ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ದಿ ಪಡೆದಿರುವ ಹಾಗೂ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾಗಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಇದೀಗ ಯುವ ಬಂಟರ ಸಂಘ, ಕಂಬಳಕಟ್ಟ- ಕೊಡವೂರು ಇದರ ದಶಮಾನೋತ್ಸವದ ಪ್ರಯುಕ್ತ ಸಂಘ ವ್ಯಾಪ್ತಿಯ 25 ವರ್ಷದೊಳಗಿನ ಯುವಕ – ಯುವತಿಯರಿಗೆ ಬ್ಯಾಂಕಿಂಗ್ – ಫೈನಾನ್ಸ್, ಐಟಿ, ಏವಿಯೇಷನ್, ಟ್ರಾವೆಲ್ ಟೂರಿಸಂ, ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಸಂದರ್ಶನ ಕಲೆಯೊಂದಿಗೆ ಕೌಶಲ್ಯ ತರಬೇತಿ ನೀಡಿ ಉತ್ತಮ ಉದ್ಯೋಗಾವಕಾಶ ಕಲ್ಪಿಸುವ ಯೋಜನೆ ರೂಪಿಸಿದೆ. ಈ ತರಬೇತಿ ಪಡೆಯಲು ಇಚ್ಛಿಸುವ 10 ಅಭ್ಯರ್ಥಿಗಳಿಗೆ ಶುಲ್ಕದ ಶೇ. 50% ಸ್ಕಾಲರ್ ಶಿಪ್ ನ್ನು ಉನ್ನತಿ ಕೆರಿಯರ್ ಅಕಾಡೆಮಿಯು ನೀಡಲಿದೆ.
ಈ ತರಬೇತಿಯೊಂದಿಗೆ ಅಭ್ಯರ್ಥಿಗಳು ಆನ್ ಲೈನ್ ಬಿ.ಕಾಂ, ಬಿಬಿಎ, ಬಿಸಿಎ, ಬಿಎ ಪದವಿಯನ್ನು ಅಥವಾ ಎಂಕಾಂ, ಎಂಬಿಎ, ಎಂಸಿಎ, ಎಂಎ ಸ್ನಾತಕೋತ್ತರ ಪದವಿಯನ್ನು ಪಡೆಯಲು ಇಚ್ಛಿಸಿದಲ್ಲಿ ಯುಜಿಸಿ ಮಾನ್ಯತೆಯುಳ್ಳ ದೇಶದ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳಾದ ಜೈನ್ ಯೂನಿವರ್ಸಿಟಿ, ಬೆಂಗಳೂರು, ಹಿಂದೂಸ್ತಾನ್ ಯೂನಿವರ್ಸಿಟಿ, ಚೆನ್ನೈ, ವಿಜ್ಞಾನ್ ಯೂನಿವರ್ಸಿಟಿ, ಆಂಧ್ರ ಪ್ರದೇಶ ಅಥವಾ ಮಾನವ ರಚನಾ ಯೂನಿವರ್ಸಿಟಿ, ದೆಹಲಿ ಎನ್ ಸಿಆರ್ ಗಳಲ್ಲಿ ಅವಕಾಶ ಕಲ್ಪಿಸಿ, ಒಟ್ಟು 10 ಅಭ್ಯರ್ಥಿಗಳಿಗೆ ತಲಾ 10000/- ರೂಪಾಯಿಗಳ ಸ್ಕಾಲರ್ ಶಿಪ್ ನ್ನು ಉನ್ನತಿ ಕೆರಿಯರ್ ಅಕಾಡೆಮಿಯು ನೀಡಲಿದೆ” ಎಂದು ಸಂಸ್ಥೆಯ ಸ್ಥಾಪಕ ಹಾಗೂ ಸಂಘದ ಕಾನೂನು ಸಲಹೆಗಾರರಾದ ಪ್ರೇಮ್ ಪ್ರಸಾದ್ ಶೆಟ್ಟಿಯವರು ತಿಳಿಸಿರುತ್ತಾರೆ.
ಈ ಯೋಜನೆಯ ಲಾಭ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಇದೊಂದು ಸದವಕಾಶವಾಗಿದ್ದು, ಹೆಚ್ಚಿನ ವಿವರಗಳಿಗೆ ಸಂಘದ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಯವರನ್ನು ಏಪ್ರಿಲ್ 20, 2023ರೊಳಗೆ ಸಂಪರ್ಕಿಸಬೇಕಾಗಿ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಪುಷ್ಪರಾಜ್ ಶೆಟ್ಟಿ, ಆದಿವುಡುಪಿ : 8105883177
ಅಧ್ಯಕ್ಷರು, ಕಾರ್ಯದರ್ಶಿ
ಯುವಬಂಟರ ಸಂಘ (ರಿ.) ಕಂಬಳಕಟ್ಟ-ಕೊಡವೂರು