ಬಂಟರ ಸಂಘ (ರಿ) ಬಜಪೆ ವಲಯದ ಮುಂದಿನ 3 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸಮಾಜ ಮುಖಿ ಸೇವಾ ಮನೋಭಾವದ ಸರಳ ವ್ಯಕ್ತಿತ್ವದ ವೇಣುಗೋಪಾಲ್ ಶೆಟ್ಟಿ ಕರಂಬಾರು ಪಡುಮನೆ ಆಯ್ಕೆಯಾಗಿದ್ದಾರೆ. ಹೋಟೆಲು ಉದ್ಯಮಿಯಾಗಿರುವ ವೇಣುಗೋಪಾಲ್ ಎಲ್ ಶೆಟ್ಟಿಯವರು ಮುಂಬಯಿ ಥಾಣೆ ಬಂಟ್ಸ್ ಅಸೋಸಿಯೇಶನ್ ಸಂಘದ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ತಿರುಪತಿ ತಿಮ್ಮಪ್ಪನ ಪರಮ ಭಕ್ತರಾಗಿರುವ ವೇಣುಗೋಪಾಲ್ ಶೆಟ್ಟಿಯವರು ಸಮಾಜ ಸೇವೆಯೊಂದಿಗೆ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ.





































































































