ಬಂಟರ ಸಂಘ ಮುಂಬಯಿಯ ಸಂಚಾಲಕತ್ವದಲ್ಲಿರುವ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಇದರ 35ನೇ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ ಕುರ್ಲಾ ಪೂರ್ವದ ಬಂಟರ ಭವನ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಮಾತೃಭೂಮಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನದಾಸ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ, ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ ಉಳ್ತೂರು ಮೋಹನ್ದಾಸ್ ಶೆಟ್ಟಿ ಗ್ರಾಹಕರು, ಶೇರ್ ದಾರರು ಮತ್ತು ಹಿತೈಷಿಗಳನ್ನು ಸ್ವಾಗತಿಸುತ್ತಾ, ಮಾತೃಭೂಮಿ ತಂಡ ರೂಪಗೊಳ್ಳುವಾಗ ಬಂಟರ ಸಂಘದ ಅಧ್ಯಕ್ಷರ, ಜಾಗತಿಕ ಬಂಟರ ಸಂಘದ ಅಧ್ಯಕ್ಷರು ಈ ಇಂದಿನ ಎಲ್ಲಾ ಕಾರ್ಯಾಧ್ಯಕ್ಷರ ಮಾರ್ಗದರ್ಶನದಲ್ಲಿ ಸಮರ್ಥ ರೀತಿಯ ತಂಡ ಮಾರ್ಗದರ್ಶನ ನೀಡಿದ್ದಾರೆ. ಅವರೆಲ್ಲರ ಸಮರ್ಥ ಮಾರ್ಗದರ್ಶನದಲ್ಲಿ ಈ ಸಂಸ್ಥೆಯನ್ನು ನನ್ನ ತಂಡ ಮುನ್ನಡೆಸುತ್ತಿದೆ. ನಮ್ಮ ತಂಡದಲ್ಲಿ ವಿದ್ಯಾವಂತರು, ಸಂಘಟಕರು, ಲೆಕ್ಕ ಪರಿಶೋಧಕರು ಸಮರ್ಥ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾತೃಭೂಮಿ ಕೋ ಆಪರೇಟಿವ್ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಂತೆ ಸಮಾನ ರೀತಿಯ ಲೋನ್ ಬಡ್ಡಿ ಮತ್ತು ಠೇವಣಿದಾರರಿಗೆ ಬಡ್ಡಿ ನೀಡುವ ಎಲ್ಲಾ ಸಿದ್ಧತೆಗಳನ್ನು ಮಾಡಿದ್ದೇವೆ. ನಮ್ಮ ಸಮಾಜದಲ್ಲಿ ಬಹಳಷ್ಟು ಜನ ಉದ್ಯಮಿಗಳಿದ್ದಾರೆ. ಅವರೆಲ್ಲರೂ
ಮಾತೃಭೂಮಿ ಸಂಸ್ಥೆಯಲ್ಲಿ ವ್ಯವಹಾರ ನಡೆಸಬೇಕು. ಅಲ್ಲದೇ ಚಾರ್ಟೆಡ್ ಅಕೌಂಟೆಂಟ್ ನವರು ಕೂಡ ಬಹಳಷ್ಟು ಜನ ಬಂಟ ಸಮಾಜದವರಿದ್ದಾರೆ. ಅವರೆಲ್ಲರೂ ಮಾತೃಭೂಮಿಯಲ್ಲಿ ಲೋನ್ ಪಡೆಯಲು ಸಮಾಜದ ಬಾಂಧವರಿಗೆ ತಿಳಿಸಬೇಕು. ಆ ಮೂಲಕ ನಮ್ಮ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸುವುದಕ್ಕೆ ಸಾಧ್ಯವಾಗುತ್ತದೆ. ಬಂಟರ ಸಂಘದ ಪ್ರತೀ ಪ್ರಾದೇಶಿಕ ಸಮಿತಿಗಳು ಬಹಳಷ್ಟು ಸಹಕಾರವನ್ನು ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಕೂಡ ತಮ್ಮೆಲ್ಲರ ಸಹಕಾರ ಅಗತ್ಯ ಬೇಕಾಗಿದೆ. ನಮ್ಮ ಸಂಸ್ಥೆಯಲ್ಲಿ ಠೇವಣಿ ಬಹಳಷ್ಟು ಇದೆ. ಆದ್ದರಿಂದ ಗ್ರಾಹಕರಿಗೆ ವಿಶೇಷ ಸೌಲಭ್ಯ ನೀಡುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ. ಅದೆಲ್ಲವೂ ಯಶಸ್ವಿಯಾಗಬೇಕಾದರೆ ಸಮಾಜದ ಬಂಧುಗಳೆಲ್ಲರೂ ನಮ್ಮೊಂದಿಗೆ ವ್ಯವಹಾರ ನಡೆಸಬೇಕು. ನಮ್ಮ ಸಂಸ್ಥೆಯ ಸಿಬ್ಬಂದಿ ವರ್ಗದವರಿಗೆ ಕೂಡ ವಿಶೇಷ ಮಾರ್ಗದರ್ಶನ ನೀಡಿ ರಾಷ್ಟ್ರೀಯ ಬ್ಯಾಂಕುಗಳು ಗ್ರಾಹಕರಿಗೆ ನೀಡುವ ಸೌಲಭ್ಯದಷ್ಟೇ ನಮ್ಮ ಕೋ ಆಪರೇಟಿವ್ ಸೊಸೈಟಿಯು ಮಾಡಲಿದೆ. ಸಮಾಜ ಬಾಂಧವರೆಲ್ಲರ ಬೆಂಬಲದಿಂದ ಒಳ್ಳೆಯ ಸ್ಕೀಮ್ ಅನ್ನು ಗ್ರಾಹಕರಿಗೆ ನೀಡಲು ಸಾಧ್ಯವಾಯಿತು. ಗ್ರಾಹಕರಿಗೆ ಲೋನ್ ನೀಡುವಾಗ ಅದನ್ನು ಸರಿಯಾಗಿ ಅಧ್ಯಯನ ಮಾಡಿ ನೀಡುತ್ತೇವೆ. ಆದ್ದರಿಂದ ಅದು ಸರಿಯಾದ ವ್ಯವಸ್ತೆಯಲ್ಲಿ ಹಿಂದೆ ಬರುತ್ತದೆ. ಅಲ್ಲದೇ ಲೋನ್ ರಿಕವರಿ ತಂಡ ಕೂಡ ಸಮರ್ಥ ರೀತಿಯಲ್ಲಿ ಸೇವಾ ಕಾರ್ಯವನ್ನು ಮಾಡುತ್ತಿದೆ. ರಾಷ್ಟ್ರೀಯ ಬ್ಯಾಂಕ್ ಗಳು ನೀಡುವ ಸೌಲಭ್ಯಗಳು ಮಾತೃಭೂಮಿಯಲ್ಲಿ ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದ್ದು ಶೇಕಡಾ 12ರಷ್ಟು ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.
ಮಾತೃಭೂಮಿಯ ಉಪ ಕಾರ್ಯಾಧ್ಯಕ್ಷ ಡಾ. ಆರ್. ಕೆ. ಶೆಟ್ಟಿ ಸೊಸೈಟಿಯ ಲೋಗೋ ಮತ್ತು ವೆಬ್ಸೈಟ್ ನ ಬಗ್ಗೆ ಮಾಹಿತಿ ನೀಡಿ, ಹೊಸ ಸ್ಕೀಮಿನ ಬಗ್ಗೆ ಮುಂಗಡ ಸಾಲ ಕನಿಷ್ಠ ಬಡ್ಡಿ ದರದಲ್ಲಿ ಕೊಡುವುದಾಗಿ ಸಭೆಗೆ ತಿಳಿಸಿದರು. ಗೌರವ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿಯವರು ವಾರ್ಷಿಕ ವರದಿಯನ್ನು ಮಂಡಿಸಿದರು. ಗೌರವ ಕೋಶಾಧಿಕಾರಿ ಸಿಎ ಹರೀಶ್ ಡಿ. ಶೆಟ್ಟಿ ಲೆಕ್ಕಪತ್ರವನ್ನು ನೀಡಿದರು. ವೇದಿಕೆಯಲ್ಲಿ ನಿರ್ದೇಶಕರುಗಳಾದ ಮಹೇಶ್ ಎಸ್. ಶೆಟ್ಟಿ, ಶಶಿಧರ್ ಕೆ. ಶೆಟ್ಟಿ ಇನ್ನಂಜೆ, ಸಿಎ ಜಗದೀಶ್ ಬಿ. ಶೆಟ್ಟಿ, ಕಿಶೋರ್ ಕುಮಾರ್ ಕುತ್ಯಾರು, ಸುನಂದ ಶೆಟ್ಟಿ, ಸಿಎ ರಾಜಶ್ರೀ ಜಿ. ಶೆಟ್ಟಿಯವರು ಉಪಸ್ಥರಿದ್ದರು. ಬಂಟರ ಸಂಘದ ಪದಾಧಿಕಾರಿಗಳು, ವಿವಿಧ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ವಿವಿಧ ಸೊಸೈಟಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.