ಬೈಂದೂರು ಬಂಟರ ಯಾನೆ ನಾಡವರ ಸಂಘದ 30 ರ ಸಂಭ್ರಮದ ಅತ್ಯುನ್ನತ ಸಾಧಕಿ ಪ್ರಶಸ್ತಿಯನ್ನು ಹೇರoಜಲು ಡಾ. ಸಿಂಚನಾ ಎಸ್ ಶೆಟ್ಟಿಯವರಿಗೆ ಅವರ ಸ್ವಗೃಹದಲ್ಲಿ 30 ರ ಸಂಭ್ರಮದ ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದ್ದೆಯವರು ನೀಡಿ ಸನ್ಮಾನಿಸಿದರು. ಈ ಸಂಧರ್ಭ ಹಿರಿಯರಾದ ಗಂಟೆಹೊಳೆ ನಾರಾಯಣ ಶೆಟ್ಟಿ, ಜಯಶೀಲಾ ಶೆಟ್ಟಿ, ಶ್ರೀಮತಿ ಶಶಿಕಲಾ ಶೆಟ್ಟಿ, ಮಂಜುನಾಥ್ ಶೆಟ್ಟಿ ಹೇರಂಜಲು, ಸದಾಶಿವ ಶೆಟ್ಟಿ ಕಾಲ್ತೋಡು, ಸೀತಾರಾಮ್ ಶೆಟ್ಟಿ ಕಾಲ್ತೋಡು, ಸತ್ಯರoಜನ್ ಶೆಟ್ಟಿ, ಶ್ರೀಮತಿ ಬೇಬಿ ಶೆಟ್ಟಿ, ಡಾ. ಸಿಂಚನ ಶೆಟ್ಟಿಯವರ ತಂದೆ ಶರತ್ ಶೆಟ್ಟಿ ಗುಲ್ವಾಡಿ, ತಾಯಿ ಶ್ರೀಮತಿ ನಾಗರತ್ನ ಶೆಟ್ಟಿ ಹಾಗೂ ಅನೇಕ ಸಮಾಜ ಬಾಂಧವರು ಉಪಸ್ಥಿತರಿದ್ದು ಸಾಧಕಿಯನ್ನು ಆಶೀರ್ವದಿಸಿದರು.

ಶಶಿಧರ್ ಶೆಟ್ಟಿ ಸಾಲ್ಗದ್ದೆಯವರು ಡಾ. ಸಿಂಚನ ಅವರನ್ನು ಸನ್ಮಾನಿಸಿ ಮಾತನಾಡಿ, ಸಿಂಚನ ಅವರು ಈವಾಗಲೇ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದಿದ್ದಾರೆ. ಇನ್ನೂ ಉನ್ನತ ಮಟ್ಟದ ಸಾಧನೆ ಮಾಡಲಿ ಇವರಿಗೆ ದೇವರು ಹೆಚ್ಚಿನ ಶಕ್ತಿ ಕೊಟ್ಟು ಬೈಂದೂರು ಬಂಟರ ಸಂಘಕ್ಕೆ ಹಾಗೂ ಸಮಾಜಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.