Author: admin
ಗುಣಮಟ್ಟ ಶುದ್ಧತೆ ಹಾಗೂ ಆರೋಗ್ಯಕರ ಕೋಳಿ ಮಾಂಸಕ್ಕೆ ಹೆಸರಾಗಿರುವ ಲೈಫ್ ಲೈನ್ಸ್ ಟೆಂಡರ್ ಚಿಕನ್ ನ 43 ನೇ ಶಾಖೆ ಮಂಗಳೂರಿನ ಯೆಯ್ಯಾಡಿ ಜಂಕ್ಷನ್ ನಲ್ಲಿ ಆರಂಭಗೊಂಡಿತು. ಮಳಿಗೆಯನ್ನು ಉದ್ಘಾಟಿಸಿದ ಭಾರತ್ ಬೀಡಿ ವರ್ಕ್ಸ್ ನ ಕಾರ್ಯ ನಿರ್ವಾಹಕ ನಿರ್ದೇಶಕ ಸುಬ್ರಾಯ ಎಂ. ಪೈ ಮಾತನಾಡಿ, ಲೈಫ್ ಲೈನ್ಸ್ ಚಿಕನ್ ಆರೋಗ್ಯದ ಕೋಳಿ ಮಾಂಸವನ್ನು ವಿತರಿಸಿ ಜನ ಮೆಚ್ಚುಗೆ ಗಳಿಸಿದೆ. ಕರಾವಳಿ ಮೂಲದ ಕಿಶೋರ್ ಕುಮಾರ್ ಹೆಗ್ಡೆ ಚಿಕ್ಕಮಗಳೂರಿನಲ್ಲಿ ಉದ್ಯಮ ಆರಂಭಿಸಿ ಯಶಸ್ಸು ಗಳಿಸಿದ್ದಾರೆ. ಇದೀಗ ಹುಟ್ಟೂರಿನಲ್ಲಿಯೂ ಮಳಿಗೆ ಆರಂಭಿಸಿ ಜನತೆಗೆ ಆರೋಗ್ಯಕರ ಕೋಳಿ ಮಾಂಸ ವಿತರಣೆಗೆ ಮುಂದಾಗಿದ್ದಾರೆ. ಜನತೆ ಅವರನ್ನು ಪ್ರೋತ್ಸಾಹಿಸಲಿದ್ದಾರೆ ಎಂದು ಶುಭ ಹಾರೈಸಿದರು. ಲೈಫ್ ಲೈನ್ಸ್ ಫೀಡ್ಸ್(ಇಂಡಿಯಾ) ಪೈ.ಲಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಕೆ.ಕಿಶೋರ್ ಕುಮಾರ್ ಹೆಗ್ಡೆ ಮಾತನಾಡಿ, ಬೆಂಗಳೂರು, ಹಾಸನ, ಕೊಡಗು,ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರಿನಲ್ಲಿ ಶಾಖೆ ಇದ್ದು ಕೊಲ್ಕತ್ತಾ, ಗೋವಾ, ಕೇರಳ, ಭೂತಾನ್ ಸೇರಿದಂತೆ ದೇಶದ ಹಲವೆಡೆ ಲೈಫ್ ಲೈನ್ ಚಿಕನ್ ಒದಗಿಸಲಾಗುತ್ತಿದೆ. ಭೂತಾನ್…
ಕ್ರೀಡೆಯಲ್ಲಿ ತೊಡಗಿಕೊಂಡಾಗ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಕ್ರೀಡೆ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ಕ್ರೀಡೆಯಲ್ಲಿ ತೊಡಗಿಕೊಳ್ಳುವ ಮಕ್ಕಳನ್ನು ಪ್ರೋತ್ಸಾಹಿಸುವುದು ಅಗತ್ಯ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ, ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಅಜಿತ್ ಕುಮಾರ್ ರೈ ತಿಳಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ದ.ಕ, ಉಡುಪಿ ಹಾಗೂ ಕಾಸರಗೋಡಿನ ವಿವಿಧ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಬಂಟ್ಸ್ ಹಾಸ್ಟೇಲ್ ನ ಓಂಕಾರ ನಗರದಲ್ಲಿ ನಡೆದ ಬಂಟ ಕ್ರೀಡೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಮಟ್ಟದ ಬಾಕ್ಸಿಂಗ್ ಪಟು ಶಾರ್ವಿ ಶೆಟ್ಟಿ ಅವರು ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಬಂಟರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಎಂ ಶೆಟ್ಟಿ, ಕೋಶಾಧಿಕಾರಿ ರಾಮಮೋಹನ್ ರೈ, ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಕೃಷ್ಣ ಪ್ರಸಾದ್ ರೈ,…
ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಸಿದ್ದಿ ವಿನಾಯಕ ಪ್ರತಿಷ್ಠಾನದ ಆಶ್ರಯದಲ್ಲಿ 17 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸೆಪ್ಟಂಬರ್ 19 ರಿಂದ 21 ರ ವರೆಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಸರ್ವ ಬಂಟ ಸಮಾಜದ ಸಹಕಾರದಲ್ಲಿ ಬಂಟ್ಸ್ ಹಾಸ್ಟೇಲ್ ನಲ್ಲಿ ಶ್ರದ್ದಾ ಭಕ್ತಿಯಿಂದ ನಡೆಯಲಿದೆ. ಸಾರ್ವಜನಿಕ ಗಣೇಶೋತ್ಸವದ ಮೂಲಕ ಸಮಾಜ ಬಾಂಧವರನ್ನು ಒಟ್ಟು ಸೇರಿಸುವ ಕೆಲಸ ಕಾರ್ಯ ನಡೆಯಲಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೊಡಿಯಾಲ್ ಗುತ್ತು ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು. ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋರೊನಾದಿಂದ ಕಳೆದ ಮೂರು ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲು ಸಾಧ್ಯವಾಗಿಲ್ಲ. ಈ ವರ್ಷ 17 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಎಲ್ಲರನ್ನೂ ಸೇರಿಸಿ ಆಚರಿಸುತ್ತೀದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಸಮುದಾಯದ ಎಲ್ಲರನ್ನೂ ಒಂದೇ ಸೂರಿನಡಿಯಲ್ಲಿ ಸೇರಿಸಲು ಕೆಲವು ಕಾರ್ಯಕ್ರಮಗಳನ್ನು…
ಮುಲ್ಕಿಯ ಕರ್ನಿರೆ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ 26ನೇ ವರ್ಷದ ಪುಸ್ತಕ ವಿತರಣೆಯ ಕಾರ್ಯಕ್ರಮವು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಮಾತನಾಡಿದ ಕರ್ನಿರೆ ವಿಶ್ವನಾಥ್ ಶೆಟ್ಟಿ ಅವರು ಗ್ರಾಮದ ಮಕ್ಕಳು ವಿದ್ಯಾವಂತರಾಗಬೇಕು ದೇಶದ ಉತ್ತಮ ಪ್ರಜೆಗಳಾಗಬೇಕು ಎನ್ನುವ ನಿಟ್ಟಿನಲ್ಲಿ 26 ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿಗಳಿಗೆ ಪುಸ್ತಕ ನೀಡುವ ಕಾರ್ಯವನ್ನು ನಡೆಸುತ್ತಾ ಬಂದಿದ್ದೇನೆ. ವಿದ್ಯಾರ್ಥಿಗಳು ಯಾವ ಮಾಧ್ಯಮದಲ್ಲಿ ಕಲಿತಿದ್ದೇವೆ ಎನ್ನುವುದು ಮುಖ್ಯವಲ್ಲ, ನಾವು ಯಾವ ರೀತಿ ವಿದ್ಯೆಯನ್ನು ಕರಗತ ಮಾಡಿದ್ದೇವೆ ಅನ್ನೋದು ಮುಖ್ಯ, ನಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿ ತಪಸ್ಸಿನಂತೆ ಸಾಧನೆ ಮಾಡಬೇಕು. ಉನ್ನತ ಮಟ್ಟದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದಾಗ ಉದ್ಯೋಗಗಳು ಅಧಿಕಾರಗಳು ನಮ್ಮನ್ನು ಅರಸಿಕೊಂಡು ಬರುತ್ತದೆ, ಮಕ್ಕಳು ಗ್ರಾಮವನ್ನು ಮತ್ತು ಪಾಲಕರನ್ನು ಗೌರವದಿಂದ ಕಾಣಬೇಕು, ಪಾಲಕರು ಮಕ್ಕಳಿಗೆ ಸಂಪತ್ತನ್ನು ಮಾಡುವುದಕ್ಕಿಂತ ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ನೀಡಿದರೆ ಎಲ್ಲಾ ರೀತಿಯ ಸಂಪತ್ತು…
ಕಳೆದ 30 ವರ್ಷಗಳಿಂದ ಸೂಡ ಸರಕಾರಿ ಪ್ರೌಢ ಶಾಲೆಯಲ್ಲಿ ದಾನಿ ಬೆಳ್ಮಣ್‌ನ ಉದ್ಯಮಿ ಎಸ್. ಕೆ. ಸಾಲಿಯಾನ್ ಅವರ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸಮ್ಮಾನ ಸಮಾರಂಭವು ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಉದ್ಯಮಿ ಎಸ್. ಕೆ. ಸಾಲಿಯಾನ್ ಶೇ. 100 ಫಲಿತಾಂಶ ದಾಖಲಿಸಿದ ಸೂಡ ಸರಕಾರಿ ಪ್ರೌಢ ಶಾಲೆಯ ಸಾಧಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೂಡ ಗ್ರಾಮಸ್ಥರ ಪರವಾಗಿ ಅಭಿನಂದಿಸಿ ಪ್ರತಿಭಾ ಪುರಸ್ಕಾರ ನೀಡಿದರು. ಶೇ. 100 ಫಲಿತಾಂಶ ದಾಖಲಿಸಲು ಶ್ರಮಿಸಿದ ಶಿಕ್ಷಕ ವೃಂದದವರನ್ನು ಸಮ್ಮಾನಿಸಿದರು. ಮುಖ್ಯ ಅತಿಥಿ ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ|ವೈ. ಭಾಸ್ಕರ ಶೆಟ್ಟಿ,ಮಾತನಾಡಿ ವಿದ್ಯಾರ್ಥಿಗಳ ಸಾಧನೆಗೆ ಭಾಷಾ ಮಾಧ್ಯಮ ಮುಖ್ಯವಲ್ಲ,ಕಠಿಣ ಪರಿಶ್ರಮ,ಪ್ರಾಮಾಣಿಕತೆ ಮತ್ತು ಧನಾತ್ಮಕ ಚಿಂತನೆಗಳ ಮೂಲಕ ಗುರಿಯಿರಿಸಿದಾಗ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಎಸ್.ಕೆ. ಸಾಲ್ಯಾನ್ ಅವರಂತಹ ದಾನಿಗಳ ಮೂಲಕ ಸಮಾಜ ನೀಡುವ ಗೌರವವನ್ನು ಸ್ವೀಕರಿಸಿ…
ಯಾವುದೇ ಬಂಡಾಯವಿಲ್ಲ. ಪಕ್ಷವನ್ನು ಎರಡೂವರೆ ಸಾವಿರ ಮತಗಳಿಂದ 75 ಸಾವಿರ ಮತಗಳವರೆಗೆ ಬೆಳೆಸಿದ್ದೇವೆ. ಮುಂದೆಯೂ ಬಿಜೆಪಿ ಕ್ಷೇತ್ರವನ್ನಾಗಿ ಉಳಿಸಿಕೊಳ್ಳಲು ಹಗಲಿರುಳು ಶ್ರಮಿಸುತ್ತೇನೆ ಎಂದು ಬಿಜೆಪಿ ಟಿಕೆಟ್ ವಂಚಿತ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು. ವಿಧಾನಸಭಾ ಚುನಾವಣೆ ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಬುಧವಾರ ಬೆಳಿಗ್ಗೆ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಬಳಿಕ ಶಾಸಕ ಲಾಲಾಜಿ ಆರ್. ಮೆಂಡನ್ ಅವರ ಮನೆಗೆ ತೆರಳಿ ಅವರೊಂದಿಗೆ ಚರ್ಚೆ ನಡೆಸಿದ್ದು ಅವರೊಂದಿಗಿನ ಮಾತುಕತೆ ಬಳಿಕ ಜಂಟಿ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಕಳೆದ ಬಾರಿಯ ಚುನಾವಣೆಯಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಅವರು ನನಗೆ ಪೂರ್ಣ ಸಹಕಾರ ನೀಡಿದ್ದರು. ಈ ಬಾರಿ ನಾನು ಅವರ ಜತೆಗಿದ್ದು ಬಿಜೆಪಿಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಇಂದಿನಿಂದಲೇ ಪಕ್ಷ ಸಂಘಟನೆ ನಡೆಸಿ, ಪಕ್ಷದ ಗೆಲುವುಗಾಗಿ ಶ್ರಮಿಸಲಿದ್ದೇವೆ ಎಂದರು. ಕಾಪು ಕ್ಷೇತ್ರದಲ್ಲಿ ಆರು ಬಾರಿ ಸ್ಪರ್ಧಿಸಿದ್ದೇನೆ. ಮೂರು ಬಾರಿ ಗೆದ್ದು ಹದಿಮೂರುವರೆ ವರ್ಷಗಳ ಕಾಲ…
ತಾಲೂಕಿನ ಅರಿಯಡ್ಕ ಗ್ರಾಮದ ಹೊಸಗದ್ದೆ ನಿವಾಸಿ ಸುಶೀಲಾ ರೈ ಅವರ ಮನೆಯ ಮೇಲ್ಛಾವಣಿಯ ಬಿದಿರುಗಳು ಸಂಪೂರ್ಣ ಕೆಟ್ಟುಹೋಗಿ ಬೀಳುವ ಸ್ಥಿತಿಯಲ್ಲಿ ಇದ್ದಾಗ ತಾಲೂಕಿನ ಯುವ ಬಂಟರ ಸಂಘದಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದರು. ಅವರ ನೆರವಿಗೆ ನಿಂತ ತಾಲೂಕು ಯುವ ಬಂಟರ ಸಂಘವು ಜಾಗತಿಕ ಬಂಟರ ಸಂಘ ಹಾಗೂ ಬಂಟ ದಾನಿಗಳ ಸಹಕಾರದೊಂದಿಗೆ ಇದೀಗ ಮನೆಯ ಮೇಲ್ಛಾವಣಿ ಹೊಸತಾಗಿ ನಿರ್ಮಾಣ ಮಾಡಿ ಕೊಡುವ ಮೂಲಕ ಬಂಟ ಸಮುದಾಯದ ಬಡ ಮಹಿಳೆಯ ನೆರವಿಗೆ ನಿಂತಿದೆ. ದಿನಾಂಕ 17/03/2023ರಂದು ಇದರ ಖರ್ಚಿನ ಎಲ್ಲ ಹಣವನ್ನು ಚೆಕ್ ಮೂಲಕ ಬಂಟರ ಯಾನೆ ನಾಡವರ ಮಾತೃಸಂಘದ ಉಪಾಧ್ಯಕ್ಷರಾದ ಎ ಹೇಮನಾಥ್ ಶೆಟ್ಟಿ ಕಾವು, ಯುವ ಬಂಟರ ಸಂಘದ ಅಧ್ಯಕ್ಷ ರಾದ ಶಶಿರಾಜ್ ರೈ ಮುಂಡಾಳಗುತ್ತು, ಸಂಯೋಜಕರಾದ ಬೊಳಿಂಜ ಗುತ್ತು ರವಿಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾದ ಪ್ರಜನ್ ಶೆಟ್ಟಿ ಕಂಬಳತ್ತಡ್ಡ, ಜತೆ ಕಾರ್ಯದರ್ಶಿ ರಂಜಿನಿ ಶೆಟ್ಟಿ ಹಾಗೂ ಕೋಶಾಧಿಕಾರಿ ಈ ಯೋಜನೆಯ ಜವಾಬ್ದಾರಿ ವಹಿಸಿಕೊಂಡಿರುವ ಕೆಸಿ ಅಶೋಕ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ…
ಯುನೈಟೆಡ್ ಸ್ಟೇಟ್ಸ್ ಸರಕಾರ ನಡೆಸುವ “ಲೀಡರ್ಸ್ ಲೀಡ್ ಆನ್ ಡಿಮಾಂಡ್’ ಕಾರ್ಯಕ್ರಮಕ್ಕೆ ಉಡುಪಿಯ ಬಂಟ ಕುವರಿ ಸಂಬ್ರಾತಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಭಾರತದಿಂದ ಮೂಲತಃ ಕೆಮ್ಮಣ್ಣುವಿನ ನಿವಾಸಿ ಸಂಬ್ರಾತಾ ಶೆಟ್ಟಿ, ಬೆಂಗಳೂರಿನ ಪ್ರಣಯ್ ಕೊಟಸ್ತಾನೆ, ಹೊಸದಿಲ್ಲಿಯ ಇಬ್ಬರು ಹಾಗೂ ಕೋಲ್ಕತದ ಒಬ್ಬರು ಆಯ್ಕೆಯಾಗಿದ್ದಾರೆ. ಸಂಬ್ರಾತಾ ಶೆಟ್ಟಿಯವರು ಪ್ರಸ್ತುತ ಫಿನಾಜಿಯಾ ಫೌಂಡೇಶನ್‌ನಲ್ಲಿ ಚೀಫ್ ಆಪರೇಟಿಂಗ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಡಾ| ರೋಶನ್ ಶೆಟ್ಟಿ ಅವರ ಪತ್ನಿ. ಉಡುಪಿಯ ಉದ್ಯಮಿ ಸಂಪತ್‌ಕುಮಾರ್ ಶೆಟ್ಟಿ ಹಾಗೂ ಮಮತಾ ಶೆಟ್ಟಿ ದಂಪತಿಯ ಪುತ್ರಿ. ಸಂಬ್ರಾತಾ ಶೆಟ್ಟಿ ಅವರು ನೇಸಲ್ ಸ್ಪ್ರೇಯನ್ನು ಅಭಿವೃದ್ಧಿಪಡಿಸಿ ಅದಕ್ಕಾಗಿ ಪೇಟೆಂಟ್ ಪಡೆದಿದ್ದರು.
ಪ್ರಸ್ತುತ ದೇಶದಲ್ಲಿ ಸರಕಾರದಿಂದ ಮಂಜೂರಾಗುವ 100 ರೂ. ಅನುದಾನದಲ್ಲಿ 15 ಪೈಸೆ ಮಾತ್ರ ಅಭಿವೃದ್ಧಿಗೆ ಬಳಕೆಯಾಗುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.ರೋಟರಿ ಜಿಲ್ಲೆ 3181ರ ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಿದ ಜಿಲ್ಲಾ ಸಮಾವೇಶ “ಪರಿಕಲ್ಪನೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 1985ರಲ್ಲಿ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ಸರಕಾರದಿಂದ ಮಂಜೂರಾಗುವ ಪ್ರತೀ 1 ರೂ. ಅನುದಾನದಲ್ಲಿ 15 ಪೈಸೆ ಮಾತ್ರ ಅಭಿವೃದ್ಧಿಗಾಗಿ ಬಳಕೆಯಾಗುತ್ತದೆ ಎನ್ನುವ ಮಾತು ಚಾಲ್ತಿಯಲ್ಲಿತ್ತು. ಇಂದಿನ ಪರಿಸ್ಥಿತಿ ಅದನ್ನೂ ಮೀರಿ ಹೋಗಿದ್ದು, ನಮ್ಮ ದುರಾಸೆ ಮಾತ್ರ ವೃದ್ಧಿಯಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಬೊಕ್ಕಸದಿಂದ ಕೋಟ್ಯಂತರ ರೂಪಾಯಿ ವ್ಯಯಿಸುತ್ತವೆ. ಆದರೆ ನಾವು ಯಾವ ರೀತಿಯ ಅಭಿವೃದ್ಧಿ ಕಾಣುತ್ತಿದ್ದೇವೆ ಎಂದು ಪ್ರಶ್ನಿಸಿದರು. ದೇಶದಲ್ಲಿ ಶ್ರೀಮಂತರಾಗಲು ಪೈಪೋಟಿ ಉಂಟಾಗಿದ್ದು, ಇದು ಸಮಾಜದಲ್ಲಿ ಬಿಕ್ಕಟ್ಟು ಸೃಷ್ಟಿಸಲಿದೆ. ದುರಾಸೆ ಎಂಬ ರೋಗ ಎಲ್ಲೆಡೆ ಹರಡುತ್ತಿದೆ. ಇದು ಎಲ್ಲಿಗೆ ತಲುಪುತ್ತದೆ ಎಂದು ಯೋಚಿಸುವಾಗ ಭಯವಾಗುತ್ತದೆ ಎಂದರು.
ಹೌದು, ದೇಶದ ಪ್ರಮುಖ ನಗರಗಳಲ್ಲಿ ಒಂದಾದ,ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಲ, ನೆಲ, ರೈಲು ಮತ್ತು ವಾಯು ಸಾರಿಗೆಗಳನ್ನು ಹೊಂದಿರುವ ರಾಜ್ಯದ ಏಕೈಕ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಂಗಳೂರಿನ ದುರಂತ ಕಥೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನ ನಂತರ ವೇಗವಾಗಿ ಮಾರ್ಪಾಡಾಗುತ್ತಿರುವ ನಗರಗಳಲ್ಲಿ ಮಂಗಳೂರೂ ಒಂದು. ಗುಣಮಟ್ಟದ ಶಿಕ್ಷಣ , ದೇಶದಲ್ಲೇ ಉತ್ತಮ ಸುಸ್ಸಜಿತ ಆಸ್ಪತ್ರೆ ಮತ್ತು ಆರೈಕೆ, ರಫ್ತು ಆಮದಿಗೆ ಪ್ರಮುಖ ಬಂದರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೀಗೆ ನಾನಾ ರೀತಿಯಲ್ಲಿ ಮಿಂಚುತ್ತಿರುವ ಮಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ NH 75 ದುಸ್ಥಿತಿ ಶಾಪವಾಗಿ ತಿರುಗಿದೆ. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ , ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಿಂದ ಶಿರಾಡಿ ಘಾಟಿಯ ಮೂಲಕ ಹಾದು ಹೋಗುವ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅತ್ಯಂತ ಆಮೆ ಗತಿಯಲ್ಲಿ ಸಾಗುತ್ತಿರುವುದು ಬೇಸರದ ಸಂಗತಿ. ಈ ಸಮಸ್ಯೆ ಆರಂಭವಾಗಿ ದಶಕಗಳೇ ಉರುಳಿ ಹೋಗಿವೆ,ಒಬ್ಬರ ಹಿಂದೆ ಒಬ್ಬರಂತೆ ಬಂದು ಹೋದ ಜನಪ್ರತಿನಿದಿಗಳೆಷ್ಟೋ ದೇವರೇ ಬಲ್ಲ.ಅದರೂ ಇನ್ನೂ ಸರಿಯಾದ ಪರಿಹಾರ…














