ಈ ಬಾರಿ ಕಾಪು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ಸುರೇಶ್ ಶೆಟ್ಟಿ ಗುರ್ಮೆ ಅವರು ಓರ್ವ ಮಾದರಿ ರಾಜಕಾರಣಿ ಹಾಗೂ ನಿಜಾರ್ಥದ ಸಮಾಜ ಸೇವಕರಾಗಿದ್ದು, ಅವರು ಈ ಹಿಂದೆ ಮಾಡಿರುವ ಜನಸೇವೆಯು ಅವರ ಗೆಲುವನ್ನು ಈಗಾಗಲೇ ಖಚಿತಪಡಿಸಿದೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.
ಸುರೇಶ್ ಶೆಟ್ಟಿ ಗುರ್ಮೆ ಅವರು ಓರ್ವ ಅಪರೂಪದ ರಾಜಕಾರಣಿ. ಅವರು ರಾಜಕೀಯ ಹೊರತುಪಡಿಸಿ ಚಿಂತಿಸುವ, ಮಾತನಾಡುವ ಪ್ರಬುದ್ಧತೆ ಹೊಂದಿರುವ ಉತ್ತಮ ವಾಗ್ಮಿ. ಬಿ.ಕಾಂ. ಪದವೀಧರರಾಗಿ ಬಳಿಕ ಬಳ್ಳಾರಿಗೆ ಹೋಗಿ ಔದ್ಯೋಗಿಕ ಹಾಗೂ ಉದ್ಯಮ ರಂಗದಲ್ಲಿ ತೊಡಗಿಸಿಕೊಂಡಿದ್ದರೂ ಹುಟ್ಟೂರಿನ ಜನರೊಂದಿಗೆ ನಿರಂತರ ಸಂಪರ್ಕ ಇರಿಸಿಕೊಂಡು, ಅಶಕ್ತರಿಗೆ ತನ್ನ ಕೈಲಾದ ಸಹಾಯವನ್ನು ಮಾಡುತ್ತಾ ಬಂದವರು. ಆ ಕಾರಣದಿಂದಲೇ ಅವರ ಊರಿನ ಮುಸ್ಲಿಂ, ಕ್ರಿಶ್ಚಿಯನ್ನರು ಕೂಡ ಇವರನ್ನು ಬೆಂಬಲಿಸುತ್ತಾರೆ. ಅಲ್ಪಸಂಖ್ಯಾತ ವರ್ಗದ ದೊಡ್ಡ ಪ್ರಮಾಣದ ಮತಗಳು ಈ ಬಾರಿ ಗುರ್ಮೆ ಸುರೇಶ್ ಶೆಟ್ಟಿ ಕಾರಣದಿಂದ ಕಾಪು ಕ್ಷೇತ್ರದಲ್ಲಿ ಬಿಜೆಪಿಗೆ ಬೀಳುವುದು ಖಚಿತ.
ಸುರೇಶ್ ಶೆಟ್ಟಿ ಅವರು ವಿದ್ವತ್ಪೂರ್ಣ ಭಾಷಣದ ಮೂಲಕ ಜನರಲ್ಲಿ ಧಾರ್ಮಿಕ ಜಾಗೃತಿ, ಸಾಮಾಜಿಕ ಜಾಗೃತಿ ಮೂಡಿಸಿ ಜೀವನಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿರುತ್ತಾರೆ. ಗಳಿಸಿದ ದೊಡ್ಡ ಪ್ರಮಾಣದ ಆದಾಯವನ್ನು ಸಮಾಜಕ್ಕೆ ದಾನ, ಸಹಾಯದ ರೂಪದಲ್ಲಿ ನೀಡುತ್ತಿದ್ದಾರೆ. ಇವರ ಸಮಾಜಸೇವೆ ಹಾಗೂ ಪ್ರಬುದ್ಧತೆ ಕಾರಣದಿಂದ ಕಳೆದ ಬಾರಿಯೇ ಇವರಿಗೆ ಕಾಪುನಿಂದ ಬಿಜೆಪಿ ಟಿಕೆಟ್ ಸಿಗುವುದರಲ್ಲಿತ್ತು. ಆದರೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು. ಅವರಿಗೆ ಕಳೆದ ಬಾರಿ ಪ್ರಚಾರ ಸಮಿತಿಯ ಮುಖ್ಯಸ್ಥ ಸ್ಥಾನ ನೀಡಲಾಗಿತ್ತು. ಪಕ್ಷ ನಿಷ್ಠೆ ಮೆರೆದಿದ್ದ ಅವರು ತುಂಬಾ ಶ್ರಮಪಟ್ಟು ಲಾಲಾಜಿ ಮೆಂಡನ್ರನ್ನು ಗೆಲ್ಲಿಸಿದ್ದರು. ಇವರ ಈ ಎಲ್ಲ ನಿಷ್ಠೆಯನ್ನು ಗೌರವಿಸಿದ ಪಕ್ಷವು ಈ ಬಾರಿ ಗುರ್ಮೆಗೆ ಟಿಕೆಟ್ ಕೊಟ್ಟಿದ್ದು, ಅವರು ಸುಲಭವಾಗಿ ಗೆಲ್ಲುವುದು ಖಚಿತ. ಅವರು ಜನರೊಂದಿಗೆ ಹೊಂದಿರುವ ಆತ್ಮೀಯ ಸಂಬಂಧ, ಜನರಿಗೆ ಮಾಡುತ್ತಿರುವ ಸಹಾಯ, ಕೊರೊನಾ ಕಾಲದಲ್ಲಿ ಬಡ ಹಾಗೂ ಸಂಕಷ್ಟದಲ್ಲಿದ್ದ ಒಡ್ಡಿದ್ದ ಸಹಾಯಹಸ್ತ ಮುಂತಾದವು ಈ ಬಾರಿ ಅವರಿಗೆ ಮತಗಳ ರೂಪದಲ್ಲಿ ಹರಿದು ಬರುವುದು ಖಚಿತ.
ಸುರೇಶ್ ಶೆಟ್ಟಿ ಎಷ್ಟು ಎತ್ತರಕ್ಕೆ ಏರಿದ್ದರೂ ಹುಟ್ಟೂರಿನ ಜನರನ್ನು ಮೆರೆತವರಲ್ಲ. ಸರಳತೆ, ಸಾತ್ವಿಕತೆಯನ್ನು ದೂರ ಮಾಡಿದವರಲ್ಲ. ಆ ಕಾರಣದಿಂದಲೇ ಈಗಲೂ ಜನರಿಗೆ ಗುರ್ಮೆ ಸುರೇಶ್ ಶೆಟ್ಟಿ ಎಂದರೆ ನಮ್ಮವರು ಎಂಬ ಆತ್ಮೀಯತೆ. ರಕ್ತದಾನ, ಆರೋಗ್ಯ ಶಿಬಿರ ಮುಂತಾದವುಗಳನ್ನು ಆಯೋಜಿಸಿ ಜನರಿಗೆ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡಿದವರು. ತಾಯಿಯ ಆಸೆಯನ್ನು ಗೌರವಿಸಿ ಮನೆಯಲ್ಲೇ ಗೋಶಾಲೆ ಆರಂಭಿಸಿ ಹಲವು ತಳಿಗಳ ಗೋವುಗಳನ್ನು ಸಾಕುತ್ತಿರುವವರು. ಗೋವಿಹಾರ ಕಾರ್ಯಕ್ರಮದ ಮೂಲಕ ಜನರಿಗೆ ಗೋವಿನ ಬಗ್ಗೆ ಕಾಳಜಿ ಹಾಗೂ ಜಾಗೃತಿ ಮೂಡಿಸುತ್ತಿರುವವರು.
ಅತಿ ಅಪರೂಪದ ರಾಜಕಾರಣಿ :
ಸುರೇಶ್ ಶೆಟ್ಟಿ ಗುರ್ಮೆ ಅವರು ಇತರ ರಾಜಕಾರಣಿಗಳಿಗಿಂತ ಭಿನ್ನವಾಗಿ ನಿಲ್ಲುವವರು. ಇವರು ರಾಜಕೀಯಕ್ಕಿಂತ ಹೆಚ್ಚಾಗಿ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವವರು. ಪ್ರಬುದ್ಧ ವಾಗ್ಮಿಯೂ ಆಗಿರುವ ಅವರ ಮಾತನ್ನು ಕೇಳುವುದರಲ್ಲಿ ವಿಶೇಷ ಖುಷಿಯಿದೆ. ಇವರು ಶಾಸಕರಾಗಿ ಆಯ್ಕೆಯಾದರೆ ಕ್ಷೇತ್ರದ ಜನತೆಗೆ ಭೇದವಿಲ್ಲದಂಥ ಸಹಾಯ, ಸಹಕಾರ ಲಭಿಸುವುದು ಖಚಿತ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯೂ ಹೊಸ ಕನಸುಗಳನ್ನು ಹೊಂದಿರುವ ಅವರು ಈ ಹಿಂದೆ ಮಾಡಿರುವ ಸಮಾಜಸೇವೆಯೇ ಅವರನ್ನು ಪ್ರಚಾರವೇ ಇಲ್ಲದೆ ಗೆಲ್ಲಿಸಲು ಸಹಕಾರಿಯಾದೀತು. ಇವರು ಪಕ್ಷೇತರರಾಗಿ ಕಣಕ್ಕಿಳಿದಿದ್ದರೂ ಗೆಲುವು ಸಾಧಿಸಬಹುದಾದಂಥ ನಾಯಕ ಎಂದು ಹೇಳಿದರೆ ತಪ್ಪಾಗದು.