ಮುಂಬಯಿ, ಜು.29: ಮುಂಬಯಿ ಸಾರಸ್ವತ ಲೋಕದ ಸಜ್ಜನ ಸಾಹಿತಿ, ‘ಶಿಮುಂಜೆ ಪರಾರಿ’ ಕಾವ್ಯ ನಾಮದಿ ಚಿರಪರಿಚಿತ ತುಳು ಕನ್ನಡ ಕವಿ, ಅನುವಾದಕಾರ, ನಾಟಕಕಾರ, ಅಧ್ಯಾಪಕ, ಕಂಠದಾನ ಕಲಾವಿದ ಮತ್ತು ನಟ ಎಂದೆಣಿಸಿ ಬಹುಮುಖ ಪ್ರತಿಭೆಗಳಿಂದ ಜನಮಾನಸದಲ್ಲಿ ಜನಾನುರೆಣಿಸಿರುವ ಶಿಮುಂಜೆ ಪರಾರಿ (ಸೀತಾರಾಮ ಮುದ್ದಣ್ಣ ಶೆಟ್ಟಿ) ಅವರನ್ನು ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ.) ಸಂಸ್ಥೆಯು ವಯೋ ಸಮ್ಮಾನ-2023 ಗೌರವವನ್ನಿತ್ತು ಅಭಿನಂದಿಸಿತು.
ಐಲೇಸಾ ಅಂತಾರಾಷ್ಟ್ರೀಯ ಡಿಜಿಟಲ್ ಸಂಸ್ಥೆ ಬೆಂಗಳೂರು ಇದೇ ಆಗಸ್ಟ್ ತಿಂಗಳಲ್ಲಿ ಸ್ಥಾಪನೆಯ ತೃತೀಯ ವರ್ಷ ಪೂರೈಸಿದ ನಿಮಿತ್ತ ಇಂದಿಲ್ಲಿ ಶನಿವಾರ ಅಪರಾಹ್ನ ಅಂಧೇರಿ ಪಶ್ಚಿಮದಲ್ಲಿನ ಕಂಟ್ರಿ ಕ್ಲಬ್ ಸಭಾಗೃಹದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಮುಂಜೆ ಪರಾರಿ (ಪತ್ನಿ ಚಂದ್ರಿಕಾ ಶೆಟ್ಟಿ ಅವರನ್ನೊಳಗೊಂಡು) ಪಾದಪೂಜೆ ನೆರವೇರಿಸಿ ವಿಭಿನ್ನ ಮತ್ತು ಅರ್ಥಪೂರ್ಣವಾಗಿ ಗೌರವ ಸಲ್ಲಿಸಿತು.
ಐಲೇಸಾ ಸಂಸ್ಥೆಯ ಪ್ರಧಾನರು ಮತ್ತು ರಾಷ್ಟ್ರದ ಪ್ರಸಿದ್ದ ಹಿನ್ನಲೆ ಗಾಯಕ ರಮೇಶ್ಚಂದ್ರ ಬೆಂಗಳೂರು ಇವರನ್ನೊಳಗೊಂಡು ನಾಡಿನ ಪ್ರಸಿದ್ಧ ಕವಿ ಸುಬ್ರಾಯ ಚೊಕ್ಕಾಡಿ ಅವರು ವಯೋಸಾಧನೆಯ ನೆನಪಿಗೆ ರೂಪಾಯಿ 84,000/- ಗೌರವ ಗುರುದಕ್ಷಿಣೆಯೊಂದಿಗೆ ಶಿಮುಂಜೆ ಪರಾರಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ಶುಭಾವಸರದಲ್ಲಿ ಗಲ್ಫ್
ರಾಷ್ಟ್ರದ ಪ್ರತಿಷ್ಠಿತ ಉದ್ಯಮಿಗಳಾದ ಸರ್ವೋತ್ತಮ ಶೆಟ್ಟಿ ಅಬುಧಾಬಿ, ರವಿ ಶೆಟ್ಟಿ ಮೂಡಂಬೈಲು (ಕತಾರ್), ಯುವ ಲೇಖಕಿ ‘ಮರ್ಸಿಡಿಸ್ ಬೆಂಜ್ನ ಹಿಂದೆ’ ಕೃತಿಕರ್ತೆ, ಅಕ್ಷತಾರಾಜ್ ಪೆರ್ಲ ಮಂಗಳೂರು ಅತಿಥಿüಗಳಾಗಿ ಭಾಗವಹಿ ಸನ್ಮಾನಿತರನ್ನು ಅಭಿನಂದಿಸಿದರು.
ಎಂಬತ್ತನಾಲ್ಕು ವರ್ಷ ಹರೆಯದ ಗೌರವಾರ್ಥ ನಡೆಸಲ್ಪಟ್ಟ ವಯೋಸಮ್ಮಾನದಲ್ಲಿ ಶಿಮುಂಜೆ ಇಷ್ಟದ ತಿನಸು, ಉಡುಗೊರೆಗಳನ್ನು ಅರ್ಪಿಸಿ, ಹಿರಿಯ ಕವಿಯ ಸಮ್ಮುಖದಲ್ಲಿ ಹಾಡುಗಳನ್ನು ಹಾಡಿ, ಕವಿಯ ಸಾಹಿತ್ಯ ವಾಚನ, ವಿಮರ್ಶೆ ನಡೆಸಿ ವಿಭಿನ್ನ ಮತ್ತು ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸಲ್ಪಟ್ಟಿತು.
ಈ ಸಂದರ್ಭದಲ್ಲಿ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಸಿಎ| ಸುರೇಂದ್ರ ಕೆ.ಶೆಟ್ಟಿ, ಶ್ಯಾಮ ಎನ್.ಶೆಟ್ಟಿ ವಾಶಿ, ನಿತ್ಯಾನಂದ ಡಿ.ಕೋಟ್ಯಾನ್, ಭುಜಂಗ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ನ್ಯಾಯವಾದಿ ಗುಣಕರ ಡಿ.ಶೆಟ್ಟಿ, ಮೋಹನ್
ಮಾರ್ನಾಡ್, ಡಾ| ಜಿ.ಎನ್ ಉಪಾಧ್ಯಾಯ, ಡಾ| ಭರತ್ಕುಮಾರ್ ಪೊಲಿಪು, ಓಂದಾಸ್ ಕಣ್ಣಾಂಗಾರ್, ಎಸ್.ಆರ್ಬಂ ಡಿಮಾರ್, ಶಿಮುಂಜೆ ಸುಪುತ್ರಿಯರಾದ ಅರ್ಚನಾ ಶೆಟ್ಟಿ, ಅಪರ್ಣ ಶೆಟ್ಟಿ ಹಾಗೂ ಶಿಮುಂಜೆ ಅಭಿಮಾನಿ ಬಳಗ, ವಿದ್ಯಾರ್ಥಿ ವೃಂದ ಸೇರಿದಂತೆ ಗಣ್ಯರನೇಕರು ಉಪಸ್ಥಿತರಿದ್ದರು.
ಸಂಘಟಕ, ಯುವ ಸಾಹಿತಿ ಪೇತ್ರಿ ವಿಶ್ವನಾಥ್ ಶೆಟ್ಟಿ ಸ್ವಾಗತಿಸಿದರು. ಐಲೇಸಾ ಮುಖ್ಯಸ್ಥ ಶಾಂತರಾಮ್ ವಿ.ಶೆಟ್ಟಿ ಪ್ರಸ್ತಾವನೆಗೈದರು. ವಯೋಸಮ್ಮಾನ್ ಗೌರವ ಸಮಿತಿ ಮುಖ್ಯಸ್ಥ ಅನಂತ್ ರಾವ್, ಮುಂಬಯಿ ಸಂಚಾಲಕ ಸುರೇಂದ್ರ ಮಾರ್ನಾಡು ಕಾರ್ಯಕ್ರಮವನ್ನು ಹಾಗೂ ಗೋಪಾಲ್ ಪಟ್ಟೆ, ವಿವೇಕಾನಂದ್ ಮಂಡಿಕೆರೆ ಸನ್ಮಾನ ಕಾರ್ಯಕ್ರಮವನ್ನು ನಿರೂಪಿಸಿದರು. ಶಿವು ಸಾಲಿಯಾನ್ ವಂವಂದಿಸಿದರು.
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)