ಮಂಗಳೂರು ಹೊರವಲಯದ ದೇರಳಕಟ್ಟೆಯ ಎ. ಬಿ. ಶೆಟ್ಟಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ನಿರೀಕ್ಷಾ ಶೆಟ್ಟಿ ಅವರು ಸಲ್ಲಿಸಿದ ಮಹಾ ಪ್ರಬಂಧಕ್ಕೆ ನಿಟ್ಟೆ ವಿಶ್ವವಿದ್ಯಾನಿಲಯವು ಪಿಎಚ್ ಡಿ ಪದವಿ ನೀಡಿದೆ.
ಡಾ. ನಿರೀಕ್ಷಾ ಶೆಟ್ಟಿ ಅವರು ಎ. ಬಿ. ಶೆಟ್ಟಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ನ ವೈಸ್ ಪ್ರಿನ್ಸಿಪಾಲ್ ಡಾ. ಮಿತ್ರ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ‘ಅಸೋಸಿಯೇಷನ್ ಆಫ್ ವಿಟಮಿನ್ ಡಿ ರಿಸೆಪ್ಟರ್ ಜೀನ್ ಪಾಲಿ ಮಾರ್ಪಿಸಮ್ ಆಂಡ್ ಆಂಟಿಮೈಕ್ರೋಬಿಯಲ್ ಪೆಪೈಡ್ ಎಲ್ ಎಲ್ -37 ಇನ್ ಡೆಂಟಲ್ ಕೇರೀಸ್’ ಎನ್ನುವ ಮಹಾಪ್ರಬಂಧವನ್ನು ಮಂಡಿಸಿದ್ದರು. ಇದಕ್ಕೆ ಮಾನ್ಯತೆ ನೀಡಿರುವ ನಿಟ್ಟೆ ವಿಶ್ವವಿದ್ಯಾನಿಲಯವು ಎ.15 ರಂದು ಪಿ ಎಚ್ ಡಿ ಪದವಿ ನೀಡಿದೆ.
ಡಾ. ನೀರಿಕ್ಷಾ ಶೆಟ್ಟಿ ಅವರು 2018ರಿಂದ ಎ. ಬಿ. ಶೆಟ್ಟಿ ಡೆಂಟಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಬಿ. ಡಿಎಸ್ ಮತ್ತು ಎಂ. ಡಿಎಸ್ ಪದವಿಯನ್ನು ಎ. ಬಿ. ಶೆಟ್ಟಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ನಲ್ಲಿ ಪಡೆದಿದ್ದಾರೆ. ಬಿ. ಸಿ. ರೋಡಿನಲ್ಲಿ ಐದು ವರ್ಷಗಳಿಂದ ದುರ್ಗಾ ಶ್ರೀ ಡೆಂಟಲ್ ಸ್ಪೆಷಾಲಿಟಿ ಕ್ಲಿನಿಕ್ ನಡೆಸುತ್ತಿದ್ದು, ದಂತ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಳೀಲು ಮನೆತನದ ಗಿರಿಜಾ ರೈ ಯವರ ಮೊಮ್ಮಗಳಾಗಿರುವ ಇವರು ವಿಗ್ನೇಶ್ ಶೆಟ್ಟಿ ಬೆಳ್ಳಂಪಳ್ಳಿ ಇವರ ಪತ್ನಿ. ಬಿ.ಸಿ. ರೋಡ್ ನಲ್ಲಿ ಖ್ಯಾತ ವಕೀಲರಾಗಿರುವ ಡಿ. ಜನಾರ್ದನ ಶೆಟ್ಟಿ ಮತ್ತು ದೇರಳಕಟ್ಟೆ ನಿಟ್ಟೆ ಯುನಿವರ್ಸಿಟಿ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಮೊದಲ್ಕಾಡಿ ಡಾ. ಸುಚೇತಾ ಕುಮಾರಿ ದಂಪತಿಯ ಪುತ್ರಿ.