ದೇಹದಲ್ಲಿನ ಬೌದ್ಧಿಕ ಉಷ್ಣಾಂಶವನ್ನು ತೀವ್ರ ಸ್ವರೂಪದಲ್ಲಿ ಕಡಿಮೆಗೊಳಿಸುವ ಎಳ್ಳೆಣ್ಣೆ …..! ಆಯುರ್ವೇದದ ಮುಖ್ಯವಾಹಿನಿಯಲ್ಲಿ ಸಂಗ್ರಹಿಸಲ್ಪಟ್ಟ ಪರಿಪೂರ್ಣವಾದ ನಾರಿನಂಶದ ಪದಾರ್ಥ….!
ಪ್ರತಿ ನಿತ್ಯ ಜೀವನದಲ್ಲಿ ಉಪಯೋಗಿಸಿ ಆರೋಗ್ಯಕರ ಎಳ್ಳು…..! ದೇಹದಲ್ಲಿನ ನರಮಂಡಲಗಳನ್ನು ಆರೋಗ್ಯ ಯುಕ್ತವಾಗಿ ಗ್ರಹಿಸುವ ಶಕ್ತಿ ಹೊಂದಿರುವ ಎಳ್ಳಣ್ಣೆ….!
✍ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ.
(ಪತ್ರಕರ್ತರು &ಅಂಕಣಕಾರರು)ಮೊ:9632581508
ಎಳ್ಳು ಎಣ್ಣೆಯನ್ನು ಅದನ್ನು ಉಪಯೋಗಿಸುವ ರೀತಿ ನೀತಿಗಳನ್ನು ತಿಳಿದುಕೊಂಡರೆ ಜೀವನದಲ್ಲಿ ಕಾಯಿಲೆ ನಿಮ್ಮ ಹತ್ತಿರ ಸುಳಿಯುವುದಿಲ್ಲ .ಆರೋಗ್ಯಕರ ಮತ್ತು ಆರೋಗ್ಯಕ್ಕೆ ಪರಿಪೂರ್ಣವಾಗಿರುವ ತೇವಾಂಶ ಮತ್ತು ದೇಹದಲ್ಲಿನ ಉಷ್ಣಾಂಶ ಕಡಿಮೆ ಮಾಡಲು ಎಳ್ಳು ಎಣ್ಣೆಯನ್ನು ಹೆಚ್ಚಾಗಿ ಉಪಯೋಗ ಮಾಡುತ್ತಾರೆ. ಈ ಎಳ್ಳು ಎಣ್ಣೆ ಆಯುರ್ವೇದದ ಪ್ರಕಾರ
ಆಯುರ್ವೇದದ ಪ್ರಕಾರ ಎಳ್ಳಿನ ಎಣ್ಣೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ದೇಹದಲ್ಲಿನ ಸುಸ್ತು ,ಆಯಾಸ ಮತ್ತು ಉಷ್ಣಾಂಶದ ತೀವ್ರತೆಯನ್ನು ಕಡಿಮೆಗೊಳಿಸುವಲ್ಲಿ ಮತ್ತು ಜಡತ್ವ ಮತ್ತು ನಿದ್ರಾಹೀನತೆ ಸಹಕಾರಿಯಾಗಿ ಎಳ್ಳು ಎಣ್ಣೆ ಕಾರ್ಯನಿರ್ವಹಿಸುತ್ತದೆ .ಇದು ನಿಮ್ಮ ದೇಹದ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಎಳ್ಳನ್ನು ನೂರಾರು ವರ್ಷಗಳಿಂದ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತಿದೆ. ಎಳ್ಳು ಬೀಜಗಳನ್ನು ಪುಡಿ ಮಾಡಿ ಪೇಸ್ಟ್ ರೂಪದಲ್ಲಿ ಅಥವಾ ಎಣ್ಣೆಯ ರೂಪದಲ್ಲಿ ಸೇವಿಸಬಹುದು. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜತೆಗೆ ಚರ್ಮದ ಆರೋಗ್ಯ ರಕ್ಷಣೆಯನ್ನು ಮಾಡುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ:-
ಎಳ್ಳಿನಲ್ಲಿರುವ ಹೆಚ್ಚಿನ ಫೈಬರ್ ಅಂಶ ಆಹಾರ ಬೇಗನೇ ಜೀರ್ಣವಾಗುವಂತೆ ಮಾಡುತ್ತದೆ. ಇದರಿಂದ ದೇಹದ ಕ್ರಿಯೆಗಳು ಸರಾಗವಾಗಿ ನಡೆಯಲು ಸಹಕರಿಸುತ್ತದೆ. ಎಳ್ಳು ಸೇವನೆಯಿಂದ ಸುಸ್ತು ಕಡಿಮೆಯಾಗುವುದಲ್ಲದೆ, ದೇಹದ ಶಕ್ತಿ ಹೆಚ್ಚುತ್ತದೆ.
ದೇಹದಲ್ಲಿನ ಅಧಿಕ ಬೊಜ್ಜು ಹಾಗೂ ಕೊಬ್ಬಿನಾಂಶವನ್ನು ಕಡಿಮೆಗೊಳಿಸಲು ಎಳ್ಳು ಸಹಕಾರಿ. ಚರ್ಮ, ಮೂಳೆ, ನರಮಂಡಲ, ಮಾಂಸಖಂಡಗಳನ್ನು ಪೋಷಿಸುತ್ತದೆ. ಎಳ್ಳಿನಲ್ಲಿ ಸಾಕಷ್ಟು ಪ್ರಮಾಣದ ನಾರಿನಾಂಶವಿದ್ದು ಮಲಬದ್ಧತೆ, ಮೂಲವ್ಯಾಧಿಯಂತಹ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ
ಎಳ್ಳಿನ ಎಣ್ಣೆ ತಯಾರಿಸಿ ಅಡುಗೆಯಲ್ಲಿ ಬಳಸುವ ಮೂಲಕ ಇದನ್ನು ಸೇವಿಸಬಹುದು. ಇಲ್ಲದಿದ್ದರೆ ಎಳ್ಳಿನ ಎಣ್ಣೆ ಮಸಾಜ್ ಕೂಡಾ ಮಾಡಬಹುದು. ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳನ್ನು ಇದು ಹೊಂದಿರುತ್ತದೆ. ಉತ್ಕರ್ಷಣ ನಿರೋಧಕಗಳು ಹೊಂದಿರುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಾಗಿರುವಾಗ ಅಡುಗೆಯಲ್ಲಿ ಎಳ್ಳನ್ನು ಬಳಸುವ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆಯಿರಿ.
ಎಳ್ಳಿನ ಎಣ್ಣೆಯ ಪ್ರಯೋಜನಗಳು:-
ಚರ್ಮದ ಆರೋಗ್ಯಕ್ಕೆ ಸಹಾಯಕ
ಎಳ್ಳಿನ ಎಣ್ಣೆಯಿಂದ ಮಸಾಜ್ ಮಾಡುವುದು ಆಯುರ್ವೇದ ಪದ್ಧತಿಯಾಗಿದೆ. ಇದು ಚರ್ಮದ ಪದರುಗಳಿಗೆ ಸುಲಭವಾಗಿ ತಲುಪುತ್ತದೆ. ಜತೆಗೆ ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಎಳ್ಳಿನ ಎಣ್ಣೆಯಲ್ಲಿ ವಿಟಮಿನ್ ಇ ಕೂಡಾ ಇದ್ದು ನಿಮ್ಮ ಚರ್ಮವನ್ನು ಮಾಲಿನ್ಯದಿಂದ ರಕ್ಷಿಸುತ್ತದೆ.
ನಿಮ್ಮನ್ನು ಬೆಚ್ಚಗಿರಿಸುತ್ತದೆ:-
ಎಳ್ಳಿನ ಎಣ್ಣೆ ನಿಮ್ಮ ದೇಹವನ್ನು ಬೆಚ್ಚಗಿರಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಇದು ನಿಜವಾಗಿಯೂ ಪರಿಣಾಮಕಾರಿ. ಹೀಗಿರುವಾಗ ಬೇಸಿಗೆ ಕಾಲಕ್ಕಿಂತ ಮಳೆಗಾಲ ಮತ್ತು ಚಳಿಗಾಲದ ಸಮಯದಲ್ಲಿ ಎಳ್ಳಿನ ಎಣ್ಣೆಯ ಪ್ರಯೋಜನಗಳನ್ನು ಹೆಚ್ಚು ಪಡೆಯಬಹುದು.
ಜೀರ್ಣಕ್ರಿಯೆಗೆ ಸಹಾಯ ಮಾಡಲು ಸಹಕಾರಿ:-
ಎಳ್ಳಿನ ಎಣ್ಣೆ ಜೀರ್ಣಕ್ರಿಯೆಗೆ ಸಹಾಯಕ. ಇದರಲ್ಲಿರುವ ಫೈಬರ್ ಅಂಶ ಆಹಾರದ ಉತ್ತಮ ಜೀರ್ಣಕ್ರಿಯೆಗೆ ಸಹಾಯಕ. ಮಲಬದ್ಧತೆ ಸಮಸ್ಯೆಗೆ ಒಳ್ಳೆಯ ಪರಿಹಾರವನ್ನು ನೀಡುತ್ತದೆ. ಉರಿಯೂತ, ಹಲ್ಲು ನೋವಿಗೂ ಸಹ ಎಳ್ಳಿನ ಎಣ್ಣೆಯ ಬಳಕೆ ಒಳ್ಳೆಯದು.
ನಿದ್ರೆಯ ಗುಣಮಟ್ಟವನ್ನು ಸುಧಾರಿಸುಲು ಸಹಾಯ:
ಎಳ್ಳಿನ ಎಣ್ಣೆಯ ಬಳಕೆಯ ಮೂಲಕ ಕೀಲುಗಳಲ್ಲಿ ಮಸಾಜ್ ಮಾಡುವುದರಿಂದ ನೋವು, ಸಂಧಿವಾತ, ಉರಿಯೂತದಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮಲಗುವ ಮುನ್ನ ಹಣೆಯ ಮೇಲೆ ಎಳ್ಳು ಎಣ್ಣೆಯನ್ನು ಹಚ್ಚಿ ನಿದ್ರಿಸುವ ಮೂಲಕ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಎಳ್ಳಿನ ಎಣ್ಣೆಯಿಂದ ನಿದ್ರಾಹೀನತೆ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳಬಹುದು.
ಕೂದಲಿನ ಆರೈಕೆ:
ಎಳ್ಳಿನ ಎಣ್ಣೆ ಲೇಪಿಸಿಕೊಳ್ಳುವುದರಿಮದ ಕೂದಲಿನ ಆರೊಗ್ಯವನ್ನು ಕಾಪಾಡಲು ಸಹಕಾರಿ. ದಂತ ಪಂಕ್ತಿಗಳು ಗಟ್ಟಿಯಾಗುವಂತೆ ಮಾಡುತ್ತದೆ. ಏಕಾಗ್ರತೆ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಎಳ್ಳು ಸೇವನೆ ತುಂಬಾನೆ ಸಹಕಾರಿ.
ಪ್ರತಿ ನಿತ್ಯ ಎಳ್ಳು ಪಾನಕ ಸೇವಿಸಿದರೆ ಸಂಧಿಗಳ ನೋವು ಮತ್ತು ಸವೆತವನ್ನು ತಡೆಗಟ್ಟಬಹುದು. ಎಳ್ಳೆಣ್ಣೆಯಲ್ಲಿ ವಿಟಮಿನ್ ಇ ಹಾಗೂ ಕೀಟಾಣು, ವೈರಾಣು ನಾಶಕ ಗುಣಗಳಿರುವುದರಿಂದ ವಸಡಿನ ರಕ್ತಸ್ರಾವ, ಹಲ್ಲು ನೋವು, ಹಲ್ಲು ಹುಳುಕಾಗುವಿಕೆ, ಬಾಯಿ ಹುಣ್ಣಿನ ಸಮಸ್ಯೆಯನ್ನು ಸುಲಭವಾಗಿ ಹೋಗಲಾಡಿಸಬಹುದು. ಕಪ್ಪೆಳ್ಳನ್ನು ಹುರಿದು ಹುಡಿ ಮಾಡಿ, ಒಂದು ಲೋಟ ನೀರಿನಲ್ಲಿ ಕುದಿಸಿ ಸ್ವಲ್ಪ ಬೆಲ್ಲ ಸೇರಿಸಿ ದಿನಕ್ಕೊಮ್ಮೆ ಕುಡಿಯುವುದರಿಂದ ಮಹಿಳೆಯರಿಗೆ ಉತ್ತಮ.
– ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. ಪತ್ರಕರ್ತರು ಅಂಕಣಕಾರರು.