ಮುಂಬಯಿ, ಫೆ.12: ದೇಶದ ಪ್ರದಾನಿ ಮಂತ್ರಿ ಮಾನ್ಯ ನರೇಂದ್ರ ಮೋದಿಜಿ ಅವರು ಖೇಲೋ ಇಂಡಿಯಾ ಯೋಜನೆ ಜಾರಿ ಗೊಳಿಸಿ ರಾಷ್ಟ್ರದಾದ್ಯಂತ ಕ್ರೀಡಾಕ್ರಾಂತಿ ಮಾಡಿರುವರು. ಇದು ಭಾರತೀಯರ ಹೆಮ್ಮೆಯ ಸಾಧನೆ. ಇಂತಹ ದೂರದೃಷ್ಠಿತ್ವದ ಕ್ರೀಡಾರಂಗದಲ್ಲಿ ಬಂಟರೂ ಮುನ್ನಡೆಯಲ್ಲಿರುವುದು ಹೆಮ್ಮೆದಾಯಕ. ಆದ್ದರಿಂದ ಮಕ್ಕಳು ತಮ್ಮಲ್ಲಿನ ಕ್ರೀಡಾ ಕಲಾ ಕೌಶಲ್ಯವನ್ನು ಅನಾವರಣಗೊಳಿಸಿ ಯೋಜನೆಯ ಸದುಪಯೋಗ ಪಡೆಯಬೇಕು. ಪರಿಶ್ರಮದಿಂದ ದುಡಿದವರೇ ಮುಂದೆ ಸಾಗುತ್ತಾರೆ. ಅವರೇ ಸಾಧಕರೆಣಿಸಿ ರಾಷ್ಟ್ರದ ಸಂಪತ್ತು ಗಳಾಗುತ್ತಾರೆ ಎಂದು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ತಿಳಿಸಿದರು.
ಕ್ರೀಡೆಗಳ ಮೂಲಕ ಏಕತೆ ಮತ್ತು ಸಮಗ್ರತೆ ಧ್ಯೇಯವನ್ನಿರಿಸಿ ಬಂಟ್ಸ್ ಸಂಘ ಮುಂಬಯಿ ಇದರ ಕ್ರೀಡಾ ಸಮಿತಿ ಇಂದಿಲ್ಲಿ ಆದಿತ್ಯವಾರ ಕಾಂದಿವಲಿ ಪಶ್ಚಿಮದ ಪೂಯಿಸರ್ ಜಿಮ್ಖಾನದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2023ನೇ ವಾರ್ಷಿಕ 35ನೇ ಕ್ರೀಡೋತ್ಸವವನ್ನು ಕ್ರೀಡಾಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಬಲೂನ್ಗುಚ್ಛ ಆಗಸಕ್ಕಾರಿಸಿ ಕ್ರೀಡೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆಯನ್ನಿತ್ತು ಗೋಪಾಲ ಶೆಟ್ಟಿ ಮಾತಾನಾಡಿದರು.
ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಅಧ್ಯಕ್ಷತೆ ಹಾಗೂ ಸಂಘದ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಗಿರೀಶ್ ಆರ್.ಶೆಟ್ಟಿ ತೆಳ್ಳಾರ್ ನೇತೃತ್ವದಲ್ಲಿ ದಿನಪೂರ್ತಿಯಾಗಿ ಜರುಗಿಸಲ್ಪಟ್ಟ ಕ್ರೀಡೋತ್ಸವಕ್ಕೆ ಧ್ಯಾನ್ಚಂದ್ ಪ್ರಶಸ್ತಿ ಪುರಸ್ಕೃತೆ ಭಾರತೀಯ ವೇಗದ ಓಟಗಾರ್ತಿ ಅಶ್ವಿನಿ ಚಿದಾನಂದ ಶೆಟ್ಟಿ ಅಕ್ಕುಂಜಿ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತರು.
ಸಮಾರಂಭದಲ್ಲಿ ಪ್ರಧಾನ ಅಭ್ಯಾಗತರುಗಳಾಗಿ ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಹೆರಾಂಬ ಇಂಡಸ್ಟ್ರೀಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಕುಳೂರು ಕನ್ಯಾನ ಸದಾಶಿವ ಕೆ.ಶೆಟ್ಟಿ, ಗೌರವ ಅತಿಥಿಗಳಾಗಿ ರಕ್ಷಿ ಬಿಲ್ಡರ್ಸ್ನ ಆಡಳಿತ ನಿರ್ದೇಶಕ ರಾಜೇಶ್ ಶೆಟ್ಟಿ, ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ವಿೂರಾ ಭಯಂಧರ್ ಮಹಾನಗರ ಪಾಲಿಕೆಯ ನಗರ ಸೇವಕ ಅರವಿಂದ್ ಎ.ಶೆಟ್ಟಿ, ಕೆಪಿಸಿಸಿ ದ.ಕ ಜಿಲ್ಲಾಯುವಧ್ಯಕ್ಷ ಮಿಥುನ್ ರೈ, ಬೊರಿವಿಲಿ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಡಾ| ಪದ್ಮನಾಭ ವಿ.ಶೆಟ್ಟಿ, ಪೊವಾಯಿ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬಿ.ಆರ್ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಸಿಎ| ಐ.ಆರ್ ಶೆಟ್ಟಿ, ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಶಾಂತರಾಮ ಬಿ.ಶೆಟ್ಟಿ ಹಾಗೂ ವಿಶೇಷ ಅತಿಥಿಗಳಾಗಿ ಭಾರತ ಕ್ರಿಕೆಟ್ ತಂಡದ ಆಟಗಾರ ಶಿವಂ ದುಬೆ, ಚಲನಚಿತ್ರ ನಟ ದಿನೊ ಮೊರಯಾ, ಮುಂಬಯಿ ಕ್ರಿಕೇಟ್ ಅಸೋಸಿಯೇಶನ್ನ ಕೌನ್ಸಿಲ್ ಸದಸ್ಯ ಸುರಾಜ್ ಸಮತ್, ವಿಶ್ವ ಬಾಡ್ಮಿಂಟನ್ ಡಬಲ್ಸ್ನಲ್ಲಿ ದ್ವಿತೀಯ ಶ್ರೇಯಾಂಕದಲ್ಲಿರುವ ಅಕ್ಷನ್ ಶೆಟ್ಟಿ ವೇದಿಕೆಯನ್ನು ಅಲಂಕರಿಸಿ ಸಂದರ್ಭೋಚಿತವಾಗಿ ಮಾತನಾಡಿ ಶುಭಕೋರಿದರು.
ಬಂಟ್ಸ್ ಸಂಘದ ಉಪಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಹರೀಶ್ ಡಿ.ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಇಂದ್ರಾಳಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್.ಪಯ್ಯಡೆÀ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ದಿವಾಕರ ಶೆಟ್ಟಿ. ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಗಿರೀಶ್ ಆರ್.ಶೆಟ್ಟಿ ತೆಳ್ಳಾರ್, ಕರುಣಾಕರ ಎಸ್.ಶೆಟ್ಟಿ (ಪೆÇಯಿಸರ್ ಜಿಮ್ಖಾನ), ಬಂಟರ ಭವನದ ವ್ಯವಸ್ಥಾಪಕ ಪ್ರವೀಣ್ ಶೆಟ್ಟಿ ವಾರಂಗ ಸೇರಿದಂತೆ ಗಣ್ಯರನೇಕರು ವೇದಿಕೆಯಲ್ಲಿದ್ದು ಅತಿಥಿಗಳು ಅಶ್ವಿನಿ ಶೆಟ್ಟಿ ಅಕ್ಕುಂಜಿ ಇವರನ್ನು ಸನ್ಮಾನಿಸಿ ಗೌರವಿಸಿದರು.
ಡೊಂಬಿವಿಲಿ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಸುಕುಮಾರ್ ಎನ್.ಶೆಟ್ಟಿ ಮತ್ತು ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರ ವೈ. ಶೆಟ್ಟಿ ಇವರುಗಳ ಪ್ರಧಾನ ಪಾಯೋಜಕತ್ವ ವಿವಿಧ ಗಣ್ಯರ ಪ್ರವರ್ತಕತ್ವದಲ್ಲಿ ಆಯೋಜಿಸಲಾಗಿದ್ದು ಕ್ರೀಡಾಂಗಣದಲ್ಲಿ ನಿರ್ಮಿತ ಗುಡಿಯಲ್ಲಿನ ಶ್ರೀಮಹಾವಿಷ್ಣು, ಶ್ರೀ ಮಹಾಗಣಪತಿ, ಕಟೀಲು ಶ್ರೀ ದುರ್ಗಪರಮೇಶ್ವರಿ ಮಾತೆಗೆ ಸಂಘದ ಜ್ಞಾನ ಮಂದಿರದ ಪ್ರಧಾನ ಆರ್ಚಕ ವಿದ್ವಾನ್ ಅರವಿಂದ ಬನ್ನಿಂತ್ತಾಯ ಪೂಜೆ ನೆರವೇರಿಸಿ ನಿರ್ವಿಘ್ನವಾಗಿ ಕ್ರೀಡೋತ್ಸವ ನೆರವೇರುವಂತೆ ಪೂಜೆ ನೆರವೇರಿಸಿ ಪದಾಧಿಕಾರಿಗಳಿಗೆ ತೀರ್ಥ ಪ್ರಸಾದವಿತ್ತು ಹರಸಿದರು.
ಬಂಟರಲ್ಲಿನ ಒಗ್ಗೂಡುವಿಕೆಯೇ ನಮ್ಮ ಈ ಕ್ರೀಡೋತ್ಸವದ ಉದ್ದೇಶವಾಗಿದೆ. ಆದ್ದರಿಂದ ಇಲ್ಲಿ ನೆರೆದ ಬಂಟರೆಲ್ಲರೂ ಧನಾತ್ಮಕವಾಗಿ ಒಳ್ಳೆಯ ಮನಸ್ಸಿನಿಂದ ಕ್ರೀಡಾದಿನ ಸಂಭ್ರಮಿಸೋಣ. ಮನಸ್ತಾಪಗಳನ್ನು ಮರೆತು ಎಲ್ಲರೂ ಸಮಾನರು, ಎಲ್ಲರೂ ಅರ್ಹರು ಅನ್ನುವ ಭಾವನೆಯಿಂದ ಮುನ್ನಡೆಯೋಣ. ಆ ಮೂಲಕ ನಮ್ಮಲ್ಲಿನ ಕ್ರೀಡಾ ಉತ್ಸಹ ಸಾಮರಸ್ಯದ ಬಾಳ್ವಿಕೆ ಮೂಡಿಪಾಗಿಸೋಣ ಎಂದು ಚಂದ್ರಹಾಸ ಶೆಟ್ಟಿ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಕ್ರೀಡೋತ್ಸವದ ವಿವಿಧ ಪ್ರವರ್ತಕರು, ಬಂಟರ ವಿವಿಧ ಸಮಿತಿ, ಸಂಘದ ಒಂಬತ್ತು ಪ್ರಾದೇಶಿಕ ಸಮಿತಿಗಳ ಮುಖ್ಯಸ್ಥರು, ಸಮನ್ವಯಕರು, ಪದಾಧಿಕಾರಿಗಳು, ಬಂಟರ ವಿವಿಧ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಅಪಾರ ಸಂಖ್ಯೆಯ ಬಂಟರು ಮತ್ತು ಬಂಟರೇತರ ಹಿತೈಷಿಗಳು ಕ್ರೀಡೋತ್ಸವದ ವರ್ಣರಂಜಿತ ಕ್ರೀಡಾ ಪಥಸಂಚಲನ ದಲ್ಲಿ ಪಾಲ್ಗೊಂಡು ಕ್ರೀಡೋತ್ಸವಕ್ಕೆ ಕಳೆಯನ್ನಿತ್ತರು. ಐಕಳ ಹರೀಶ್ ಅವರು ಧ್ವಜ ಹಾರಾಡಿಸಿ ಕ್ರೀಡಾ ಕವಾಯಿತುಗೆ (ಮಾರ್ಚ್ ಪಾಸ್ಟ್) ಚಾಲನೆಯನ್ನಿತ್ತರು. ಅಕ್ಷತ್ ಕೆ.ಶೆಟ್ಟಿ ಕ್ರೀಡಾಜ್ಯೋತಿಯನ್ನು ಹಾಗೂ ರೋಶನ್ ಶೆಟ್ಟಿ ಕ್ರೀಡಾಧ್ವಜವನ್ನು ಕ್ರೀಡಾಂಗಣಕ್ಕ್ಕೆ ತಂದರು. ಅಕ್ಷತ್ ಶೆಟ್ಟಿ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದ್ದು ಕ್ರೀಡಾಳುಗಳು ಕ್ರೀಡಾ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ವಿಜಯ್ ಶೆಟ್ಟಿ ಮೂಡುಬೆಳ್ಳೆ ಪ್ರಾರ್ಥನೆಯನ್ನಾಡಿದರು. ಕ್ರೀಡಾ ಸಮಿತಿ ಕಾರ್ಯಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ಸ್ವಾಗತಿಸಿದರು. ಅಶೋಕ್ ಪಕ್ಕಳ ಮತ್ತು ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿದರು. ಸಂಘದ ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ ವಂದಿಸಿದರು.
ಬಳಿಕ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದಿದ್ದು, ಪುರುಷರು ಮತ್ತು ಮಹಿಳೆಯರಿಗಾಗಿ ವಿಶೇಷವಾಗಿ `ಹಗ್ಗ ಜಗ್ಗಾಟ’ ಸ್ಪರ್ಧೆ, ಮಹಿಳೆಯರಿಗಾಗಿ ಥ್ರೋಬಾಲ್ ಹಾಗೂ ಪುರುಷರಿಗಾಗಿ ವಾಲಿಬಾಲ್ ಪಂದ್ಯಾಟ ನಡೆಸಲ್ಪಟ್ಟಿತು. ಜಯ ಎ.ಶೆಟ್ಟಿ, ವಿಠಲ್ ಎಸ್.ಆಳ್ವ, ಗೌತಮ್ ಶೆಟ್ಟಿ, ಶರತ್ ಶೆಟ್ಟಿ ಅವರ ಕ್ರೀಡಾ ಮೇಲ್ವಿಚಾರಕ ತ್ವದಲ್ಲಿ ನಡೆದ ಕ್ರೀಡೋತ್ಸವದಲ್ಲಿ ಮಹೇಶ್ ಎಸ್.ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ವಿಜಯ ಶೆಟ್ಟಿ, ಭರತ್ ವಿ.ಶೆಟ್ಟಿ, ರೋಶನ್ ಶೆಟ್ಟಿ ಮತ್ತಿತರರು ಸ್ಪರ್ಧಾ ತೀರ್ಪುಗಾರರಾಗಿ ಸಹಕರಿಸಿದರು.