ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ವತಿಯಿಂದ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ಮೂರು ದಿನಗಳ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದುಬೈಗೆ ಬಂದಿದ್ದ ರೂಪೇಶ್ ಶೆಟ್ಟಿಯವರು ನಗರದ ಫಾರ್ಚೂನ್ ಕ್ಲಾಸಿಕ್ ಅಪಾರ್ಟ್ಮೆಂಟ್ ನಲ್ಲಿ ಯಕ್ಷಗಾನ ಅಭ್ಯಾಸ ಕೇಂದ್ರದ ವತಿಯಿಂದ ನಡೆಸುವ ಯಕ್ಷಗಾನ ತರಗತಿಗೆ ಭೇಟಿಕೊಟ್ಟಾಗ ಆರತಿ ಬೆಳಗಿಸಿ ಹರಸಲಾಯಿತು. ನಂತರ ಯಕ್ಷಗಾನ ಮಕ್ಕಳ ಹಾಗೂ ಪೋಷಕರೊಂದಿಗೆ ಸಮಾಲೋಚನೆ ನಡೆಸಿ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಸರಳವಾಗಿ ಏರ್ಪಡಿಸಿದ್ದ ರೂಪೇಶ್ ಶೆಟ್ಟಿಯವರನ್ನು ಸಾಂಪ್ರದಾಯಿಕವಾಗಿ ಸನ್ಮಾನಿಸಲಾಯಿತು. ಯಕ್ಷಗಾನ ಗುರುಗಳಾದ ಶೇಖರ್ ಶೆಟ್ಟಿಗಾರ್ ಕೇಂದ್ರ ನಡೆದುಕೊಂಡು ಬಂದ ಹಾದಿಯನ್ನು ರೂಪೇಶ್ ಶೆಟ್ಟಿಯವರಿಗೆ ತಿಳಿಸಿದರು. ಸನ್ಮಾನ ಕಾರ್ಯಕ್ರಮದಲ್ಲಿ ಯಕ್ಷಗಾನ ಅಭ್ಯಾಸ ಕೇಂದ್ರದ ರೂವಾರಿ ದಿನೇಶ್ ಶೆಟ್ಟಿ, ಜಯಾನಂದ ಪಕ್ಕಳ, ಗಮ್ಮತ್ ಕಲಾವಿದರು ದುಬೈಯ ನಿರ್ದೇಶಕ ವಿಶ್ವನಾಥ ಶೆಟ್ಟಿ, ಹಿರಿಯ ಯಕ್ಷಗಾನ ಕಲಾವಿದರಾದ ಭವಾನಿಶಂಕರ ಶರ್ಮ ಪಟ್ಲ ಘಟಕ ದುಬೈಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ದಿನೇಶ್ ಶೆಟ್ಟಿಯವರು ಸ್ವಾಗತಿಸಿ ಧನ್ಯವಾದವಿತ್ತರು.
ವಿಜಯಕುಮಾರ್ ಶೆಟ್ಟಿ
ಗಾಣದಮೂಲೆ ಮಜಿಬೈಲ್ (ದುಬೈ)