ಸಂಪಾದನೆಯ ಒಂದು ಭಾಗವನ್ನು ಸಮಾಜಸೇವೆಗೆ ಮೀಸಲಿಟ್ಟು, ನಿಸ್ವಾರ್ಥ ಸಮಾಜಸೇವೆ ಮೂಲಕ ಜನಮನ ಗೆದ್ದಿರುವ ಉದ್ಯಮಿಗಳ ಸಾಲಿನಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ನ್ಯೂ ಕರ್ನಾಟಕ ಬಿಲ್ಡರ್ಸ್ ಮತ್ತು ಡೆವಲಪರ್ಸ್ ನ ಮಾಲಕರಾಗಿರುವ ಚೇತನ್ಕುಮಾರ್ ಶೆಟ್ಟಿಯವರು ಪ್ರಮುಖರಾಗಿದ್ದಾರೆಂಬುವುದು ಸಮಸ್ತ ಬಂಟ ಸಮಾಜಕ್ಕೆ ಸಂತಸದ ಸಂಗತಿ. ಎಚ್. ದಯಾನಂದ ಶೆಟ್ಟಿ ಮತ್ತು ನಾಗರತ್ನ ಡಿ. ಶೆಟ್ಟಿ ದಂಪತಿಗಳ ಸುಪುತ್ರರಾಗಿರುವ ಚೇತನ್ಕುಮಾರ್ ಶೆಟ್ಟಿಯವರು ಹೇರೂರಿನ ಎಚ್.ಪಿ. ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ ಕಲಿತರು. ಬ್ರಹ್ಮಾವರದ ಹಂಗಾರಕಟ್ಟೆ ಚೇತನಾ ಹೈಸ್ಕೂಲ್ನಲ್ಲಿ ಎಸ್ಎಸ್ಎಲ್ಸಿ ಓದಿದರು. ಉಡುಪಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ ಪಡೆದರು.
ಕಾಲೇಜ್ ದಿನಗಳಲ್ಲೇ ನಾಯಕತ್ವದ ಗುಣಗಳನ್ನು ಹೊಂದಿದ್ದ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಪ್ರತಿನಿಧಿ ಕೂಡಾ ಆಗಿದ್ದರು.
ಇವರ ಅಣ್ಣ ಜೀವನ್ಕುಮಾರ್ ಶೆಟ್ಟಿಯವರು ಉಡುಪಿಯಲ್ಲಿ ಚಾಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಬ್ರಹ್ಮಾವರದಲ್ಲಿ ನ್ಯೂ ಕರ್ನಾಟಕ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಮೂಲಕ ಉತ್ತಮ ಗುಣಮಟ್ಟದ ವಸತಿ ಸಮುಚ್ಚಯ ಹಾಗೂ ಇದರ ನಿರ್ಮಾಣ ಗುತ್ತಿಗೆದಾರರಾಗಿ ಗುರುತಿಸಿಕೊಂಡಿರುವ ಚೇತನ್ಕುಮಾರ್ ಶೆಟ್ಟಿಯವರು ಸರಳ ಸಜ್ಜನಿಕೆ, ನೇರ ನಡೆನುಡಿ, ಪ್ರಾಮಾಣಿಕ ವ್ಯಕ್ತಿತ್ವದಿಂದ ಜನರಿಗೆ ಹತ್ತಿರವಾಗಿದ್ದಾರೆ.
ನ್ಯೂ ಕರ್ನಾಟಕ ಬಿಲ್ಡರ್ಸ್ ಮತ್ತು ಡೆವಲಪರ್ಸ್ ನಲ್ಲಿ ನೂರಾರು ಉದ್ಯೋಗಿಗಳಿಗೆ ಅನ್ನದಾತರಾಗಿರುವ ಚೇತನ್ಕುಮಾರ್ ಶೆಟ್ಟಿ ಅವರು ತನ್ನ ಹಿರಿಯ ಮಗ ಪ್ರಧಾನ್ ಹೆಸರಲ್ಲಿ ಬ್ರಹ್ಮಾವರದ 52, ಹೇರೂರಿನಲ್ಲಿ ಪ್ರಧಾನ ನಗರ ನಿರ್ಮಾಣ ಮಾಡಿ ಅಲ್ಲೇ ನೆಲೆಸಿದ್ದಾರೆ.
ಪ್ರಧಾನ ನಗರವು ಒಂದು ಸುಂದರ ವಸತಿ ಪ್ರದೇಶವಾಗಿದ್ದು, ಇದರ ಅಭಿವೃದ್ಧಿಯಲ್ಲಿ ಚೇತನ್ಕುಮಾರ್ ಶೆಟ್ಟಿಯವರ ಪಾತ್ರ ಹಿರಿದಾದದು.
ಇವರ ಹಿರಿಯ ಮಗ ಪ್ರಧಾನ್ ಶೆಟ್ಟಿಯವರು ತನ್ನ 13 ನೇ ವಯಸ್ಸಿನಲ್ಲಿ ಕ್ಯಾನ್ಸರ್ ಕಾಯಿಲೆಗೆ ಬಲಿಯಾಗಿದ್ದರು.
ಆ ನೋವು ಅವರ ಇಡೀ ಕುಟುಂಬಕ್ಕಿದ್ದು, ಪುತ್ರನ ನೆನಪಿಗಾಗಿ ಪ್ರಧಾನ್ ಶೆಟ್ಟಿ ಹೆಸರಲ್ಲಿ ಪ್ರಧಾನ ನಗರ ನಿರ್ಮಿಸಿರುವ ಅವರು ಸಮಾಜ ಸೇವೆ ಮೂಲಕ ತನ್ನ ಪುತ್ರನ ಅಗಲಿಕೆಯ ಶೋಕವನ್ನು ಮರೆಯಲು ಪ್ರಯತ್ನಿಸುತ್ತಿದ್ದಾರೆ. ಅವರ ನೆನಪಲ್ಲಿ ಪ್ರಧಾನ ಶೆಟ್ಟಿ ಸಮಾಜಸೇವೆ ಮೂಲಕ ಇನ್ನೂ ಜೀವಂತವಾಗಿ ಉಳಿದಿದ್ದಾರೆ.
ಪ್ರಧಾನ್ ಶೆಟ್ಟಿ ಹೆಸರಲ್ಲಿ ಉಡುಪಿ ಜಿಲ್ಲೆಯ ವಿವಿಧೆಡೆಗಳಿಗೆ ಇವರು ಸಾಕಷ್ಟು ವಾಹನ ತಡೆಬೇಲಿ (ಬ್ಯಾರಿಕೇಡ್)ಗಳನ್ನು ನೀಡಿದ್ದಾರೆ. ತನ್ನ ಮಗನ ಹೆಸರು ಸಮಾಜದಲ್ಲಿ ಜೀವಂತವಾಗಿರಬೇಕೆಂಬುವುದು ಅವರ ಮನದಾಸೆ. ಅದಕ್ಕಾಗಿ ಪ್ರಧಾನ್ ಶೆಟ್ಟಿ ಹೆಸರಲ್ಲಿ ಸಮಾಜಸೇವೆ ಮಾಡುತ್ತಿರುವ ಅವರು ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಬ್ಯಾರಿಕೇಡ್ಗಳನ್ನು ನೀಡಿದ್ದಾರೆ.
ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಬೇರೆ ಬೇರೆ ರೀತಿಯ ಕೊಡುಗೆಗಳನ್ನು ನೀಡಿದ್ದಾರೆ. ಶಿಕ್ಷಣಕ್ಕೆ ನೀಡುವ ಸಹಾಯದ ಫಲಿತಾಂಶ ದೀರ್ಘ ಕಾಲಿಕವಾಗಿರುತ್ತದೆ ಮತ್ತು ಆರೋಗ್ಯವಂತ ಸಮಾಜದಲ್ಲಿ ಅದು ಪ್ರಮುಖ ಪಾತ್ರ ವಹಿಸುತ್ತದೆ ಎಂಬುವುದು ಅವರ ಮನದ ಮಾತಾಗಿದೆ. ನ್ಯೂ ಕರ್ನಾಟಕ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಹೆಸರಾಂತ, ವಿಶ್ವಾಸಾರ್ಹ, ಜನ ಮೆಚ್ಚುಗೆಯ ಸಂಸ್ಥೆಯಾಗಿದೆ. ಇದರ ಮೂಲಕ ಕಟ್ಟಡಗಳ ಗುತ್ತಿಗೆ ಕಾಮಗಾರಿಯನ್ನು ನಡೆಸಲಾಗುತ್ತದೆ. ಜಿಲ್ಲೆಯ ವಿವಿಧೆಡೆಗಳಲ್ಲಿ ಹಲವಾರು ಬಡಾವಣೆಗಳನ್ನು ನಿರ್ಮಾಣ ಮಾಡಲಾಗಿದೆ. ಆಕರ್ಷಕ ವಿನ್ಯಾಸ, ಗುಣಮಟ್ಟದ ಕಾಮಗಾರಿ, ನ್ಯಾಯಯುತ ಬೆಲೆಯಿಂದಾಗಿ ಇವರು ನಿರ್ಮಾಣ ಮಾಡಿರುವ ಪ್ರತಿಯೊಂದು ಮನೆಯೂ ಅಪಾರ ಬೇಡಿಕೆ ಹೊಂದಿದೆ.
ಇವರು ಎಷ್ಟು ಮನೆ ನಿರ್ಮಾಣ ಮಾಡಿದರೂ ಅದು ಬೇಗನೆ ಮಾರಾಟವಾಗುವ ವಿಶ್ವಾಸವಿದೆ. ಅಷ್ಟೊಂದು ಜನಪ್ರಿಯತೆಯನ್ನು, ಗುಣಮಟ್ಟವನ್ನು ಗ್ರಾಹಕರ ವಿಶ್ವಾಸಾರ್ಹತೆಯನ್ನು ಅದು ಹೊಂದಿದೆ. ಗ್ರಾಹಕರಿಗೆ ನ್ಯೂ ಕರ್ನಾಟಕ ಬಿಲ್ಡರ್ಸ್ ಮತ್ತು ಡೆವಲಪರ್ಸ್ ನಲ್ಲಿ ನಿರ್ಮಾಣವಾಗಿರುವ ಮನೆಗಳ ಮೇಲೆ ವಿಶ್ವಾಸಾರ್ಹತೆ ಮತ್ತು ಒಂದು ರೀತಿಯ ಆತ್ಮೀಯ ಸಂಬಂಧವಿದೆ.
ಸಂಸಾರದ ಬಗ್ಗೆ:
ದೀಪಾ ಸಿ. ಶೆಟ್ಟಿ ಅವರು ಚೇತನ್ಕುಮಾರ್ ಶೆಟ್ಟಿಯವರ ಧರ್ಮಪತ್ನಿಯಾಗಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದಾರೆ.
ವೈಭವ ಪ್ರಧಾನ್ ಶೆಟ್ಟಿ ಮತ್ತು ವೈಷ್ಣವ್ ಪ್ರಧಾನ್ ಶೆಟ್ಟಿ ಅವರು ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ನಲ್ಲಿ ಕಲಿಯುತ್ತಿದ್ದಾರೆ. ವೈನವ್ ಪ್ರಧಾನ್ ಶೆಟ್ಟಿಯವರು ಕೂಡಾ ಇದೇ ಶಾಲೆಯಲ್ಲಿ ಓದುತ್ತಿದ್ದಾರೆ.
ಜನರ ಆಶೀರ್ವಾದ:
ಚೇತನ್ಕುಮಾರ್ ಶೆಟ್ಟಿಯವರು ನಿಸ್ವಾರ್ಥ ಸಮಾಜ ಸೇವಕರಾಗಿದ್ದಾರೆ ಮತ್ತು ಸಮಾಜಕ್ಕೆ ಸಾಕಷ್ಟು ಸಹಾಯ ಮಾಡಿದ್ದಾರೆ. ಬಡವರು, ಶಿಕ್ಷಣ ಹೀಗೇ ಎಲ್ಲರಿಗೂ ಅವರಿಂದ ಉಪಕಾರವಾಗಿದೆ. ಅವರ ನಿರ್ಮಲ ಮನಸ್ಸಿಗೆ ಜನರ ಆಶೀರ್ವಾದವಿದೆ.
ನ್ಯೂ ಕರ್ನಾಟಕ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಮೂಲಕ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುವ ಅವರ ಉದ್ಯಮವು ಯಶಸ್ವಿಯಾಗಿ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.