ನಮ್ಮ ಹಿಂದೂ ಧರ್ಮದಲ್ಲಿ ಹಬ್ಬಗಳಿಗೆ ಮತ್ತು ದೇವಿ ದೇವತೆಗಳಿಗೆ ಹೆಚ್ಚಿನ ಮಹತ್ವವಿದ್ದು ಹಬ್ಬದ ಸಂಭ್ರಮದಲ್ಲಿ ದೇವತಾ ಆರಾಧನೆ ಮುಖ್ಯವಾಗಿರುತ್ತದೆ. ಆಗಸ್ಟ್ ತಿಂಗಳಲ್ಲಿ ಬರುವ ಪ್ರಮುಖ ಹಬ್ಬವೆಂದರೆ ವರಮಹಾಲಕ್ಷ್ಮೀ ಹಬ್ಬವಾಗಿದ್ದು ಧನ ಪ್ರಾಪ್ತಿಗೆ ಸಂಪತ್ತಿನ ಅದಿಧೇವತೆಯಾದ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಆ ಮನೆಯಲ್ಲಿ ಲಕ್ಷ್ಮೀ ನೆಲೆ ನಿಲ್ಲಲಿ ಮತ್ತು ಅವರ ಆಶೀರ್ವಾದ ಮನೆಯವರ ಮೇಲಿರಲಿ ಎಂಬುದೇ ಈ ಹಬ್ಬದ ಪ್ರಮುಖ ಉದ್ದೇಶವಾಗಿದೆ.ಇಂದಿನ ಜೀವನದಲ್ಲಿ ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದೇ ಇದೆ. ಜೀವನದಲ್ಲಿ ಹಣವೊಂದೇ ಮುಖ್ಯವಲ್ಲದೇ ಇದ್ದರೂ ನಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ನಾವು ಹಣವನ್ನು ಅವಲಂಬಿಸಿದ್ದೇವೆ. ಆದ್ದರಿಂದ ಧನ ಕನಕಕ್ಕೆ ಪ್ರಮುಖ ದೇವತೆಯಾಗಿರುವ ಲಕ್ಷ್ಮೀಯ ಆರಾಧನೆಯನ್ನು ಮಾಡುವುದರಿಂದ ಲಕ್ಷ್ಮೀ ಕೃಪಾಕಟಾಕ್ಷಕ್ಕೆ ನಾವು ಪಾತ್ರರಾಗಬಹುದು ಮತ್ತು ಧಾರ್ಮಿಕ ವಿಧಿ ವಿಧಾನಗಳನ್ನು ಕೂಡ ಮನೆಯಲ್ಲಿ ಅನುಷ್ಠಾನಗೊಳಿಸಬಹುದು ಎಂಬುದು ಹಬ್ಬದ ಹಿಂದಿರುವ ಮುಖ್ಯ ಉದ್ದೇಶವಾಗಿದೆ.ಲಕ್ಷ್ಮೀ ಹಬ್ಬವನ್ನು ಮಾಡುವಾಗ ಮನೆಯಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆಯನ್ನು ನೀಡಬೇಕು. ಮನೆಯಲ್ಲಿ ಕಸ ತುಂಬಿದ್ದು ನೀವು ಲಕ್ಷ್ಮೀಯನ್ನು ಸ್ವಾಗತಿಸಿದರೆ ಆಕೆ ಖಂಡಿತ ನಿಮ್ಮ ಮನೆಯನ್ನು ಪ್ರವೇಶಿಸುವುದಿಲ್ಲ. ನಿಮ್ಮ ಮನೆಯಲ್ಲಿ ಆಕೆ ನೆಲೆನಿಂತಿದ್ದರೂ ಆಕೆ ಮನೆಯಿಂದ ನಿರ್ಗಮಿಸುತ್ತಾಳೆ. ಒಮ್ಮೆ ಲಕ್ಷ್ಮೀ ದೇವಿಯು ವಿಷ್ಣುವನ್ನು ತೊರೆದು ಹೋದಾಗ ಇಡಿಯ ದೇವಲೋಕವೇ ಆಕೆಯ ನಿರ್ಗಮನದಿಂದ ಶೂನ್ಯವಾಯಿತು. ಅಂದರೆ ಸಂಪತ್ತು ನಷ್ಟವಾದಂತಾಯಿತು ಇದನ್ನು ಶ್ರಿ-ಹಿನ್ ಎಂದು ಕರೆಯುತ್ತಾರೆ.
ವರಮಹಾಲಕ್ಷ್ಮೀ ಹಬ್ಬವನ್ನು ಯಾವಾಗ ಮಾಡುತ್ತಾರೆ?
ಶ್ರಾವಣ ಮಾಸದ ಕೊನೆಯ ಶುಕ್ರವಾರ ಲಕ್ಷ್ಮೀ ಹಬ್ಬವಿದ್ದು ರಕ್ಷಾ ಬಂಧನಕ್ಕೆ ಕೆಲವು ದಿನಗಳಿರುವಾಗ ಈ ಹಬ್ಬವನ್ನು ನಡೆಸಲಾಗುತ್ತದೆ. ಶ್ರಾವಣ ಮಾಸದ ಶುಕ್ಷ ಪಕ್ಷದ ಹತ್ತನೇ ದಿನ ಈ ಹಬ್ಬವನ್ನು ನಡೆಸುತ್ತಾರೆ. ಈ ಹಬ್ಬ ಇಂದು ಶುಕ್ರವಾರ ಅಂದರೆ 5 ರಂದು ಬಂದಿದೆ. ಹಿಂದೂ ಧರ್ಮದಲ್ಲಿ ಪ್ರತಿ ಶುಕ್ರವಾರವನ್ನು ದೇವಿಗೆ ಅರ್ಪಿಸಲಾಗುತ್ತದೆ. ಭಾರತದ ದಕ್ಷಿಣದಲ್ಲಿ ಇದನ್ನು ಮುಖ್ಯವಾಗಿ ನಡೆಸುತ್ತಾರೆ. ಅಂತೆಯೇ ಉತ್ತರದಲ್ಲಿ ಕೂಡ ಈ ಹಬ್ಬಕ್ಕೆ ಪ್ರಾಮುಖ್ಯತೆ ಇದೆ.
ಲಕ್ಷ್ಮೀ ವ್ರತವನ್ನು ಮಾಡುವುದರಿಂದ ದೊರೆಯುವ ಪ್ರಯೋಜನಗಳೇನು ಹೆಸರೇ ಸೂಚಿಸುವಂತೆ ವರ ಎಂದರೆ ದೇವರಿಂದ ದೊರೆಯುವ ವರವಾಗಿದೆ ಲಕ್ಷ್ಮೀ ಎಂಬುದು ಧನ ಕನಕ ಸಂಪತ್ತು ಎಂದಾಗಿದೆ. ಆದ್ದರಿಂದ ಧನ ಕನಕ ಸಂಪತ್ತಿನ ವರವನ್ನು ಪ್ರಸಾದಿಸುವ ಲಕ್ಷ್ಮೀ ಮಾತೆ ಎಂದು ಈ ಹಬ್ಬವನ್ನು ಆಚರಿಸುತ್ತಾರೆ. ಜೀವನದಲ್ಲಿ ಸುಖವನ್ನು ಧನವನ್ನು ಪಡೆಯಲು ಈ ದಿನ ವ್ರತಾಚರಣೆಯನ್ನು ಮಾಡಲಾಗುತ್ತದೆ. ಅಂತೆಯೇ ಈ ದಿನ ಉಪವಾಸವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಮತ್ತು ವಿದ್ಯಾಭ್ಯಾಸದ ವಿಷಯದಲ್ಲಿ ಕೂಡ ನೀವು ಮುಂದೆ ಇರಲಿದ್ದೀರಿ.
ಶ್ರೀ – ಧನ ಕನಕ
ಭು – ಸಂಪತ್ತು
ಸರಸ್ವತಿ – ವಿದ್ಯೆ
ಪ್ರೀತಿ – ಪ್ರೇಮ
ಕೃತಿ – ಗೌರವ
ಶಾಂತಿ – ಶಾಂತಿ ಸಮಾಧಾನ
ಸಂತುಷ್ಟಿ – ತೃಪ್ತಿ
ಪುಷ್ಟಿ – ಆರೋಗ್ಯ
ವರಮಹಾಲಕ್ಷ್ಮೀ ವ್ರತವನ್ನು ಯಾರು ಮಾಡಬೇಕು
ಈ ವ್ರತವನ್ನು ವಿವಾಹಿತ ಸ್ತ್ರೀಯರು ಮಾತ್ರ ನಡೆಸಬೇಕು ಎಂದಾಗಿದೆ ಆದರೆ ಅವಿವಾಹಿತ ಹುಡುಗಿಯರೂ ಕೂಡ ವ್ರತವನ್ನು ಮಾಡಬಹುದು. ಕುಟಂಬದ ಒಳಿತಿಗಾಗಿ ವಿವಾಹಿತ ಪುರುಷ ಕೂಡ ವ್ರತವನ್ನು ಕೈಗೊಳ್ಳಬಹುದು. ಈ ವ್ರತವನ್ನು ಮಾಡುವುದು ಪತಿ ಮತ್ತು ಪತ್ನಿಗೆ ಒಳ್ಳೆಯದಾಗಿದೆ.
ವರಮಹಾಲಕ್ಷ್ಮಿ ಪೂಜೆಗಾಗಿ ಬೇಕಾಗಿರುವ ಸಾಮಾಗ್ರಿಗಳು
*ಮಾವಿನ ಎಲೆಗಳು – ಕಲಶದ ಸುತ್ತಲೂ ಅಲಂಕಾರಕ್ಕಾಗಿ ಕಟ್ಟಲು ಸ್ವಲ್ಪ ತೆಂಗಿನಕಾಯಿಗಳು – ಒಂದನ್ನು ಕಲಶದ ಮೇಲೆ ಇರಿಸುತ್ತಾರೆ ಮತ್ತು ಉಳಿದವುಗಳನ್ನು ಪೂಜೆ ಹಾಗೂ ತಾಂಬೂಲದಲ್ಲಿ ಉಪಯೋಗಿಸುತ್ತಾರೆ
*ಅರಿಶಿನ ಹುಡಿ
*ಶ್ರೀಗಂಧ ಪೇಸ್ಟ್
*ಕುಂಕುಮ
*ಅರಿಶಿನ ಮಿಶ್ರಿತ ಅಕ್ಕಿ – ಅಕ್ಷತೆ
*ಕಮಲ
*ದೇವಿಯ ಮುಖ – ಮಾರುಕಟ್ಟೆಯಲ್ಲಿ ದೊರೆಯುತ್ತದೆ
*ಮೂಗುತ್ತಿ ಮತ್ತು ಕಣ್ಣಿನ ಆಭರಣ – ಮಾರುಕಟ್ಟೆಯಲ್ಲಿ ಲಭ್ಯ
*ದೇವಿಗೆ ವಸ್ತ್ರಗಳು
*ಹೂವುಗಳಿಂದ ಮಾಡಿದ
*ಪೂಜೆಗಾಗಿ ಹೂವು
*ಬಾಳೆಹಣ್ಣು, ವೀಳ್ಯದೆಲೆ ಮತ್ತು ಅಡಿಕೆ
*ತೋರಂ – ಅರಿಶಿನವನ್ನು ಬಳಿದು ಮಾಡಿದ ದಾರ. ಇದು ಒಂಭತ್ತು ದಾರ ಮತ್ತು ಗಂಟುಗಳನ್ನು ಒಳಗೊಂಡಿದೆ. ಇದನ್ನು ಕೈಗೆ ಕಟ್ಟಲಾಗುತ್ತದೆ ಪೋಂಗು ನೂಲು – ಇದು ಹಳದಿ ಬಣ್ಣದಿಂದ ಮಾಡಲಾದ ದಾರವಾಗಿದೆ. ಇದನ್ನು ಕುತ್ತಿಗೆಗೆ ಕಟ್ಟಲಾಗುತ್ತದೆ
*ಒಣ ಹಣ್ಣುಗಳು
*ಹಾಲು
*ಹಣ್ಣುಗಳು
ವರಮಹಾಲಕ್ಷ್ಮೀ ಪೂಜಾ ವಿಧಿ
ಕ್ಷೀರಸಾಗರದಲ್ಲಿ ನೆಲೆಸಿರುವ ಲಕ್ಷ್ಮೀ ಮಾತೆಯು ಬಿಳಿಯ ವಸ್ತ್ರಗಳನ್ನು ಧರಿಸುವವರಾಗಿದ್ದಾರೆ. ಈ ದಿನ ಲಕ್ಷ್ಮೀ ದೇವತೆಗೆ ಪೂಜೆಯನ್ನು ಮಾಡುವುದು ಆಕೆಯ ಎಂಟು ರೂಪಗಳಿಗೆ ಪೂಜೆ ಮಾಡುವುದಕ್ಕೆ ಸಮನಾಗಿದೆ. ದೀಪವಾಳಿ ಪೂಜಾ ವಿಧಿಯಂತೆಯೇ ಈ ಪೂಜೆಯನ್ನು ಮಾಡಲಾಗುತ್ತದೆ.
1. ಸ್ನಾನ ಮಾಡಿದ ನಂತರ ಪೂಜೆ ಮಾಡುವ ಸ್ಥಳದಲ್ಲಿ ಗಂಗಾಜಲವನ್ನು ಪ್ರೋಕ್ಷಿಸಿ
2. ಈಗ ಮರದ ಸ್ಟೂಲ್ ಅನ್ನು ಇರಿಸಿ ಲಕ್ಷ್ಮೀ ಮಾತೆಯನ್ನು ಪ್ರತಿಷ್ಠಾಪಿಸಿ ಮತ್ತು ಗಣೇಶ ದೇವರನ್ನು ಸ್ಥಾಪಿಸಿ
3. ಹೊಸ ಬಟ್ಟೆ ಮತ್ತು ಆಭರಣಗಳಿಂದ ಮೂರ್ತಿಯನ್ನು ಅಲಂಕರಿಸಲು ಮರೆಯದಿರಿ
4.ಬೇರೆ ಬೇರೆ ರೀತಿಯ ಹೂವು ಮತ್ತು ಸಿಹಿಯನ್ನು ದೇವರಿಗೆ ಅರ್ಪಿಸಿ
5.ಕಲಶದಲ್ಲಿ ನೀರನ್ನು ತುಂಬಿಸಿ ಮತ್ತು ಅದರ ಮೇಲೆ ತೆಂಗಿನಕಾಯಿ ಇರಿಸಿ ವೀಡಿಯೊದಲ್ಲಿ ತೋರಿಸಿರುವಂತೆ ಕಲಶವನ್ನು ಇರಿಸಿ
6. ದೇವರ ಮುಂದೆ ದೀಪವನ್ನು ಹಚ್ಚಿ ಮತ್ತು ವರಮಹಾಲಕ್ಷ್ಮೀ ವ್ರತದ ಕಥೆಯನ್ನು ಓದಿ
7. ಪೂಜೆ ಮುಗಿದ ನಂತರ ಪ್ರಸಾದ ವಿತರಣೆಯನ್ನು ಮಹಿಳೆಯರಿಗೆ ಮಾಡಿ. ಸಂಜೆಯ ಪ್ರಾರ್ಥನೆಯ ನಂತರ ವ್ರತವನ್ನು ಕೈಗೊಂಡವರು ಹಣ್ಣು ಹಂಪಲುಗಳನ್ನು ಮಾತ್ರ ತಿನ್ನಬೇಕು.
8. ವರಮಹಾಲಕ್ಷ್ಮಿ ಕಲಶ ಮಡಿಕೆ ಒಣಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಮಡಿಕೆ ಕೆಳಭಾಗದಲ್ಲಿ ಜಿಪ್ಸಮ್ ಅನ್ವಯಿಸಿ. ಬಳಿಕ ಮಡಿಕೆ/ಬಿಂದಿಗೆಯನ್ನು ಅರಿಶಿನ ಮತ್ತು ಕುಂಕುಮದ ಬಟ್ಟು/ಹುಂಡುಗಳಿಂದ ಅಲಂಕರಿಸಿ. ಮಡಿಕೆ ಒಳಗೆ ಅಕ್ಕಿ, ಒಣ ಹಣ್ಣು ಹಾಗೂ ನಾಣ್ಯವನ್ನು ಇಟ್ಟು ತುಂಬಿರಿ.
9. ಮೃದುವಾದ ಮಾವಿನೆಲೆಯಿಂದ ಮಡಿಕೆಯ ಕುತ್ತಿಗೆಯ ಭಾಗವನ್ನು ಅಲಂಕರಿಸಿ. ಮಾವಿನ ಎಲೆಯ ತುದಿಯು ಮೇಲ್ಮುಖವಾಗಿಯೇ ಇರಬೇಕು. ತೆಂಗಿನ ಕಾಯಿಗೆ ಅರಿಶಿನ, ಕುಂಕುಮ ಮತ್ತು ಚಂದನವನ್ನು ಲೇಪಿಸಿ ಅಲಂಕರಿಸಿ. ಬಳಿಕ ಬಿಂದಿಗೆಯ ಕಂಟದಲ್ಲಿ, ಮಾವಿನೆಲೆಗಳ ಮಧ್ಯೆ ಇರಿಸಿ. ತೆಂಗಿನ ಕಾಯಿಯ ಕಣ್ಣುಗಳು ಮೇಲ್ಭಾಗದಲ್ಲಿ ಇರಬೇಕು. ಹೊಸ ಕುಪ್ಪುಸದ ಬಟ್ಟೆಯನ್ನು ಕಲಶಕ್ಕೆ ಇಡಬೇಕು.ಬಳಿಕ ಹೂವಿನ ಹಾರವನ್ನು ಹಾಕಿ ಅಲಂಕರಿಸಿ.