Author: admin
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮತ್ತು ಬಂಟರ ಸಂಘ (ರಿ) ಸುರತ್ಕಲ್ ಇದರ ಸಹಯೋಗದೊಂದಿಗೆ ಮಂಜೂರಾದ ಸುರತ್ಕಲ್ ಸಮೀಪದ ಕೃಷ್ಣಾಪುರ ಕಾಟಿಪಳ್ಳ ನಿವಾಸಿ ಶ್ರೀಮತಿ ರಜನಿ ರೈ ಇವರ ಮನೆಯ ಭೂಮಿ ಪೂಜೆಯು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನೆರವೇರಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಬಡತನದಲ್ಲಿರುವ ಕುಟುಂಬಗಳ ಕಷ್ಟ ಪರಿಹರಿಸುವ ಕೆಲಸ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ತಿಳಿಸಿದರು. ತೀರಾ ಬಡತನದಲ್ಲಿರುವ ಕುಟುಂಬದ ಸದಸ್ಯರು ಪರಿಹಾರ ಬಯಸಿ ಸಲ್ಲಿಸುವ ಅರ್ಜಿಗಳನ್ನು ಯಾವತ್ತೂ ತಿರಸ್ಕರಿಸಿಲ್ಲ. ಪ್ರತಿ ತಿಂಗಳು ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಯೋಜನೆಯಲ್ಲಿ ಸಮುದಾಯದ ನೂರಾರು ಕುಟುಂಬಗಳಿಗೆ ನೆರವಿನ ಹಸ್ತ ನೀಡಲಾಗುತ್ತಿದೆ. ಬಂಟ ಸಮಾಜದ ಜೊತೆಗೆ ಇತರ ಸಮಾಜದಿಂದ ಬಂದ ಅರ್ಜಿಗಳನ್ನೂ ಪರಿಶೀಲಿಸಿ ಸಹಾಯ ನೀಡಲಾಗಿದೆ. ಕೃಷ್ಣಾಪುರ-ಕಾಟಿಪಳ್ಳ ನಿವಾಸಿ ರಜನಿ ರೈಯವರ ಕಷ್ಟಕ್ಕೆ ಈಗ ಒಕ್ಕೂಟವು ಸುರತ್ಕಲ್ ಬಂಟರ…
ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಕುಂತಳನಗರದಲ್ಲಿರುವ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಎಂಆರ್ ಜಿ ಗ್ರೂಪ್ ನ ಪ್ರಾಯೋಜಕತ್ವದಲ್ಲಿ ಬೃಹತ್ ಉದ್ಯೋಗ ಮೇಳವು ನ. 18 ಮತ್ತು ನ. 19 ರಂದು ನಡೆಯಲಿದೆ. ಉದ್ಯೋಗ ಮೇಳದಲ್ಲಿ 25 ಕಂಪನಿಗಳು ಸುಮಾರು 1500 ಕ್ಕಿಂತಲೂ ಹೆಚ್ಚು ಹುದ್ದೆಗಳಿಗೆ ಸಂದರ್ಶನಕ್ಕೆಅವಕಾಶ ಕೊಡಲಿದೆ. ಇಂಜಿನಿಯರ್, ಡಿಪ್ಲೊಮೋ, ಐ. ಟಿ. ಐ. ಮ್ಯಾನೇಜ್ಮೆಂಟ್ ಸ್ಟಡೀಸ್ ಮಾಡಿದವರಿಗೆ, ಎಚ್ ಆರ್, ಅಕೌಂಟ್ಸ್, ಫೈನಾನ್ಸ್, ಐಟಿ, ಸೇಲ್ಸ್, ಮಾರ್ಕೆಟಿಂಗ್, ಹಾಸ್ಪಿಟಾಲಿಟಿ ಇಂಡಸ್ಟ್ರಿ ಮತ್ತು ಇತರ ಹುದ್ದೆ ಸಿಗುವ ಅವಕಾಶಗಳಿವೆ. ಕಳೆದ ಸಾಲಿನಲ್ಲಿ ನಡೆಸಿದ ಉದ್ಯೋಗ ಮೇಳದಲ್ಲಿ 450 ಕ್ಕಿಂತಲೂ ಅಧಿಕ ಯುವಕರು, ಮಹಿಳೆಯರಿಗೆ ಬೃಹತ್ ಕಂಪನಿಗಳಲ್ಲಿ ಉದ್ಯೋಗ ಲಭಿಸಿರುವುದು ಗಮನಾರ್ಹವಾಗಿದೆ. ಪಡುಬಿದ್ರಿ ಆಸ್ಪೆನ್ ಸೆಜ್ ನಲ್ಲಿರುವ ಪ್ರಜ್ ಜನಕ್ಸ್ ಲಿ, ಸುಜ್ಲಾನ್ ಎನರ್ಜಿ ಲಿ, ಉಡುಪಿ ಕೋಚಿನ್ ಶಿಪ್ ಯಾರ್ಡ್ ಲಿ, ಅಮೆಜಾನ್ ಲಿ, ಮಣಿಪಾಲ ಲಿ, ರಿಲಯನ್ಸ್ ಜಿಓ, ಕಾಂಚನ ಗ್ರೂಪ್ ಆಫ್ ಕಂಪೆನಿ,…
ಯುವ ಬಂಟರ ಸಂಘ (ರಿ.) ಕಂಬಳಕಟ್ಟ – ಕೊಡವೂರು ಆಯೋಜಿಸಿದ್ದ ಆಟಿ…ಒಂಜಿ ನೆಂಪು – ವನಸ್ ತಿನಸ್ ಪಿರಾಕುದ ಗೊಬ್ಬುಲು ಕಾರ್ಯಕ್ರಮವು ದಿನಾಂಕ 13.08.2023 ರವಿವಾರ ಕಂಬಳಕಟ್ಟ ಕಂಬಳಮನೆ ಹಾಗೂ ತೆಂಕುಮನೆ ವಠಾರದಲ್ಲಿ ನಡೆಯಿತು. ಉಡುಪಿಯ ಮಾನ್ಯ ಶಾಸಕರಾದ ಶ್ರೀ ಯಶಪಾಲ್ ಎ. ಸುವರ್ಣ ಇವರು ಲಗೋರಿ ಆಟ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಶ್ರೀಮತಿ ವಂದನಾ ರೈ ಕಾರ್ಕಳ ಇವರು ಚೆನ್ನಮಣೆ ಆಟವನ್ನು ಸಾಂಕೇತಿಕವಾಗಿ ಆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತೆಂಕುಮನೆ ದಿವಂಗತ ಗೋಪಾಲ ಶೆಟ್ಟಿ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳೊಬ್ಬರಾದ ವಂದನಾ ರೈ ಮಾತಾನಾಡಿ ಇಂದಿನ ಮಕ್ಕಳು ಈಗಿನ ಈ ಆಚರಣೆಗಳನ್ನು ಇತರೆ ಹಬ್ಬಗಳಂತೆ ಇದೂ ಒಂದು ಎಂದು ತಿಳಿದಿದ್ದು, ನಮ್ಮ ಹಿರಿಯರು ಆ ಕಾಲದಲ್ಲಿ ಅನುಭವಿಸಿದ ಕಷ್ಟಗಳು, ನಡೆದು ಬಂದ ಹಾದಿ, ಆಟಿ ತಿಂಗಳ ಮಹತ್ವದ ಬಗ್ಗೆ ನಮ್ಮ ಈಗಿನ ಮಕ್ಕಳಿಗೆ ನಾವು ಅರಿವು ಮೂಡಿಸಿದಲ್ಲಿ ಖಂಡಿತವಾಗಿಯೂ ಯಾವುದೇ ಮಕ್ಕಳು…
ಬಿಗ್ ಬಾಸ್ ರೂಪೇಶ್ ಶೆಟ್ಟಿ ನಟನೆ, ನಿರ್ದೇಶನದ “ಸರ್ಕಸ್” ತುಳು ಚಿತ್ರ ಗೋವಾದ ಪಣಜಿಯಲ್ಲಿರುವ ಐನೋಕ್ಸ್ ಚಿತ್ರಮಂದಿರದಲ್ಲಿ ಸಂಜೆ 3.30 ಕ್ಕೆ ಗೋವಾದ ಪ್ರಸಿದ್ಧ ಉದ್ಯಮಿ, ಸಮಾಜಸೇವಕ, ಗೋವಾ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಮುರಳಿ ಮೋಹನ್ ಶೆಟ್ಟಿಯವರ ಸಾರಥ್ಯದಲ್ಲಿ ಬಿಡುಗಡೆಗೊಳ್ಳಲಿದೆ. “ಸರ್ಕಸ್” ತುಳು ಚಿತ್ರ ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಅವರು, “ತುಳು ಸಿನಿಮಾಕ್ಕೆ ಸಣ್ಣ ಮಾರುಕಟ್ಟೆ ಇದ್ದರೂ ಇಷ್ಟು ದೊಡ್ಡ ರೀತಿಯಲ್ಲಿ ಸಿನಿಮಾ ಯಶಸ್ವಿಗೊಳಿಸಿರುವುದು ಖುಷಿಯ ವಿಚಾರ. ತುಳು ಚಿತ್ರರಂಗಕ್ಕೆ ಕೆ.ಎನ್. ಟೇಲರ್ ಅವರಂತಹ ಹಿರಿಯರಿಂದ ಇಂದಿನ ಯುವ ಕಲಾವಿದರ ತನಕ ನೂರಾರು ಮಂದಿ ದುಡಿದಿದ್ದಾರೆ. ಸರ್ಕಸ್ ಚಿತ್ರಕ್ಕೆ ಶೂಲಿನ್ ಫಿಲಂಸ್, ಮುಗ್ರೋಡಿ ಫಿಲಂಸ್, ಮಂಜುನಾಥ ಅತ್ತಾವರ ಬಂಡವಾಳ ಹೂಡಿದ್ದಾರೆ. ರೂಪೇಶ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಸಾಯಿಕೃಷ್ಣ ಕುಡ್ಲ, ರಚನಾ ರೈ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಚಂದ್ರಹಾಸ ಉಳ್ಳಾಲ, ಪಂಚಮಿ ಭೋಜರಾಜ್, ರೂಪ ವರ್ಕಾಡಿ,…
ಬಂಟರ ಸಂಘ ( ರಿ) ಸುರತ್ಕಲ್ 2023-25 ರ ಸಾಲಿನ ಅಧ್ಯಕ್ಷರಾಗಿ ಲೋಕಯ್ಯ ಶೆಟ್ಟಿ ಮುಂಚೂರು, ಪ್ರಧಾನ ಕಾರ್ಯದರ್ಶಿಯಾಗಿ ಲೀಲಾಧರ ಶೆಟ್ಟಿ ಕಟ್ಲ
ಬಂಟರ ಸಂಘ (ರಿ) ಸುರತ್ಕಲ್ ಇದರ 2023-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಮುಂಚೂರು ಲೋಕಯ್ಯ ಶೆಟ್ಟಿ ಅವಿರೋಧವಾಗಿ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಪುಷ್ಪರಾಜ ಶೆಟ್ಟಿ ಕುಡುಂಬೂರು, ಪ್ರಧಾನ ಕಾರ್ಯದರ್ಶಿಯಾಗಿ ಲೀಲಾಧರ ಶೆಟ್ಟಿ ಕಟ್ಲ, ಕೋಶಾಧಿಕಾರಿಯಾಗಿ ಅವಿನಾಶ್ ಶೆಟ್ಟಿ, ಜೊತೆ ಕಾರ್ಯದಶಿಯಾಗಿ ಸುಧೀರ್ ಶೆಟ್ಟಿ ಸೂರಿಂಜೆ, ಸಂಘಟನಾ ಕಾರ್ಯದರ್ಶಿಯಾಗಿ ಪುಷ್ಪರಾಜ ಶೆಟ್ಟಿ ಮದ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜಯರಾಮ ಶೆಟ್ಟಿ ತಡಂಬೈಲ್, ಕ್ರೀಡಾ ಕಾರ್ಯದರ್ಶಿಯಾಗಿ ಶಿಶಿರ್ ಶೆಟ್ಟಿ ಪೆರ್ಮುದೆ ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಾಳ ಜಗನ್ನಾಥ ಶೆಟ್ಟಿ, ಸುಧಾಕರ ಶೆಟ್ಟಿ ಚೇಳಾರ್, ಶ್ರೀಕಾಂತ್ ಶೆಟ್ಟಿ ಬಾಳ, ಶ್ರೀಕೃಷ್ಣ ಶೆಟ್ಟಿ ಬಾಳ, ಹರೀಶ್ ಶೆಟ್ಟಿ ಇಡ್ಯಾ, ಸುಜಾತ ಶೆಟ್ಟಿ ಹೊಸಬೆಟ್ಟು, ವೇದಾವತಿ ಶೆಟ್ಟಿ ಇಡ್ಯಾ, ಮೀರಾವಾಣಿ ಶೆಟ್ಟಿ ಕಾಟಿಪಳ್ಳ ಆಯ್ಕೆಯಾದರು. ಬಂಟರ ಭವನದಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಬಂಟರ ಯಾನೆ ನಾಡವರ ಮಾತೃಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ ಕರ್ತವ್ಯ ನಿರ್ವಹಿಸಿದರು. ಯಶ್ ರಾಜ್ ಶೆಟ್ಟಿ, ಶ್ರೀಜಿತ್ ಶೆಟ್ಟಿ, ಸುಶಾನ್…
ನಮ್ಮ ಪ್ರಯತ್ನಕ್ಕೆ ದೇವರ ಅನುಗ್ರಹ ಸೇರಿದಾಗ ಮಾತ್ರವೇ ಕಾರ್ಯ ಸಫಲವಾಗುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು. ಅವರು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದಾನಿಗಳಾದ ಹೆಗ್ಗುಂಜೆ ಬಡಾಮನೆ ವಿಶ್ವನಾಥ ಹೆಗ್ಡೆ, ಹೆಗ್ಗುಂಜೆ ಚಾವಡಿಮನೆ ರುದ್ರಮ್ಮ ಹೆಗ್ಗಡ್ತಿ, ಅಮರನಾಥ ಶೆಟ್ಟಿ ಮತ್ತು ಕುಟುಂಬಸ್ಥರು ಸೇವಾರೂಪದಲ್ಲಿ ನೀಡಿದ ನೂತನ ರಜತ ರಥ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು. ನಾವು ನೀಡಿದ್ದು, ಮಾಡಿದ್ದು ಎನ್ನುವುದಕ್ಕಿಂತ ದೇವರೇ ಮಾಡಿಸಿದ್ದು ಎನ್ನುವುದು ಅರ್ಥಪೂರ್ಣ. ದುಡಿಮೆಯ ಸ್ವಲ್ಪ ಅಂಶವನ್ನು ಧಾರ್ಮಿಕ ಚಟುವಟಿಕೆ, ಸೇವಾ ಕಾರ್ಯಕ್ಕೆ ವಿನಿಯೋಗಿಸಿದಾಗ ಜೀವನ ಸಾರ್ಥಕವಾಗುತ್ತದೆ ಎಂದರು. ಅತಿಥಿಗಳಾಗಿ ಬೆಂಗಳೂರು ವಿ.ವಿ.ಯ ವಿತ್ತಾಧಿಕಾರಿ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ದೇವಸ್ಥಾನದ ಆನುವಂಶಿಕ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಎಸ್.ಸಿ. ಕೊಟಾರಗಸ್ತಿ, ಹೆಗ್ಗುಂಜೆ ಚಾವಡಿಮನೆ ವಿಜಯನಾಥ ಹೆಗ್ಡೆ, ಅಮರನಾಥ ಶೆಟ್ಟಿ, ಆನುವಂಶಿಕ ಮೊಕ್ತೇಸರರಾದ ಎಚ್. ಸುರೇಂದ್ರ ಶೆಟ್ಟಿ, ಎಚ್. ಪ್ರಭಾಕರ ಶೆಟ್ಟಿ, ಎಚ್. ಶಂಭು ಶೆಟ್ಟಿ, ಆರ್. ಶ್ರೀನಿವಾಸ ಶೆಟ್ಟಿ, ಹೆಗ್ಗುಂಜೆ ನಾಲ್ಕು ಮನೆಯವರು,…
ತುಳುಕೂಟ ಕೊಲ್ಲಾಪುರ ಇದರ ದಶಮ ಸಂಭ್ರಮವು ಬಹಳ ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರನ್ನು ಗಣ್ಯರ ಉಪಸ್ಥಿತಿಯಲ್ಲಿ ವೈಭವದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದೇವಾನಂದ ಶೆಟ್ಟಿ ಎಂ ಡಿ. ಡಿಕ್ಸ್ ಶಿಪ್ಪಿಂಗ್ ಕಂಪನಿ ಮಂಗಳೂರು ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ರಾಕೇಶ್ ಶೆಟ್ಟಿ ಬೆಳ್ಳಾರೆ ಅಧ್ಯಕ್ಷರು ಬಂಟ್ಸ್ ಸಂಘ ಪಿಂಪ್ರಿ ಚಿಂಚ್ವಾಡ್, ಶ್ರೀ ಮೊಹನ್ ಶೆಟ್ಟಿ ಎಣ್ಣೆಹೊಳೆ ಅಧ್ಯಕ್ಷರು ತುಳುಕೂಟ ಪೂನಾ, ಶ್ರೀಮತಿ ನೂತನ ಸುವರ್ಣ ಸಮಾಜ ಸೇವಕಿ ಪಿಂಪ್ರಿ ಚಿಂಚ್ವಾಡ್, ಶ್ರೀ ಸುಗ್ಗಿ ಸುಧಾಕರ್ ಶೆಟ್ಟಿ ಅಧ್ಯಕ್ಷರು ಹುಬ್ಬಳ್ಳಿ ಧಾರವಾಡ ಬಂಟ್ಸ್ ಸಂಘ ಹಾಗೂ ತುಳುಕೂಟ ಕೋಲ್ಹಾಪುರದ ಅಧ್ಯಕ್ಷರಾದ ಶ್ರೀ ತ್ಯಾಗರಾಜ್ ವಿ.ಶೆಟ್ಟಿ ಕೊಲ್ಲಾಪುರ್, ಪದಾಧಿಕಾರಿಗಲಾದ ಶ್ರೀ ಚಂದ್ರಕಾಂತ್ ಜಿ. ಶೆಟ್ಟಿ, ಶ್ರೀ ಬಾಲಕೃಷ್ಣ ಶೆಟ್ಟಿ, ಶ್ರೀ ಪ್ರಭಾಕರ್ ವಿ. ಶೆಟ್ಟಿ, ಶ್ರೀ ವಿಜಯ್ ಎಂ. ಶೆಟ್ಟಿ, ಶ್ರೀ ದಯಾನಂದ ಎಸ್. ಶೆಟ್ಟಿ,…
ಬಂಟರ ಸಂಘ ಪಿಂಪ್ರಿ – ಚಿಂಚ್ವಾಡ್ ಇದರ ಮಹಿಳಾ ವಿಭಾಗದ ವತಿಯಿಂದ ಅರಶಿನ ಕುಂಕುಮ ಕಾರ್ಯಕ್ರಮವು ಚಿಂಚ್ವಾಡದ ರಂಗೋಲಿ ಸಭಾಗೃಹದಲ್ಲಿ ಜ.20 ರಂದು ನಡೆಯಿತು. ಸೌಮ್ಯಾ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ವಿ ಶೆಟ್ಟಿ ಹಾಗೂ ಮಾಜಿ ಕಾರ್ಯಾಧ್ಯಕ್ಷೆಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜ್ಯೋತಿ ಶೆಟ್ಟಿಯವರು ಕಾರ್ಯಕ್ರಮಕ್ಕೆ ಆಗಮಿಸಿದ ಸದಸ್ಯರನ್ನು ಸ್ವಾಗತಿಸಿದರು. ಸೌಮ್ಯಾ ಶೆಟ್ಟಿಯವರು ಅರಶಿನ ಕುಂಕುಮದ ಮಹತ್ವದ ಬಗ್ಗೆ ಮಾತನಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಸ್ಥಳೀಯ ನಗರಸೇವಕಿ ಸುಜಾತಾ ಪಾಲಂದೆಯವರನ್ನು ಮಹಿಳಾ ವಿಭಾಗದಿಂದ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಬಂಟರ ಸಂಘ ಪುಣೆ ಹಾಗೂ ಬಂಟ್ಸ್ ಅಸೋಸಿಯೇಶನ್ ಪುಣೆ ಇದರ ಮಹಿಳಾ ವಿಭಾಗದ ಸದಸ್ಯೆಯರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದರು. ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಧ್ಯಕ್ಷೆಯರಾದ ಪ್ರೇಮಾ ಶೆಟ್ಟಿ, ಜಯಲಕ್ಷ್ಮಿ ಶೆಟ್ಟಿ, ಸುಪ್ರಿಯಾ ಶೆಟ್ಟಿ, ತನುಜಾ ಶೆಟ್ಟಿ, ಸಮಿತಿಯ ಕಾರ್ಯದರ್ಶಿ ತಾರಾ ಶೆಟ್ಟಿ, ಕೋಶಾಧಿಕಾರಿ ಸ್ಮಿತಾ ಹೆಗ್ಡೆ, ಉಪಾಧ್ಯಕ್ಷೆಯರಾದ ಸುನಿತಾ ಶೆಟ್ಟಿ,…
ಮುಂಬಯಿ (ಆರ್ಬಿಐ), ಜ.25: ಐಲೇಸಾ-ದಿ ವಾಯ್ಸ್ ಆಫ್ ಓಷನ್ (ರಿ). ಡಿಜಿಟಲ್ ಸಂಸ್ಥೆಯು ಇದೇ ಶನಿವಾರ (ಜ.28) ಝೂಮ್ ಡಿಜಿಟಲ್ ವೇದಿಕೆಯಲ್ಲಿ `ಬಾನ ಚಂದ್ರೆ ತೆಲಿಪುನಾನಿ’ ತುಳು ಹಾಡು ಬಿಡುಗಡೆ ಮಾಡಲಿದೆ. ಕಳೆದ ವರ್ಷ ಹನ್ನೊಂದು ತುಳು ಹಾಡುಗಳನ್ನು ಬಿಡುಗಡೆ ಗೊಳಿಸಿದ ಐಲೇಸಾ ಸಂಸ್ಥೆ ಈ ವರ್ಷದ ಮೊದಲ ಕಾಣಿಕೆಯಾಗಿ ಯುವ ಸಾಹಿತಿ ನರೇಂದ್ರ ಕಬ್ಬಿನಾಲೆ ಅವರ ಬಾನ ಚಂದ್ರೆ ತೆಲಿಪುನಾನಿ ಎನ್ನುವ ತಾಯಿ ಮಕ್ಕಳ ಬಾಂಧವ್ಯದ ಮಧುರ ಗೀತೆಯನ್ನು ಹೆಣ್ಣು ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ತನ್ನ ಸಾಂಸಾರಿಕ ಜೀವನದ ಒತ್ತೆಯಿಡುತ್ತಾ ಗಂಡ ಮಕ್ಕಳ ನಗುವಲ್ಲಿ ಬೆಳದಿಂಗಳಂತೆ ಲೀನಳಾಗುವ ಚಿತ್ರಣದ ಹಾಡನ್ನು ಬಿಡುಗಡೆ ಗೊಳಿಸಲಿದೆ. ಪ್ರೇಮಲತಾ ದಿವಾಕರ್ ಈ ಹಾಡನ್ನು ಮಧುರವಾಗಿ ಸಂಯೋಜಿಸಿದ್ದು ಪ್ರಖ್ಯಾತ ಗಾಯಕಿ ಮಾಲಿನಿ ಕೇಶವ ಪ್ರಸಾದ್ ಅವರ ಧ್ವನಿಯಲ್ಲಿ ಮುದ್ರಿಸಲಾಗಿದೆ. ಪ್ರಮೋದ್ ಸಹಕಾರದಲ್ಲಿ ನಿಶಾಂತ್ ಕ್ಯಾಲಿಕಟ್ ಅವರ ವಾದ್ಯ ಸಂಗೀತವಿದ್ದು ಹಾಡನ್ನು ಮಹಿಷಮರ್ದಿನಿ ದೇವಸ್ಥಾನ ಅಜ್ಜಾವರ ಸುಳ್ಯ ಇದರ ಧರ್ಮದರ್ಶಿ ಶ್ರೀ ಶಿವರಾಯ ಇವರು ಬಿಡುಗಡೆ ಗೊಳಿಸಲಿದ್ದಾರೆ.…
ಮುಂಬಯಿಯ ಖ್ಯಾತ ಇಂಡಸ್ಟ್ರೀಯಲಿಸ್ಟ್ ಅಲ್ಲದೇ ಮುಂಬೈ ನ ಬಂಟರ ಸಂಘದಲ್ಲಿ ವಿವಿಧ ಹುದ್ದೆಗಳನ್ನು ಕಾರ್ಯ ನಿರ್ವಹಿಸಿ ಯಶಸ್ವಿಯಾದ ಸಮಾಜಸೇವಕ ಶ್ರೀ ಮಹೇಶ್ ಎಸ್.ಶೆಟ್ಟಿ ( ಬಾಬಾ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕರು ) ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿ ಮತ್ತು ಒಕ್ಕೂಟದಲ್ಲಿ ನಡೆಯುವ ಜನಪರ ಕಾಳಜಿಯ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡುವ ಸಲುವಾಗಿ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದಾರೆ. ಇವರು ಈ ಹಿಂದೆ ಒಕ್ಕೂಟದ ಪೋಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.














