Author: admin
ಸಮಾಜಸೇವಕ, ನ್ಯಾಯವಾದಿ ಎಂ.ದಾಮೋದರ ಶೆಟ್ಟಿಯವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಸ್ಥಾಯಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇದು ಕಾಸರಗೋಡು ಜಿಲ್ಲೆಗೆ ತುಂಬಾ ಮಾನ್ಯತೆ ಕೊಟ್ಟಂತಹ ಸ್ಥಾನವಗಿದೆ. ವೃತ್ತಿಯಲ್ಲಿ ನ್ಯಾಯವಾದಿಯಾಗಿ ಪ್ರವೃತ್ತಿಯಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದರಾಗಿರುವ ಶೆಟ್ಟರು ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಇವರು ಕಾಲೇಜು ದಿವಸಗಳಲ್ಲಿ ಯಕ್ಷಗಾನದ ಪ್ರೌಢ ಕಲಾವಿದರಾಗಿ ಗುರಿತಿಸಿಕೊಂಡಿದ್ದಾರೆ. ಉಪ್ಪಳ ದಿ. ಕೃಷ್ಣ ಮಾಸ್ಟರವರಿಂದ ಯಕ್ಷಗಾನದ ನಾಟ್ಯವನ್ನು, ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮತ್ತು ಬೆಳಿಂಜ ವೆಂಕಪ್ಪ ರೈಯವರಿಂದ ಭಾಗವತಿಕೆಯನ್ನು ಹಾಗೂ ಪೆರುವಾಯಿ ನಾರಾಯಣ ಶೆಟ್ಟಿಯವರಿಂದ ಬಣ್ಣಗಾರಿಕೆಯನ್ನು ಕಲಿತರು. ಮುಮ್ಮೇಳ- ಹಿಮ್ಮೇಳ ಪ್ರಾವೀಣ್ಯತೆಯನ್ನು ಪಡೆದು ರಾವಣ, ಅತಿಕಾಯ, ಅರ್ಜುನ, ದೇವೇಂದ್ರ, ಶುಂಭ, ಕಂಸ, ದಶರಥ, ರಕ್ತಬೀಜ, ಇಂದ್ರಜಿತ್, ಕರ್ಣ ಹೀಗೆ ಹತ್ತು ಹಲಾವರು ವೇಷಗಳಿಗೆ ಜೀವ ತುಂಬಿ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಹಲವಾರು ಅಭಿಮಾನಿಗಳ ತಂಡವನ್ನೇ ರೂಪಿಸಿಕೊಂಡಿದ್ದಾರೆ. ಉತ್ತಮವಾದ ವ್ಯಾಕ್ಚತುರ್ಯ ವನ್ನು ಹೊಂದಿದ್ದ ಶೆಟ್ಟರು ತಾಳಮದ್ದಳೆಯ ಅರ್ಥದಾರಿಯಾಗಿ ಅತಿಕಾಯ, ಕರ್ಣ, ಭೀಷ್ಮ, ರಕ್ತಬೀಜನ ಪಾತ್ರದಲ್ಲಿ ಮಿಂಚಿ ಕಲಾ ರಸಿಕರ…
ಭಾರತೀಯ ರೆಡ್ಕ್ರಾಸ್ ಸೊಸೈಟಿ (ಐಆರ್ಸಿ ಎಸ್)ಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ರಾಜ್ಯದಲ್ಲಿಯೇ ಅತ್ಯುತ್ತಮವಾಗಿ ರಕ್ತ ನಿಧಿಯನ್ನು ನಿರ್ವಹಿಸಿ ಅತಿ ಹೆಚ್ಚು ಬಡ ರೋಗಿಗಳಿಗೆ ರಕ್ತ ಪೂರೈಸಿದ ರಾಜ್ಯದ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಬೆಂಗಳೂರಿನ ರಾಜಭವನದಲ್ಲಿ ನಡೆದ ರೆಡ್ಕ್ರಾಸ್ ರಾಜ್ಯ ಘಟಕದ ಮಹಾಸಭೆಯಲ್ಲಿ ರಾಜ್ಯಪಾಲ ಹಾಗೂ ಐಆರ್ಸಿಎಸ್ ರಾಜ್ಯ ಘಟಕದ ಅಧ್ಯಕ್ಷ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಜಿಲ್ಲಾ ಘಟಕದ ಚೇರ್ಮನ್ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯ ಘಟಕದ ದ.ಕ. ಜಿಲ್ಲಾ ಪ್ರತಿನಿಧಿ ಯತೀಶ್ ಬೈಕಂಪಾಡಿ, ಜಿಲ್ಲಾ ಘಟಕದ ನಿರ್ದೇಶಕರಾದ ಡಾ. ಸಚ್ಚಿದಾನಂದ ರೈ, ಗುರುದತ್ ಎಂ. ನಾಯಕ್, ಪಿ.ಬಿ. ಹರೀಶ್ ರೈ, ರಾಜ್ಯ ಘಟಕದ ಉಪಾಧ್ಯಕ್ಷ ಗೋಪಾಲ್ ಹೊಸೂರು, ಚೇರ್ಮನ್ ವಿಜಯಕುಮಾರ್ ಪಾಟೀಲ್ ಉಪಸ್ಥಿತರಿದ್ದರು. ರೆಡ್ಕ್ರಾಸ್ ದ.ಕ. ಶಾಖೆಯ ಬ್ಲಿಡ್ ಬ್ಯಾಂಕ್ನಿಂದ ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಪ್ರತೀ ತಿಂಗಳು 450ಕ್ಕೂ ಅಧಿಕ ಯೂನಿಟ್ ರಕ್ತವನ್ನು ಉಚಿತವಾಗಿ ನೀಡುತ್ತಿದೆ. ಈಗ ಅತ್ಯುತ್ತಮ ರಕ್ತ ನಿಧಿ ಪ್ರಶಸ್ತಿ…
ಸನ್ನಯೆ ಕೇಂದಿ ಇಪ್ಪರ್ ನಿಗುಲು. ಉಂದು ಸಾಸಯ ಪಂಡ ದಾದ? ಪೊನ್ನು ಕಡೀರ ಬಂಜಿನಾಲ್ ಆಯಿನದಗ ಬೊಕ್ಕ ಪದ್ ರಾಡ್ ವರ್ಸೊಡ್ದ್ ಬೊಕ್ಕ ಬಂಜಿನಾಲ್ ಆಯಿನದಗ ಬಾಯಕೆ ಪಾಡುವೆರ್. ಬಂಜಿಗ್ ಏಲ್ ತಿಂಗೊಲ್ ಆನಗ ಅಪ್ಪೆ ಇಲ್ಲಡ್ ಬಾಯಕೆ ಪಾಡುವೆರ್. ಅಪ್ಪೆಲ್ಲದ ಬಾಯಕೆನ್ “ಪೂ ಮುಡಿಪಾವುನು” ಪನ್ಪೆರ್, ಕಂಡ್ಯಾನಿಲ್ಲದವು “ಬಾಯಕೆ”. ಬಾಯಕೆಡ್, ಪೊಸ ಪಟ್ಟೆ ಸೀರೆ ತುತ್ತದ್, ಮದಿಮಾಲೆ ಸಿಂಗಾರ ಮಲ್ತ್ ದ್ ಕುರ್ಸುಗೊಂಜಿ ಮಡಿಕುಂಟು ಪಾಡ್ದ್, ಬಂಜಿನಾಲೆನ್ ಕುಲ್ಲದ್ ಅಡ್ಡೆ ಬಲಸುವೆರ್. ಬಂಜಿನಾಲೆನ ದತ್ತ್ ಬಲತ್ತ್ ಡ್ ಒಂಜಿ ಎಲ್ಯ ಆನ್ ಬಾಲೆನ್, ಒಂಜಿ ಎಲ್ಯ ಪೊನ್ನು ಬಾಲೆನ್ ಉಂತಾವರೆ. ಬಂಜಿನಾಲ್ ಬೆಯಿಪಾದಿನ ಒಂಜಿ ಕೋರಿ ತೆತ್ತಿನ್ ಅರ್ಧ ತಿಂದ್ ದ್ ಅರ್ದೊನು ಒಂಜಿ ಬಾಲೆಗ್ ಕೊರ್ಪೊಲು. ಅಂಚೆನೆ ಬೆಯಿಪಾದಿನ ನುರ್ಗೆ ತಪ್ಪುನು ಒಂಜಿ ಬಾಯಿ ತಿಂದ್ ದ್, ಅರ್ದೊನು ಕುಡೊಂಜಿ ಬಾಲೆಗ್ ಕೊರ್ಪೊಲು. ಬಾಯಕೆದ ಮೂಲ ಉದ್ದೇಶ ದಾದ ಪಂದ್ ನಿಗುಲು ಮಾತ ತೆರಿದ್ ಉಲ್ಲರ್. ಐಟ್ ಇ…
ಪ್ರೀತಿಯ ಸಮಾಜ ಬಾಂಧವರೆ, ನಮ್ಮ ಸಮಾಜದ ಬಗ್ಗೆ ನಮಗೆಲ್ಲರಿಗೂ ಅಭಿಮಾನ ಹೆಮ್ಮೆ ಇದೆ. ಇದು ನಿಜವಾಗಲೂ ಇರಬೇಕು. ಯಾಕೆಂದರೆ ನಮ್ಮ ಸಮಾಜದಲ್ಲಿ ಹುಟ್ಟಿ ಬೆಳೆದವರು ನಾವು ದುಡಿದು ತಿನ್ನಬೇಕು. ಬೇರೆಯವರಿಗೂ ನೀಡಬೇಕು ಅನ್ನುವ ಮನೋಭಾವನೆ ಇರಬೇಕು ಮತ್ತು ಯಾರಿಗೂ ಕಡಿಮೆ ಇಲ್ಲದಂತೆ ಬದುಕಬೇಕು. ಯಾರೊಂದಿಗೂ ಬೇಡಬಾರದು. ಎಲ್ಲರಿಗೂ ತನ್ನಿಂದಾದ ಸಹಾಯ ಮಾಡಬೇಕು. ಇದು ನಮ್ಮ ಬಂಟ ಸಮಾಜದ ಹೆಗ್ಗುರುತು. ಇಂದು ಜಗತ್ತಿನಾದ್ಯಂತ ನಮ್ಮ ಸಮಾಜಕ್ಕೆ ಕೊಡುವ ಗೌರವ, ಪ್ರತಿಷ್ಠೆ, ಮುಂದಾಳತ್ವ ನೋಡಿದರೆ ತುಂಬಾ ಹೆಮ್ಮೆ ಅನಿಸುತ್ತದೆ. ಒಂದು ಸಮಾಜ ಕಟ್ಟುವುದು, ಬೆಳೆಸುವುದು ಆ ಸಮಾಜದ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನ ನಮ್ಮನ್ನು ಈ ಮಟ್ಟಕ್ಕೆ ಏರಿಸಿದೆ ಅಂದರೆ ಖಂಡಿತಾ ತಪ್ಪಾಗಲಾರದು. ಹಿಂದೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾವು ಕಡಿಮೆ ಸಂಖ್ಯೆಯಲ್ಲಿ ಇದ್ದೆವು. ಹೆಚ್ಚಿನ ಬಂಟರು ಜಮೀನ್ದಾರರಾಗಿದ್ದರು. ಆದರೆ ಭೂ ಮಸೂದೆ ಕಾನೂನಿನಲ್ಲಿ ಉಳುವವನೆ ಹೊಲದೊಡೆಯ ಅನ್ನುವ ಕಾನೂನು ನಮ್ಮಲ್ಲಿ ಕೆಲವರನ್ನು ನಿರ್ಗತಿಕರನ್ನಾಗಿ ಮಾಡಿತು. ಆದರೆ ನಮ್ಮ ಬಂಟ ಸಮುದಾಯ ಇದನ್ನು ಸವಾಲಾಗಿ…
ಮಂಗಳೂರಿನ ನ್ಯಾಯವಾದಿ ಕೆ. ದಯಾನಂದ ರೈ ಅವರ ಸುಸಜ್ಜಿತ ಕಚೇರಿ ಉದ್ಘಾಟನೆ ನಗರದ ಪಿ.ವಿ.ಎಸ್. ಜಂಕ್ಷನ್ ಬಳಿಯ ಮಾನಸ ಟವರಿನ 1ನೇ ಮಹಡಿಯಲ್ಲಿ ನಡೆಯಿತು. ಖ್ಯಾತ ನ್ಯಾಯವಾದಿ ಎಂ. ವಿ. ಶಂಕರ್ ಭಟ್ ಅವರು ಉದ್ಘಾಟಿಸಿದರು. ಉದ್ಘಾಟನೆ ಪೂರ್ವದಲ್ಲಿ ನ್ಯಾಯವಾದಿ ಕೆ. ದಯಾನಂದ ರೈ ಅವರು ಗುರುಗಳಾದ ನ್ಯಾಯವಾದಿ ಕೆ. ಶಂಕರ್ ಭಟ್ ಅವರಿಗೆ ಕಾರ್ಯಕ್ರಮದಲ್ಲಿ ಗುರುವಂದನೆ ಸಲ್ಲಿಸಿ ಅವರನ್ನು ಸನ್ಮಾನಿಸಿದರು. ನ್ಯಾಯವಾದಿ ಕೆ. ದಯಾನಂದ ರೈ ಅವರ ತಾಯಿ ಎಲ್ನಾಡುಗುತ್ತು ಕೆ. ಲಲಿತಾ ರೈ ನ್ಯಾಯವಾದಿ ಕೆ. ದಯಾನಂದ ರೈ, ಪತ್ನಿ ಡಾ. ವೀಣಾ ಕೆ. ಆರ್., ಸಹಾಯಕ ಕೃಷಿ ನಿರ್ದೇಶಕ ಅಂಬಾಬೀಡು ಕೆ. ಜಗನ್ನಾಥ್ ರೈ, ಮಾಜಿ ಪಂಚಾಯತ್ ವಿಸ್ತರಣಾ ಅಧಿಕಾರಿ ಅಂಬಾಬೀಡು ಪದ್ಮಾವತಿ ರೈ ಮತ್ತು ವಾಸುದೇವ ರೈ ಪಿಲತ ಬೆಟ್ಟು ಉಪಸ್ಥಿತರಿದ್ದರು. ಮಂಗಳೂರಿನ ಖ್ಯಾತ ನ್ಯಾಯವಾದಿಗಳಾದ ಓ.ಟಿ.ಭಟ್, ವಾಸುದೇವ ರಾವ್, ಮಹಾಬಲ ಶೆಟ್ಟಿ, ಜಗದೀಶ್ ರಾವ್, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹಿಂ, ಮಾಜಿ ವಿಧಾನ…
ಮೊನ್ನೆ ಉಡುಪಿಯ ಕಾರ್ ಶೋರೂಮ್ ಗೆ ಹೋಗಿದ್ದೆ, ಮುಂದಿನ ವರ್ಷ ಒಂದೊಳ್ಳೆ ಕಾರ್ ತಗೋಳ್ಳೋ ಪ್ಲಾನ್ ಹಾಕುತಿದ್ದೆ. ಟೆಸ್ಟ್ ಡ್ರೈವ್ ಮಾಡಿ ರೇಟ್ ಕೇಳಿ, ಲೋನ್ ಬಗ್ಗೆ ಮಾತಾಡಿದ್ದೆ. ಕೊನೆಗೆ ಅಡ್ರೆಸ್, ಫೋನ್ ನಂಬರ್ ಕೇಳಿದ್ದರು. ತಕ್ಷಣ ಆ ಅಜ್ಜಿ ನೆನಪಾಗಿದ್ದರು. ಉಡುಪಿಯ ಇಂದಿರಾನಗರದ ಆ ಒಂಟಿ ಅಜ್ಜಿ ಕೆಳೆದ 25 ವರ್ಷ ಗಳಿಂದ ಬಿಟ್ಟು ಹೋಗಿದ್ದ ಮಗನಿಗಾಗಿ ಶಬರಿಯಂತೆ ಕಾಯುತಿದ್ದರು. ಅವರಲ್ಲಿ ಚಿಕ್ಕ ಮೊಬೈಲ್ ಒಂದಿತ್ತು. ಅಜ್ಜಿ ಆವತ್ತು ಬೇಸರದಿಂದ ಹೇಳಿದ್ದು ನೆನಪು ಒಂದೇ ಒಂದು ಕಾಲ್ ಬರುವುದಿಲ್ಲ ಮಗ, ನಾನಂತು ಪ್ರತಿದಿನ ಮಗ, ಸಂಬಂಧಿಗಳ ಕಾಲ್ ಬರಬಹುದೆಂದು ಕಾಯುತ್ತಿರುತ್ತೇನೆ ಎನ್ನುವಾಗ ಅವರ ಒಂಟಿತನದ ನೋವುಗಳುಳ್ಳ ಕಣ್ಣುಗಳು ಮಂಜಾಗಿ ಹನಿದಿದ್ದವು. ಅವರಿಗೆ ಕಿವಿ ಸ್ವಲ್ಪ ಕೇಳುತ್ತಿರಲಿಲ್ಲ. ಅವರ ಫೋನ್ ನಂಬರ್ ಅಲ್ಲಿ ಹಾಕಿ ಬಂದೆ. ಒಂದೆರಡು ದಿನ ಬಿಟ್ಟು ಅಜ್ಜಿ ಮನೆಗೆ ಹೊದೆ. ಈ ಬಾರಿ ಅಜ್ಜಿ ಬಾರಿ ಖುಷಿಯಲ್ಲಿದ್ದರು.. “ಏನಜ್ಜಿ ಬಾರಿ ಖುಷಿಯಲ್ಲಿದ್ದೀರಿ?” … ಎಂದೆ. “ಏನಿಲ್ಲ ಮಗ…
ವಿದ್ಯಾಗಿರಿ: ‘ಏಕಾಗ್ರತೆಯಿಂದ ಆಟದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಭಾರತೀಯ ಖೋ- ಖೋ ಒಕ್ಕೂಟದ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಖೋ -ಖೋ ಸಂಸ್ಥೆಯ ಅಧ್ಯಕ್ಷ ಲೋಕೇಶ್ವರ ಹೇಳಿದರು. ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು, ಕರ್ನಾಟಕ ರಾಜ್ಯ ಖೋ -ಖೋ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಖೋ- ಖೋ ಸಂಸ್ಥೆ ಆಶ್ರಯದಲ್ಲಿ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡ ಖೋ -ಖೋ ಕ್ರೀಡಾಧಿಕಾರಿಗಳ ಕಾರ್ಯಾಗಾರದ ಉದ್ಘಾಟನೆಯಲ್ಲಿ ಅವರು ಮಾತನಾಡಿದರು. ಖೋ -ಖೋ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮಿಂಚುತ್ತಿದೆ. ಈ ಹಿಂದೆ ಇದ್ದ ಆಟಕ್ಕೂ ಪ್ರಸ್ತುತ ಇರುವ ಆಟಕ್ಕೂ ಬಹಳ ವ್ಯತ್ಯಾಸ ಇದೆ. ಖೋ ಖೋ ಅಮೂಲಾಗ್ರವಾಗಿ ಬದಲಾಗುತ್ತಿದ್ದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ನಾವು ಗಟ್ಟಿಗೊಳಿಸುತ್ತಾ ಮುಂದುವರಿಯಬೇಕು ಎಂದರು. ಕರ್ನಾಟಕ ರಾಜ್ಯ ಖೋ -ಖೋ ಸಂಸ್ಥೆಯ ಕಾರ್ಯದರ್ಶಿ ಆರ್. ಮಲ್ಲಿಕಾರ್ಜುನಯ್ಯ ಮಾತನಾಡಿ, ಆಟಗಾರನಿಗೆ ಆತ್ಮವಿಶ್ವಾಸ ಇರಬೇಕು. ಆದರೆ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಕಷ್ಟಪಟ್ಟು ಮಾಡಿದ ಕೆಲಸದಲ್ಲಿ ತೃಪ್ತಿ ಇರುತ್ತದೆ. ಸೋಲು – ಗೆಲುವು ಸಹಜ. ಯಾವುದಕ್ಕೂ…
ರಾಷ್ಟ್ರೀಯ ಚಿಂತಕ ದಿ| ರಾಧಾಕೃಷ್ಣ ಡಿ.ಭಕ್ತ ಅವರಿಗೆ ಶ್ರದ್ಧಾಂಜಲಿ ಸಭೆ ಜಗತ್ತಿನಲ್ಲೇ ಭಾರತ ಬಲಶಾಲಿಯಾಗಿದೆ : ಸಂಸದ ಗೋಪಾಲ್ ಶೆಟ್ಟಿ
ಮುಂಬಯಿ (ಆರ್ಬಿಐ), ಎ.06: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾರಥ್ಯದ ಕಾಲಾವಧಿಯಲ್ಲಿ ರಾಷ್ಟ್ರದ ಚಿತ್ರಣಬದಲಾಗಿದೆ. ವಿಶ್ವದ ನಾಯಕರು ಇಂದು ಮೋದಿ ಅವರ ವಿಶ್ವಾಸ ಪಡೆಯದೆ ವಿಶ್ವದ ಸಮಸ್ಯೆಗಳನ್ನು ಬಗೆಹರಿಸಲಾಗದ ಮಟ್ಟಕ್ಕೆ ನಮ್ಮ ರಾಷ್ಟ್ರ ಬೆಳೆದಿದೆ. ಸಂಘ ಪರಿವಾರದ ಹಾಗೂ ಸ್ವಾಮಿ ವಿವೇಕಾನಂದರ ವಿಚಾರದಿಂದ ಮುನ್ನಡೆಯುತ್ತಿರುವ ಭಾರತ ಜಗತ್ತಿನಲ್ಲೇ ಬಲಶಾಲಿಯಾಗಿದ್ದು ಇದು ದೇಶದಲ್ಲಿನ ಕ್ರಾಂತಿಯಾಗಿದೆ. ಆದ್ದರಿಂದ ಇಪ್ಪತ್ತನೇ ಶತಮಾನದಲ್ಲಿ ಹುಟ್ಟಿದ ನಾವೆಲ್ಲರೂ ಭಾಗ್ಯವಂತರು. ಉಪನ್ಯಾಸಕರು ನವ ಭಾರತದ ಸೃಷ್ಟಿಕರ್ತರು ಆದ್ದರಿಂದ ಪ್ರಾಧ್ಯಾಪಕರು ಯುವಪೀಳಿಗೆಯಲ್ಲಿ ಭವಿಷ್ಯರೂಪಿಸುವ ಕ್ರಾಂತಿ ಮಾಡುವ ಅಗತ್ಯವಿದೆ. ಇಂತಹ ದೂರದೃಷ್ಠಿತ್ವವನ್ನೇ ರಾಧಾಕೃಷ್ಣ ಭಕ್ತ ಹೊಂದಿದ್ದು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವ ಅವಶ್ಯಕತೆವಿದೆ ಎಂದು ‘ಸಂಸತ್ ರತ್ನ ಪ್ರಶಸ್ತಿ’ ಪುರಸ್ಕೃತ ಮುಂಬಯಿ ಉತ್ತರ ಲೋಕಸಭಾ (ಬೋರಿವಿಲಿ) ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ತಿಳಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ವಿವೇಕಾನಂದ ಇಂಜಿನೀಯರಿಂಗ್ ಕಾಲೇಜು ಪುತ್ತೂರು ಇದರ ಸ್ಥಾಪನೆಯ ಪ್ರಧಾನ ರೂವಾರಿ, ಸಂಚಾಲಕ, ಸಾಮಾಜಿಕ, ಧಾರ್ಮಿಕ ಸೇವಾಕರ್ತರಾಗಿದ್ದು ಕಳೆದ ಗುರುವಾರ ನಿಧನರಾದ…
ಇನ್ನಂಜೆಯ ಎಸ್. ವಿ. ಎಚ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮೇಘನಾ ಆರ್. ಶೆಟ್ಟಿಗೆ 600 ಅಂಕದಲ್ಲಿ 549 ಅಂಕಗಳನ್ನು ಪಡೆದು ಶೇ. 91.5 ಅಂಕದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಈಕೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಭಿವಂಡಿ ಹೋಟೆಲ್ ಉದ್ಯಮಿ ಕುರ್ಕಾಲು ಕುಲೇದು ರಮೇಶ್ ಶೆಟ್ಟಿ ಮತ್ತು ನಿಟ್ಟೆ ಪರಪ್ಪಾಡಿ ವಿಮಲಾ ಶೆಟ್ಟಿ ದಂಪತಿಯ ಪುತ್ರಿ.
“ರಸಋಷಿ ರಘುರಾಮಂ” “ಯಕ್ಷಕವಿ ವಂದನಂ” ಕಾರ್ಯಕ್ರಮವು ಶ್ವೇತಛತ್ರ ಯಕ್ಷಮಿತ್ರ ಕೋಣಿ, ಕುಂದಾಪುರ ಇವರ ಸಹಯೋಗದಲ್ಲಿ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಏ. 29ರಂದು ಸಂಜೆ 4:30ಕ್ಕೆ ಕಂದಾವರ ರಘುರಾಮ ಶೆಟ್ಟಿಯವರಿಗೆ ಅಭಿನಂದಿಸುವ ಕಾರ್ಯಕ್ರಮವಾಗಿ ಜರುಗಲಿದೆ. ಪೆರ್ಡೂರು ಮೇಳದ ಯಜಮಾನರಾದ ವೈ. ಕರುಣಾಕರ ಶೆಟ್ಟಿ, ಸಂಕಾಪುರ ಶಿವರಾಮ ಶೆಟ್ಟಿ ಅರ್ಥದಾರಿಗಳು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಕಲಾವಿದ ಎಂ.ಕೆ. ರಮೇಶ್ ಆಚಾರ್ಯ, ಎಂ.ಐ.ಟಿ ಉಪನ್ಯಾಸಕರಾದ ಎಸ್.ವಿ. ಉದಯ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಶ್ರೀ ದುರ್ಗಾ ಕನ್ಸ್ಟ್ರಕ್ಷನ್ ದಾಂಡೇಲಿ, ಬೆಳ್ವೆ ಶ್ರೀನಿವಾಸ ಆಚಾರ್ಯ, ಪ್ರಸಂಗಕರ್ತ ಪ್ರಸಾದ್ಕುಮಾರ್ ಮೊಗೆಬೆಟ್ಟು ಗೌರವ ಉಪಸ್ಥಿತಿಯಲ್ಲಿದ್ದಾರೆ. ಸತೀಶ್ ಶೆಟ್ಟಿ ಮೂಡುಬಗೆ ನಿರೂಪಣೆಯಲ್ಲಿರುತ್ತಾರೆ. ಬಳಿಕ ಪ್ರಸಿದ್ಧ ಕಲಾವಿದರಿಂದ ಗಾನ ವೈಭವ ಕಾರ್ಯಕ್ರಮ ರಂಗದಲ್ಲಿ ಪ್ರಸ್ತುತಿಗೊಳ್ಳಲಿದೆ ಎಂದು ಶ್ವೇತಛತ್ರ ಯಕ್ಷಮಿತ್ರದ ಅಧ್ಯಕ್ಷ ಸುರೇಶ್ ಶೆಟ್ಟಿ ಶಂಕರನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.