದೊಡ್ಡದು. ಸಂಘಟಕನಾಗಿ, ಕಠಿನ ಪರಿಶ್ರಮಿಯಾಗಿ ಪುಣೆ ಬಂಟರ ಭವನ ನಿರ್ಮಾಣದ ರೂವಾರಿಯಾಗಿ ಸಂತೋಷ್ ಶೆಟ್ಟಿ ತೋರಿದ ಸಾಧನೆ ಅಸಾಮಾನ್ಯವಾದುದು. ಇಂದು ಈ ಭವ್ಯ ಭವನದಲ್ಲಿ ಅಧ್ಯಕ್ಷರಾದ ಅಜಿತ್ ಹೆಗ್ಡೆಯವರ ನೇತೃತ್ವದಲ್ಲಿ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ನಡೆಯುತ್ತಿದೆ. ಅದರಲ್ಲೂ ಸಮಾಜದ ಬಾಂಧವರು ನಡೆಸಿಕೊಟ್ಟ ಆಪರೇಷನ್ ಸಿಂದೂರ್ ರೂಪಕ ಮನ ತಟ್ಟಿತು. ಈ ಕಾರ್ಯಕ್ರಮವನ್ನು ಕಾಪು ಮಾರಿಯಮ್ಮನ ಸನ್ನಿಧಿಯಲ್ಲಿ ಮಾಡಿಸುವ ಇಚ್ಛೆ ನನ್ನದು. ಸಮಾಜದ ಏಳಿಗೆಗಾಗಿ ಸಂಘಟಕರಾಗಿ ಪುಣೆಯಲ್ಲಿ ಬಂಟರು ಇಷ್ಟು ದೊಡ್ಡ ಭವನ ನಿರ್ಮಾಣ ಮಾಡಿದ್ದಾರೆ ಎಂದರೆ ಇದಕ್ಕೆ ಒಗ್ಗಟ್ಟು ಕಾರಣ. ಒಗ್ಗಟ್ಟಿನಿಂದ ಮಾಡಿದ ಕಾರ್ಯ ಯಶಸ್ಸು ಆಗುತ್ತದೆ. ಸಂಘ ಬಲ ಸಮಾಜಾಭಿವೃದ್ದಿಗೆ ನಿರಂತರವಾಗಿರಲಿ ಎಂದು ಕಾಪು ಮಾರಿಯಮ್ಮ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ, ಕಾಪು ಬಂಟರ ಸಂಘದ ಅಧ್ಯಕ್ಷರಾದ ವಾಸುದೇವ ಎಲ್ ಶೆಟ್ಟಿ ನುಡಿದರು. ಪುಣೆ ಬಂಟರ ಸಂಘದ 51ನೇ ವಾರ್ಷಿಕೊತ್ಸವ ಸಮಾರಂಭವು ಜನವರಿ 26ರಂದು ಲತಾ ಸುಧೀರ್ ಶೆಟ್ಟಿ ವೇದಿಕೆ, ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಕೇಂದ್ರ ಬಂಟರ ಭವನದಲ್ಲಿ ಜರಗಿತು.

ವಾರ್ಷಿಕೋತ್ಸವದ ಸಮಾರಂಭವು ಪುಣೆ ಬಂಟರ ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಉಪಸ್ಥಿತಿಯಲ್ಲಿ, ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತುರವರ ಅದ್ಯಕ್ಷತೆಯಲ್ಲಿ ನಡೆದ ಸಭಾ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಾಪು ಶ್ರೀ ಹೊಸ ಮಾರಿಗುಡಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಮತ್ತು ಕಾಪು ಬಂಟರ ಸಂಘದ ಅಧ್ಯಕ್ಷರಾದ ವಾಸುದೇವ ಎಲ್ ಶೆಟ್ಟಿ, ಗೌರವ ಅತಿಥಿಗಳಾಗಿ ಬಜ್ಪೆ ಬಂಟರ ಸಂಘದ ಅಧ್ಯಕ್ಷ, ಥಾಣೆ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ವೇಣುಗೋಪಾಲ ಎಲ್ ಶೆಟ್ಟಿ ಮತ್ತು ಮುಂಬಯಿಯ ಮೆರಿಟ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ ಲಿಮಿಟೆಡ್ ನ ಸಿಎಂಡಿ ಅಶೋಕ್ ಶೆಟ್ಟಿ, ಜಿ.ಎಂ ಶೆಟ್ಟಿ ಅತ್ಯುತ್ತಮ ಸಮಾಜ ಸೇವಾ ಸಾಧಕ ಪ್ರಶಸ್ತಿ ಸನ್ಮಾನಿತ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ, ಪಿಂಪ್ರಿ ಚಿಂಚ್ವಾಡ್ ಮಹಾನಗರ ಪಾಲಿಕೆಯ ಮಾಜಿ ಸ್ಥಾಯಿ ಕಮಿಟಿ ಕಾರ್ಯಾಧ್ಯಕ್ಷರಾದ ಸಮಾಜ ಸೇವಕ ಜಗದೀಶ್ ಶೆಟ್ಟಿ, 2025 ರ ಸಾಲಿನ ಮಿಸ್ಸೆಸ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡ ಡಾ. ರಶ್ಮಾಎಂ ಶೆಟ್ಟಿ, ಬಂಟರ ಸಂಘದ ಉಪಾಧ್ಯಕ್ಷರುಗಳಾದ ವಿಶ್ವನಾಥ್ ಶೆಟ್ಟಿ ಮತ್ತು ರಾಮಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣಂಜಾರು, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಎರ್ಮಾಳ್ ಚಂದ್ರಹಾಸ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆ, ಸಾಂಸ್ಕ್ರತಿಕ ಮಹಿಳಾ ಕಾರ್ಯಾಧ್ಯಕ್ಷೆ ಸಾರಿಕಾ ಸಿ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿನಂದನ್ ಶೆಟ್ಟಿ, ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಸುಧಾಕರ್ ಶೆಟ್ಟಿ, ನಾರಾಯಣ ಹೆಗ್ಡೆ, ಸಂದೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಕಾರ್ಯಾಧ್ಯಕ್ಷೆಯರುಗಳಾದ ವಿನೋದಾ ಶೆಟ್ಟಿ, ಪ್ರೇಮಾ ಆರ್ ಶೆಟ್ಟಿ, ಶಾಲಿನಿ ಎಂ ಶೆಟ್ಟಿ, ನಯನಾ ಸಿ ಶೆಟ್ಟಿಯವರು ಉಪಸ್ಥಿತರಿದ್ದರು. ಅತಿಥಿ ಗಣ್ಯರು ದೀಪ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಚಂದ್ರಹಾಸ್ ಶೆಟ್ಟಿ ಎರ್ಮಾಳ್ ಸ್ವಾಗತಿಸಿದರು. ಸಂಘದ ಅಧ್ಯಕ್ಷರಾದ ಅಜಿತ್ ಹೆಗ್ಡೆಯವರು ಪ್ರಾಸ್ತಾವಿಕವಾಗಿ ಸಂಘದ ಪ್ರಗತಿಯ ಬಗ್ಗೆ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣಂಜಾರು ಸಂಘದ ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ಮಹಿಳಾ ವಿಭಾಗದ ವರದಿಯನ್ನು ನೀನಾ ಬಿ ಶೆಟ್ಟಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವರ್ಷಂಪ್ರತಿ ಕೊಡಮಾಡುವ ಜಿ.ಎಂ ಶೆಟ್ಟಿ ಅತ್ಯುತ್ತಮ ಸಮಾಜ ಸೇವಾ ಸಾಧಕ ಪ್ರಶಸ್ತಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ, ಪಿಂಪ್ರಿ ಚಿಂಚ್ವಾಡ್ ಮಹಾನಗರ ಪಾಲಿಕೆಯ ಮಾಜಿ ಸ್ಥಾಯಿ ಕಮಿಟಿ ಕಾರ್ಯಾಧ್ಯಕ್ಷರಾದ ಸಮಾಜ ಸೇವಕ ಜಗದೀಶ್ ಶೆಟ್ಟಿಯವರಿಗೆ ಚಿನ್ನದ ಪದಕ, ಶಾಲು, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಪ್ರಧಾನ ಮಾಡಲಾಯಿತು ಹಾಗೂ 2025 ರ ಸಾಲಿನ ಮಿಸ್ಸೆಸ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡ ಡಾ. ರಶ್ಮಾಎಂ ಶೆಟ್ಟಿಯವರಿಗೆ ಗಣ್ಯರ ಸಮ್ಮುಖದಲ್ಲಿ ಸನ್ಮಾನ ನಡೆಯಿತು. ಇವರ ಸನ್ಮಾನ ಪತ್ರವನ್ನು ಕ್ರಮವಾಗಿ ಸಂಧ್ಯಾ ಅರ್ ಶೆಟ್ಟಿ ಮತ್ತು ನಯನಾ ಜೆ ಶೆಟ್ಟಿ ಓದಿದರು. ವೇದಿಕೆಯಲ್ಲಿದ್ದ ಮುಖ್ಯ ಅತಿಥಿ ವಾಸುದೇವ ಶೆಟ್ಟಿ, ಗೌರವ ಅತಿಥಿಗಳಾದ ವೇಣುಗೋಪಾಲ ಶೆಟ್ಟಿ ಮತ್ತು ಅಶೋಕ್ ಶೆಟ್ಟಿಯವರನ್ನು ಸಂಘದ ವತಿಯಿಂದ ಶಾಲು, ಪೇಟ, ಸ್ಮರಣಿಕೆ ನೀಡಿ ಸತ್ಕರಿಸಲಾಯಿತು. ಇವರ ಪರಿಚಯವನ್ನು ಕ್ರಮವಾಗಿ ಗೀತಾ ವಿ ಶೆಟ್ಟಿ, ಶಾಲಿನಿ ಎಂ ಶೆಟ್ಟಿ, ಶ್ರೀಲತಾ ಎಸ್ ಶೆಟ್ಟಿಯವರು ಓದಿದರು. ಪುಣೆ ಮಹಾನಗರ ಪಾಲಿಕೆಗೆ ನಗರ ಸೇವಕರಾಗಿ ಆಯ್ಕೆಯಾದ ಶ್ರೀಮತಿ ಲತಾ ಶೆಟ್ಟಿ, ಬಾಬುರಾವ್ ಚಾಂದೆರೆ, ಅಮೋಲ್ ಬಾಲ್ವಡ್ಕರ್, ರೋಹಿಣಿ ತಾಯಿ ಚಿಮ್ಟೆ ಯವರನ್ನು ಸತ್ಕರಿಸಲಾಯಿತು ಹಾಗೂ ದಾನಿಗಳಾದ ಮಾಜಿ ಅಧ್ಯಕ್ಷರುಗಳಾದ ಕುಶಲ್ ಹೆಗ್ಡೆ ಮತ್ತು ಸದಾನಂದ ಕೆ ಶೆಟ್ಟಿಯವರನ್ನು ಸತ್ಕರಿಸಲಾಯಿತು. ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ ರನ್ನರ್ ಅಪ್ ರಕ್ಷಿತಾ ಶೆಟ್ಟಿಯವರನ್ನೂ ಕೂಡಾ ಈ ಸಂಧರ್ಭ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಂಟ ಸಾದಕರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು ಮತ್ತು ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಿಟ್ಟೆ ಚಂದ್ರಶೇಖರ್ ಶೆಟ್ಟಿ ಕಾರ್ಯಾಧ್ಯಕ್ಷತೆಯಲ್ಲಿ ಹೊರತಂದ ಕಲ್ಪವೃಕ್ಷ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸಮಾಜ ಬಾಂಧವರಿಂದ ನೃತ್ಯ ವೈವಿದ್ಯ ಮತ್ತು ಅತೀ ಅದ್ಬುತ ಸುಂದರವಾಗಿ ಮೂಡಿ ಬಂದ ಆಪರೇಷನ್ ಸಿಂದೂರ್ ನೃತ್ಯ ರೂಪಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನಿತೇಶ್ ಶೆಟ್ಟಿ ಎಕ್ಕಾರ್ ಮತ್ತು ಅಕ್ಷತಾ ಸುಜೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ರಾಮಕೃಷ್ಣ ಶೆಟ್ಟಿ ವಂದಿಸಿದರು.
ಚಿತ್ರ, ವರದಿ : ಹರೀಶ್ ಮೂಡಬಿದ್ರಿ, ಪುಣೆ





















































































































