ಬೈಂದೂರು ಬಂಟರ ಸಂಘದ ವತಿಯಿಂದ ರಾಜ್ಯ ಮಟ್ಟದಲ್ಲಿ ಎಂಟನೇ ರ್ಯಾಂಕ್ ವಿಜೇತೆ ಸನ್ನಿಧಿ ಎಂ ಶೆಟ್ಟಿ ಅವರಿಗೆ ಅಧ್ಯಕ್ಷ ಸಾಲ್ಗದ್ದೆ ಶಶಿಧರ ಶೆಟ್ಟಿ ಅವರು ನಗದು ಪುರಸ್ಕಾರ ಹಾಗೂ 30ರ ಸಂಭ್ರಮದ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಕುಂದಾಪುರ ಯುವ ಬಂಟರ ಸಂಘದ ಮಾಜಿ ಅಧ್ಯಕ್ಷ ಹೇರಿಕುದ್ರು ಸುನಿಲ್ ಕುಮಾರ್ ಶೆಟ್ಟಿ, ಉದ್ಯಮಿ ದಿಗಂತ ಶೆಟ್ಟಿ ಮತ್ತು ಸನ್ನಿಧಿಯ ಪೋಷಕರು ಉಪಸ್ಥಿತರಿದ್ದರು.
