ಸಜ್ಜನ ಪ್ರಾಮಾಣಿಕ ರಾಜಕಾರಣಿಯಾದ ಕಾಂಗ್ರೆಸ್ ಪಕ್ಷವನ್ನು ಮುನ್ನೆಡಿಸಿ ಕಾರ್ಕಳ ಜನರ ಮನಸ್ಸಿನಲ್ಲಿ ಉಳಿದ ಧೀಮಂತ ನಾಯಕ ದಿ.ಗೋಪಾಲ ಭಂಡಾರಿಯವರ ಪ್ರತಿಮೆ ನಿರ್ಮಾಣಕ್ಕೆ ನನ್ನ ಮೊದಲ ಆದ್ಯತೆ ಎಂದು ಕಾರ್ಕಳ ವಿಧಾನ ಸಭಾ ಕೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯಕುಮಾರ್ ಶೆಟ್ಟಿ ಹೇಳಿದರು. ಅವರು ಎ.18 ರಂದು ಹೆಬ್ರಿ ಮೇಲ್ಪೇಟೆ ದಿ.ಪ್ರಸನ್ನ ಬಲ್ಲಾಳ ಅವರ ನಿವಾಸದಲ್ಲಿ ಆರಂಭಗೊಂಡ ಚುನಾವಣಾ ಪ್ರಚಾರ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ಯಾವುದೇ ಆಡಂಬರ ಇಲ್ಲ ಅಬ್ಬರದ ಪ್ರಚಾರ, ಸದ್ದು ಗದ್ದಲದಿಂದ ಮಾತ್ರ ಅಭಿವೃದ್ಧಿಯಲ್ಲ. ಸತ್ಯ ಧಮ೯, ಪ್ರಮಾಣಿಕತೆ ಮೂಲಕ ಜನರ ಸಮಸ್ಯೆಗೆ ಸ್ಪಂದಿಸುವುದು ಮುಖ್ಯ.ಈ ಬಾರಿ ಕಾರ್ಕಳ ಜನ ಬದಲಾವಣೆ ಬಯಸಿದ್ದಾರೆ ಎನ್ನುವುದು ಜನಬೆಂಬಲದಿಂದ ಗೊತ್ತಾಗುತ್ತಿದೆ. ಒಂದು ಬಾರಿ ಅವಕಾಶ ಕೊಡಿ. ಅಭಿವೃದ್ಧಿ ಏನು ಎಂಬುವುದನ್ನ ಮಾಡಿ ತೋರಿಸುತ್ತೇನೆ. ಈಗಾಗಲೇ ನಿಮ್ಮೆಲ್ಲ ಆಶೀರ್ವಾದ ಹಾಗೂ ಕಾರ್ಕಳ ಕಾಂಗ್ರೆಸ್ ನ ಹಿರಿಯರ ಮಾರ್ಗದರ್ಶನದಲ್ಲಿ ಯಾವುದು ಆಡಂಬರವಿಲ್ಲದೆ ನಾಮಪತ್ರ ಸಲ್ಲಿಸಿದ್ದೇನೆ ಎಂದರು.
ಸತ್ಯ ಧರ್ಮದ ಮತಯಾಚನೆ :
ಸತ್ಯ ಧರ್ಮ ನ್ಯಾಯವನ್ನು ಮುಂದಿಟ್ಟು ಮಾತವನ್ನು ಯಾಚನೆ ಮಾಡುತ್ತೇನೆ ವಿನ; ಹಣ ನೀಡಿ ಆಸೆ ಅಮಿಷಗಳನ್ನು ಒಡ್ಡಿ ಅಲ್ಲ. ಆರ್ಭಟ ಹಾಕಿ ಬಣ್ಣ ಬಣ್ಣದ ಅಲಂಕಾರ ಮಾಡಿ ದುಂದುವೆಚ್ಚ ಮಾಡುವ ಬದಲು ಜನರ ಸಮಸ್ಯೆಗೆ ಪ್ರೀತಿಯಿಂದ ಮಾತನಾಡಿಸುವುದೇ ಜನಪ್ರತಿನಿಧಿಯಾದವರ ಮೊದಲ ಕರ್ತವ್ಯ ಎಂದರು.
ಸಮಾರಂಭದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ ಅಲೆವೂರು, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ದಿವಾಕರ ಕುಂದರ್, ನರಸಿಂಹ ಮೂತಿ೯, ಮುರುಳಿ ಶೆಟ್ಟಿ, ದಿನೇಶ್ ಅಮೀನ್, ಶೇಖರ ಮಡಿವಾಳ, ರಾಘವ ದೇವಾಡಿಗ, ರಂಜಿನಿ ಹೆಬ್ಬಾರ್, ದಿನೇಶ್ ಶೆಟ್ಟಿ, ಭೂತುಗುಂಡಿ ಕರುಣಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಹೆಬ್ರಿ ಬ್ಲಾಕ್ ಕಾರ್ಯದರ್ಶಿ ಜನಾರ್ಧನ್ ಸ್ವಾಗತಿಸಿ,ಪ್ರಚಾರ ಸಮಿತಿ ಅಧ್ಯಕ್ಷ ನವೀನ್ ಅಡ್ಯಂತಾಯ ಕಾರ್ಯಕ್ರಮ ನಿರೂಪಿಸಿ, ಬ್ಲಾಕ್ ಪ್ರಭಾರ ಅಧ್ಯಕ್ಷ ಚಂದ್ರಶೇಖರ್ ಬಾಯರಿ ವಂದಿಸಿದರು.

















































































































