ವಿಶ್ವದರ್ಶನ ಕನ್ನಡ ದಿನಪತ್ರಿಕೆ ಮತ್ತು ಪ್ರಜಾ ದರ್ಶನ ಪತ್ರಿಕೆಯ ಮಾಧ್ಯಮ ಸಹಯೋಗದಲ್ಲಿ ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಧಾರವಾಡದ ರಂಗಾಯಣ ಸಭಾಭವನದಲ್ಲಿ ವಿಜ್ರಂಭಣೆಯಿಂದ ಜರುಗಿತು. ಕಾರ್ಯಕ್ರಮವು ದೇವರ ಸ್ತುತಿಯೊಂದಿಗೆ ದೀಪ ಬೆಳಗುವುದರೊಂದಿಗೆ ಉದ್ಘಾಟನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರೆಯಿತು. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ. ಭಾವೈಕ್ಯತೆಯ ಸಂಗಮವಾಗಿ ಸಂಸ್ಕೃತಿಯ ನೆಲೆಬೀಡು ಹುಬ್ಬಳ್ಳಿಯು ಮುಖ್ಯ ತಾಣ. ಬಹುಸಂಖ್ಯಾತರು ವಾಸಿಸುವ ನಿಸರ್ಗ ರಮಣೀಯ ತಾಣ. ಕವಿಶ್ರೇಷ್ಠರು, ಮಠಮಂದಿರಗಳು, ದಾಸ, ಸಾಹಿತ್ಯ ಶ್ರೇಷ್ಠ, ಸಂಸ್ಕೃತಿಯ ನೆಲೆಬೀಡು, ಮಠಾಧೀಶರ ತವರೂರಾದ ಹುಬ್ಬಳ್ಳಿಯ ರಮಣೀಯ ತಾಣದಲ್ಲಿ ಸಾಹಿತ್ಯ ಸಿಂಚನವಾದ “ಎಸ್. ಎಸ್ ಪಾಟೀಲ್ ಅವರ ಸಾರಥ್ಯದಲ್ಲಿ ಜಗತ್ತಿನಾದ್ಯಂತ ಪ್ರಸರಣ ಹೊಂದುತ್ತಿರುವ “ವಿಶ್ವದರ್ಶನ ಕನ್ನಡ ದಿನಪತ್ರಿಕೆ” ವರುಷ ಪೂರೈಸಿದ ಸಂದರ್ಭದಲ್ಲಿ ವಿಶಿಷ್ಟ ಕಾರ್ಯಕ್ರಮದ ಅನಾವರಣ ನಡೆಯಿತು.
ಇಂದಿನ ದಿನಮಾನಸದಲ್ಲಿ ಪತ್ರಿಕೆಗಳ ಶ್ರಮ ಬೆಟ್ಟದಷ್ಟಿದೆ. ಪತ್ರಿಕೆಯ ಓದುಗರ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಇರುವಂತಹ ಅಪಾರ ಜ್ಞಾನ ಹೊಂದಿರುವ ತಂದೆ-ತಾಯಿಗಳು ಮಕ್ಕಳಿಗೆ ಶೈಕ್ಷಣಿಕ ಮತ್ತು ಸಾಹಿತ್ಯ ಪರವಾದಂತಹ ಬೋಧನೆಗಳನ್ನು ಮಾಡಬೇಕಿದೆ. ಇಂದಿನ ಯುವಜನತೆ ಸಾಹಿತ್ಯದ ಬಗ್ಗೆ ಗಮನ ಕೊಡದೆ ಮೊಬೈಲ್ ಗಳಂಥ ಸಾಧನಗಳನ್ನು ಬಳಸಿ ತಮ್ಮ ಭವಿಷ್ಯಕ್ಕೆ ಕೊಡಲಿಯೇಟು ತಂದು ಕೊಳ್ಳುತ್ತಿದ್ದಾರೆ. ಅದರ ಬದಲು ಸಾಹಿತ್ಯಪರ ಜ್ಞಾನ ಬೆಳೆಸುವಲ್ಲಿ ಸಹಕಾರಿಯಾಗಬೇಕು. ಪ್ರತಿ ಮನೆಯಲ್ಲಿ ಸಾಹಿತಿಗಳು ಹುಟ್ಟಿ ಬರಬೇಕು, ಆ ಸಾಹಿತ್ಯದಿಂದಲೇ ಇಂದಿನ ಪತ್ರಿಕೋದ್ಯಮ ನಡೆಯಲು ಸಾಧ್ಯವಿದೆ. ಹಾಗಾಗಿ ಮಕ್ಕಳಿಗೆ ಬಾಲ್ಯದಲ್ಲಿಯೇ ಸಾಹಿತ್ಯದ ಬಗ್ಗೆ ಆಸಕ್ತಿ ಕೊಡುವ ಕೆಲಸ ಆಗಬೇಕಿದೆ. ಇದು ನೈಜ ಪತ್ರಿಕೋದ್ಯಮದ ಬಿಂಬಿಸುವ ಕೆಲಸ ಇಂತಹ ಕಾರ್ಯಕ್ರಮಗಳಿಂದ ಸಾಧ್ಯ ಎಂದು ವಿಶ್ವದರ್ಶನ ದಿನಪತ್ರಿಕೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳ ಪ್ರಥಮ ಮಹಾಸಮ್ಮೇಳವನ್ನು ಉದ್ಘಾಟಿಸಿ, ಗೌರವಾನ್ವಿತ ನ್ಯಾಯಾಧೀಶರಾದ ಅರಳಿ ನಾಗರಾಜ್ ವಿಶ್ರಾಂತ ನ್ಯಾಯಾಧೀಶರು, ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಅವರು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಶ್ವ ದರ್ಶನ ಕನ್ನಡ ದಿನ ಪತ್ರಿಕೆ ಬೆಂಗಳೂರು ಸಹಾಯಕ ಸಂಪಾದಕ, ಪತ್ರಕರ್ತ ವರದಿಗಾರ ಕೆ.ಸಂತೋಷ್ ಶೆಟ್ಟಿ ಮೊಳಹಳ್ಳಿ ಇವರಿಗೆ ವಿಶ್ವ ದರ್ಶನ ಮಾಧ್ಯಮ ಸಂಸ್ಥೆ ನೀಡಿದ “ರಾಷ್ಟ್ರೀಯ ಮಾಧ್ಯಮ ಭೂಷಣ ಪ್ರಶಸ್ತಿ -2022 ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ಪ್ರಶಸ್ತಿಯನ್ನು ವಿಶೇಷವಾಗಿ ಗಣ್ಯರ ಹಾಗೂ ಸಂಸ್ಥೆಯ ಅಧಿಕಾರಿಗಳ ಸಮ್ಮುಖದಲ್ಲೇ ಪ್ರಧಾನ ವೇದಿಕೆಯಲ್ಲಿ ಗೌರವಿಸುವುದರ ಮೂಲಕ ವಿಶೇಷವಾಗಿ ಅಭಿನಂದಿಸಲಾಯಿತು. ಹಲವಾರು ದಿನ ಪತ್ರಿಕೆ, ನಿಯತಕಾಲಿಕ ಮಾಸಪತ್ರಿಕೆ ಮತ್ತು ವಾರಪತ್ರಿಕೆ ಗಳಲ್ಲಿ ನಿರಂತರ ವರದಿ, ಅಂಕಣ ನೀಡುವುದರ ಮೂಲಕ ಜನಪ್ರಿಯರಾಗಿದ್ದರು. ಸಾಮಾಜಿಕ ಕಳಕಳಿ ಮತ್ತು ವಸ್ತುನಿಷ್ಠ ವರದಿಗೆ ಈ ಬಾರಿ ವಿಶ್ವ ಮಾಧ್ಯಮ ಭೂಷಣ 2022 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದುವರೆಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದು ಇದೀಗ ವಿಶ್ವ ಮಾಧ್ಯಮ ಭೂಷಣ ಪ್ರಶಸ್ತಿ ಸ್ವೀಕರಿಸುವುದರ ಮೂಲಕ ಇನ್ನೊಂದು ಮೈಲುಗಲ್ಲಾಗಲಿದೆ ಇದು ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದು ಈಗ ವಿಶ್ವ ಮಾಧ್ಯಮ ಭೂಷಣ ಪ್ರಶಸ್ತಿ ಕೂಡ ಮುಡಿ ಗೇರಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಅದೇ ರೀತಿ ತಂದೆ ಜಗನ್ನಾಥ ಶೆಟ್ಟಿ (ಸುಳ್ಕೋಡು) ಕಾಜಾಡಿಮನೆ ಮತ್ತು ಪತ್ನಿ ಪೂಜಾ ಎಸ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ.ಪೂ.ಡಾ. ಶ್ರೀ ಕಾಲಜ್ಞಾನ ಬ್ರಹ್ಮ ಸದ್ಗುರು ಶರಣಬಸವ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು, ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿರುವ ಪ.ಪೂ. ಶ್ರೀ ವೀರಯ್ಯ ಮಹಾಸ್ವಾಮಿಗಳು, ಶ್ರೀ ಸಿದ್ದರಾಮೇಶ್ವರ ಮಠ ಹೂಲಗೇರಿ ತಾ. ಬಾದಾಮಿ ಆರೂಢ ಶ್ರೀ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ.ಪೂ. ಶ್ರೀ 108 ಷ.ಬ್ರ. ಗುರು ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ಭೂ ಕೈಲಾಸ ಮೇಲು ಗದ್ದುಗೆ ಸಂಸ್ಥಾನ ಹಿರೇಮಠ ಪುಣ್ಯಕ್ಷೇತ್ರ ಇಟಗಿ ತಾ. ನಿಡಗುಂದಿ, ಪ.ಪೂ. ಶ್ರೀ ವಿದ್ಯಾನಂದ ಮಹಾಸ್ವಾಮಿಗಳು, ಶ್ರೀ ಆರೂಢ ದರ್ಶನ ಜ್ಞಾನ ಪ್ರಕಾಶನ ಆಶ್ರಯ ಶ್ರೀ ಕ್ಷೇತ್ರ ಕಣಿವಿ ಹೊನ್ನಾಪುರ, ನೀಲಜಿ ಪ.ಪೂ. ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು, ಶ್ರೀ ಶಿವಲಿಂಗಾನಮಠ ಸಿದ್ಧಾರೂಢ ಆಶ್ರಮ ಸೂರಶೆಟ್ಟಿಕೊಪ್ಪ ತಾ. ಕಲಘಟಗಿ ಪ.ಪೂ. ಶ್ರೀ ಹಾಲಯ್ಯ ಮಹಾಸ್ವಾಮಿಗಳು, ಹಿರೇಮಠ ಹಾಲಯ್ಯ ಶಿವಯೋಗಿಗಳ ಮಠ ಗೋಕುಲ್ ರೋಡ್ ಹುಬ್ಬಳ್ಳಿ. ಪ.ಪೂ.ವೇ. ಮೂರ್ತಿ ವಿನೋದಯ್ಯ ಮಹಾಸ್ವಾಮಿಗಳು, ಹಿರೇಮಠ ವೀರಭದ್ರೇಶ್ವರ ಮಠ ಕೋರಹಳ್ಳಿ-ಮದರಿ ತಾ. ಸಿಂದಗಿ. ಸಮ್ಮೇಳನ ಅಧ್ಯಕ್ಷರಾಗಿ ಶ್ರೀಮಾನ್ಯ ಎಲ್ .ಎಸ್. ಶಾಸ್ತ್ರಿಗಳು, ಹಿರಿಯ ಪತ್ರಕರ್ತರು ಬೆಳಗಾವಿ ವಹಿಸಿದ್ದರು.
ಸಮ್ಮೇಳನ ಕಾರ್ಯಧ್ಯಕ್ಷರಾಗಿ ಡಾ. ಎಸ್. ಎಸ್ . ಪಾಟೀಲ್, ಸಂಪಾದಕರು, ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಹಾಗೂ ಕರ್ನಾಟಕ ಪ್ರಜಾ ದರ್ಶನ ಕನ್ನಡ ಮಾಸ ಪತ್ರಿಕೆ ಹುಬ್ಬಳ್ಳಿ, ಮುಖ್ಯ ಅತಿಥಿಗಳಾಗಿ ಶ್ರೀ ಸೋಮನಾಥ ಮರಡೂರು, ನಾಡಿನ ಹಿರಿಯ ಗವಾಯಿಗಳು ಧಾರವಾಡ, ಶ್ರೀ ಶಾಂತಲಿಂಗಪ್ಪ ದೇಸಾಯಿ ಕಲ್ಲೂರು, ಖ್ಯಾತ ತಬಲವಾದಿಗಳು ಧಾರವಾಡ, ಶ್ರೀ ಸುರೇಶ್ ಎಸ್ ಕುರ್ತಕೋಟಿ, ದ್ವಿ.ದ.ಸ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ಧಾರವಾಡ, ಶ್ರೀ ಸುರೇಶ ಕಮ್ಮಾರ, ಅಧ್ಯಕ್ಷರು ಲೈಫ್ ಟಚ್ ಫೌಂಡೇಶನ್ ಮತ್ತು ಮಾನವ ಹಕ್ಕುಗಳ ಸಂರಕ್ಷಣಾ ಕರ್ನಾಟಕ ರಾಜ್ಯ ಭಕ್ತಿ ಗೀತೆ ಶರಣರ ವಚನದೊಂದಿಗೆ ಶ್ರೀ ಕಿರಣರಾಜ್ ರಾಠೋಡ್ ಸಾ. ಬಸವನ ಬಾಗೇವಾಡಿ, ವೀರೇಶ ಪ್ರಳಯಕಲ್ಮಠ, ರಾಜ್ಯ ಮಾಧ್ಯಮ ವಿಶ್ಲೇಷಕರು ಕುಂದಗೋಳ ವಿಶ್ವ ದರ್ಶನ ಪತ್ರಿಕೆ, ಕರ್ನಾಟಕ ಪ್ರೆಸ್ ಕ್ಲಬ್ ಜಿಲ್ಲಾಧ್ಯಕ್ಷರು ಸ್ವಾಗತಿಸಿದರು. ಡಾ. ಎಸ್. ಎಸ್. ಪಾಟೀಲ್, ಸಂಪಾದಕರು ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ ಆಧ್ಯಾತ್ಮಿಕ ಉಪನ್ಯಾಸಕರಾಗಿ ಡಾ. ನಾನಾಸಾಹೇಬ್ ಹಚ್ಚಡದ ,ರಾಜ್ಯ ಮಾಧ್ಯಮ ಸಲಹೆಗಾರರು ಮತ್ತು ಪ್ರಾಧ್ಯಾಪಕರು ಶರಣಬಸವೇಶ್ವರ ವಿದ್ಯಾಸಂಸ್ಥಾನ ಕಲಬುರ್ಗಿ ಮಾತನಾಡಿದರು.
ಮಾಧ್ಯಮ ಕ್ಷೇತ್ರದ ವಿಶೇಷ ಉಪನ್ಯಾಸಕರಾಗಿ ಶ್ರೀ ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಬೆಂಗಳೂರು ರಾಷ್ಟ್ರೀಯ ಮಾಧ್ಯಮ ಭೂಷಣ ಪುರಸ್ಕೃತರು. ಈ ಸಂಪೂರ್ಣ ಕಾರ್ಯಕ್ರಮವನ್ನು ಪತ್ರಿಕೆ ಸಂಪಾದಕರಾದ ಎಸ್ ಎಸ್ ಪಾಟೀಲ್ ಅವರು ನಿರ್ವಹಿಸಿ ವಿಶ್ವ ದರ್ಶನ ಕನ್ನಡ ಪತ್ರಿಕೆ, ಬೆಂಗಳೂರು ಸಹಾಯಕ ಸಂಪಾದಕ ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ನಿರೂಪಿಸಿ ವಂದಿಸಿದರು.