Author: admin
“ಡೋಜಿ’ ಸುಧಾರಿತ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಂಪರ್ಕ ರಹಿತ ಮತ್ತು ರೋಗಿಗಳ ಮೇಲ್ವಿಚಾರಣೆ, ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆ ಹೊಂದಿದ ಅತ್ಯಾಧುನಿಕ ವ್ಯವಸ್ಥೆಯನ್ನು ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಳವಡಿಸಲಾಗಿದೆ. ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ| ಪ್ರಶಾಂತ್ ಮಾರ್ಲ ಮಾಹಿತಿ ನೀಡಿ, ಎ.ಜೆ. ಆಸ್ಪತ್ರೆಯಲ್ಲಿ ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸುತ್ತಿದ್ದೇವೆ. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಇದು ನೆರವಾಗಲಿದೆ. ಕೋವಿಡ್ ಸಮಯದಲ್ಲೇ ಪರೀಕ್ಷಾರ್ಥವಾಗಿ ಈ ಉಪಕರಣವನ್ನು ಅಳವಡಿಸಿದ್ದೆವು. ಅನೇಕ ತಿಂಗಳ ಪ್ರಯೋಗದ ಬಳಿಕ ಸುಸಜ್ಜಿತವಾಗಿ ಸ್ಥಾಪನೆಯಾಗುತ್ತಿದೆ. ಸದ್ಯ 50 ಖಾಸಗಿ ಬೆಡ್ಗಳಿಗೆ ಅಳವಡಿಸುತ್ತೇವೆ. ರೋಗಿಗಳಲ್ಲಿ ಹೃದಯ ಸಂಬಂಧಿ, ಮಧುಮೇಹ, ರಕ್ತದೊತ್ತಡ, ದೇಹದ ಉಷ್ಣತೆ, ಇಸಿಜಿ ಸಹಿತ ವಿವಿಧ ಮಾಹಿತಿಗಳ ಮೇಲೆ ದೂರದಿಂದಲೇ ನಿಗಾ ಇರಿಸಲು ಆರೋಗ್ಯ ಕಾರ್ಯಕರ್ತರಿಗೆ ಈ ಯಂತ್ರ ನೆರವಾಗುತ್ತದೆ. ಮುಂಚಿತವಾಗಿ ಎಚ್ಚರಿಕೆ ನೀಡುವ ಸೌಲಭ್ಯ ಇದರಲ್ಲಿದ್ದು, ರೋಗಿಯ ಆರೋಗ್ಯದಲ್ಲಾಗುವ ಬದಲಾವಣೆಯನ್ನು ಮೊದಲೇ ತಿಳಿಸುತ್ತದೆ ಎಂದರು. ಡೋಜಿಯ ಪರಿಹಾರವು ಕ್ಲೌಡ್ ಆಧಾರಿತ…
ಬ್ರಹ್ಮಾವರ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ನವೆಂಬರ್ 2 ರಂದು ಚಿಣ್ಣರ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಜಿ ಎಮ್ ಛತ್ರಛಾಯದಲ್ಲಿ ಪ್ರಿ ನರ್ಸರಿಯಿಂದ ಎರಡನೇ ತರಗತಿಯವರೆಗಿನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಅತ್ಯಂತ ಆಸಕ್ತಿಯಿಂದ ಪಾಲ್ಗೊಂಡು ಕ್ರೀಡಾಸ್ಫೂರ್ತಿಯನ್ನು ಮೆರೆದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬೆಂಗಳೂರಿನಲ್ಲಿ ಕಾರ್ಯಕ್ರಮ ಅರಿವಿನ ವಿಶ್ಲೇಷಕ ವೃತ್ತಿಯನ್ನು ನಿರ್ವಹಿಸುತ್ತಿರುವ ಜಿ ಎಮ್ ನ ಹಳೆ ವಿಧ್ಯಾರ್ಥಿ ಮನೋಜ್ ಯು ಆಗಮಿಸಿದ್ದರು. ಅವರು ಜ್ಯೋತಿಯನ್ನು ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿ ಮಾತನಾಡಿ, ಮಕ್ಕಳು ಬಾಲ್ಯದಲ್ಲಿ ಕೋಣೆಯ ಒಳಗೆ ಕುಳಿತು ಮೊಬೈಲ್ ನೋಡುವುದನ್ನು ಬಿಟ್ಟು ಹೊರಗಡೆ ಆಟ ಆಡುವುದಕ್ಕೆ ಸಮಯವನ್ನು ಮೀಸಲಿಡಬೇಕು. ಪೋಷಕರು ಮಕ್ಕಳು ಬಾಲ್ಯವನ್ನು ಸವಿಯಲು ಕಲಿಕೆಯ ಜೊತೆಗೆ ಕ್ರೀಡೆಗಳಲ್ಲಿ ತೊಡಗಿಸಲು ಉತ್ತೇಜಿಸಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಶಾಲಾ ಧ್ವಜವನ್ನು ಅರಳಿಸಿ ಮಾತನಾಡಿ ಮಕ್ಕಳು ಜೀವನದ ಪಾಠಗಳನ್ನು ತರಗತಿಯ ಹೊರಗೆ ಕಲಿಯುತ್ತಾರೆ. ಕ್ರೀಡೆಗಳಿಂದ ಸಾಮಾಜಿಕ, ನೈತಿಕ ಮೌಲ್ಯಗಳ ಕಲಿಕೆಯಾಗುತ್ತದೆ ಜೊತೆಗೆ ಶಾರೀರಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಶಾಲಾ ಆಡಳಿತ…
ಶ್ರೀ ಮಾತಾ ವೈಷ್ಞೋದೇವಿ ಶ್ರೈನ್ ಬೋರ್ಡ್ ಕಟ್ರಾ ಜಮ್ಮು ಕಾಶ್ಮೀರ ಪ್ರತಿ ವರ್ಷ ನವರಾತ್ರಿಯಲ್ಲಿ ಆಯೋಜಿಸುವ ಒಂಭತ್ತು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮದ ರಾಷ್ಟ್ರೀಯ ಭಕ್ತಿ ಗೀತೆಗಳ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಯಕ್ಷ ಧ್ರುವ ಪಟ್ಲ ಪೌಂಡೇಷನ್ ಅವರ ಶ್ರೀ ದೇವಿಮಹಾತ್ಮೆ ಯಕ್ಷಗಾನ ಮತ್ತು ಕಳಂಜದ ನಿನಾದ ಸಾಂಸ್ಕೃತಿಕ ಕೇಂದ್ರದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ತಾಯಿ ವೈಷ್ಞೋದೇವಿಯ ಪದತಳ ಜಮ್ಮುವಿನ ಕಟ್ರಾದಲ್ಲಿ ಮೊದಲ ಬಾರಿಗೆ ನವರಾತ್ರಿ ಉತ್ಸವದ ಪ್ರಥಮ ದಿನ ಜಮ್ಮುವಿನ ಸಾಂಸ್ಕೃತಿಕ ಸಚಿವಾಲಯದ ಸಹಯೋಗದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮಂಗಳೂರಿನ ವತಿಯಿಂದ ಪಾವಂಜೆ ಮೇಳದ ಕಲಾವಿದರಿಂದ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು. ಜಮ್ಮುವಿನ ವಿದ್ಯುತ್ ಸಚಿವಾಲಯದ ಪ್ರಿನ್ಸಿಪಲ್ ಸೆಕ್ರೆಟರಿ ರಾಜೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಅಕ್ಟೋಬರ್ 2ರಂದು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಯಕ್ಷಗಾನ ಪ್ರದರ್ಶನ ಕಂಡು ಪುಲಕಿತರಾದ ಮಾನ್ಯ ಗವರ್ನರ್ ಮನೋಜ್ ಸಿನ್ಹಾ ಅವರು ವೈಷ್ಞೋದೇವಿ ಸನ್ನಿಧಾನದಲ್ಲಿ ಯಕ್ಷಗಾನ ಪ್ರದರ್ಶನ ನಡೆಸಿಕೊಡುವಂತೆ ಆಗ್ರಹಿಸಿದರು. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ…
ದೈವಾರಾಧನೆಯನ್ನು ಉಸಿರಾಗಿಸಿಕೊಂಡಿರುವ ತುಳುನಾಡಿನಲ್ಲಿ ಅನೇಕ ಕಾರ್ಣಿಕ ಕ್ಷೇತ್ರಗಳು ಕಾಣ ಸಿಗುತ್ತವೆ. ಅಂತಹ ಕಾರ್ಣಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕ್ಷೇತ್ರ ತಾರಾಬರಿ (ಸಾರಬಳಿ) ಜುಮಾದಿ ಬಂಟ ಕ್ಷೇತ್ರ, ಕೆಂಜಾರು. ತಾರಾಬರಿ ತುಳುನಾಡಿನಲ್ಲಿ ಆರಾಧಿಸಲ್ಪಡುವ ಜುಮಾದಿ ಬಂಟ ದೈವಗಳ ಬಂಡಿ ಉತ್ಸವಗಳಲ್ಲಿ ವಿಶೇಷವಾಗಿ ಕಾಣಿಸಲ್ಪಡುತ್ತದೆ. ಪಶ್ಚಿಮ ಘಟ್ಟದಿಂದ ಕಡಲ ತಟಿಯವರಗಿನ ಸಾವಿರಾರು ಭಕ್ತರು ಇಲ್ಲಿಯ ಬಂಡಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ತಾರಾಬರಿ ಕ್ಷೇತ್ರದ ಕಾರಣಿಕದ ಇತಿಹಾಸವನ್ನು ನೋಡಿದಾಗ ಸೂಮಾರು ೯೦೦ ವರ್ಷಗಳ ಹಿಂದೆ “ಭೂತ ಮಂಜು” ಎಂಬವರನ್ನು ಬೆನ್ನು ಹಿಡಿದು ಬಂದ ದೈವಗಳು ತಾರಾ ಬರಿಯಲ್ಲಿ ನೆಲೆಯೂರಿ ಪೇಜಾವರ ಮಾಗಣೆಯವರಿಂದ ಆರಾಧಿಸಲ್ಪಡುತ್ತಾ ಕಾರಣಿಕ ಮೆರೆಯುತ್ತಿದ್ದಾರೆ. ದೈವದ ನುಡಿಕಟ್ಟಿನನುಸಾರ “ಭೂತ ಮಂಜುವಿನ” ಬೆನ್ನು ಹಿಡಿದು ಬಂದ ದೈವವು ಮಾಗಣೆ ಸಮಸ್ತರ ಕೂಡುವಿಕೆಯೊಂದಿಗೆ ಚಿಕ್ಕಪರಾರಿ “ಮಂಜೊಟ್ಟಿ ಮಾರ್ಲ” ಕೈಯಿಂದ ಕೆಸರುಕಲ್ಲು ಹಾಕಿಸಿಕೊಂಡು ದೈವಸ್ಥಾನ ನಿರ್ಮಿಸಲ್ಪಟ್ಟು ಶ್ರೀ ಕ್ಷೇತ್ರದಲ್ಲಿ ನೆಲೆಯೂರಿರುತ್ತಾರೆ. ಮುಂದೆ ಮಂಜೊಟ್ಟಿ ಮಾರ್ಲರಿಂದ ಪಾಪೆ ಬಂಡಿಯನ್ನು ಅರ್ಪಿಸಿಕೊಂಡು ಕೀರ್ತಿ ಪಡೆದರು ಎಂದು ಪ್ರತೀತಿ. ಶ್ರೀ ಕ್ಷೇತ್ರ ಜುಮಾದಿಯ ಕಂಗಿನ ಹಾಳೆಯ…
ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ‘ಬಂಟ ಕಲಾ ಸಂಭ್ರಮ” ಆದಿತ್ಯವಾರ ಬಂಟ್ಸ್ ಹಾಸ್ಟೆಲ್ನ ಓಂಕಾರ ನಗರದ ಗಣೇಶೋತ್ಸವದ ವೇದಿಕೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, “ಸಮಾಜದ ಸಂಘಟನೆಗೆ ಬಂಟ ಕಲಾ ಸಂಭ್ರಮದಂತಹ ಕಾರ್ಯಕ್ರಮ ಪೂರಕವಾಗಿರುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಸುಮಾರು 16 ತಂಡಗಳು ಭಾಗವಹಿಸುತ್ತಿದೆ. ಇಂತಹ ಸ್ಪರ್ಧೆಯಿಂದ ಎಲ್ಲಾ ಸಂಘಗಳು ಸಕ್ರಿಯವಾಗುತ್ತದೆ. ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಒಳ್ಳೆಯ ವೇದಿಕೆ. ಬಂಟ ಕಲಾ ಸಂಭ್ರಮ ಶಿಸ್ತುಬದ್ಧವಾಗಿ ಆಯೋಜನೆಗೊಂಡಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಿರುವುದು ಬಂಟರ ಸಂಘದ ಹಿರಿಮೆಯಾಗಿದೆ. ಬಂಟರ ಮಾತೃ ಸಂಘದ ಅಡಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅತೀವ ಸಂತಸ ತಂದಿದೆ.…
ತುಳುವ ತಿರಿತ ಸಿರಿ ಪಜಿತೊಂದು ಪೋಯಿಲೆಕೊನೇ ಒಂಜೆತ ಬೆರಿಕ್ಕೊಂಜಿ ದಿಂಜಿ ಪೊಸತನ ಅರಲೊಂದು ನೆಗತೊಂದು ಬರ್ಪುಂಡು. ಅರಲಿ ಸಿರಿಮುಡಿತುಲಯಿಡ್ದ್ ಪಸರು ಕಮ್ಮೆನ ನಾಲೂರ ಮೂಂಕುಗೆಡ್ತ್ದ್, ಕೆಬಿ ಅರಲಾದ್, ತುಳುವ ಸೀಮೆದಂಚೊರ ಕಣ್ಣ್ ಹಾಸ್ದ್, ಕಾರ್ ಒಯ್ತೊಂದು ಬರ್ಪಿಲೆಕ ಮಲ್ಪುಂಡು. ಅತ್ತಂದೆ ಮರಪಂದಿ ನೆಂಪುದ ಮಾಲೆನ್ ಕೋತ್ ಕಡಪುಡುಂಡು ಪನ್ಪಿನೆಕ್ ಸಾಕ್ಷಿಯಾದ್ ಪಿದಯಿ ಊರುದಕ್ಲ್ ನಮ್ಮಾಡೆ ಬಿನ್ನೆರಾದ್ ಬತ್ತ್, ಬಿಕ್ಕೆರಾದ್ ಇತ್ತ್, ಮುಲ್ತ ಸಿರಿ ಸೊಬಗ್ನ್ ಅನುಭವಿತ್, ನೆಲಮೂಲೊದ ಐಸ್ರೊನು ತೆರಿದ್, ಅಕ್ಲೆಕ್ಲೆನ ದೇಸೊಡು, ಅಕ್ಲಕ್ಲೆನ ಬಾಸೆಡ್ ಮುಲ್ತ ಐಸಿರಿ ಐಭೋಗೊನು ಪುಗರ್ದ್ ವರ್ಣಿತ್ದ್ ಬರೆದ್ ಒರಿತ್ನವೇ ನೆಗತ್ ತೋಜುಂಡು. ಪರದೇಸೊ ಪರ ಊರುದಕ್ಲೆನ್ ಮರ್ಲ್ ಮಲ್ಪಿ ತುಳುವ ಪೋಕುಡು ಒಂಜಾತ್ ಆಚರಿಪುಲು, ಒಂಜಾತ್ ಪರ್ಬೊಲುಲಾ ಉಲ್ಲೊ. ಪಗ್ಗುದ ಬಿಸುಕಣಿಡ್ದ್ ಸುಗ್ಗಿದ ಕಡೆಮುಟ್ಟ ಒಂಜೆಕ್ಕೊಂಜಿ ಒತ್ತು ಕೊರೊಂದು ಬರ್ಪಿ ಪರ್ಬೊಲೆನ ಆಚರಿಪುದೊಟ್ಟು ಅಯಿಕ್ಕ್ ಸರಿಯಾಯಿ ತೆನಸಮಾಲಿಕೆಲಾ ಉಂಡು. ಪತ್ತನಾಜೆ ಪರ್ಬೊಲೆಗ್ ಗಿಡ್ಕ್ ಅಡೆತ್ತ್ ಬೆನ್ನಿ ಬೇಲೆದಂಚಿ ಮೋನೆ ಪಾಡ್ದ್ ಬೆನ್ನಿದ ಒಂಜಿ ಮೊಟ್ಟುದ…
ಪೂಜ್ಯ ಪದ್ಮವಿಭೂಷಣ ಡಾl ಡಿ. ವೀರೇಂದ್ರ ಹೆಗ್ಗಡೆ ಅವರ ಶುಭಾಶೀರ್ವಾದದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಕ್ಯವನ ಪರಿಕಾ ಪರ್ಕಳದಲ್ಲಿ ಆಯೋಜಿಸಲಾದ “9ನೇ ವಿಶ್ವ ಯೋಗ ದಿನಾಚರಣೆ” ಕಾರ್ಯಕ್ರಮದಲ್ಲಿ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ, ಶ್ರೀ ಧರ್ಮಸ್ಥಳ ಶಾಂತಿವನ ಟ್ರಸ್ಟ್ (ರಿ.) ಕಾರ್ಯದರ್ಶಿಗಳಾದ ಬಿ. ಸೀತಾರಾಮ್ ತೋಳ್ಪಡಿತ್ತಾಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಕ್ಯವನದ ಮುಖ್ಯ ವೈದ್ಯಕೀಯ ಅಧಿಕಾರಿಗಳಾದ ಗೋಪಾಲ್ ಪೂಜಾರಿ, ರೆಸಿಡೆಂಟಲ್ ವೈದ್ಯಕೀಯ ಅಧಿಕಾರಿಗಳಾದ ಶೋಭಿತ್ ಶೆಟ್ಟಿ ಉಪಸ್ಥಿತರಿದ್ದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಮಾ. 21 ಮತ್ತು 22ರಂದು ಜರಗಲಿರುವ ಸುಗ್ಗಿ ಮಾರಿಪೂಜೆಯ ಸಂದರ್ಭದಲ್ಲಿ ಮಾರಿಯಮ್ಮ ದೇವಿ ಮತ್ತು ಉಚ್ಚಂಗಿ ದೇವಿಯ ಗರ್ಭಗುಡಿ ನಿರ್ಮಾಣಕ್ಕೆ ಬಳಸುವ ಶಿಲಾ ಸೇವೆ ಸಮರ್ಪಣೆಗೆ ಅವಕಾಶ ಒದಗಿಸಲಾಗಿದೆ. ಇಳಕಲ್ ಕೆಂಪು ಶಿಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರಥಮ ಹಂತದಲ್ಲಿ ನಡೆಯುತ್ತಿರುವ ಗರ್ಭಗುಡಿ ಮತ್ತು ಸುತ್ತುಪೌಳಿ ನಿರ್ಮಾಣ ಸಹಿತ ವಿವಿಧ ಜೀರ್ಣೋದ್ದಾರ ಕಾರ್ಯಗಳಿಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಎರಡು ವರ್ಷಗಳಿಂದ ಭಕ್ತರಿಂದ ನಿರಂತರ ಶಿಲಾ ಸೇವೆ – ಶಿಲಾ ಪುಷ್ಪ ಸಮರ್ಪಣ ಕಾರ್ಯಕ್ರಮ ನಡೆಯುತ್ತಿದೆ. ಒಂದು ಶಿಲಾ ಸೇವೆಗೆ 999 ರೂ., 9 ಶಿಲಾ ಸೇವೆಗೆ 9,999 ರೂ., 99 ಶಿಲಾಸೇವೆಗೆ 99,999 ರೂ., 999 ಶಿಲಾ ಸೇವೆಗೆ 9,99,999 ರೂ., 9,999 ಶಿಲಾ ಸೇವೆಗೆ 99,99,999 ರೂ. ನಿಗದಿ ಪಡಿಸಲಾಗಿದ್ದು 9ಕ್ಕಿಂತ ಹೆಚ್ಚಿನ ಶಿಲಾ ಸೇವೆ ಸಮರ್ಪಿಸುವ ಭಕ್ತರನ್ನು ಕಾಪುವಿನ ಅಮ್ಮನ ಭಕ್ತರು ತಂಡದಲ್ಲಿ ಸೇರಿಸಿಕೊಳ್ಳಲಾಗುತ್ತಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶಿಲಾ…
ಮುಂಬಯಿ, ಮಾ.05:ತೋನ್ಸೆ ಜನರು ಉದಾತ್ತ ಕೊಡುಗೈದಾನಿಗಳಾಗಿದ್ದು ಇಂದು ವಿಶ್ವಮಾನ್ಯರಾಗಿದ್ದಾರೆ. ಉತ್ಕೃಷ್ಟ ನಿಸ್ವಾರ್ಥ ಸೇವೆಗೆ ತೋನ್ಸೆ ಜನತೆ ಮಾದರಿ ಆಗಿದ್ದಾರೆ. ಬಿಲ್ಲವರ ಹಸ್ತಗಳನ್ನು ಸೇರಿ ಅಭಿವೃದ್ಧಿ ಕಂಡ ಸರ್ವೋತ್ಕೃಷ್ಟ ಗರಡಿಗಳಲ್ಲೊಂದಾಗಿದ್ದು ಇಂದು ತೋನ್ಸೆ ಗರಡಿ ಸಾಮರಸ್ಯದ ತಾಣವಾಗಿ ಬೆಳೆದಿದೆ. ವಿಸ್ವಸ್ಥ ಜನರÀ ಕೈಯಲ್ಲಿ ಸಾರಥ್ಯ ನೀಡಿದಾಗ ಗರಡಿಗಳ ಸರ್ವೋಭಿವೃದ್ಧಿ ಸಾಧ್ಯವಾಗುವುದು ಅನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಗರೋಡಿ ಹೆಸರಲ್ಲಿ ಮುಂಬಯಿನಲ್ಲಿ ಮೇಲ್ಫಂಕ್ತಿತಲ್ಲಿರುವ ಟ್ರಸ್ಟ್ ತೋನ್ಸೆಯ ಸಮನ್ವಯದ ಸಂಭ್ರಮವಾಗಿಸಿದ ಈ ಕಾರ್ಯಕ್ರಮ ಪರಿಪೂರ್ಣತೆ ಕಂಡಿದೆ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ತಿಳಿಸಿದರು. ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮವತೀ ಗರೊಡಿ ಸೇವಾ ಟ್ರಸ್ಟ್ ಮುಂಬಯಿ ಸಮಿತಿ ತನ್ನ 14ನೇ ವಾರ್ಷಿಕೋತ್ಸವವನ್ನು ಇಂದಿಲ್ಲಿ ಭಾನುವಾರ ಅಪರಾಹ್ನ ಸಾಂತಾಕ್ರೂಸ್ ಪೂರ್ವದ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ರಚಿತ ತೋನ್ಸೆ ಶಾನ್ಬೋಗ್ ದಿ| ಬಾಬು ಎನ್.ಶೆಟ್ಟಿ ವೇದಿಕೆಯಲ್ಲಿ ಅದ್ದೂರಿಯಾಗಿ ಸಂಭ್ರಮಿಸಿದ್ದು ಮುಖ್ಯ ಅತಿಥಿಯಾಗಿದ್ದು ಸಮಾರಂಭವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಜಯಕೃಷ್ಣ…
ಯಕ್ಷಗಾನ ರಂಗದಲ್ಲಿ ಅದ್ವಿತೀಯರು. ಬಲಿಪ ಪರಂಪರೆಯ ಹಿರಿಯ ಕೊಂಡಿ. ನಾರಾಯಣ ಭಾಗವತರು ಪದಲೀನವಾಗುವ ಮೂಲಕ ತೆಂಕುತಿಟ್ಟಿನ ಪರಂಪರೆಯಲ್ಲಿ ಅಂತರ ಮೂಡಿದೆ. ಹಿಮ್ಮೇಳದ ಭೀಷ್ಮರಾಗಿದ್ದ ಬಲಿಪರು ಗಾನಯಾನದ ಜತೆಗೆ ಬದುಕಿನ ಯಾನಕ್ಕೂ ಮಂಗಲ ಹಾಕಿದ್ದಾರೆ. ಏರು ಪದ್ಯ ಗ ಳಿಂದಲೇ ಪ್ರಸಿದ್ಧಿ ಪಡೆದ ಯಕ್ಷ ಗಾ ನದ ಮುಕು ಟದ ಮಣಿ. ಪರಂಪರೆಯನ್ನು ಸರ್ವತಾ ಉಳಿಸಿಕೊಂಡಿದ್ದ ಮತ್ತು ಉಳಿಸಲು ಶ್ರಮಿಸಿದ ಭಾಗವತಶ್ರೇಷ್ಠರು. “ಬಲಿಪ” ಮನೆತನವೆಂದರೆ ಭಾಗವತರ ಮನೆ ಎಂದೇ ಖ್ಯಾತಿ. ಇವರ ಅಜ್ಜ ದಿ. ಬಲಿಪ ನಾರಾಯಣ ಭಾಗವತರು ( ಅಂದಿನ ಹಿರಿಯ ಬಲಿಪರು ) ಯಕ್ಷರಂಗದಲ್ಲಿ ಮೆರೆದ ದೊಡ್ಡ ಹೆಸರು. ತಮ್ಮ ಅಪಾರ ಸಾಧನೆಯಿಂದ “ಬಲಿಪ ಮಟ್ಟು’ ಎಂಬ ಶೆ„ಲಿಯನ್ನು ಹುಟ್ಟು ಹಾಕಿದ ಭಾಗವತ ಪಿತಾಮಹ. ತಮ್ಮ ಅಜ್ಜನಲ್ಲಿ ಹಾಗೂ ತಂದೆಯವರಲ್ಲಿ ಭಾಗವತಿಕೆ ಕಲಿತ ಪುಟ್ಟ ಬಾಲಕ ನಾರಾಯಣ, ಮುಂದೆ ತಮ್ಮ ಅಜ್ಜನ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದರು. ಏಳನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ, 13ನೇ ವಯಸ್ಸಿನಲ್ಲೇ ಯಕ್ಷರಂಗ ಪ್ರವೇಶಿಸಿದ ಅವರು ತಮ್ಮ ಅಜ್ಜನ “ಬಲಿಪ ಶೈಲಿ ‘ಯನ್ನೇ…