ಜಗತ್ತಿನ ಅತ್ಯಂತ ಪ್ರಾಚೀನ ಯುದ್ಧಕಲೆ ಎಂದು ಖ್ಯಾತಿ ಪಡೆದ ಕಳರಿ ಪೈಟ್ ತುಳುನಾಡಿನಿಂದಲೇ ಉದ್ಭವವಾಗಿದೆ ಎಂಬುದು ಹೆಮ್ಮೆಯ ವಿಷಯ. ಹಿಂದೆ ದ.ಕ, ಕಣ್ಣೂರು, ವಯನಾಡು ಮತ್ತು ಕೊಝೀಕೋಡ್ ಭಾಗಗಳನ್ನೊಳಗೊಂಡ ಭಾಗವನ್ನು ತುಳುನಾಡು ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶವು ಯುದ್ಧಕಲೆ ಅಭ್ಯಾಸದ ಪ್ರಬಲ ಕೇಂದ್ರವಾಗಿತ್ತು. ಕೇರಳದಲ್ಲೂ ಇದನ್ನು “ತುಳುನಾಡನ್ ಕಳರಿ” ಎಂದೇ ಕರೆಯುತ್ತಾರೆ. ಪುರಾವೆಗಳ ಪ್ರಕಾರ, ಹಲವಾರು ರಾಜರು ಹಾಗೂ ಸೇನಾ ನಾಯಕರು ತುಳುನಾಡಿಗೆ ಬಂದು ಕಲರಿ ಪೈಟ್ ಕಲಿತಿದ್ದರು. ಕೋಟಿ ಚೆನ್ನಯರು ಗರಡಿಗಳ ಮೂಲಕ ಈ ಕಲೆಯ ಉಳಿವಿಗೆ ಶ್ರಮಿಸಿದರು. ಅವರ ಗುರು ನಾನಯ್ಯರಿಗೆ ಕೇರಳದ ರಾಜರು ಗ್ರಾಮಗಳನ್ನು ದತ್ತವಾಗಿ ನೀಡಿದ ದಾಖಲೆಗಳೂ ಇವೆ. ಅದೇ ರೀತಿ ಅವಳಿ ವೀರರಾದ ಮುದ್ದ ಕಳಲೆರ್, ಕಾನದ ಕಟದೆರ್ ಇವರ ಶೌರ್ಯಗಳು ಕಳರಿಯಿಂದಲೇ ಬೆಳೆದು ಬಂದಿದೆ.ಕಲರಿ ಪೈಟ್ನಲ್ಲಿ 108 ಮರ್ಮ ಬಿಂದುಗಳಲ್ಲಿ 64ಕ್ಕೆ ಸಂಬಂಧಪಟ್ಟ ಮರ್ಮ ವಿದ್ಯೆಗಳು ಪ್ರಮುಖ. ಇದು ದೇಹ ಹಾಗೂ ಮನಸ್ಸಿಗೆ ಆರೋಗ್ಯ ನೀಡುವುದಲ್ಲದೆ, ಯುದ್ಧ ತಂತ್ರಗಳು, ಕಣ್ಕಟ್ಟು ವಿದ್ಯೆ, ಗೆರಿಲ್ಲ ತಂತ್ರಗಳು ಸೇರಿವೆ. ಈ ವಿದ್ಯೆಯ ಅಧಿದೇವತೆಯನ್ನು ತುಳುವೇಶ್ವರಿ, ಖಡ್ಗೆಶ್ವರಿ, ಕಲರಿ ಜುಮಾದಿ, ಮಾಂಕಾಳಿ, ದೇಯಿ ಮುಂತಾದ ಹೆಸರುಗಳಲ್ಲಿ ಕರೆಯುತ್ತಾರೆ. ಇಂದು ಈ ಜ್ಞಾನವು ತುಳುನಾಡಿನಲ್ಲಿ ನಶಿಸಿದೆ. ಜನಪದ ಆಚರಣೆ ಮಾತ್ರ ಉಳಿದಿದ್ದು, ಯುದ್ಧಕಲೆಗೆ ಪ್ರಸಕ್ತಿ ಇಲ್ಲ. ಈ ಪವಿತ್ರ ಜ್ಞಾನವನ್ನು ಮರುಸ್ಥಾಪನೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಅದು ಯುವ ತಲೆಮಾರಿಗೆ ಶಾರೀರಿಕ ಮಾನಸಿಕ ಬಲವನ್ನು ನೀಡುವ ಜೊತೆಗೆ, ಉದ್ಯೋಗಾವಕಾಶಗಳನ್ನು ಕೂಡಾ ನೀಡಲಿದೆ.

ಈ ನಿಟ್ಟಿನಲ್ಲಿ ಇದನ್ನು ಮರು ಸ್ಥಾಪನೆಗೊಳಿಸುವ ಉದ್ದೇಶದಿಂದ ಕಳರಿ ಮತ್ತು ತುಳುನಾಡು ಎಂಬ ವಿಷಯದ ಬಗ್ಗೆ ಚರ್ಚಾ ಗೋಷ್ಠಿಯನ್ನು ಹಮ್ಮಿಕೊಂಡಿದ್ದೇವೆ. 2025 ಮೇ 24ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಡಿಗ್ರಿ ಕಾಲೇಜಿನಲ್ಲಿ ಬೆಳಗ್ಗೆ 10 ಗಂಟೆಯಿಂದ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ ನಡೆಯಲಿದೆ. ಆಸಕ್ತರು 8075350491 ಈ ನಂಬರಿಗೆ ಕರೆದು ಹೆಸರು ನೊಂದಾವಣೆ ಮಾಡಬಹುದು.